Makeup Hacks: ಕಡಿಮೆ ಸಮಯದಲ್ಲಿ ಮೇಕಪ್ ಮಾಡಿಕೊಳ್ಳಲು ಇಲ್ಲಿದೆ ಸಿಂಪಲ್ ಟ್ರಿಕ್ಸ್!

ವೆಚ್ಚವನ್ನು ಉಳಿಸುವುದರ ಜೊತೆಗೆ ಎಲ್ಲಾದರೂ ಹೋರಡಬೇಕೆಂದಾಗ ಬೇಗನೇ ರೆಡಿಯಾಗಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Makeup Hacks: ಕಡಿಮೆ ಸಮಯದಲ್ಲಿ ಮೇಕಪ್ ಮಾಡಿಕೊಳ್ಳಲು ಇಲ್ಲಿದೆ ಸಿಂಪಲ್ ಟ್ರಿಕ್ಸ್!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 02, 2023 | 6:35 PM

ಮೇಕಪ್ ಎನ್ನುವ ಜಗತ್ತು ವಿಶಾಲ. ಸಾಕಷ್ಟು ಕಂಪೆನಿಗಳು ವಿವಿಧ ರೀತಿಯ ಪ್ರಾಡಕ್ಟ್ಗಳನ್ನು ಮಾರುಕಟ್ಟೆಗೆ ತರುತ್ತದೆ. ಆದರೆ ಅದರಲ್ಲಿ ನಿಮಗೆ ಬೇಕಾದ, ನಿಮ್ಮ ತ್ವಚೆಗೆ ಹೊಂದುವಂತ ಕ್ರೀಮ್ ಗಳನ್ನು ಆರಿಸಿಕೊಳ್ಳಬೇಕು. ವಿಶೇಷವಾಗಿ ನೀವು ಮೇಕಪ್ ಮಾಡಿಕೊಳ್ಳಲು ಹೊಸಬರಾಗಿದ್ದರೆ ಸಾಕಷ್ಟು ರೀತಿಯಲ್ಲಿ ಮೇಕಪ್ ಕಿಟ್ ಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ತಜ್ಞರು ಈ ಉದ್ಯಮದಲ್ಲಿ ನಿರಂತರವಾಗಿ ಬದಲಾಗುತ್ತಿರುವ ಪ್ರವೃತ್ತಿಗಳ ಬಗ್ಗೆ ನಮ್ಮನ್ನು ನವೀಕರಿಸುತ್ತಾರೆ! ಈ ಮಾಹಿತಿಯುಕ್ತ ಟ್ಯುಟೋರಿಯಲ್ಗಳು ಕೇವಲ ಸಮಯವನ್ನು ಉಳಿಸುವುದಿಲ್ಲ ಆದರ ಜೊತೆಗೆ ಅವು ಮೇಕಪ್ ಅಪ್ಲಿಕೇಶನ್ನ ಸಂಕೀರ್ಣ ಪ್ರಕ್ರಿಯೆಯನ್ನು ಸರಳಗೊಳಿಸುತ್ತವೆ. ಹಾಗಾಗಿ ಕೆಲವು ಟ್ರಿಕ್ ಗಳನ್ನು ಅರಿತುಕೊಳ್ಳಬೇಕು. ಜೊತೆಗೆ ಎಲ್ಲಿಯಾದರೂ ಬೇಗ ಹೋರಾಡಬೇಕು ಎಂದಲ್ಲಿ ಇಂತಹ ಸುಲಭ ಮತ್ತು ಕ್ವಿಕ್ ಆಗಿರುವ ಹ್ಯಾಕ್ಸ್ ಗಳನ್ನು ಮಾಡಬಹುದು. ಜೊತೆಗೆ ಕಲಾವಿದರೂ ಕೂಡ ಇದನ್ನು ಬಳಸಿಕೊಳ್ಳಬಹುದಾಗಿದೆ. ಇದರಿಂದ ಅವರ ಸಮಯದ ಜೊತೆಗೆ ಪ್ರತಿ ಬಾರಿ ಹೊಸದನ್ನು ಕಲಿತ ಹಾಗಾಗುತ್ತದೆ.

ಮೇಕಪ್ ಮಾಡಿಕೊಳ್ಳುವವರು ಪ್ರಯತ್ನಿಸಲೇ ಬೇಕಾದ 5 ಮೇಕಪ್ ಹ್ಯಾಕ್ ಗಳ ಬಗ್ಗೆ ಇಲ್ಲಿದೆ ಮಾಹಿತಿ:

ಮಸ್ಕರಾಗೆ ಮುಂಚಿತವಾಗಿ ಕಣ್ಣುರೆಪ್ಪೆಗಳ ಮೇಲೆ ಪೌಡರ್ ಬಳಸುವುದು:

ನೀವು ನಕಲಿ ಲಾಶೆಸ್ ಹಚ್ಚುವುದರಿಂದ ಕಿರಿಕಿರಿಗೊಳ್ಳುವವರಾಗಿದ್ದೂ ಆದರೂ ಅವುಗಳನ್ನು ಹಚ್ಚಿಕೊಳ್ಳುವುದನ್ನು ಇಷ್ಟ ಪಡುತ್ತಿದ್ದರೇ, ಈ ಹ್ಯಾಕ್ ನಿಮಗಾಗಿ! ನಿಮ್ಮ ಕಣ್ಣು ರೆಪ್ಪೆಗಳ ಮೇಲೆ ಪೌಡರ್ ಅನ್ನು ದಪ್ಪ ಲೇಯರ್ ಅಲ್ಲಿ ಹಾಕಿಕೊಳ್ಳಿ ಬಳಿಕ ತಕ್ಷಣವೇ ಅವುಗಳನ್ನು ಮಸ್ಕರಾದಿಂದ ಲೇಪಿಸಿ. ಇದರಿಂದ ನಕಲಿ ಲಾಶೆಸ್ ಹಾಕಿಕೊಳ್ಳುವುದು ತಪ್ಪುತ್ತದೆ ಜೊತೆಗೆ ನಿಜವಾಗಿಯೂ ಲಾಶೆಸ್ ಹಾಕಿದವರಂತೆ ದೊಡ್ಡ ರೆಪ್ಪೆ ಕಾಣುತ್ತದೆ. ಇದರಿಂದ ಕಣ್ಣು ರೆಪ್ಪೆಗಳನ್ನು ಹಾಕಿಕೊಳ್ಳುವ ನೋವು ಮತ್ತು ಕಿರಿಕಿರಿ ಇರುವುದಿಲ್ಲ.

ಇದನ್ನೂ ಓದಿ:Makeup Tips for Beginners: ಪರ್ಫೇಕ್ಟ್ ಮೇಕ್​​ಅಪ್ ಲುಕ್ ಪಡೆಯಲು ಸಿಂಪಲ್ ಟಿಪ್ಸ್ ಇಲ್ಲಿವೆ

ಫೌಂಡೇಶನ್ ಅಡಿಯಲ್ಲಿ ಬ್ಲಶ್:

ಮುಖದಲ್ಲಿ ಗ್ಲೋ ಪಡೆಯಲು, ಈ ಟ್ರಿಕ್ ಪ್ರಯತ್ನಿಸಿ! ಮೇಕಪ್ ಮಾಡಿಕೊಳ್ಳುವಾಗ ಮೊದಲು ಬ್ಲಶ್ ಮಾಡಿಕೊಂಡು ತದನಂತರ ಅದರ ಮೇಲೆ ಫೌಂಡೇಶನ್ ಹಾಕಿರಿ. ಈ ಮೇಕಪ್ ಹ್ಯಾಕ್ ನಿಮ್ಮ ಕೆನ್ನೆಗಳನ್ನು ಕೆಂಪಾಗಿಸುವುದರ ಜೊತೆಗೆ ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ. ಆದರೆ ಪುಡಿ ಬ್ಲಶ್ ಬಳಸಬೇಡಿ ಇದು ಮುಖದ ಮೇಲೆ ಪ್ಯಾಚ್ ಆದಂತೆ ಎನಿಸಬಹುದು. ಹಾಗಾಗಿ ತೇವಾಂಶ ವಿರುವ ದ್ರವ ಅಥವಾ ಕೆನೆಯುತ ವಾಗಿರುವ ಉತ್ಪನ್ನಗಳನ್ನು ಮಾತ್ರ ಅನ್ವಯಿಸಿ.

ಸೆಲೆಬ್ರಿಟಿ ಗ್ಲೋ:

ಸೆಲೆಬ್ರಿಟಿಗಳಂತೆ ಹೊಳೆಯುವ ಫಿನಿಶಿಂಗ್ ಪಡೆಯಲು, ಒಂದು ಚಿಟಿಕೆ ಹೈಲೈಟರ್ ಪೌಡರ್ ತೆಗೆದುಕೊಂಡು ಅದನ್ನು ನಿಮ್ಮ ಮಾಯಿಶ್ಚರೈಸರ್ನೊಂದಿಗೆ ಬೆರೆಸಿ ಮತ್ತು ಅದನ್ನು ಮುಖದ ಎಲ್ಲಾ ಭಾಗಕ್ಕೆ ಅನ್ವಯಿಸಿ. ಈ ತಂತ್ರವು ನಿಮ್ಮ ಮುಖಕ್ಕೆ ಸೆಲೆಬ್ರಿಟಿ ಗ್ಲೋ ನೀಡುತ್ತದೆ.

ಕಲರ್ ಕರೆಕ್ಟರ್ ಆಗಿ ಕೆಂಪು ಲಿಪ್ ಸ್ಟಿಕ್:

ನಿಮ್ಮ ಡಾರ್ಕ್ ಸರ್ಕಲ್ ಕಲರ್ ರೆಕ್ಟರರ್ ನಿಂದ ಔಟ್ ಆಗಿದೆಯೇ? ಚಿಂತಿಸಬೇಡಿ, ಇಲ್ಲಿದೆ ತ್ವರಿತ ಹ್ಯಾಕ್! ನಿಮ್ಮ ಕೆಂಪು ಬಣ್ಣದ ಲಿಪ್ ಸ್ಟಿಕ್ ತೆಗೆದುಕೊಂಡು ಅದನ್ನು ನಿಮ್ಮ ಕಣ್ಣುಗಳ ಕೆಳಭಾಗಕ್ಕೆ ಹಚ್ಚಿ, ಅದರ ಮೇಲೆ ನಿಮ್ಮ ಫೌಂಡೇಶನ್ ಲೇಯರ್ ಮಾಡಿ ಮತ್ತು ಅಂತಿಮವಾಗಿ ಅದನ್ನು ಕನ್ಸೀಲರ್ ಅಥವಾ ಸಡಿಲವಾದ ಪೌಡರ್ ನೊಂದಿಗೆ ಲಾಕ್ ಮಾಡಿ. ಇದರಿಂದ ಕಣ್ಣಿನ ಕೆಳಗೆ ಡಾರ್ಕ್ ಆದ ಜಾಗ ನಿಮ್ಮ ಮುಖದ ಬಣ್ಣಕ್ಕೆ ತಿರುಗುತ್ತದೆ ಜೊತೆಗೆ ಸುಂದರವಾಗಿ ಕಾಣುತ್ತದೆ. ಇಂತಹ ಸಣ್ಣ ಸಣ್ಣ ಟ್ರಿಕ್ ಗಳನ್ನು ಬಳಸುವುದರಿಂದ ಸಮಯವೂ ಉಳಿತಾಯವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್