Makeup Tips for Beginners: ಪರ್ಫೇಕ್ಟ್ ಮೇಕ್​​ಅಪ್ ಲುಕ್ ಪಡೆಯಲು ಸಿಂಪಲ್ ಟಿಪ್ಸ್ ಇಲ್ಲಿವೆ

ಕೆಲವೊಂದು ಮೇಕ್​​ಅಪ್​​ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿದರೆ, ಇನ್ನೂ ಕೆಲವು ನಿಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಆದ್ದರಿಂದ ಮೇಕ್​​ಅಪ್ ಬಳಸುವ ಸರಿಯಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

Makeup Tips for Beginners: ಪರ್ಫೇಕ್ಟ್ ಮೇಕ್​​ಅಪ್ ಲುಕ್ ಪಡೆಯಲು ಸಿಂಪಲ್ ಟಿಪ್ಸ್ ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Jan 15, 2023 | 5:25 PM

ಕೆಲವೊಂದು ಮೇಕ್​​ಅಪ್(​​Makeup) ನಿಮ್ಮ ಸೌಂದರ್ಯವನ್ನು ಹೆಚ್ಚಿಸಿದರೆ, ಇನ್ನೂ ಕೆಲವು ನಿಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಆದ್ದರಿಂದ ಮೇಕ್​​ಅಪ್ ಬಳಸುವ ಸರಿಯಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸುಂದರವಾದ ಹಾಗು ಅತ್ಯಂತ ಸರಳವಾದ ಮೇಕ್ಅಪ್ ಲುಕ್ ನೀವು ಪಡೆಯಲು ಬಯಸಿದರೆ, ಇಲ್ಲಿ ನಿಮಗೆ ಹಂತ ಹಂತವಾಗಿ ಮೇಕ್ಅಪ್ ವಿಧಾನವನ್ನು ತಿಳಿಸಿಕೊಡಲಾಗಿದೆ. ಆದ್ದರಿಂದ ಈ ವಿಧಾನವನ್ನು ನೀವೂ ಪಾಲಿಸಿ ಪರ್ಫೇಕ್ಟ್ ಮೇಕ್ ಅಪ್ ಲುಕ್ ಪಡೆಯಿರಿ.

ಪರ್ಫೇಕ್ಟ್ ಮೇಕ್ ಅಪ್ ಲುಕ್​​ಗೆ ಈ ವಿಧಾನ ಪಾಲಿಸಿ:

ತ್ವಚೆವನ್ನು ಸ್ವಚ್ಛಗೊಳಿಸಿ:

ನೀವೂ ಯಾವುದೇ ಸೌಂದರ್ಯ ವರ್ಧಕ ಬಳಸುವ ಮೊದಲು ನಿಮ್ಮ ತ್ವಚೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ಅಗತ್ಯವಾಗಿದೆ.ಟೋನರ್ ಮತ್ತು ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.

ಸರಿಯಾದ ಫೌಂಡೇಶನ್ ಕ್ರೀಮ್ ಆಯ್ಕೆ ಮಾಡಿ:

ನಿಮ್ಮ ಚರ್ಮದ ಪ್ರಕಾರಕ್ಕೆ ಸರಿಹೊಂದುವ ಮತ್ತು ನಿಮ್ಮ ತ್ವಚೆಗೆ ಹೊಂದಿಕೆಯಾಗುವ ಫೌಂಡೇಶನ್ ಕ್ರೀಮ್ ಆಯ್ಕೆ ಮಾಡಿ. ಜೊತೆಗೆ ಒಳ್ಳೆಯ ಗುಣಮಟ್ಟದ ಮ್ಯಾಟ್ ಫಿನಿಶ್ ನೀಡುವ ಫೌಂಡೇಶನ್ ಕ್ರೀಮ್ ಆಯ್ಕೆ ಮಾಡಿ. ಇದು ನಿಮ್ಮ ಮೇಕ್​​ಅಪ್​​ ದೀರ್ಘಕಾಲದ ವರೆಗೆ ಉಳಿಯುವಂತೆ ಮಾಡುತ್ತದೆ.

ಪ್ರೈಮರ್ ಅತ್ಯಗತ್ಯ:

ಯಾವುದೇ ಮೇಕ್ಅಪ್ ಉತ್ಪನ್ನದ ಮೊದಲು ಪ್ರೈಮರ್ ಹಚ್ಚುವುದು ಬಹಳ ಮುಖ್ಯವಾಗಿದ್ದು, ಇದು ಮೇಕ್ಅಪ್ ಹೆಚ್ಚು ಗಂಟೆಗಳವರೆಗೆ ಉಳಿಯಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮದ ಪ್ರಕಾರಕ್ಕೆ ತಕ್ಕಂತೆ ಉತ್ತಮ ಪ್ರೈಮರ್ ಆಯ್ಕೆ ಮಾಡಿ.

ಇದನ್ನೂ ಓದಿ: ವಾರಪೂರ್ತಿ ಕೆಲಸ ಮಾಡಿ ಸುಸ್ತಾಗಿದೆಯೇ, ನಿಮ್ಮ ಮನಸ್ಸು ಹಾಗೂ ದೇಹವನ್ನು ಶಾಂತಗೊಳಿಸಲು ಇಲ್ಲಿವೆ ಸಲಹೆಗಳು

ಕನ್ಸಿಲರ್ ಬಳಸಿ:

ನಿಮ್ಮ ಕಣ್ಣುಗಳ ಕೆಳಗಿನ ಕಪ್ಪು ಕಲೆಗಳು, ತುಟಿಗಳ ಸುತ್ತಲಿನ ಕಪ್ಪು ಕಲೆಗಳನ್ನು ಮರೆ ಮಾಚಲು, ಫೌಂಡೇಶನ್ ಕ್ರೀಮ್ ಹಚ್ಚಿದ ನಂತರ ಕನ್ಸಿಲರ್ ಬಳಸಿ. ಪರ್ಫೇಕ್ಟ್ ಮೇಕ್​​ಅಪ್ ಲುಕ್ ನೀಡುವಲ್ಲಿ ಕನ್ಸಿಲರ್ ಕೂಡ ಅಗತ್ಯವಾಗಿದೆ.

ಫೌಂಡೇಶನ್ ಸರಿಯಾದ ಕ್ರಮದಲ್ಲಿ ಹಚ್ಚಿ:

ಫೌಂಡೇಶನ್ ಕ್ರಿಮ್​​ ಹಚ್ಚುವಾಗ ಬ್ಯೂಟಿ ಬ್ಲೆಂಡರ್ ಬಳಸಿ. ಇದು ನಿಮ್ಮ ತ್ವಚೆಯ ಮೇಲೆ ಫೌಂಡೇಶನ್ ಕ್ರಿಮ್ ಸರಿಯಾಗಿ ಕೂರಲು ಸಹಾಯ ಮಾಡುತ್ತದೆ. ಜೊತೆಗೆ ಮೇಕ್ಅಪ್ ಹೆಚ್ಚು ಗಂಟೆಗಳವರೆಗೆ ಉಳಿಯಲು ಸಹಾಯ ಮಾಡುತ್ತದೆ.

ಕಂಪಾಕ್ಟ್ ಪೌಡರ್:

ಮುಖದ ಮೇಲೆ ಕ್ರಿಮ್​ ಹಚ್ಚಿದ ಬಳಿಕ ಮ್ಯಾಟ್ ಫಿನಿಶ್ ನೀಡಲು ಕಂಪಾಕ್ಟ್ ಪೌಡರ್ ಬಳಸಿ. ಇದು ನಿಮ್ಮ ಕ್ರಿಮ್​​ಗಳ ಪ್ರತಿಯೊಂದು ಲೇಯರ್​​ಗಳನ್ನು ದೀರ್ಘಕಾಲದ ವರೆಗೆ ಹಿಡಿದಿಟ್ಟುಕೊಳ್ಳಲು ಸಹಾಯಕವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ: