Makeup Trends 2023: ಈ ಮೇಕ್ ಅಪ್ ಟ್ರೆಂಡ್​​ಗಳನ್ನು ನೀವೂ ಕೂಡ ಫೋಲೋ ಮಾಡಿ

ಮುಖದ ಸೌಂದರ್ಯದ ಜೊತೆಗೆ ತ್ವಚೆಯ ಆರೋಗ್ಯವು ಅತ್ಯಂತ ಅಗತ್ಯವಾಗಿದೆ. ಜೊತೆಗೆ ಹೊರಗಡೆ ಹೋಗುವಾಗ ಪ್ರತಿ ದಿನ ಸನ್ ಸ್ಕ್ರೀನ್ ಬಳಸಿ. ಬಿಸಿಲು ಇಲ್ಲದಿದ್ದರೂ ಸನ್ ಸ್ಕ್ರೀನ್ ಬಳಸುವುದನ್ನು ಮರೆಯದಿರಿ.

Makeup Trends 2023: ಈ ಮೇಕ್ ಅಪ್ ಟ್ರೆಂಡ್​​ಗಳನ್ನು ನೀವೂ ಕೂಡ ಫೋಲೋ ಮಾಡಿ
ಸಾಂದರ್ಭಿಕ ಚಿತ್ರImage Credit source: Pinterest
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 21, 2022 | 6:06 PM

ಪ್ರತಿಯೊಂದು ಹೆಣ್ಣಿಗೂ ಮೇಕ್ ಅಪ್ (Makeup) ಅತ್ಯಂತ ಇಷ್ಟ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಇದೂ ಕೂಡ ಒಂದು ಭಾಗವಾಗಿದೆ.  ಆದರಿಂದ ಈ ಹೊಸ ವರ್ಷ ( New Year)ದ ಸಮಯದಲ್ಲಿ ಮೇಕ್ ಅಪ್ ದಿನಚರಿಗಳ ಬಗ್ಗೆ ಇನ್ನಷ್ಟು ಕಾಳಜಿ ವಹಿಸಿ. 2023 ರ ಮೇಕಪ್ ಟ್ರೆಂಡ್‌ಗಳಿಗಾಗಿ ನಿಮ್ಮ ಕಾಸ್ಮೆಟಿಕ್ ಕಿಟ್ ರಿಫ್ರೆಶ್ ಮಾಡಲು ನೀವು ಬಯಸಿದರೆ ಉಪಯುಕ್ತ ಮಾಹಿತಿ ಇಲ್ಲಿವೆ.ವಿಭಿನ್ನ ರೀತಿಯ ನೈಲ್ ಆರ್ಟ್​ಗಳು, ಕೇಶವಿನ್ಯಾಸ, ರೋಮಾಂಚಕ ಬಣ್ಣದ ಸೌಂದರ್ಯವರ್ಧಕಗಳ ಮೂಲಕ ಹೊಸ ನೋಟವನ್ನು ಪ್ರಯತ್ನಿಸಲು ಮತ್ತು ಪ್ರಯೋಗಿಸಲು ಸಾಕಷ್ಟು ಅವಕಾಶಗಳನ್ನು ಕಂಡುಕೊಳ್ಳಬಹುದು. 2023 ರಲ್ಲಿ ಜನಪ್ರಿಯವಾಗಲಿರುವ ಮೇಕ್ ಅಪ್ ಟ್ರೆಂಡ್‌ಗಳನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ನಿಮಗಾಗಿ  ಟಿಪ್ಸ್​​ ಇಲ್ಲಿವೆ.

ಬ್ಲಶ್ ಟ್ರೆಂಡ್:

ಬ್ಲಶ್ ಬಹಳ ಹಿಂದಿನಿಂದಲೂ ಪ್ರತಿಯೊಂದು ಹೆಣ್ಣಿನ ಮೇಕ್ ಅಪ್​ನಲ್ಲಿ ಪ್ರಮುಖವಾಗಿದೆ. ಇದು ನಿಮ್ಮ ಕೆನ್ನೆಯನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಆದರಿಂದ ಮುಂದಿನ ವರ್ಷವು ಕೂಡ ನಿಮ್ಮ ಮೇಕ್ ಅಪ್ ಕಿಟ್​ನಲ್ಲಿ ಬ್ಲಶ್ ಕ್ರೀಮ್ ಇರಲಿ. ಇದು ನಿಮ್ಮ ಮುಖದ ಆಕಾರವನ್ನು ವಿಶೇಷವಾಗಿ ಕೆನ್ನೆಯನ್ನು ಹೊಳೆಯುವಂತೆ ಮಾಡುತ್ತದೆ.

ಮಿನುಗುವ ಸೌಂದರ್ಯ ವರ್ಧಕ:

ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಕಣ್ಣು ಹಾಗೂ ತುಟಿಗಳಿಗೆ ಮಿನುಗುವ ಸೌಂದರ್ಯ ವರ್ಧಕವನ್ನು ಬಳಸಲಾಗುತ್ತದೆ. ಕಣ್ಣುಗಳ ಅಂಚಿನಲ್ಲಿ ಮಿನುಗುವ ಮಣಿಗಳನ್ನು ಧರಿಸುವುದರಿಂದ ನಿಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮ್ಮ ನೋಟವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ದಪ್ಪ ಕಪ್ಪು ಐಲೈನರ್ನೊಂದಿಗೆ ಇದು ನಿಮಗೆ ಸೆಲೆಬ್ರೆಟಿ ಲುಕ್ ನೀಡುತ್ತದೆ.

ಇದನ್ನೂ ಓದಿ: ನೀವು ಮದುವೆಯಾಗುತ್ತಿದ್ದೀರಾ? ಹಾಗಿದ್ದರೆ ಇಂದಿನಿಂದಲೇ ತ್ವಚೆಯ ಕಾಂತಿಯ ಬಗ್ಗೆ ಗಮನಹರಿಸಿ

ಸ್ಮೋಕಿ ಕಣ್ಣುಗಳು:

ನಿಮ್ಮ ಮುಖದ ಸೌಂದರ್ಯದಲ್ಲಿ ಕಣ್ಣುಗಳು ಅತ್ಯಂತ ಪ್ರಮುಖವಾದುದು. ನಿಮ್ಮ ಕಣ್ಣಿನ ಮೇಕ್ ಅಪ್ ಸುಂದರವಾಗಿದ್ದರೆ ನಿಮ್ಮ ಮುಖವೂ ಕೂಡ ಆಕರ್ಷಕವಾಗಿ ಕಾಣುತ್ತದೆ. ಆದ್ದರಿಂದ ಸ್ಮೋಕಿ ಮೇಕ್ ಅಪ್ ಹಾಗೂ ನಿಮ್ಮ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ಆಕರ್ಷಕ ಮೇಕ್ ಅಪ್​ಗಳನ್ನು ಹೊಸ ವರ್ಷದಲ್ಲಿಯೂ ಕೂಡ ಮುಂದುವರಿಸುತ್ತಾ ಹೋಗಿ.

ತುಟಿಗಳ ಸೌಂದರ್ಯ:

ಸಾಮಾನ್ಯವಾಗಿ ನೀವು ಬಳಸುವ ಲಿಪ್ ಸ್ಟಿಕ್​​ಗಳಿಗೆ ಹಾಗೂ ಗ್ಲಾಸಿ ಲಿಪ್ ಸ್ಟಿಕ್​ಗಳನ್ನು ಸಾಕಷ್ಟು ವ್ಯತ್ಯಾಸಗಳಿವೆ. ವಿಶೇಷ ಸಂದರ್ಭಗಳಲ್ಲಿ ಫ್ರಾಸ್ಟೆಡ್ ಗ್ಲೋಸಿ ಲಿಪ್ ಮತ್ತು ಐಕಾನಿಕ್ ಬ್ರೌನ್ ಲಿಪ್ ಲೈನರ್​ಗಳನ್ನು ಬಳಸಿ.

ಇದನ್ನೂ ಓದಿ: ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್ ಕೇರ್ ಪ್ರಾಡಕ್ಟ್​ಗಳು ಇಲ್ಲಿವೆ

ಪ್ರತಿ ಬಾರಿ ಮೇಕ್ ಅಪ್ ಬಳಸಿದ ನಂತರ ದಿನದ ಅಂತ್ಯದಲ್ಲಿ ಮೇಕ್ ಅಪ್ ತೆಗೆಯುವಾಗ ಸರಿಯಾಗಿ ತೆಗೆಯುವುದು ಅಗತ್ಯವಾಗಿದೆ. ಯಾಕೆಂದರೆ ನಿಮ್ಮ ತ್ವಚೆಯನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಅತ್ಯಂತ ಅಗತ್ಯ. ಮುಖದ ಸೌಂದರ್ಯದ ಜೊತೆಗೆ ತ್ವಚೆಯ ಆರೋಗ್ಯವು ಅತ್ಯಂತ ಅಗತ್ಯ. ಜೊತೆಗೆ ಹೊರಗಡೆ ಹೋಗುವಾಗ ಪ್ರತಿ ದಿನ ಸನ್ ಸ್ಕ್ರೀನ್ ಬಳಸಿ. ಬಿಸಿಲು ಇಲ್ಲದಿದ್ದರೂ ಸನ್ ಸ್ಕ್ರೀನ್ ಬಳಸುವುದನ್ನು ಮರೆಯದಿರಿ.

Published On - 4:43 pm, Wed, 21 December 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ