Viral Fever: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ವೈರಲ್ ಜ್ವರ; ಬಿರುಗಾಳಿಯಿಂದಾಗಿ ಇನ್ನಷ್ಟು ಹದಗೆಡಲಿದೆ ಆರೋಗ್ಯ

Health Tips: ಇನ್ನೂ 1 ವಾರ ಕರ್ನಾಟಕದಲ್ಲಿ ಬಿರುಗಾಳಿ ಮುಂದುವರೆಯಲಿದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದು ಉತ್ತಮ. ಈ ಚಳಿಗಾಳಿಯಿಂದ ಜ್ವರ, ಶೀತ, ಕೆಮ್ಮು, ಕಫ ಮುಂತಾದ ಸಮಸ್ಯೆಗಳು ಹೆಚ್ಚಾಗಿವೆ.

Viral Fever: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ವೈರಲ್ ಜ್ವರ; ಬಿರುಗಾಳಿಯಿಂದಾಗಿ ಇನ್ನಷ್ಟು ಹದಗೆಡಲಿದೆ ಆರೋಗ್ಯ
ವೈರಲ್ ಜ್ವರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 11, 2022 | 3:31 PM

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆಯ ಅಬ್ಬರ (Heavy Rainfall) ಜೋರಾಗಿದೆ. ಮಳೆ ಶುರುವಾಯಿತೆಂದರೆ ಅದರ ಜೊತೆಗೆ ನಾನಾ ರೋಗಗಳೂ ಕಾಣಿಸಿಕೊಳ್ಳುತ್ತವೆ. ಬೆಂಗಳೂರಿನಲ್ಲಂತೂ ಒಂದು ದಿನ ಮಳೆ, ಮತ್ತೊಂದು ದಿನ ಮೋಡ, ಇನ್ನೊಂದು ದಿನ ಬಿಸಿಲು ಕಾಣಿಸಿಕೊಳ್ಳುತ್ತಿರುವುದರಿಂದ ವೈರಲ್ ಜ್ವರ (Viral Fever) ಹೆಚ್ಚುತ್ತಿದೆ. ಕೆಮ್ಮು, ಜ್ವರ, ಶೀತ, ತಲೆನೋವು ಹೀಗೆ ನಾನಾ ಆರೋಗ್ಯ ಸಮಸ್ಯೆಗಳಿಂದಾಗಿ ಬೆಂಗಳೂರಿನ ಜನರು ಬಳಲುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಒಂದೇ ರೀತಿಯ ವಾತಾವರಣವಿದ್ದರೆ, ಒಂದೇ ಸಮನೆ ಮಳೆ ಸುರಿಯುತ್ತಿದ್ದರೆ ನಮ್ಮ ದೇಹ ಅದಕ್ಕೆ ಹೊಂದಿಕೊಂಡು ಬಿಡುತ್ತದೆ. ಹೀಗಾಗಿ, ಹೆಚ್ಚಿನ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ವಾತಾವರಣ ಪದೇಪದೆ ಬದಲಾಗುತ್ತಿದ್ದರೆ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಗಾಳಿಯ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ, ಈ ವರ್ಷ ಆಷಾಢಕ್ಕಿಂತ ಶ್ರಾವಣ ಮಾಸದಲ್ಲಿ ಬಿರುಗಾಳಿಯ ವೇಗ ದುಪ್ಪಟ್ಟಾಗಿದೆ. ಕರ್ನಾಟಕದಲ್ಲಿ ಇನ್ನೂ 1 ವಾರ ಬಿರುಗಾಳಿ ಮುಂದುವರೆಯಲಿದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದು ಉತ್ತಮ. ಈ ಚಳಿಗಾಳಿಯಿಂದ ಜ್ವರ, ಶೀತ, ಕೆಮ್ಮು, ಕಫ ಮುಂತಾದ ಸಮಸ್ಯೆಗಳು ಹೆಚ್ಚಾಗಿವೆ.

ಇದನ್ನೂ ಓದಿ: Health Tips: ಡೆಂಗ್ಯೂನಂತಹ ರೋಗಕ್ಕೆ ಪರಿಣಾಮಕಾರಿಯಾಗಿರುವ ಪಪ್ಪಾಯ ಎಲೆಗಳ ಆರೋಗ್ಯಕರ ಪ್ರಯೋಜನಗಳು ಇಲ್ಲಿವೆ

ಆಷಾಢ ಮಾಸವಿಡೀ ಗಾಳಿಯ ಅಬ್ಬರ ಜೋರಾಗಿರುತ್ತದೆ. ಆದರೆ, ಈ ಬಾರಿ ಮಳೆಗಾಲ ಶುರುವಾಗುವುದಕ್ಕೂ ಮೊದಲು ಮಳೆಯ ಅಬ್ಬರ ಜೋರಾಗಿತ್ತು. ಜೂನ್​ ತಿಂಗಳಲ್ಲಿ ಮಳೆಯಾಗುವ ಸಂದರ್ಭದಲ್ಲಿ ಬಿಸಿಲಿನ ವಾತಾವರಣ ಹೆಚ್ಚಾಗಿತ್ತು. ಒಟ್ಟಾರೆ, ಈ ವರ್ಷ ಹವಾಮಾನದಲ್ಲಿ ಬಹಳ ಏರುಪೇರುಗಳಾಗಿವೆ. ಶ್ರಾವಣ ಮಾಸದಲ್ಲಿ ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ಕಳೆದ 1 ವಾರದಿಂದ ಆಷಾಢಕ್ಕಿಂತ ಹೆಚ್ಚು ಗಾಳಿ ಬೀಸುತ್ತಿದೆ. ಆಷಾಢದಲ್ಲಿ ಗಾಳಿಯ ವೇಗ ಗಂಟೆಗೆ 14ರಿಂದ 15 ಕಿ.ಮೀ ಇತ್ತು. ಆದರೆ, ಶ್ರಾವಣ ಮಾಸದಲ್ಲಿ ಗಂಟೆಗೆ 35ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.

ಕರ್ನಾಟಕದ ಕರಾವಳಿ ತೀರದಲ್ಲಿ ಗಾಳಿಯ ವೇಗ ಹೆಚ್ಚಾಗಲಿದ್ದು, ಇನ್ನೂ 1 ವಾರ ಬಿರುಗಾಳಿ ಬೀಸಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಹಾಗಾಗಿ, ದಕ್ಷಿಣ-ಪಶ್ಚಿಮ ಭಾಗದಲ್ಲಿ ಈಗ ಗಾಳಿಯ ವೇಗ ಹೆಚ್ಚಾಗಿದೆ. ಇದರಿಂದ ಗಾಳಿಯ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ. ಶೀತ ಗಾಳಿ ಹೆಚ್ಚಾಗಿರುವುದರಿಂದ ಚಳಿ- ಜ್ವರ, ಗಂಟಲು ನೋವು, ಕಫ, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಹೀಗಾಗಿ, ಗಾಳಿಯಲ್ಲಿ ಹೆಚ್ಚು ಓಡಾಡುವವರು, ಸೂಕ್ಷ್ಮ ಆರೋಗ್ಯದವರು ಹೆಚ್ಚು ಎಚ್ಚರ ವಹಿಸುವುದು ಅಗತ್ಯ.

ಇದನ್ನೂ ಓದಿ: Health Tips: ದೇಹದ ಶಕ್ತಿಯನ್ನು ಹೆಚ್ಚಿಸಲು ಈ ತರಕಾರಿ ಜ್ಯೂಸ್​ಗಳನ್ನು ಕುಡಿಯಿರಿ

ವೈರಲ್ ಜ್ವರದ ಜೊತೆಗೆ ನೆರೆಯ ರಾಜ್ಯಗಳಲ್ಲಿ ಮಂಕಿಪಾಕ್ಸ್​ ಸೋಂಕು ಹೆಚ್ಚಾಗಿರುವುದರಿಂದ ಇನ್ನಷ್ಟು ಆತಂಕ ಶುರುವಾಗಿದೆ. ಹಾಗೇ, ಹೆಚ್​1ಎನ್​1, ಡೆಂಗ್ಯು ಮುಂತಾದ ರೋಗಗಳು ಕೂಡ ಕಾಣಿಸಿಕೊಳ್ಳುತ್ತಿದ್ದು, ಅನಾರೋಗ್ಯ ಪೀಡಿತರ ಸಂಖ್ಯೆ ಹೆಚ್ಚಾಗಿದೆ.

ಯಾವ ರೀತಿ ಎಚ್ಚರ ವಹಿಸಬೇಕು?: – ಆದಷ್ಟೂ ಬೆಚ್ಚಗಿನ ವಾತಾವರಣದಲ್ಲಿರಿ.

– ಬಿಸಿಯಾದ ನೀರನ್ನೇ ಕುಡಿಯಿರಿ.

ಕೆಮ್ಮು, ಶೀತ, ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಹೋಗಿ.

– ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ಇದರಿಂದ ಸೋಂಕು ಬೇರೆಯವರಿಗೆ ಹರಡದಂತೆ ತಡೆಯಬಹುದು.

-ದಿನಕ್ಕೊಮ್ಮೆಯಾದರೂ ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಕಾಳು ಹಾಕಿ ಕುದಿಸಿದ ಕಷಾಯ ಕುಡಿಯಿರಿ.

– ಫ್ರಿಜ್​​ನಲ್ಲಿಟ್ಟ ಆಹಾರ ಸೇವಿಸುವುದನ್ನು ಅವಾಯ್ಡ್​ ಮಾಡಿ.

– ಹೊರಗಿನ ಪದಾರ್ಥ, ಜ್ಯೂಸ್ ಕುಡಿಯದಿರುವುದು ಒಳ್ಳೆಯದು.

– ಇನ್ನೂ ಕೆಲವು ದಿನಗಳ ಕಾಲ ಕರಿದ ಪದಾರ್ಥ ಸೇವಿಸದಿದ್ದರೆ ಉತ್ತಮ. ಒಂದುವೇಳೆ ತಿನ್ನುವುದಾದರೂ ಮನೆಯಲ್ಲೇ ಶುದ್ಧವಾದ ಎಣ್ಣೆಯಲ್ಲಿ ಕರಿದ ಪದಾರ್ಥ ಸೇವಿಸಿ.

ಇನ್ನಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು