ಹಳ್ಳಿ ಮನೆ ಪಾಕವಿಧಾನ ನಿಮ್ಮ ಆರೋಗ್ಯಕ್ಕೆ ಉತ್ತಮ, ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಹಳೆ ಕಾಲದಲ್ಲಿ ಮಾಡುತ್ತಿದ್ದ ಕೆಲವು ಪಾಕವಿಧಾನ ಅಥವಾ ರೆಸಿಪಿಗಳು ಸುಲಭ ಮತ್ತು ಆರೋಗ್ಯಕ್ಕೂ ಒಳ್ಳೆಯದಾಗಿತ್ತು. ಅವುಗಳನ್ನು ಈಗಿನ ವಾತಾವರಣಕ್ಕೆ ತುಂಬಾ ಒಳ್ಳೆಯದು, ಯಾವೆಲ್ಲ ಪಾಕಗಳನ್ನು ಮಾಡಬಹದು. ಇನ್ನು ಸಂಜೆ ಅಥವಾ ಬೆಳಗ್ಗಿನ ಉಪಹಾರಕ್ಕೆ ಮಾಡಬಹುದು ಅಂತಹ ರೆಸಿಪಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಹಳ್ಳಿ ಮನೆ ಪಾಕವಿಧಾನ ನಿಮ್ಮ ಆರೋಗ್ಯಕ್ಕೆ ಉತ್ತಮ, ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ Image Credit source: unsplash
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 03, 2023 | 4:23 PM

ಅಡುಗೆಯಲ್ಲಿ ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಪ್ರಾಂತೀಯ ವೈವಿಧ್ಯಗಳಿವೆ. ಬೇರೆ ಬೇರೆ ಪ್ರದೇಶಗಳಲ್ಲಿ ವಿಧ ವಿಧವಾದ ತಿಂಡಿಗಳು ಲಭ್ಯ ವಿರುತ್ತದೆ. ಅದರಲ್ಲಿಯೂ ಹಳೆ ಕಾಲದಲ್ಲಿ ಮಾಡುತ್ತಿದ್ದ ಕೆಲವು ಪಾಕವಿಧಾನ ಅಥವಾ ರೆಸಿಪಿಗಳು ಸುಲಭ ಮತ್ತು ಆರೋಗ್ಯಕ್ಕೂ ಒಳ್ಳೆಯದಾಗಿತ್ತು. ಅದರಲ್ಲಿ ಕೆಲವನ್ನು ನಾವು ಮರೆತು ಬೇರೆ ಬೇರೆ ರಾಜ್ಯಗಳ ತಿಂಡಿ, ಊಟಗಳನ್ನು ಅನುಕರಿಸಲು ಆರಂಭಿಸಿದ್ದೇವೆ. ಇದು ತಪ್ಪಲ್ಲ. ಆದರೆ ನಮ್ಮ ಪೂರ್ವಜರು ಅಥವಾ ನಮ್ಮ ತಂದೆ ತಾಯಿ ಬಾಲ್ಯದಲ್ಲಿ ತಿನ್ನುತ್ತಿದ್ದ ಅಥವಾ ನಾವು ಚಿಕ್ಕವರಿರುವಾಗ ತಿಂದಿದ್ದ ತಿಂಡಿಗಳನ್ನು ಟ್ರೈ ಮಾಡಬಹುದು. ಇನ್ನೇನು ಅಧಿಕ ಶ್ರಾವಣ ಕಳೆದು ಶ್ರಾವಣ ಆರಂಭವಾಗುತ್ತಿದೆ ಹಾಗಾಗಿ ಒಂದು ಹೊತ್ತಿನ ಉಪವಾಸದ ಸಮಯದಲ್ಲಿಯೂ ಕೆಲವು ತಿಂಡಿಗಳನ್ನು ಸಂಜೆ ಅಥವಾ ಬೆಳಗ್ಗಿನ ಉಪಹಾರಕ್ಕೆ ಮಾಡಬಹುದು ಅಂತಹ ರೆಸಿಪಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ನಿಮ್ಮ ಬಾಲ್ಯದಲ್ಲಿ ನೀವು ಈ ತಿಂಡಿ ತಿಂದಿರಬಹುದು ಇದನ್ನು ಹಲವಾರು ರೀತಿಯಲ್ಲಿ ಮಾಡುತ್ತಾರೆ, ಅದಲ್ಲದೆ ಹೆಸರುಕಾಳಿನಲ್ಲಿ ಪ್ರೋಟೀನ್ ಮತ್ತು ಫೈಬರ್‍ಅಂಶ ಸಮೃದ್ಧವಾಗಿರುವುದರಿಂದ ಇದನ್ನು ಆರೋಗ್ಯ ಪೂರ್ಣ ಆಹಾರ ಎಂದು ಕರೆಯಬಹುದು. ಸಾಮಾನ್ಯವಾಗಿ ಮತ್ತು ಸರಳವಾಗಿ ಮಾಡಬಹುದಾದ ಹೆಸರುಕಾಳು ಉಸುಳಿಯ ರೆಸಿಪಿ ಇಲ್ಲಿದೆ.

ಹೆಸರುಕಾಳು ಉಸುಳಿ ಅಥವಾ ಹೆಸರುಕಾಳು ಒಗ್ಗರಣೆ

ಬೇಕಾಗುವ ಸಾಮಗ್ರಿಗಳು:

ಎಣ್ಣೆ – 1 ಚಮಚ

ಸಾಸಿವೆ – 1 ಚಮಚ

ಉದ್ದಿನಬೆಳೆ – 1 ಚಮಚ

ಕರಿಬೇವಿನ ಎಲೆ – 6 ರಿಂದ 10

ಬೇಯಿಸಿಕೊಂಡ ಹೆಸರುಕಾಳು – 100 ಗ್ರಾಂ

ರುಚಿಗೆ ತಕ್ಕಷ್ಟು ಉಪ್ಪು

ಚಿಕ್ಕದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು – 2 ಚಮಚ

ತೆಂಗಿನ ತುರಿ – 1/2 ಕಪ್

ಜೀರಿಗೆ – 3/4 ಚಮಚ

ಹಸಿ ಮೆಣಸಿನಕಾಯಿ – 1

ಇದನ್ನೂ ಓದಿ: ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನೀವು ತಿನ್ನಲೇಬೇಕಾದ ಕಾಲೋಚಿತ ಹಣ್ಣುಗಳು

ಮಾಡುವ ವಿಧಾನ:

ಹೆಸರುಕಾಳನ್ನು ಬೇಯಿಸುವ ಮೊದಲು 5- 6 ಗಂಟೆ ಮೊದಲೇ ನೆನಸಿಡಬೇಕು. ಬಳಿಕ ಅದನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಬಳಿಕ ಇನ್ನೊಂದು ಪಾತ್ರೆಗೆ ಎಣ್ಣೆ, ಸಾಸಿವೆ, ಉದ್ದಿನಬೆಳೆ ಹಾಕಿ ನಂತರ ಅದಕ್ಕೆ ಹಸಿ ಮೆಣಸು, ಹೆಚ್ಚು ಖಾರ ಬೇಕಾದಲ್ಲಿ ಮೆಣಸಿನ ಹುಡಿ ಸ್ವಲ್ಪ ಸೇರಿಸಿಕೊಳ್ಳಿ. ಹಸಿ ಮೆಣಸಿಗಿಂತ ಕೆಂಪು ಮೆಣಸು ಹೆಚ್ಚು ರುಚಿ ನೀಡುತ್ತದೆ. ಬಳಿಕ ಅದಕ್ಕೆ ಕರಿಬೇವಿನ ಎಲೆ ಹಾಕಿ ನಂತರ ಬೆಂದ ಹೆಸರುಕಾಳನ್ನು ಸೇರಿಸಿ. ನಿಮಗೆ ಬೇಕಾದಲ್ಲಿ ಈರುಳ್ಳಿ ಕೂಡ ಹಾಕಿಕೊಳ್ಳಬಹುದು ಆದರೆ ಶ್ರಾವಣ ಮಾಸದಲ್ಲಿ ಈರುಳ್ಳಿ ತಿನ್ನದವರು, ಇದನ್ನು ಬಳಸುವ ಅಗತ್ಯ ಇಲ್ಲ. ಹೆಸರಕಾಳನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ನಂತರ ಬೇಕಾದಲ್ಲಿ ಉಪ್ಪನ್ನು ಸೇರಿಸಿಕೊಳ್ಳಿ ಅದಕ್ಕೆ ಚಿಕ್ಕದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು ಕಾಯಿ ತುರಿಯನ್ನು ಹಾಕಿ ಸ್ವಲ್ಪ ಕಲಸಿ, ಕೊತ್ತಂಬರಿ ಸೊಪ್ಪು ಇಷ್ಟವಿಲ್ಲದವರು ಕಾಯಿ ತುರಿ ಮಾತ್ರ ಬಳಸಬಹುದು. ಬೇಕಾದಲ್ಲಿ ನಿಂಬೆ ರಸವನ್ನೂ ಸೇರಿಸಬಹುದು.

ಕರ್ನಾಟಕದ ಅತ್ಯಂತ ಪ್ರಸಿದ್ಧ ಉಪಹಾರಗಳಲ್ಲಿ ರಾಗಿ ರೊಟ್ಟಿಯೂ ಒಂದು. ಇದರಲ್ಲಿ ಅನೇಕ ಪೌಷ್ಟಿಕಾಂಶ ತುಂಬಿರುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು. ಇನ್ನು ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯಲ್ಲಿ ರಾಗಿ ರೊಟ್ಟಿ ಮಾಡುತ್ತಾರೆ. ರಾಗಿ ಒಂದು ರುಚಿ ಇಲ್ಲದ ಧಾನ್ಯ ಎಂದು ಹೇಳುವವರು. ರಾಗಿ ರೊಟ್ಟಿಯನ್ನು ಒಮ್ಮೆ ಪ್ರಯತ್ನಿಸಿ ರುಚಿ ನೋಡಿ, ಮತ್ತೆ ಮತ್ತೆ ತಿನ್ನುವುದರಲ್ಲಿ ಸಂಶಯವಿಲ್ಲ. ಇದನ್ನು ಮಾಡುವ ಸರಳ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.

ಬೇಕಾಗುವ ಸಾಮಗ್ರಿಗಳು:

ರಾಗಿ ಹಿಟ್ಟು – 3 ಕಪ್ (ಮೂರು ಜನರಿದ್ದರೆ ಮಾತ್ರ ಜಾಸ್ತಿ ಬೇಕಾದಲ್ಲಿ ಹೆಚ್ಚು ಹಿಟ್ಟು ಸೇರಿಸಿಕೊಳ್ಳಬಹುದು)

ನೀರು – 3 ಕಪ್ ( ಹೆಚ್ಚು ಬೇಕಾದಲ್ಲಿ ಸೇರಿಸಿಕೊಳ್ಳಬಹುದು)

ಹಸಿ ಮೆಣಸಿನಕಾಯಿ – 3- 4

ಸಣ್ಣಗೆ ಹೆಚ್ಚಿದ ಈರುಳ್ಳಿ – 3 ದೊಡ್ಡ ಚಮಚ (ಜಾಸ್ತಿ ಬೇಕಾದಲ್ಲಿ ಸೇರಿಸಿಕೊಳ್ಳಬಹುದು)

ಕರಿಬೇವಿನ ಎಲೆ – 3- 4

ಅಡುಗೆ ಎಣ್ಣೆ – 1\4 ಕಪ್

ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆ

ಮಾಡುವ ವಿಧಾನ:

ಒಂದು ಬಾಣಲೆ ಅಥವಾ ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ರಾಗಿ ಹಿಟ್ಟು ಹಾಕಿ ಸ್ಟೋವ್ ಆಫ್ ಮಾಡಿಕೊಳ್ಳಿ. ಈಗ ಕತ್ತರಿಸಿದ ಈರುಳ್ಳಿ , ಕರಿಬೇವಿನ ಸೊಪ್ಪು, ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ನೀವು ಕರಿಬೇವಿನ ಎಲೆಗಳ ಬದಲಾಗಿ ಕೊತ್ತುಂಬರಿ ಸೊಪ್ಪನ್ನು ಸಹ ಬಳಸಬಹುದು. ಬೇಕಾದಲ್ಲಿ ನೀರು ಅಥವಾ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಎರಡು ಉಂಡೆಗಳಾಗುವಷ್ಟು ಮಿಶ್ರಣ ತೆಗೆದುಕೊಂಡು, ಬೆರಳುಗಳಿಗೂ ಎಣ್ಣೆ ಹಚ್ಚಿಕೊಂಡು, ಬೆರಳುಗಳಿಂದ ಮೆಲ್ಲನೆ ಒತ್ತುತ್ತಾ ವೃತ್ತಾಕಾರದ ರಾಗಿ ರೊಟ್ಟಿಯನ್ನು ತಟ್ಟಿ. ಆಗಾಗ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಹಿಟ್ಟು ಅಂಟುವುದಿಲ್ಲ. ಎಚ್ಚರಿಕೆಯಿಂದ ಪ್ಲಾಸ್ಟಿಕ್ ಹಾಳೆಯಲ್ಲಿರುವ ಅಥವಾ ಬಾಳೆಯಲ್ಲಿರುವ ರಾಗಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ ಮೇಲೆ ಹಾಕಿ. ಮತ್ತೆ ಆ ರೊಟ್ಟಿಗೆ ಮೇಲಿನಿಂದ ಎಣ್ಣೆ ಹಾಕಿ, ಸುಮಾರು ಒಂದು ನಿಮಿಷದ ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇದನ್ನು ಬೆಣ್ಣೆ ಅಥವಾ ಮೊಸರು, ಚಟ್ನಿಯೊಂದಿಗೆ ಸವಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Thu, 3 August 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್