Lifestyle Hack: ಮದ್ಯಪಾನ ಮಾಡುವಾಗ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಯಾಕೆ ಗೊತ್ತಾ?

ಆಲ್ಕೋಹಾಲ್ ಅಡ್ಡ ಪರಿಣಾಮಗಳ ಬಗ್ಗೆ ತಿಳಿದಿದ್ದರೂ ಜನರು ಅದನ್ನು ಸೇವಿಸುತ್ತಾರೆ. ಹೆಚ್ಚಿನವರು ಮಿತವಾಗಿ ಮದ್ಯ ಸೇವಿಸುತ್ತಾರೆ ನಿಜ, ಆದರೆ ಮದ್ಯಪಾನ ಮಾಡುವಾಗ ಸೇವಿಸುವಂತಹ ಕೆಲವೊಂದು ಆಹಾರಗಳು ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು. ಹಾಗಾಗಿ ಆಲ್ಕೋಹಾಲ್ ಸೇವನೆಯ ಸಂದರ್ಭದಲ್ಲಿ ಈ ಕೆಲವು ಆಹಾರಗಳನ್ನು ಸೇವಿಸದಿರುವುದು ಉತ್ತಮ.

Lifestyle Hack: ಮದ್ಯಪಾನ ಮಾಡುವಾಗ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 17, 2023 | 4:02 PM

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಿದ್ದರೂ ಹೆಚ್ಚಿನವರು ಆಲ್ಕೋಹಾಲ್ ಸೇವನೆ ಮಾಡುತ್ತಾರೆ. ಯಾವುದೇ ಪಾರ್ಟಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಕುಟುಂಬ ಸ್ನೇಹಿತರೊದಿಗೆ ಸೇರಿ ಹೆಚ್ಚಿನ ಜನರು ಮೋಜಿಗಾಗಿ ಮದ್ಯಪಾನ ಮಾಡುತ್ತಾರೆ. ಹಾಗೂ ಹೆಚ್ಚಿನವರಿಗೆ ಮದ್ಯ ಸೇವಿಸುವ ಸಂದರ್ಭದಲ್ಲಿ ಮದ್ಯದ ಜೊತೆಗೆ ಸವಿಯಲು ಏನಾದರೂ ತಿನಿಸು ಇರಲೇಬೇಕು. ಉಪ್ಪಿನಕಾಯಿ, ಕುರುಕುಲು ತಿಂಡಿಗಳು, ಎಣ್ಣೆಯಲ್ಲಿ ಕರಿದ ಆಹಾರಗಳು ಹೀಗೆ ಆಲ್ಕೋಹಾಲ್ ಸೇವಿಸುವಾಗ ಈ ತಿನಿಸುಗಳನ್ನು ಕೂಡಾ ಜೊತೆಗೆ ತಿನ್ನುತ್ತಾರೆ. ಮದ್ಯಪಾನ ಹೇಗೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೆ ಆಲ್ಕೋಹಾಲ್ ಜೊತೆಗೆ ಸವಿಸುವ ಕೆಲವೊಂದು ಆಹಾರ ಪಾದಾರ್ಥಗಳು ಕೂಡ ನಮ್ಮ ಆರೋಗ್ಯಕ್ಕೆ ಅಡ್ಡಪರಿಣಾಮವನ್ನು ಉಂಟುಮಾಡುತ್ತವೆ. ಹಾಗೂ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ ನೀವು ಮದ್ಯಪಾನ ಮಾಡುವ ಸಂದರ್ಭದಲ್ಲಿ ಈ ಕೆಲವು ಆಹಾರಗಳನ್ನು ಸೇವಿಸದಿರುವುದು ಉತ್ತಮ.

ಮದ್ಯಪಾನ ಮಾಡುವಾಗ ನೀವು ತಪ್ಪಿಸಬೇಕಾದ ಕೆಲವೊಂದು ಆಹಾರಗಳು:

ಸಂಸ್ಕರಿಸಿದ ಮತ್ತು ಕರಿದ ಆಹಾರಗಳು:

ಹೆಚ್ಚಿನವರಿಗೆ ಆಲ್ಕೋಹಾಲ್ ಸೇವಿಸುವಾಗ ಕುರುಕುಲು ತಿಂಡಿ ಅಥವಾ ಮಸಾಲೆಯುಕ್ತ ಕರಿದ ಆಹಾರಗಳು ಇರಲೇಬೇಕು. ಆದರೆ ನಿಮಗೆ ಗೊತ್ತಾ, ಈ ಆಹಾರಗಳು ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು, ಕೊಲೆಸ್ಟ್ರಾಲ್ ಅಂಶಗಳನ್ನು ಒಳಗೊಂಡಿರುತ್ತದೆ. ಇವೆಲ್ಲವೂ ಹೃದಯ ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು. ಇದಲ್ಲದೆ ಈ ಆಹಾರಗಳು ತೂಕ ಹೆಚ್ಚಾಗಲು ಕಾರಣವಾಗಬಹುದು. ಆದ್ದರಿಂದ ಮಧ್ಯಪಾನ ಮಾಡುವಾಗ ಸಂಸ್ಕರಿಸಿದ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳನ್ನು ತ್ಯಜಿಸುವುದು ಉತ್ತಮ.

ಸಕ್ಕರೆಯುಕ್ತ ಪಾನೀಯಗಳು:

ಕೆಲವರು ತಾವು ಸೇವಿಸುವ ಮದ್ಯಕ್ಕೆ ಸೋಡಾ ಅಥವಾ ಕೊಕಕೋಲಾ ಹಾಗೂ ಇನ್ನಿತರ ಸಿಹಿಕಾರಕ ಪಾನೀಯಗಳನ್ನು ಸೇರಿಸುತ್ತಾರೆ. ಈ ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಇದು ತೂಕ ಹೆಚ್ಚಾಗಲು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ ಈ ಪಾನೀಯಗಳಲ್ಲಿನ ಸಕ್ಕರೆಯು ಆಲ್ಕೋಹಾಲ್ ನೊಂದಿಗೆ ಬೆರೆತಾಗ ಇದು ಆರೋಗ್ಯಕ್ಕೆ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು. ಆದ್ದರಿಂದ ಮದ್ಯಕ್ಕೆ ಈ ರೀತಿಯ ಪಾನೀಯಗಳನ್ನು ಸೇರಿಸಿ ಕುಡಿಯುವುದನ್ನು ತಪ್ಪಿಸಿ.

ಕೆಂಪು ಮಾಂಸ:

ಕೆಂಪು ಮಾಂಸಗಳು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಅಂಶವನ್ನು ಹೊಂದಿರುತ್ತದೆ. ಇವೆರಡೂ ಹೃದಯ ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು. ಅಲ್ಲದೆ ಈ ಕೆಂಪು ಮಾಂಸವು ಕ್ಯಾನ್ಸರ್ ಮತ್ತು ಇತರ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ. ಹಾಗಾಗಿ ಮದ್ಯ ಸೇವನೆಯ ಸಂದರ್ಭದಲ್ಲಿ ಕೆಂಪು ಮಾಂಸದ ಸೇವನೆಯನ್ನು ಮಿತಿಗೊಳಿಸುವುದು ಉತ್ತಮ.

ಇದನ್ನೂ ಓದಿ:  ಬೇಯಿಸಿದ ಮೊಟ್ಟೆಗಳ ಸಿಪ್ಪೆ ತೆಗೆಯಲು 7 ಸಲಹೆಗಳು

ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ತಿನಿಸುಗಳು:

ಬ್ರೆಡ್, ಪಾಸ್ಟಾ ದಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಿಸಬಹುದು. ಇದು ಮಧುಮೇಹ ಮತ್ತು ಇತರ ಅಸ್ವಸ್ಥತೆಗಳ ಅಪಾಯವನ್ನು ಉಂಟುಮಾಡಬಹುದು. ಇದಲ್ಲದೆ, ಈ ಕಾರ್ಬೋಹೈಡ್ರೇಟ್ ಆಹಾರಗಳು ತೂಕ ಹೆಚ್ಚಿಸಬಹುದು ಮತ್ತು ಹೃದಯರಕ್ತನಾಳಗಳ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ಮದ್ಯಪಾನ ಮಾಡುವಾಗ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಸೇವನೆಯನ್ನು ಮಿತಿಗೊಳಿಸಿ.

ಹೆಚ್ಚಿನ ಪ್ರಮಾಣ ಕೊಬ್ಬಿನಾಂಶ ಹೊಂದಿರುವ ಡೈರಿ ಉತ್ಪನ್ನಗಳು:

ಚೀಸ್, ಬೆಣ್ಣೆಯಂತಹ ಹೆಚ್ಚಿನ ಪ್ರಮಾಣದ ಕೊಬ್ಬಿನ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ನ್ನು ಹೊಂದಿರುತ್ತವೆ. ಇವೆರಡೂ ನಿಮ್ಮ ಹೃದಯ ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು. ಇದಲ್ಲದೆ, ಈ ಡೈರಿ ಉತ್ಪನ್ನಗಳು ತೂಕ ಹೆಚ್ಚಾಗಲು ಮತ್ತು ಟೈಪ್ 2 ಮಧುಮೇಹದಂತಹ ಇತರ ದೀರ್ಘಕಾಲದ ಕಾಯಿಲೆಗಳ ಅಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ ಆಲ್ಕೋಹಾಲ್ ಸೇವಿಸುವಾಗ ಹೆಚ್ಚಿನ ಕೊಬ್ಬಿನಾಂಶವಿರುವ ಡೈರಿ ಉತ್ಪನ್ನಗಳನ್ನು ಸೇವಿಸದಿರುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: