AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bridal Skin Care: ನೀವು ಮದುವೆಯಾಗುತ್ತಿದ್ದೀರಾ? ಹಾಗಿದ್ದರೆ ಇಂದಿನಿಂದಲೇ ತ್ವಚೆಯ ಕಾಂತಿಯ ಬಗ್ಗೆ ಗಮನಹರಿಸಿ

ಮದುವೆಯ ಸಮಯದಲ್ಲಿ ಸಾಕಷ್ಟು ತಯಾರಿಗಳು ಇರುವುದರಿಂದ ಹೊರಗಡೆ ಓಡಾಡುವುದೇ ಜಾಸ್ತಿಯಾಗಿರುತ್ತದೆ. ಇದರಿಂದಾಗಿ ಧೂಳು ಮಾಲಿನ್ಯಗಳಿಂದ ನಿಮ್ಮ ತ್ವಚೆಯ ಕಾಂತಿ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಿದೆ.

Bridal Skin Care: ನೀವು ಮದುವೆಯಾಗುತ್ತಿದ್ದೀರಾ? ಹಾಗಿದ್ದರೆ ಇಂದಿನಿಂದಲೇ ತ್ವಚೆಯ ಕಾಂತಿಯ ಬಗ್ಗೆ ಗಮನಹರಿಸಿ
ಸಾಂದರ್ಭಿಕ ಚಿತ್ರImage Credit source: Shadhi saga
TV9 Web
| Updated By: ಅಕ್ಷತಾ ವರ್ಕಾಡಿ|

Updated on: Dec 15, 2022 | 1:33 PM

Share

ನಿಮ್ಮ ಮದುವೆಯಂದು ನೀವೂ ಸುಂದರವಾಗಿ ಹಾಗೂ ಕಾಂತಿಯುತವಾಗಿ ಕಾಣುವುದು ಮುಖ್ಯವಾಗಿರುತ್ತದೆ. ನೀವೂ ಎಷ್ಟೇ ದುಬಾರಿಯ ಬಟ್ಟೆ ಆಭರಣಗಳನ್ನು ಧರಿಸಿದರೂ ಕೂಡ ನಿಮ್ಮ ತ್ವಚೆಯ ಮೇಲೆ ನಿಮ್ಮ ಸೌಂದರ್ಯ ಅಡಗಿದೆ. ಆದ್ದರಿಂದ ನಿಮ್ಮ ಮದುವೆಯ ದಿನದಂದು ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ. ಮದುವೆಯ ಸಮಯದಲ್ಲಿ ಸಾಕಷ್ಟು ತಯಾರಿಗಳು ಇರುವುದರಿಂದ ಹೊರಗಡೆ ಓಡಾಡುವುದೇ ಜಾಸ್ತಿಯಾಗಿರುತ್ತದೆ. ಇದರಿಂದಾಗಿ ಧೂಳು ಮಾಲಿನ್ಯಗಳಿಂದ ನಿಮ್ಮ ತ್ವಚೆಯ ಕಾಂತಿ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಮುಖದ ಸ್ವಚ್ಚತೆ: ಹೊರಗಡೆ ಓಡಾಡಿದಾಗ ಧೂಳು ಮತ್ತು ಕೊಳಕು ಸೇರಿದಂತೆ ಬಹಳಷ್ಟು ಮಾಲಿನ್ಯಕಾರಕಗಳು ನಿಮ್ಮ ತ್ವಚೆಯ ಮೇಲೆ ಅಂಟಿಕೊಳ್ಳುತ್ತದೆ. ಆದ್ದರಿಂದ ನಿಮ್ಮ ಚರ್ಮವನ್ನು ಒಳ್ಳೆಯ ಗುಣಮಟ್ಟದ ಫೇಸ್ ವಾಶ್ ಬಳಸಿ ಸ್ವಚ್ಚಗೊಳಿಸುವುದು ಅಗತ್ಯವಾಗಿದೆ. ಇದು ನಿಮ್ಮ ಚರ್ಮವನ್ನು ಸ್ವಚ್ಛವಾಗಿ, ಆರೋಗ್ಯಕರವಾಗಿ ಮತ್ತು ಕಾಂತಿಯುತವಾಗಿರಿಸಲು ಸಹಾಯ ಮಾಡುತ್ತದೆ.

ಮಾಯಿಶ್ಚರೈಸಿಂಗ್: ವಧುವಿನ ಹೊಳೆಯುವ ತ್ವಚೆಯ ರಹಸ್ಯವೆಂದರೆ ತೇವಾಂಶವುಳ್ಳ, ಕಾಂತಿಯುತ ಚರ್ಮವನ್ನು ಹೊಂದಿರುವುದು. ಶುಷ್ಕ ಚರ್ಮದಿಂದ ನಿಮ್ಮ ಸಂಪೂರ್ಣ ಮೇಕ್ಅಪ್ ಲುಕ್ ಹಾಳಾಗಬಹುದು. ಮಾಯಿಶ್ಚರೈಸರ್ ನಿಮ್ಮ ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ರಾತ್ರಿಯ ಚರ್ಮದ ಆರೈಕೆ: ಮದುವೆಯ ಸಿದ್ಧತೆಗಳೊಂದಿಗೆ ರಾತ್ರಿಯ ಹೊತ್ತು ನಿಮ್ಮ ರಾತ್ರಿಯ ಚರ್ಮದ ಆರೈಕೆಯ ದಿನಚರಿಯನ್ನು ನಿರ್ಲಕ್ಷಿಸಬೇಡಿ. ನೀವು ಮಲಗಲು ಹೋದ ತಕ್ಷಣ, ನಿಮ್ಮ ಚರ್ಮಕ್ಕೆ ಸರಿಯಾದ ಪೋಷಕಾಂಶಗಳನ್ನು ಒದಗಿಸುವ ಕ್ರೀಮ್ ಹಚ್ಚಿ ಮಲಗಿ.

ಇದನ್ನು ಓದಿ: ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಕ್ರಿಯೇಟಿವ್ ಆಗಿ ಮಾಡಿಸಲು ಟಿಪ್ಸ್ ಇಲ್ಲಿದೆ

ಸೂರ್ಯನ ಕಿರಣಗಳಿಂದ ರಕ್ಷಣೆ: ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಅಷ್ಟು ಉರಿಯನ್ನು ಹೊಂದಿಲ್ಲದಿದ್ದರೂ ಸಹ ಸೂರ್ಯನ ಕಿರಣಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದು ಉತ್ತಮವಲ್ಲ. ಹೈಪರ್ಪಿಗ್ಮೆಂಟೇಶನ್, ಸೂರ್ಯನ ಕಿರಣಗಳ ಅತಿಯಾದ ಉರಿಯಿಂದ ಚರ್ಮದ ಮೇಲೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.

ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಕ್ರೀಮ್ ಬಳಸಿ: ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುವ ಉತ್ಪನ್ನಗಳನ್ನು ಬಳಸಿ. ಸೂಕ್ಷ್ಮ ಚರ್ಮ ಹೊಂದಿರುವವರು ಆದಷ್ಟು ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ. ಚರ್ಮದ ಉರಿಯೂತಕ್ಕೆ ಕಾರಣವಾಗುವಂತಹ ಕ್ರೀಮ್ ಗಳನ್ನು ಬಳಸದಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: