ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಹೆಸರು ಬೇಳೆ ಸೂಪ್

ಮಳೆಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಹೆಸರು ಬೇಳೆ ಸೂಪ್​​ನಲ್ಲಿ ಬಳಸುವ ಹೆಸರು ಬೇಳೆ, ಶುಂಠಿ, ಕರಿಮೆಣಸು, ಅರಿಶಿನ ಮತ್ತು ಲವಂಗಗಳ ಬಗೆಗಿನ ಗುಣಲಕ್ಷಣಗಳ ಬಗ್ಗೆ ವಿವರಿಸಲಾಗಿದ್ದು ಇದನ್ನು ತಿಳಿದುಕೊಳ್ಳುವುದು ಉತ್ತಮವಾಗಿದ್ದು, ಯಾವ ಯಾವ ರೀತಿಯ ಪೋಷಕಾಂಶಗಳು ಸಿಗುತ್ತವೆ ಎಂಬುದು ಸರಳವಾಗಿ ತಿಳಿಯುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಹೆಸರು ಬೇಳೆ ಸೂಪ್
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:Aug 23, 2023 | 9:43 AM

ಸೂಪ್ ಒಳ್ಳೆಯ ಆಹಾರ, ಅದರ ಜೊತೆಗೆ ಅದ್ಭುತ ಹಸಿವು ನಿವಾರಕವೂ ಹೌದು. ಇದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಇದು ಕೇವಲ ರುಚಿ ಮತ್ತು ತೃಪ್ತಿಯ ನೀಡುವುದು ಮಾತ್ರವಲ್ಲ. ಬದಲಾಗಿ ಸೂಪ್​​​ಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತವೆ ಎಂಬುದು ಎಲ್ಲರಿಗೂ ತಿಳಿದಿರಬಹುದು.ಈ ಬಗ್ಗೆ ಮಾತನಾಡಿದ ಪೌಷ್ಟಿಕ ತಜ್ಞ ಲವ್ನೀತ್ ಬಾತ್ರಾ ಅವರು ಹೆಸರು ಬೇಳೆ ಸೂಪ್ ತಯಾರಿಸುವ ವಿಧಾನದಲ್ಲಿ ಬಳಸುವ ಪದಾರ್ಥಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ಸೂಪ್ ಮಾನ್ಸೂನ್​​ನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಲವ್ನೀತ್ ಬಾತ್ರಾ ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ರೀಲ್​​​ನಲ್ಲಿ ಹೆಸರು ಬೇಳೆ ಸೂಪ್ ತಯಾರಿಸಲು ಬಳಸುವ ಸರಳ ಪದಾರ್ಥಗಳ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ಪೋಷಣೆ ಭರಿತ ಖಾದ್ಯವನ್ನು ಸವಿಯಲು ಒಂದು ಸಣ್ಣ ಬಟ್ಟಲು ಹೆಸರು ಬೇಳೆ, ಸ್ವಲ್ಪ ಶುಂಠಿ, ಸ್ವಲ್ಪ ಕರಿಮೆಣಸು, ಅರಿಶಿನದ ಸ್ಪರ್ಶ ಮತ್ತು ಒಂದೆರಡು ಲವಂಗಗಳು ಸಾಕು ಎಂದಿದ್ದಾರೆ. ಜೊತೆಗೆ ಪೌಷ್ಟಿಕತಜ್ಞರು ಪದಾರ್ಥಗಳ ವಿವಿಧ ಆರೋಗ್ಯ ಪ್ರಯೋಜನಗಳನ್ನು ವಿವರಿಸಿದ್ದಾರೆ.

ಹೆಸರು ಬೇಳೆ ಸೂಪ್ ತಯಾರಿಸಲು ಬಳಸುವ ಪದಾರ್ಥಗಳು ಯಾವುವು?

1. ಮೂಂಗ್ ಬೀನ್ಸ್: ಮೂಂಗ್ ಬೀನ್ಸ್ ಫ್ಲೇವನಾಯ್ಡ್​​ಗಳು ಮತ್ತು ಫಿನೋಲಿಕ್ ಸಂಯುಕ್ತಗಳಂತಹ ಉತ್ಕರ್ಷಣ ನಿರೋಧಕಗಳ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಹೊಂದಿದೆ. ಈ ಶಕ್ತಿಯುತ ವಸ್ತುಗಳು ಹಾನಿಕಾರಕ ಫ್ರೀ ರಾಡಿಕಲ್​ಗಳನ್ನು ತಟಸ್ಥಗೊಳಿಸುತ್ತವೆ, ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

2. ಶುಂಠಿ: ಶುಂಠಿಯಲ್ಲಿ ಜಿಂಜರಾಲ್​​ಗಳು, ಪ್ಯಾರಾಡೋಲ್​​ಗಳು, ಸೆಸ್ಕ್ವಿಟರ್ಪೆನ್​​ಗಳು, ಶೋಗಾಲ್​​ಗಳು ಮತ್ತು ಜಿಂಜರೋನ್ ಇದೆ. ಈ ಘಟಕಗಳು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿವೆ, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

3. ಕರಿಮೆಣಸು: ಕರಿಮೆಣಸು ಪೈಪರಿನ್ ಅನ್ನು ಹೊಂದಿರುತ್ತದೆ, ವಿಶೇಷವಾಗಿ ಅದರ ಸಕ್ರಿಯ ಸಂಯುಕ್ತ, ಪೈಪರಿನ್ ನ ಉರಿಯೂತ ನಿವಾರಕ ಗುಣಲಕ್ಷಣಗಳು ಸಮತೋಲಿತ ರೋಗನಿರೋಧಕ ಪ್ರತಿಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಗಮನಾರ್ಹವಾಗಿ, ಪೈಪರಿನ್ ಅರಿಶಿನದಿಂದ ಕರ್ಕ್ಯುಮಿನ್ ಹೀರಿಕೊಳ್ಳುವಿಕೆಯನ್ನು ಗಮನಾರ್ಹವಾಗಿ 2000% ಹೆಚ್ಚಿಸುತ್ತದೆ.

4. ಲವಂಗ: ಲವಂಗದಲ್ಲಿ ಯೂಜೆನಾಲ್ ಇದ್ದು ಇದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಸಂಯುಕ್ತವು ಉರಿಯೂತದ ನಿವಾರಣಾ ಗುಣಲಕ್ಷಣಗಳನ್ನು ಹೊಂದಿದೆ, ಇದು ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದಿನಭವಿಷ್ಯ, ಆರೋಗ್ಯದ ಬಗ್ಗೆ ಗಮನಕೊಡಿ ಹಳೆಯ ರೋಗವು ಮತ್ತೆ ಕಾಣಿಸಿಕೊಳ್ಳಬಹುದು

5. ಅರಿಶಿನ: ಇದರಲ್ಲಿ ಸಕ್ರಿಯ ಘಟಕವಾದ ಕರ್ಕ್ಯುಮಿನ್ ಸೇರಿದಂತೆ, ಟಿ ಕೋಶಗಳು, ಬಿ ಕೋಶಗಳು ಮತ್ತು ಮ್ಯಾಕ್ರೋಫೇಜ್ಗಳಂತಹ ನಿರ್ದಿಷ್ಟ ಪ್ರತಿರಕ್ಷಣಾ ಕೋಶಗಳ ಪರಿಣಾಮವನ್ನು ಹೆಚ್ಚಿಸುತ್ತದೆ. ರೋಗಕಾರಕಗಳನ್ನು ಗುರುತಿಸುವಲ್ಲಿ ಮತ್ತು ಹೋರಾಡುವಲ್ಲಿ ಈ ಜೀವಕೋಶಗಳು ಪ್ರಮುಖವಾಗಿ ಕೆಲಸ ಮಾಡುತ್ತವೆ. ನೀವು ಸಹ ನಿಮ್ಮ ಅಡುಗೆಮನೆಯಲ್ಲಿ ಇದೇ ರೀತಿಯ ಸೂಪ್ ತಯಾರಿಸಲು ಯೋಜಿಸುತ್ತಿದ್ದರೇ ಚಿಂತಿಸಬೇಡಿ, ಇಂದೇ ತಯಾರಿಸಿ ರುಚಿ ನೋಡಿ.

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:24 pm, Mon, 21 August 23

2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು