New Year 2023: ಈ ಬಾರಿಯ ಹೊಸ ವರ್ಷ ಆಚರಿಸಲು ಈ ಸ್ಥಳಗಳು ಪರ್ಫೆಕ್ಟ್

New Year celebration: ಈ ಹೊಸವರ್ಷವನ್ನು ಲೈಫ್‌ಟೈಮ್ ಮೆಮೋರೆಬಲ್ ಆಗಿ ಆಚರಿಸಲು ಪ್ರತಿಯೊಬ್ಬರು ಇಷ್ಟ ಪಡುತ್ತಾರೆ. ಅದಕ್ಕಾಗಿ ಹೆಚ್ಚಿನ ಜನರು ಯೂನಿಕ್ ಪ್ಲೇಸ್ ಯಾವುದಿರಬಹುದೆಂದು ಹುಡುಕಾಟ ನಡೆಸುತ್ತಾರೆ. ನೀವು ಈ ಬಾರಿ ಹೊಸ ವರ್ಷವನ್ನು ಇಲ್ಲಿ ಆಚರಣೆ ಮಾಡಬಹುದು.

New Year 2023:  ಈ ಬಾರಿಯ ಹೊಸ ವರ್ಷ ಆಚರಿಸಲು ಈ ಸ್ಥಳಗಳು ಪರ್ಫೆಕ್ಟ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 02, 2023 | 2:14 PM

ಇನ್ನೇನು ಹೊಸ ವರ್ಷ ಬಂದೇ ಬಿಟ್ಟಿತ್ತು. ಕ್ರಿಸ್‌ಮಸ್ ಬೆಲ್‌ಗಳು ರಿಂಗ್ ಆಗಲಿವೆ ಮತ್ತು ಹೊಸ ವರ್ಷ 2023ಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಹೊಸ ವರ್ಷವನ್ನು ಆಚರಿಸುವುದು ಸಾಮಾನ್ಯವಾಗಿದೆ. ಏಕೆಂದರೆ ಪ್ರತಿ ಹೊಸ ಆರಂಭವು ಸಕಾರತ್ಮಕತೆಯಿಂದ ಬರುತ್ತದೆ. ಈ ಹೊಸವರ್ಷವನ್ನು ಲೈಫ್‌ಟೈಮ್ ಮೆಮೋರೆಬಲ್ ಆಗಿ ಆಚರಿಸಲು ಪ್ರತಿಯೊಬ್ಬರು ಇಷ್ಟ ಪಡುತ್ತಾರೆ. ಅದಕ್ಕಾಗಿ ಹೆಚ್ಚಿನ ಜನರು ಯೂನಿಕ್ ಪ್ಲೇಸ್ ಯಾವುದಿರಬಹುದೆಂದು ಹುಡುಕಾಟ ನಡೆಸುತ್ತಾರೆ. ನೀವು ಈ ಬಾರಿ ಹೊಸ ವರ್ಷವನ್ನು ಇಲ್ಲಿ ಆಚರಣೆ ಮಾಡಬಹುದು.

ಹೊಸ ವರ್ಷವನ್ನು ಹೆಚ್ಚು ಸಂಭ್ರಮದಿಂದ ಆಚರಿಸಲು  ಸ್ಥಳಗಳು ಸೂಕ್ತ:

ಗೋವಾ: ಭಾರತದಲ್ಲಿ ಹೊಸ ವರ್ಷವನ್ನು ಆಚರಿಸಲು ಇರುವ ಹಾಟ್ ಸ್ಪಾಟ್ ಗೋವಾ. ಹೆಚ್ಚಾಗಿ ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಕಡಲ ತೀರದ ಸೌಂದರ್ಯವನ್ನು ಸವಿಯಲು ಬರುತ್ತಾರೆ. ಅದರಲ್ಲೂ ಹೊಸ ವರ್ಷವನ್ನು ಸೆಲೆಬ್ರೆಟ್ ಮಾಡಲು ಯಂಗ್ ಸ್ಟಾರ್​​ಗಳು ಹೆಚ್ಚಾಗಿ ಗೋವಾವನ್ನು ಆಯ್ಕೆ ಮಾಡುತ್ತಾರೆ. ಮಧ್ಯರಾತ್ರಿ ಹಾಡು, ಕುಣಿತ, ಸಂಗೀತ, ಲೈಟಿಂಗ್ಸ್ ಇದೆಲ್ಲವನ್ನು ಸವಿಯಬೇಕೆಂದರೆ ಹೊಸ ವರ್ಷವನ್ನು ಆಚರಿಸಲು ಉತ್ತಮ ಸ್ಥಳ ಗೋವಾ.

ಗುಲ್ಮಾರ್ಗ್, ಜಮ್ಮು ಕಾಶ್ಮೀರ : ಶಾಂತಿಯುತ ಸ್ಥಳವಾದ ಗುಲ್ಮಾರ್ಗ್​ನಲ್ಲಿಯೂ ಹೊಸವರ್ಷವನ್ನು ಆಚರಿಸಬಹುದು. ಪ್ರಕೃತಿಯ ಮಡಿಲಿನಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಬಯಸುವವರು ಈ ನಗರಕ್ಕೆ ಬಂದು ಹೊಸ ಅನುಭವವನ್ನು ಪಡೆಯಬಹುದು. ಈ ನಗರವು ವಿಶೇಷವಾಗಿ ಹಿಮ ಮತ್ತು ಪ್ರಶಾಂತತೆಯನ್ನು ಇಷ್ಟ ಪಡುವವರಿಗೆ ಬಹಳ ಸೂಕ್ತವಾಗಿದೆ. ಈ ಸ್ಥಳವು ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ ಹಾಗೂ ಭಾರತದಲ್ಲಿ ಹೊಸ ವರ್ಷವನ್ನು ಆಚರಿಸಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

ಮನಾಲಿ : ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಸ್ಥಳವಾದ ಮನಾಲಿಯು ಹೊಸ ವರ್ಷದ ಆಚರಣೆಗೆ ಬೆಸ್ಟ್ ಸ್ಥಳಗಳಲ್ಲಿ ಒಂದಾಗಿದೆ. ಚಲಿಗಾಲದಲ್ಲಿ ಅಲ್ಲಿ ಸುರಿಯುವ ಮಂಜಿನ ಜೊತೆಗೆ ಹೊಸ ವರ್ಷವನ್ನು ಬರ ಮಾಡಿಕೊಳ್ಳುವುದೇ ವಿಶೇಷವಾಗಿರುತ್ತದೆ. ನೀವು ಪಾರ್ಟಿಗಳನ್ನು ಆನಂದಿಸಲು ಬಯಸಿದರೆ ಓಲ್ಡ್ ಮನಾಲಿಗೆ ಭೇಟಿ ನೀಡಿ ಹಾಗೂ ಹೊಸ ವರ್ಷದ ಆಚರಣೆಯ ಸುಂದರ ಅನುಭವವನ್ನು ಪಡೆಯಿರಿ. ಓಲ್ಡ್ ಮನಾಲಿಯು ಅತ್ಯುತ್ತಮ ಕೆಫೆಗಳಿಗೆ ಹೆಸರುವಾಸಿಯಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಯನ್ನು ರುಚಿಕರವಾದ ಭಕ್ಷಯಗಳನ್ನು ಸವಿಯುವ ಮೂಲಕ ಆಚರಿಸುವುದಾದರೆ ಮನಾಲಿ ಬೆಸ್ಟ್ ಪ್ಲೇಸ್. ಹಿಮ ಭರಿತ ರಸ್ತೆಗಳಲ್ಲಿ ಓಡಾಡುವ ಮೂಲಕ ಕೂಲ್ ಆಗಿ ಹೊಸ ವರ್ಷವನ್ನು ಬರ ಮಾಡಿಕೊಳ್ಳಬಹುದು.

 ಊಟಿ: ಹೊಸ ವರ್ಷವನ್ನು ಸಾಮರಸ್ಯದಿಂದ ಸ್ವಾಗತಿಸಲು ಬಯಸುವಿರಾ ಅಥವಾ ಕ್ರೇಜಿ ಜನಗಳೊಂದಿಗೆ ಹೋಗಲು ಬಯಸುವಿರಾ. ಹಾಗಾದರೆ ಊಟಿ ಇದಕ್ಕೆ ಬೆಸ್ಟ್ ಪ್ಲೇಸ್. ಶಾಂತಿಯುತವಾಗಿರುವ ಹಾಗೂ ಲವಲವಿಕೆಯಿಂದ ಕೂಡಿರುವ ಊಟಿಯು ಮುಸ್ಸಂಜೆಯನ್ನು ಆನಂದಿಸಲು ಮತ್ತು ಸಂಗೀತ, ಪಾರ್ಟಿಗಳನ್ನು ಮಾಡಲು ಉತ್ತಮವಾದ ಸ್ಥಳ. ದಕ್ಷಿಣ ಭಾರತದಲ್ಲಿ ಹೊಸ ವರ್ಷವನ್ನು ಆಚರಿಸುವುದಾದರೆ ಊಟಿ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

ಇದನ್ನು ಓದಿ:New Year Financial Plan: 2023ಕ್ಕೆ ತೆರಿಗೆ ಉಳಿತಾಯ, ನಿವೃತ್ತಿ ಯೋಜನೆ ಕಾರ್ಯತಂತ್ರಗಳು ಹೀಗಿರಲಿ

ವಯನಾಡ್: ಹಚ್ಚ ಹಸಿರಿನ ಸ್ವರ್ಗದಂತಿರುವ ವಯನಾಡ್ ಹೊಸ ವರ್ಷವನ್ನು ಸೆಲೆಬ್ರೆಟ್ ಮಾಡಲು ಭಾರತದಲ್ಲಿರುವ ಅತ್ಯುತ್ತಮ ಹಾಟ್ ಸ್ಪಾಟ್ ಆಗಿದೆ. ಇಲ್ಲಿ ನೀವು ಆಯುರ್ವೇದ ಚಿಕಿತ್ಸೆಗಳನ್ನು ಪಡೆಯುವ ಮೂಲಕ, ಹಚ್ಚ ಹಸಿರಿನ ಮಸಾಲೆ ತೋಟಗಳನ್ನು ತಿರುಗಾಡುವ ಮೂಲಕ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ, ಹೊಸ ವರ್ಷವನ್ನು ಆಚರಿಸಬಹುದು. ಶಾಂತಿ ಪ್ರಿಯರು ಹಾಗೂ ಮೋಜು ಮಸ್ತಿಯನ್ನು ಇಷ್ಟ ಪಡದ, ಏಕಂತವಾಗಿ ಕಾಲ ಕಳೆಯಲು ಬಯಸುವವರಿಗೆ ವಯನಾಡ್ ಉತ್ತಮ ಆಯ್ಕೆ.

 ಉದಯ್‌ಪುರ : ಹೊಸ ವರ್ಷಕ್ಕೆ ರಾಯಲ್ ವೈಬ್ ಬೇಕೆನ್ನುವವರು ಅರಮನೆಗಳ ನಗರ ಉದಯ್‌ಪುರವನ್ನು ಆಯ್ಕೆ ಮಾಡಬಹುದು. ಫ್ಯಾಮಿಲಿ, ಫ್ರೆಂಡ್ಸ್​​ಗಳ ಜೊತೆಗೆ ಅನೇಕ ಸ್ಮಾರಕಗಳಿಗೆ ಭೇಟಿ ನೀಡುತ್ತಾ, ರಾಜ ಮನೆತನಗಳ ಜೀವನ ಶೈಲಿಯನ್ನು ಎಕ್ಸ್ಪ್ಲೋರ್ ಮಾಡುತ್ತಾ ಹೊಸ ವರ್ಷವನ್ನು ಬರ ಮಾಡಿಕೊಳ್ಳಬಹುದು. ಇಲ್ಲಿ ಹಲವಾರು ರಾಜ ವೈಭೋಗದ ರೆಸಾರ್ಟ್, ಕ್ಲಬ್‌ಗಳು ಇರುವುದರಿಂದ ರಾಜ ವೈಭೋಗವನ್ನು ಅನುಭವಿಸುತ್ತಾ ಹೊಸವರ್ಷವನ್ನು ರಾಯಲ್ ಆಗಿ ಬರ ಮಾಡಿಕೊಳ್ಳಲು ಉತ್ತಮ ಸ್ಥಳವಿದಾಗಿದೆ.

ದೆಹಲಿ : ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ಹೊಸ ವರ್ಷವನ್ನು ಆಚರಿಸಲು ಸೆಲೆಬ್ರೆಟಿ ಕ್ಲಬ್‌ನಲ್ಲಿ ದುಬಾರಿ ಪಾರ್ಟಿಗಳನ್ನು ಮಾಡಬಹುದು. ನೈಟ್ ಪಾರ್ಟಿ, ಲೈಟಿಂಗ್ಸ್, ಡಿಜೆ ಇಷ್ಟ ಪಡುವವರಿಗೆ ಹೊಸ ವರ್ಷ ಆಚರಣೆ ಮಾಡಲು ದೆಹಲಿ ಉತ್ತಮ ಸ್ಥಳವಾಗಿದೆ.

ಕೋಲ್ಕತ್ತಾ : ಕೋಲ್ಕತ್ತಾದಲ್ಲಿ ಹೊಸ ವರ್ಷವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಲಾಗುತ್ತದೆ. ನೈಟ್ ಪಾರ್ಟಿ, ಸಂಗೀತ, ಡ್ರಿಂಕ್ಸ್, ಪಟಾಕಿ ಹೀಗೆ ಅದ್ಧೂರಿತನವನ್ನು ಇಷ್ಟ ಪಡುವವರಿಗೆ ಹೊಸ ವರ್ಷವನ್ನು ಸೆಲೆಬ್ರೆಟ್ ಮಾಡಲು ಕೋಲ್ಕತ್ತಾ ಬೆಸ್ಟ್ ಪ್ಲೇಸ್.

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ನ್ಯೂ ಇಯರ್ ಸೆಲೆಬ್ರೆನ್ ಮಾಡಲು ಇರುವ ಉತ್ತಮ ಸ್ಥಳಗಳಲ್ಲಿ ಒಂದಾಗಿದೆ. ಪಬ್, ಕೆಫೆ, ಐಷಾರಾಮಿ ಪಾರ್ಟಿ ಹಾಲ್‌ಗಳು ಇದಲ್ಲದೆ ಓಪನ್ ಪ್ಲೇಸ್‌ಗಳಲ್ಲಿ ಲೈಟಿಂಗ್ಸ್, ಡಿ.ಜೆ, ಡಾನ್ಸ್ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಅತ್ಯುತ್ತಮ ಆಯ್ಕೆ ಬೆಂಗಳೂರು.

ಭಾರತದಲ್ಲಿನ ಈ ಯೂನಿಕ್ ಪ್ಲೇಸ್‌ಗಳಿಗೆ ಹೋಗುವ ಮೂಲಕ ಪಾರ್ಟಿ, ಮನರಂಜನೆಯನ್ನು ಆನಂದಿಸುವ ಮೂಲಕ ಹೊಸ ವರ್ಷವನ್ನು ಆನಂದಿಸಿ.

ಜೀವನಶೈಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Wed, 21 December 22