AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳು ಇಷ್ಟಪಡುವ ಆರೋಗ್ಯಕರ ತಿಂಡಿಗಳಾವುವು? ಆವಕಾಡೊ ಪಾಕವಿಧಾನ ಇಲ್ಲಿದೆ

ಆವಕಾಡೊ ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ, ಮಕ್ಕಳಿಗೆ ರುಚಿ ರುಚಿಯಾದ ಆರೋಗ್ಯಕರ ತಿಂಡಿ ಮಾಡಿಕೊಡಲು ಕೆಲವು ಆವಕಾಡೊ ಪಾಕವಿಧಾನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದ್ದು, ದಿನನಿತ್ಯ ಇವುಗಳನ್ನು ನಿಮ್ಮ ಮನೆಯಲ್ಲೂ ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ. ಇವು ನಿಮ್ಮ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

ಮಕ್ಕಳು ಇಷ್ಟಪಡುವ ಆರೋಗ್ಯಕರ ತಿಂಡಿಗಳಾವುವು? ಆವಕಾಡೊ ಪಾಕವಿಧಾನ ಇಲ್ಲಿದೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 19, 2023 | 5:49 PM

Share

ಆವಕಾಡೊ ಬಗ್ಗೆ ನೀವು ಕೇಳಿರಬಹುದು. ಆದರೆ ಅದನ್ನು ಮಕ್ಕಳಿಗೆ ತಿನ್ನಲು ಕೊಟ್ಟಾಗ, ಬಹಳಷ್ಟು ಮಕ್ಕಳು ಮೂಗು ಸುಕ್ಕುಗಟ್ಟುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ನಾವು ಹೇಳುವ ಪಾಕವಿಧಾನವನ್ನು ನೀವು ಮನೆಯಲ್ಲಿ ಟ್ರೈ ಮಾಡಿದಲ್ಲಿ, ನಿಮ್ಮ ಮಗು ಯಾವುದೇ ಕಾರಣಕ್ಕೂ ಆವಕಾಡೊ ಬೇಡ ಎನ್ನಲಾರರು. ನಿಮ್ಮ ಮಕ್ಕಳಿಗಾಗಿ ಈ ಸರಳ ಆವಕಾಡೊ ಪಾಕವಿಧಾನಗಳನ್ನು ಪ್ರಯತ್ನಿಸಿ. ಅದಲ್ಲದೆ ಇದರಿಂದ ತಯಾರಿಸಿದ ಆಹಾರಗಳು ಉತ್ತಮವಾಗಿರುತ್ತವೆ ಎಂದು ಹೆಲ್ತ್ ಶಾಟ್ಸ್ ಪುಣೆಯ ಕ್ಲೌಡ್ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಕಾರ್ಯನಿರ್ವಾಹಕ ಪೌಷ್ಟಿಕ ತಜ್ಞೆ ಶ್ರುತಿ ಕೇಳಸ್ಕರ್ ಅವರು ತಿಳಿಸಿದ್ದಾರೆ.

ಆವಕಾಡೊದ ಆರೋಗ್ಯ ಪ್ರಯೋಜನಗಳೇನು?

ಆರೋಗ್ಯ ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ಆವಕಾಡೊ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆವಕಾಡೊದ ಕೆಲವು ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಆವಕಾಡೊ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ: ಈ ಸೂಪರ್ ಫುಡ್ ಮೆಗ್ನೀಸಿಯಮ್, ವಿಟಮಿನ್ ಸಿ, ವಿಟಮಿನ್ ಇ, ಫೋಲೇಟ್ ಮತ್ತು ಹೆಚ್ಚಿನವುಗಳಿಂದ ಸಮೃದ್ಧವಾಗಿದೆ. ಅವು ನಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮುಖ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಎಂದು ಶ್ರುತಿ ಹೇಳುತ್ತಾರೆ.

2. ಮಕ್ಕಳ ಅತಿಯಾದ ಪರದೆ ಸಮಯದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಹೆಚ್ಚಿನ ಮಕ್ಕಳು ದೂರದರ್ಶನ, ಮೊಬೈಲ್ ಅಥವಾ ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಇತರ ಗ್ಯಾಜೆಟ್ ಗಳಿಗೆ ಅವಲಂಬಿತರಾಗಿರುತ್ತಾರೆ. ಹಾಗಾಗಿ ಮಕ್ಕಳಿಗೆ ಆವಕಾಡೊ ತಿನ್ನಿಸುವುದರಿಂದ ಇದಕ್ಕೆಲ್ಲಾ ಪರಿಹಾರ ದೊರೆಯುತ್ತದೆ. ಏಕೆಂದರೆ ಅದು ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ನ ಉತ್ತಮ ಮೂಲಗಳಾಗಿವೆ, ಇದರಲ್ಲಿ ಫೈಟೊಕೆಮಿಕಲ್ ಗಳನ್ನು ಹೊಂದಿದ್ದು, ಇದು ಅತಿಯಾದ ಪರದೆಯ ಸಮಯದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯಕರವಾದ ಆವಕಾಡೊ ಪಾಕವಿಧಾನಗಳಾವುವು?

ನಿಮ್ಮ ಮಕ್ಕಳಿಗೆ ಆವಕಾಡೊದ ಆರೋಗ್ಯ ಪ್ರಯೋಜನಗಳನ್ನು ನೀವು ಪಟ್ಟಿ ಮಾಡಿ ತಿನ್ನಿಸಬೇಕು ಎಂದು ಬಯಸಿದರೂ ಅದನ್ನು ತಿನ್ನುವಂತೆ ಮಾಡುವುದು ಕಷ್ಟ. ಆದರೆ ಅವುಗಳನ್ನು ರುಚಿ ರುಚಿಯಾಗಿ, ಆಕರ್ಷಕ ರೀತಿಯಲ್ಲಿ ಬೇಯಿಸಿ ಕೊಡುವುದರಿಂದ ನಿಮ್ಮ ಮಗು ಇಷ್ಟಪಟ್ಟು ತಿನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವು ಪ್ರಯತ್ನಿಸಬಹುದಾದ ಕೆಲವು ಸರಳ ಪಾಕವಿಧಾನಗಳ ಬಗ್ಗೆ ಮಾಹಿತಿ ಇಲ್ಲಿವೆ!

1. ಆವಕಾಡೊ ತುಂಬಿದ ಟ್ಯಾಕೋಸ್

ಬೇಕಾಗುವ ಸಾಮಾಗ್ರಿಗಳು

• 1 ಆವಕಾಡೊ

• 1 ಟೊಮೆಟೊ

• 1/2 ಈರುಳ್ಳಿ

• 1/2 ಸೌತೆಕಾಯಿ

• 1/2 ಬಟ್ಟಲು ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ್ದು)

• 1 ಟೇಬಲ್ ಚಮಚ ನಿಂಬೆ ರಸ

• 1 ಕಪ್ ಗೋಧಿ ಹಿಟ್ಟು ಅಥವಾ ಮಲ್ಟಿಗ್ರೇನ್ ಹಿಟ್ಟು

• ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

• ಟ್ಯಾಕೋಸ್ ತಯಾರಿಸಲು, ಗೋಧಿ ಹಿಟ್ಟನ್ನು ನೀರಿನೊಂದಿಗೆ ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ.

• ಹಿಟ್ಟನ್ನು 15 ನಿಮಿಷಗಳ ಕಾಲ ಹಾಗೇ ಬಿಡಿ.

• ಹಿಟ್ಟಿನಿಂದ ರೊಟ್ಟಿ ತಯಾರಿಸಲು ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಅದನ್ನು ಚಪಾತಿಯ ರೀತಿಯಲ್ಲಿ ಮಾಡಿಕೊಳ್ಳಿ.

• ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಮೇಲೇ ಹೇಳಿದ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ತಯಾರಿಸಿ, ಬಳಿಕ ಉಪ್ಪು ಹಾಕಿ ಕಲಸಿಕೊಳ್ಳಿ.

• ಈ ಮಿಶ್ರಣವನ್ನು ಚಪಾತಿ ಮೇಲೆ ಹಾಕಿ ಮಡಚಿ ಎರಡೂ ಬದಿಗಳಲ್ಲಿ ಬೇಯಿಸಿ.

• ಎರಡೂ ಬದಿಗಳಿಂದ ಮಡಚಿದ ನಂತರ ಬಾಣಲೆಯ ಮೇಲೆ ಒಂದು ನಿಮಿಷ ಇರಲು ಬಿಡಿ. ಬಳಿಕ ಬಿಸಿ ಬಿಸಿಯಾದ ಆವಕಾಡೊ ತುಂಬಿದ ಟ್ಯಾಕೋಸ್ ಸವಿಯಲು ಸಿದ್ದವಾಗುತ್ತದೆ.

2. ಆವಕಾಡೊ ಕಡಲೆ ಸಲಾಡ್

ಬೇಕಾಗುವ ಸಾಮಾಗ್ರಿಗಳು

• 2 ಆವಕಾಡೊಗಳು

• 1 ಬಟ್ಟಲು ಕಡಲೆ (ಬೇಯಿಸಿದ)

• 1/4 ಈರುಳ್ಳಿ

• 1/2 ಕ್ಯೂಬ್ ಚೀಸ್

• ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು

• ಆಲಿವ್ ಎಣ್ಣೆ

• 1 ಟೀ ಚಮಚ ನಿಂಬೆ ರಸ

• ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

• ಸಿಪ್ಪೆ ತೆಗೆದು ಆವಕಾಡೊಗಳನ್ನು ಕತ್ತರಿಸಿ ಒಂದು ಬಟ್ಟಲಿನಲ್ಲಿ ಹಾಕಿ.

• ಬೇಯಿಸಿದ ಕಡಲೆಬೇಳೆ, ಕತ್ತರಿಸಿದ ಈರುಳ್ಳಿ, ಚೀಸ್ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

• ಸ್ವಲ್ಪ ಆಲಿವ್ ಎಣ್ಣೆಯನ್ನು ಸೇರಿಸಿ, ಆ ಮಿಶ್ರಣಕ್ಕೆ ನಿಂಬೆ ರಸವನ್ನು ಹಾಕಿ.

• ಎಲ್ಲವನ್ನೂ ಒಟ್ಟಿಗೆ ಸರಿಯಾಗಿ ಮಿಶ್ರಣ ಮಾಡಿದಲ್ಲಿ ರುಚಿಯಾದ ಕಡಲೆ ಸಲಾಡ್ ಸವಿಯಲು ಸಿದ್ದವಾಗುತ್ತದೆ.

ಇದನ್ನೂ ಓದಿ:ಹಳ್ಳಿ ಮನೆ ಪಾಕವಿಧಾನ ನಿಮ್ಮ ಆರೋಗ್ಯಕ್ಕೆ ಉತ್ತಮ, ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

3. ಆವಕಾಡೊ ಪಾಸ್ತಾ

ಬೇಕಾಗುವ ಸಾಮಾಗ್ರಿಗಳು

• 50 ಗ್ರಾಂ ಪಾಸ್ತಾ

• 2 ಸಣ್ಣ ಆವಕಾಡೊಗಳು

• 2 ಬೆಳ್ಳುಳ್ಳಿ ಪೇಸ್ಟ್

• 1 ಟೇಬಲ್ ಚಮಚ ಆಲಿವ್ ಎಣ್ಣೆ

• 1 ಟೀ ಚಮಚ ನಿಂಬೆ ರಸ

• ರುಚಿಗೆ ತಕ್ಕಷ್ಟು ಉಪ್ಪು

• 1/2 ಕಪ್ ಪಾಸ್ತಾ ನೀರು

ಮಾಡುವ ವಿಧಾನ

• ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನೀರು, ಉಪ್ಪು ಮತ್ತು ಕೆಲವು ಹನಿ ಆಲಿವ್ ಎಣ್ಣೆಯನ್ನು ಸೇರಿಸಿ ಕುದಿಯಲು ಬಿಡಿ.

• ಇದಕ್ಕೆ ಹಸಿ ಪಾಸ್ತಾವನ್ನು ಸೇರಿಸಿ ಮತ್ತು 5 ನಿಮಿಷಗಳ ಕಾಲ ಅಥವಾ 80 ಪ್ರತಿಶತ ಬೇಯಲು ಬಿಡಿ.

• ಪಾಸ್ತಾವನ್ನು ಸೋಸಿ ಆ ನೀರನ್ನು ಪಕ್ಕಕ್ಕೆ ಇರಿಸಿಕೊಳ್ಳಿ.

• ಎಲ್ಲಾ ಪದಾರ್ಥಗಳನ್ನು (ಪಾಸ್ತಾ ನೀರು ಸೇರಿದಂತೆ) ನಯವಾದ ಮತ್ತು ಕೆನೆಬಣ್ಣಕ್ಕೆ ತಿರುಗುವವರೆಗೆ ಮಿಶ್ರಣ ಮಾಡುವ ಮೂಲಕ ಸಾಸ್ ತಯಾರಿಸಿ.

• ಪಾಸ್ತಾದೊಂದಿಗೆ ಸಾಸ್ ಅನ್ನು ಬಾಣಲೆಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಕುದಿಸಿಕೊಂಡರೆ ಆವಕಾಡೊ ಪಾಸ್ತಾ ಸಿದ್ದವಾಗುತ್ತದೆ ಅಥವಾ ಮಿಶ್ರಣ ಮಾಡಿದ ಮೇಲೆ ಹಾಗೆಯೇ ಬಡಿಸಬಹುದು.

4. ಆವಕಾಡೊ ಹಮ್ಮಸ್ (ಒಂದು ರೀತಿಯ ಚಟ್ನಿ)

ಬೇಕಾಗುವ ಸಾಮಾಗ್ರಿಗಳು

• 1 ಕಪ್ ಕಡಲೆ (ಬೇಯಿಸಿದ ಕಡಲೆಯಾದರೆ ಉತ್ತಮ)

• 1 ಆವಕಾಡೊ

• ಆಲಿವ್ ಎಣ್ಣೆ

• ಉಪ್ಪು

• ಅರಿಶಿನ

• ಮೆಣಸು

• 1 ಟೇಬಲ್ ಚಮಚ ಎಳ್ಳು

• 2 ರಿಂದ 3 ವಾಲ್ನಟ್ಗಳು

ಮಾಡುವ ವಿಧಾನ

ಎಲ್ಲಾ ಪದಾರ್ಥಗಳನ್ನು ಜಾರ್​​ನಲ್ಲಿ ಹಾಕಿ ಮತ್ತು ಕೆನೆ ರೂಪುಗೊಳ್ಳುವವರೆಗೆ ಒಟ್ಟಿಗೆ ಮಿಶ್ರಣ ಮಾಡಿ. ನೀವು ಇದನ್ನು ಬ್ರೆಡ್, ಟೋಸ್ಟ್ ನೊಂದಿಗೆ ಬಡಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?