ನೈಟ್ ಫೋಟೋ ಶೂಟ್ : ನೀವೂ ಸಾಮಾನ್ಯವಾಗಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಲು ಸಿದ್ದರಿದ್ದರೆ, ರಾತ್ರಿಯ ಹೊತ್ತು ಒಂದು ಒಳ್ಳೆಯ ಸಮಯ. ರಾತ್ರಿಯ ಹೊತ್ತಿನ ಬೆಳಕಿಗೆ ನಿಮ್ಮ ಬಟ್ಟೆಯು ಮಿನುಗುವುದಲ್ಲದೇ ನಿಮ್ಮ ನೀವು ಕೂಡ ಸುಂದರವಾಗಿ ಕಾಣುತ್ತೀರಿ.
ಸ್ಮೋಕ್ ಬಾಂಬ್ ಫೋಟೋ ಶೂಟ್: ಇದು ಮತ್ತೋಂದು ರೀತಿಯ ಕ್ರಿಯೇಟಿವ್ ಐಡಿಯಾ. ಇದರಲ್ಲಿ ಸಾಕಷ್ಟು ಬಣ್ಣಗಳನ್ನು ಬಳಸಿ ಫೋಟೋ ಶೂಟ್ ಮಾಡುವುದರಿಂದ ನೀವು ಮತ್ತು ನಿಮ್ಮ ಸಂಗಾತಿ ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ.
ನಿಮ್ಮ ಸಾಕು ಪ್ರಾಣಿಯನ್ನು ಜೊತೆಗಿರಿಸಿ: ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಮುಗ್ಥತೆಯನ್ನು ಕೂಡ ಒಳಗೊಂಡಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವಾಗ ನಿಮ್ಮ ಸಾಕು ಪ್ರಾಣಿಯನ್ನು ಜೊತೆಗಿರಿಸಿ ತೆಗೆಯಿರಿ.
ಟ್ರೆಡಿಷನಲ್ ಫೋಟೋ ಶೂಟ್: ನೀವೂ ನಿಮ್ಮ ಸಂಗಾತಿಯೊಂದಿಗೆ ಸಂಪ್ರದಾಯಿಕ ಉಡುಗೆ ತೊಟ್ಟು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿ. ಇಂತಹ ಫೋಟೋ ಶೂಟ್ ಗಳಿಗೆ ದೇವಸ್ಥಾನಗಳಂತಹ ಶಾಂತ ಪ್ರದೇಶಗಳು ಉತ್ತಮ ಆಯ್ಕೆಯಾಗಿದೆ.
ಸೂರ್ಯಾಸ್ತದ ಸಮಯದಲ್ಲಿ ಫೋಟೋ ಶೂಟ್: ಈ ಹೊತ್ತಿನಲ್ಲಿ ಬೆಳಕಿನ ಪ್ರಕಾಶ ಕಮ್ಮಿ ಇರುವುದರಿಂದ ಸುಂದರವಾದ ಸಂಗಾತಿಗಳ ಫೋಟೋ ಸೆರೆ ಹಿಡಿಯಬಹುದಾಗಿದೆ.
ಥೀಮ್ ಫೋಟೋ ಶೂಟ್: ಈ ಸಾಮಾನ್ಯವಾಗಿ ಫೋಟೋ ಶೂಟ್ ಮಾಡಿಸುವುದಕ್ಕಿಂತ ಯಾವುದಾದರೊಂದು ಥೀಮ್ ಇಟ್ಟುಕೊಂಡು ಫೋಟೋ ಶೂಟ್ ಮಾಡಿಸುವುದು ಅತ್ಯಂತ ಉತ್ತಮವಾಗಿದೆ.
ಹಳ್ಳಿ ಪ್ರದೇಶಗಳಲ್ಲಿ ಫೋಟೋ ಶೂಟ್: ಹಳ್ಳಿ ಪ್ರದೇಶಗಳಲ್ಲಿ ಪ್ರಕೃತಿ ಸೌಂದರ್ಯ ಹಾಗೂ ಹಚ್ಚ ಹಸುರಿನ ನಡುವೆ ಸುಂದರವಾಗಿ ನಿಮ್ಮ ಸಂಗಾತಿಯೊಂದಿಗೆ ಫೋಟೋ ಶೂಟ್ ಮಾಡಿಸಿ. ಇದು ನಿಮಗೆ ಕ್ರಿಯೇಟಿವ್ ಲುಕ್ ನೀಡುತ್ತದೆ.
Published On - 6:57 pm, Wed, 14 December 22