ಬೆಳಗಿನ ಉಪಹಾರ ಸೇವಿಸದ ಮಕ್ಕಳು ಮಾನಸಿಕ ಅನಾರೋಗ್ಯಕ್ಕೆ ಒಳಗಾಗಬಹುದು
ಅಧ್ಯಯನವೊಂದರ ಪ್ರಕಾರ ಮನೆಯಲ್ಲೇ ಉಪಹಾರ ಸೇವಿಸುವ ಯುವಕರು ಮತ್ತು ಮಕ್ಕಳು ಮಾನಸಿಕ ಹೆಚ್ಚು ಆರೋಗ್ಯಕರವಾಗಿರುತ್ತಾರೆ ಎಂದು ಹೇಳಿದೆ.
ಅಧ್ಯಯನವೊಂದರ ಪ್ರಕಾರ ಮನೆಯಲ್ಲೇ ಉಪಹಾರ (Breakfast) ಸೇವಿಸುವ ಯುವಕರು ಮತ್ತು ಮಕ್ಕಳು ಮಾನಸಿಕವಾಗಿ ಹೆಚ್ಚು ಆರೋಗ್ಯಕರವಾಗಿರುತ್ತಾರೆ (Health) ಎಂದು ಹೇಳಿದೆ. ಹಾಗೇ ಉಪಹಾರವನ್ನು ತಿನ್ನುವುದು ಮಾತ್ರ ಮುಖ್ಯವಲ್ಲ, ಯುವಕರು ಎಲ್ಲಿ ಉಪಹಾರ ಸೇವಿಸುತ್ತಾರೆ ಮತ್ತು ಅವರು ಏನು ತಿನ್ನುತ್ತಾರೆ ಎಂಬುದು ಕೂಡ ಮುಖ್ಯವಾಗಿದೆ ಎಂದು ಸ್ಪೇನ್ನ ಕ್ಯುಂಕಾದಲ್ಲಿನ ಕ್ಯಾಸ್ಟಿಲ್ಲಾ-ಲಾ ಮಂಚಾ ವಿಶ್ವವಿದ್ಯಾಲಯದ ಲೇಖಕ ಡಾ. ಜೋಸ್ ಫ್ರಾನ್ಸಿಸ್ಕೊ ಲೋಪೆಜ್-ಗಿಲ್ ಹೇಳಿದ್ದಾರೆ.
ಬೆಳಗಿನ ಉಪಾಹಾರವನ್ನು ಬಿಡುವುದು ಮಕ್ಕಳು ಮತ್ತು ಯುವಕರಲ್ಲಿ ಮಾನಸಿಕ ಸಮಸ್ಯೆಗಳು ಉದ್ಭವಿಸುತ್ತವೆ. ಉಪಹಾರವನ್ನು ಮನೆಯಲ್ಲಿ ತಿನ್ನದೇ, ಹೊರಗೆ ತಿಂದರೇ, ಇದು ಮಧ್ಯಾಹ್ನದ ಊಟವನ್ನು ಸೇವಿಸದಹಾಗೆ ಮಾಡಬಹುದು. ಹೊರಗಿನ ಊಟವು ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ಕಡಿಮೆ ಪೌಷ್ಟಿಕಾಂಶವನ್ನು ಹೊಂದಿರುತ್ತದೆ ಎಂದು ಸಂಶೋಧನೆಯಲ್ಲಿ ಹೇಳಿದೆ.
ಬೆಳಗಿನ ಉಪಹಾರದ ಸಮಯದಲ್ಲಿ ಕಾಫಿ, ಹಾಲು, ಚಹಾ, ಚಾಕೊಲೇಟ್, ಕೋಕೋ, ಮೊಸರು, ಬ್ರೆಡ್, ಟೋಸ್ಟ್, ಧಾನ್ಯಗಳು ಮತ್ತು ಪೇಸ್ಟ್ರಿಗಳು ಕಡಿಮೆ ಅಪಾಯಕಾರಿ ಉಂಟುಮಾಡಿದರೇ, ಮೊಟ್ಟೆಗಳು, ಚೀಸ್ ಮತ್ತು ಹ್ಯಾಮ್ ಅಂತಹ ಅಪಾಯವನ್ನು ತಂದೊಡ್ಡಬಹುದು ಎಂದು ಹೇಳಿದೆ.
ಈ ಅಧ್ಯಯನವು ಸ್ಪೇನ್‌ಗೆ ಸೀಮಿತವಾಗಿದ್ದರೂ, ಈ ಸಂಶೋಧನೆಗಳು ಬೇರೆಡೆ ನಡೆಸಿದ ಸಂಶೋಧನೆಯೊಂದಿಗೆ ಹೋಲಿಕೆಯಾಗುತ್ತದೆ. ಮನೆಯಲ್ಲೇ ಬೆಳಗಿನ ಉಪಾಹಾರವನ್ನು ತಿನ್ನುವುದು ಹೆಚ್ಚಿನ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧಿಸಿದೆ ಎಂಬುದು ಅಧ್ಯಯನದ ಒಂದು ಹೊಸ ಅಂಶವಾಗಿದೆ ಎಂದು ಲೋಪೆಜ್-ಗಿಲ್ ಹೇಳಿದರು.
ಈ ಸಂಶೋಧನೆಯು ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಬೆಳಗಿನ ಉಪಾಹಾರವನ್ನು ಉತ್ತೇಜಿಸುವ ಅಗತ್ಯವನ್ನು ಬಲಪಡಿಸುತ್ತದೆ. ಆದರೆ ಅದನ್ನು ಮನೆಯಲ್ಲಿಯೇ ತಿನ್ನಬೇಕು. ಸ್ಯಾಚುರೇಟೆಡ್ ಕೊಬ್ಬು ಅಥವಾ ಕೊಲೆಸ್ಟರಾಲ್‌ನಲ್ಲಿರುವ ಪ್ರಾಣಿಗಳ ಆಹಾರಗಳು ಯುವ ಜನರಲ್ಲಿ ಮಾನಸಿಕ ಸಾಮಾಜಿಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಿಂದಿನ ಅಧ್ಯಯನಗಳು ಆರೋಗ್ಯಕರ ಊಟದ ಮೌಲ್ಯವನ್ನು ಹೈಲೈಟ್ ಮಾಡಿದ್ದರೂ, ಮಕ್ಕಳು ಉಪಹಾರವನ್ನು ಹೊಂದಿದ್ದಾರೆಯೇ ಅಥವಾ ಇಲ್ಲವೇ, ಅವರು ಎಲ್ಲಿ ಮತ್ತು ಏನು ತಿನ್ನುತ್ತಾರೆ ಎಂಬುದರ ಪರಿಣಾಮಗಳನ್ನು ಪರಿಶೀಲಿಸಲು ಇದು ಮೊದಲನೆಯ ಅಧ್ಯಯನವಾಗಿದೆ.
ಹಿಂದಿನ ಸಂಶೋಧನೆಗಳು ಪೌಷ್ಟಿಕ ಉಪಹಾರದ ಪ್ರಾಮುಖ್ಯತೆಯನ್ನು ಸೂಚಿಸಿದ್ದರೂ, ಮಕ್ಕಳು ಉಪಹಾರವನ್ನು ತಿನ್ನುತ್ತಾರೆಯೇ ಅಥವಾ ಇಲ್ಲವೇ, ಹಾಗೆಯೇ ಅವರು ಎಲ್ಲಿ ಮತ್ತು ಏನು ಸೇವಿಸುತ್ತಾರೆ ಎಂದು ತಿಳಿಯಲು ಇದು ಮೊದಲ ಅಧ್ಯಯನವಾಗಿದೆ. ಈ ಸಂಶೋಧನೆಗಳು ಪೋಷಕರು ಮತ್ತು ಮಕ್ಕಳಿಗೆ ಉಪಯುಕ್ತ ಸಲಹೆಗಳನ್ನು ನೀಡುತ್ತದೆ.