Coconut And Hibiscus Pulao: ದಾಸವಾಳ ಮತ್ತು ತೆಂಗಿನಕಾಯಿಯ ಸೂಪರ್ ರೆಸಿಪಿ ಪ್ರಯತ್ನಿಸಿ

ದಾಸವಾಳ ಹೂವಿನಿಂದ ಮಾಡಲಾಗುವ ಆರೋಗ್ಯಕರ ಪುಲಾವ್ ರೆಸಿಪಿ ಇಲ್ಲಿದೆ. ಇದರೊಂದಿಗೆ ತೆಂಗಿನ ಕಾಯಿಯನ್ನು ಬಳಸುವುರಿಂದ ರುಚಿಯ ಜೊತೆಗೆ ಒಳ್ಳೆಯ ಸುವಾಸನೆಯನ್ನು ನೀಡುತ್ತದೆ.

Coconut And Hibiscus Pulao: ದಾಸವಾಳ ಮತ್ತು ತೆಂಗಿನಕಾಯಿಯ ಸೂಪರ್ ರೆಸಿಪಿ ಪ್ರಯತ್ನಿಸಿ
ದಾಸವಾಳ ಮತ್ತು ತೆಂಗಿನಕಾಯಿಯ ಸೂಪರ್ ರೆಸಿಪಿ Image Credit source: Facebook
Follow us
| Updated By: ಅಕ್ಷತಾ ವರ್ಕಾಡಿ

Updated on:Dec 21, 2022 | 11:05 AM

ಸಾಮಾನ್ಯವಾಗಿ ಬೆಳಗಿನ ಉಪಹಾರ(Morning Breakfast) ದಲ್ಲಿ ಪುಲಾವ್ ಇರುತ್ತದೆ. ಪುಲಾವ್(Pulao) ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಯಾಕೆಂದರೆ ಇದರಲ್ಲಿ ಸಾಕಷ್ಟು ತರಕಾರಿಗಳನ್ನು ಬಳಸಲಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದೂ ದಾಸವಾಳ ಹೂವಿನಿಂದ ಮಾಡಲಾಗುವ ಆರೋಗ್ಯಕರ ಪುಲಾವ್ ರೆಸಿಪಿ ಇಲ್ಲಿದೆ. ಇದರೊಂದಿಗೆ ತೆಂಗಿನ ಕಾಯಿಯನ್ನು ಬಳಸುವುರಿಂದ ರುಚಿಯ ಜೊತೆಗೆ ಒಳ್ಳೆಯ ಸುವಾಸನೆಯನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿಯೂ ಒಮ್ಮೆ ಪ್ರಯತ್ನಿಸಿ. ದಾಸವಾಳವನ್ನು ತಿನ್ನುವುದರಿಂದ ಮಹಿಳೆಯರ  ಮುಟ್ಟಿನ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ. ಇದಲ್ಲದೇ ದಾಸವಾಳ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಬೇಕಾಗುವ ಸಾಮಾಗ್ರಿಗಳು: 2 ದಾಸವಾಳ ಹೂವು 1/2 ಕಪ್ ಬಾಸ್ಮತಿ ಅಕ್ಕಿ 1 ಕಪ್ ತೆಂಗಿನ ನೀರು 1 ಕಪ್ಪು ತೆಂಗಿನಕಾಯಿ ತುರಿ ರುಚಿಗೆ ತಕ್ಕಷ್ಟು ಉಪ್ಪು 2 ಚಮಚ ತುಪ್ಪ 1 ಚಮಚ ಜೀರಿಗೆ 1 ದಾಲ್ಚಿನ್ನಿ ಸಣ್ಣ ತುಂಡು 2 ಗ್ರಾಂ ಏಲಕ್ಕಿ 2 ಕೆಂಪು ಮೆಣಸಿನಕಾಯಿ 5-6 ಕರಿಬೇವಿನ ಎಲೆಗಳು 1 ಈರುಳ್ಳಿ 5 ಹಸಿರು ಮೆಣಸಿನಕಾಯಿಗಳು 1/4 ಕಪ್ ಬಾದಾಮಿ 1/4 ಕಪ್ ಗೋಡಂಬಿ (ತುಪ್ಪದೊಂದಿಗೆ ಹುರಿದ) 1/4 ಕಪ್ ಸಣ್ಣ ಪನೀರ್ ಘನಗಳು (ತುಪ್ಪದೊಂದಿಗೆ ಹುರಿದ) 1 ಚಮಚ ನಿಂಬೆ ರಸ 1 ಕಪ್ ಕೊತ್ತಂಬರಿ ಎಲೆಗಳು 1/4 ಕಪ್ ತೆಂಗಿನ ಎಣ್ಣೆ

ತೆಂಗಿನಕಾಯಿ ಮತ್ತು ದಾಸವಾಳ ಪುಲಾವ್ ಮಾಡುವ ವಿಧಾನ:

ಹಂತ 1 ಮೊದಲು ತೆಂಗಿನ ಅನ್ನ ಮಾಡಲು ತೆಂಗಿನ ಕಾಯಿ ನೀರು, ನೆನೆಸಿದ ಅಕ್ಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಲು ಇಡಿ.

ಹಂತ 2: ದಾಸವಾಳದ ಹೂವಿನ ರಸ ತಯಾರಿಸಿ. ಇದಕ್ಕಾಗಿ ನೀವು ಮೊದಲಿಗೆ ನೀರು ಬಿಸಿ ಮಾಡಿ ಮತ್ತು ನೀರು ಕುದಿಯುತ್ತಿರುವಾಗ ಅದಕ್ಕೆ ದಾಸವಾಳವನ್ನು ಹಾಕಿ. ಇದನ್ನು 2 ರಿಂದ 3 ನಿಮಿಷಗಳ ಕಾಲ ಕುದಿಸಿ, ನಂತರ ಅದನ್ನು ಪಕ್ಕಕ್ಕೆ ಇರಿಸಿ, ತಣ್ಣಗಾಗಲು ಬಿಡಿ. ಈಗ ಸೋಸಿ ಮತ್ತು ಹೂವುಗಳನ್ನು ತೆಗೆಯಿರಿ. ನೀರು ಗುಲಾಬಿ ಬಣ್ಣಕೆ ತಿರುಗಿರುತ್ತದೆ. ಈ ನೀರನ್ನು ಮತ್ತೆ ಕುದಿಸಿ ಮತ್ತು ಈಗಾಗಲೇ ಮಾಡಿಟ್ಟ (ಹಂತ 1) ಅನ್ನವನ್ನು ಸೇರಿಸಿ.

ಇದನ್ನೂ ಓದಿ: ಕೊಂಕಣಿ ಶೈಲಿಯ ದಾಲ್ ತೋವೆ ತಯಾರಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ

ಹಂತ 3:

ಪುಲಾವ್ ಮಾಡಲು, ತುಪ್ಪವನ್ನು ಬಿಸಿ ಮಾಡಿ, ಜೀರಿಗೆ, ಏಲಕ್ಕಿ, ದಾಲ್ಚಿನ್ನಿ, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಹಸಿರು ಮೆಣಸಿನಕಾಯಿಗಳು ಮತ್ತು ಈರುಳ್ಳಿ ಸೇರಿಸಿ. ಬೇಯಿಸಿದ ಅನ್ನ, ಪನೀರ್, ಗೋಡಂಬಿ, ಬಾದಾಮಿ ಸೇರಿಸಿ. ಇದಕ್ಕೆ . ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ, ಮಿಶ್ರಣ ಮಾಡಿ. ಕೊತ್ತಂಬರಿ ಸೊಪ್ಪು ಸೇರಿಸಿ. ಪುಲಾವ್ ಸಿದ್ದವಾಗಿದೆ.

ಹಂತ 4: ಹೆಚ್ಚಿನ ಅಲಂಕರವನ್ನು ನೀಡಲು ಒಂದು ತೆಂಗಿನ ಕಾಯಿಯನ್ನು ತೆಗೆದುಕೊಂಡು ಅದಕ್ಕೆ ಈಗಾಗಲೇ ಮಾಡಿಟ್ಟ ಪುಲಾವ್ ಸೇರಿಸಿ. ಈಗ ತೆಂಗಿನಕಾಯಿಯ ಸುಗಂಧ ಭರಿತ ದಾಸವಾಳದ ಪುಲಾವ್ ಸಿದ್ದವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:05 am, Wed, 21 December 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್