AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato Fever: ಕೇರಳದಲ್ಲಿ ಟೊಮ್ಯಾಟೋ ಜ್ವರದ 82 ಪ್ರಕರಣ ಪತ್ತೆ; ಮಕ್ಕಳಲ್ಲಿ ಹರಡುವ ಈ ಸೋಂಕಿನ ಲಕ್ಷಣಗಳೇನು?

Tomato flu: ಕೇರಳದಲ್ಲಿ 82 ಟೊಮ್ಯಾಟೊ ಜ್ವರದ ಪ್ರಕರಣಗಳು ವರದಿಯಾಗಿವೆ. ಹಾಗೇ, ಒಡಿಶಾದಲ್ಲಿ 26 ಮಕ್ಕಳು ಅಸ್ವಸ್ಥರಾಗಿದ್ದಾರೆ. ಇವರೆಲ್ಲರೂ 9 ವರ್ಷದೊಳಗಿನವರಾಗಿದ್ದಾರೆ.

Tomato Fever: ಕೇರಳದಲ್ಲಿ ಟೊಮ್ಯಾಟೋ ಜ್ವರದ 82 ಪ್ರಕರಣ ಪತ್ತೆ; ಮಕ್ಕಳಲ್ಲಿ ಹರಡುವ ಈ ಸೋಂಕಿನ ಲಕ್ಷಣಗಳೇನು?
ಟೊಮ್ಯಾಟೋ ಜ್ವರImage Credit source: India Today
TV9 Web
| Updated By: ಸುಷ್ಮಾ ಚಕ್ರೆ|

Updated on: Aug 23, 2022 | 9:45 AM

Share

ನವದೆಹಲಿ: ಕೊವಿಡ್-19, ಮಂಕಿಪಾಕ್ಸ್​ (Monkeypox) ಬೆನ್ನಲ್ಲೇ ಭಾರತದಲ್ಲಿ ಮತ್ತೊಂದು ವೈರಸ್ ಹರಡುವಿಕೆ ಹೆಚ್ಚಾಗಿದ್ದು, ಟೊಮ್ಯಾಟೋ ಜ್ವರದ (Tomato Fever) ಪ್ರಕರಣಗಳು ಹೆಚ್ಚಾಗಿವೆ. ಮೇ 6ರಂದು ಕೇರಳದಲ್ಲಿ ಟೊಮ್ಯಾಟೋ ಜ್ವರದ (Tomato Flu) ವೈರಸ್ ಮೊದಲ ಬಾರಿಗೆ ಪತ್ತೆಯಾಗಿತ್ತು. ಅದಾದ ಬಳಿಕ ಭಾರತದಲ್ಲಿ ಟೊಮ್ಯಾಟೊ ಜ್ವರದ 82 ಪ್ರಕರಣಗಳು ದಾಖಲಾಗಿವೆ.

ಅಧ್ಯಯನದ ಪ್ರಕಾರ, ಹೆಚ್ಚಾಗಿ 1ರಿಂದ 5 ವರ್ಷದ ಮಕ್ಕಳಲ್ಲಿ ಈ ಟೊಮ್ಯಾಟೋ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸಾಂಕ್ರಾಮಿಕ ರೋಗವು ಕೈ, ಕಾಲು ಮತ್ತು ಬಾಯಿ ಕಾಯಿಲೆಯ ಹೊಸ ರೂಪಾಂತರವಾಗಿದೆ.

ಟೊಮ್ಯಾಟೊ ಜ್ವರ ಎಂದರೇನು?: 2022ರ ಮೇ 6ರಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಟೊಮ್ಯಾಟೊ ಜ್ವರವನ್ನು ಮೊದಲ ಬಾರಿಗೆ ಗುರುತಿಸಲಾಯಿತು. ಟೊಮ್ಯಾಟೊ ಜ್ವರ ವೈರಸ್ ಕೋವಿಡ್ -19 ನಂತೆಯೇ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಆದರೆ, ಇದು SARS-CoV-2 ವೈರಸ್​ಗೆ ಸಂಬಂಧಿಸಿಲ್ಲ ಎಂದು ಅಧ್ಯಯನ ಹೇಳಿದೆ. ಈ ಜ್ವರ ಕಾಣಿಸಿಕೊಂಡರೆ ದೇಹದಾದ್ಯಂತ ಕೆಂಪು ಮತ್ತು ನೋವಿನ ಗುಳ್ಳೆಗಳು ಮೂಡುತ್ತವೆ. ಅದು ಕ್ರಮೇಣ ಟೊಮೆಟೊ ಗಾತ್ರಕ್ಕೆ ಬೆಳೆಯುತ್ತದೆ.

ಇದನ್ನೂ ಓದಿ: Viral Fever: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ವೈರಲ್ ಜ್ವರ; ಬಿರುಗಾಳಿಯಿಂದಾಗಿ ಇನ್ನಷ್ಟು ಹದಗೆಡಲಿದೆ ಆರೋಗ್ಯ

ರೋಗಲಕ್ಷಣಗಳು ಯಾವುವು?: ಟೊಮ್ಯಾಟೊ ಜ್ವರ ಹೊಂದಿರುವ ಮಕ್ಕಳಲ್ಲಿ ಕಂಡುಬರುವ ಪ್ರಾಥಮಿಕ ರೋಗಲಕ್ಷಣಗಳು ಚಿಕೂನ್‌ಗುನ್ಯಾದಂತೆಯೇ ಇರುತ್ತವೆ. ತೀವ್ರ ಜ್ವರ, ದದ್ದುಗಳು ಮತ್ತು ಕೀಲುಗಳಲ್ಲಿ ನೋವು, ಸುಸ್ತು ಇದರ ಲಕ್ಷಣಗಳಾಗಿವೆ. ಮೈಕೈ ನೋವು, ಜ್ವರ ಮತ್ತು ಆಯಾಸದಂತಹ ಕೆಲವು ರೋಗಲಕ್ಷಣಗಳು ಕೋವಿಡ್ -19 ರೋಗಿಗಳು ಅನುಭವಿಸಿದಂತೆಯೇ ಇರುತ್ತವೆ. ಇತರ ರೋಗಲಕ್ಷಣಗಳೆಂದರೆ ಕೀಲು ಊತ, ವಾಕರಿಕೆ, ಅತಿಸಾರ, ನಿರ್ಜಲೀಕರಣ, ಕೀಲು ನೋವು ಮತ್ತು ಅಧಿಕ ಜ್ವರ. ಕೆಲವು ಸಂದರ್ಭಗಳಲ್ಲಿ ರೋಗಿಗಳ ಚರ್ಮದ ಮೇಲೆ ದದ್ದುಗಳು ಕೂಡ ಉಂಟಾಗುತ್ತವೆ.

ಆಯಾಸ, ವಾಕರಿಕೆ, ವಾಂತಿ, ಅತಿಸಾರ, ಜ್ವರ, ನಿರ್ಜಲೀಕರಣ, ಕೀಲುಗಳ ಊತ, ದೇಹದ ನೋವು ರೀತಿಯ ರೋಗಲಕ್ಷಣಗಳು ಡೆಂಗ್ಯೂನಲ್ಲಿ ಕಂಡುಬರುವ ಲಕ್ಷಣಗಳನ್ನು ಹೋಲುತ್ತವೆ ಎಂದು ಅಧ್ಯಯನ ತಿಳಿಸಿದೆ.

ಈ ಟೊಮ್ಯಾಟೋ ಜ್ವರಕ್ಕೆ ಚಿಕನ್‌ಗುನ್ಯಾ, ಡೆಂಗ್ಯೂ ಮತ್ತು ಕೈ, ಕಾಲು ಮತ್ತು ಬಾಯಿ ಕಾಯಿಲೆಯ ಚಿಕಿತ್ಸೆಯಂತೆಯೇ ಚಿಕಿತ್ಸೆ ನೀಡಲಾಗುತ್ತದೆ. ಕಿರಿಕಿರಿ ಮತ್ತು ದದ್ದುಗಳ ಪರಿಹಾರಕ್ಕಾಗಿ ರೋಗಿಗಳಿಗೆ ವಿಶ್ರಾಂತಿ, ಹೆಚ್ಚು ನೀರು ಕುಡಿಯಲು ಸೂಚಿಸಲಾಗುತ್ತದೆ.

ಕೇರಳದಲ್ಲಿ 82 ಟೊಮ್ಯಾಟೊ ಜ್ವರದ ಪ್ರಕರಣಗಳು ವರದಿಯಾಗಿವೆ. ಹಾಗೇ, ಒಡಿಶಾದಲ್ಲಿ 26 ಮಕ್ಕಳು ಅಸ್ವಸ್ಥರಾಗಿದ್ದಾರೆ. ಇವರೆಲ್ಲರೂ 9 ವರ್ಷದೊಳಗಿನವರಾಗಿದ್ದಾರೆ. ಕೆಲವು ತಜ್ಞರು ಟೊಮೆಟೊ ಜ್ವರವು ಮಕ್ಕಳಲ್ಲಿ ಚಿಕೂನ್‌ಗುನ್ಯಾ ಅಥವಾ ಡೆಂಗ್ಯೂ ಜ್ವರದ ನಂತರದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Langya Virus: ಕೊರೊನಾದಂತೆಯೇ ಚೀನಾದಲ್ಲಿ ‘ಲಾಂಗ್ಯ’ ಎನ್ನುವ ಹೊಸ ವೈರಸ್ ಪತ್ತೆ: 35 ಮಂದಿಗೆ ಸೋಂಕು

ಟೊಮ್ಯಾಟೊ ಜ್ವರ ಹೇಗೆ ಹರಡುತ್ತದೆ?: ಮೇ 6ರಂದು ಕೇರಳದ ಕೊಲ್ಲಂನಲ್ಲಿ ಟೊಮ್ಯಾಟೊ ಜ್ವರದ ಮೊದಲ ಪ್ರಕರಣ ವರದಿಯಾಗಿತ್ತು. ಅಂದಿನಿಂದ, 1ರಿಂದ 5 ವರ್ಷ ವಯಸ್ಸಿನ ಮಕ್ಕಳಲ್ಲಿ ಜ್ವರದ ಲಕ್ಷಣಗಳು ಕಂಡುಬರುತ್ತಿವೆ. ಇದು ಮಕ್ಕಳಲ್ಲಿ ಮಾತ್ರ ಹೆಚ್ಚು ಹರಡುತ್ತಿದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಗಲೀಜಾದ ಸ್ಥಳಗಳಲ್ಲಿ ವಾಸಿಸುವುದು ಮತ್ತು ಕೊಳಕು ವಸ್ತುಗಳನ್ನು ಸ್ಪರ್ಶಿಸುವುದು ಕೂಡ ಇದರ ಕಾರಣಗಳಲ್ಲಿ ಒಂದು.

ಮಕ್ಕಳು ಆಟಿಕೆಗಳು, ಆಹಾರ ಮತ್ತು ಬಟ್ಟೆಗಳಿಂದ ಹಿಡಿದು ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇದು ಟೊಮ್ಯಾಟೋ ಜ್ವರದ ಸೋಂಕು ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ಇದರರ್ಥ ಇತರ ವೈರಲ್ ಸೋಂಕುಗಳಂತೆ ಇದು ನಿಕಟ ಸಂಪರ್ಕದ ಮೂಲಕವೂ ಹರಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ