ತೆಲುಗು ಅರುಂಧತಿ ಸಿನಿಮಾ ನೋಡಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಸಿದ ಯುವಕ ಚಿಕಿತ್ಸೆ ಫಲಿಸದೆ ಸಾವು
ತಂಗಿನಕಾಯಿಯಿಂದ ತಲೆಗೆ ಹೊಡೆದು, ಬೆಂಕಿ ಹಂಚುತ್ತಾರೆ. ಈ ದೃಶ್ಯಗಳನ್ನು ನೋಡಿದ ರೇಣುಕಾ ಪ್ರಸಾದ್ ತಾನೂ ಬೆಂಕಿಗೆ ಆಹುತಿಯಾಗಲು ಯತ್ನಿಸಿದ್ದ. ಬೆಂಕಿ ಹಚ್ಚಿಕೊಂಡು ಮುಕ್ತಿ ಕೊಡಿ ಮುಕ್ತಿ ಕೊಡಿ ಎಂದು ರೇಣುಕಾ ಪ್ರಸಾದ್ ಕಿರುಚಾಡಿಕೊಂಡಿದ್ದ.
ತುಮಕೂರು: ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧುಗಿರಿ ತಾಲೂಕಿನ ಕೊಂಡವಾಡಿ ಗ್ರಾಮದ ರಸ್ತೆ ಬದಿಯಲ್ಲಿ ನಡೆದಿದೆ. ತೆಲುಗು ಸಿನಿಮಾ ಅರುಂಧತಿ ನೋಡಿ ಯುವಕ ರೇಣುಕಾ ಪ್ರಸಾದ್ (22) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇತ್ತೀಚೆಗೆ ಸಿನಿಮಾಗಳಿಗೆ ಅಡಿಕ್ಟ್ ಆಗಿದ್ದ ರೇಣುಕಾ ಪ್ರಸಾದ್, ಅರುಂಧತಿ ಸಿನಿಮಾದಲ್ಲಿ ನಟಿ ಬೆಂಕಿಗಾಹುತಿಯಾಗಿ ಮರುಜನ್ಮ ಪಡೆಯುವ ರೀತಿ ತಾನೂ ಬೆಂಕಿಗೆ ಆಹುತಿಯಾಗಿದ್ದಾನೆ. ಅರುಂಧತಿ ಸಿನಿಮಾದಲ್ಲಿ ದುಷ್ಟ ಶಕ್ತಿಯನ್ನ ನಾಶಗೊಳಿಸಲು ನಟಿ ಸಾವನ್ನಪ್ಪುವ ದೃಶ್ಯ ವಿದೆ. ತಂಗಿನಕಾಯಿಯಿಂದ ತಲೆಗೆ ಹೊಡೆದು, ಬೆಂಕಿ ಹಂಚುತ್ತಾರೆ. ಈ ದೃಶ್ಯಗಳನ್ನು ನೋಡಿದ ರೇಣುಕಾ ಪ್ರಸಾದ್ ತಾನೂ ಬೆಂಕಿಗೆ ಆಹುತಿಯಾಗಲು ಯತ್ನಿಸಿದ್ದ. ಬೆಂಕಿ ಹಚ್ಚಿಕೊಂಡು ಮುಕ್ತಿ ಕೊಡಿ ಮುಕ್ತಿ ಕೊಡಿ ಎಂದು ರೇಣುಕಾ ಪ್ರಸಾದ್ ಕಿರುಚಾಡಿಕೊಂಡಿದ್ದ. ಈ ವೇಳೆ ಸ್ಥಳೀಯರು ಬೆಂಕಿ ಹಾರಿಸಿ ಯುವಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಯುವಕನ ತಂದೆ, ಅರುಂಧತಿ ಸಿನಿಮಾದಿಂದಲೇ ತಮ್ಮ ಮಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದಿದ್ದಾರೆ. ಅರುಂಧತಿ ಸಿನಿಮಾ ನೋಡಬೇಡ ಎಂದು ಹೇಳಿದ್ದೆ. ಈ ವೇಳೆ ನನಗೆ ಮುಕ್ತಿ ಕೊಡಪ್ಪ ಎಂದು ನನ್ನ ಮಗ ಹೇಳಿದ ಎಂದು ಯುವಕನ ತಂದೆ ಕಣ್ಣೀರು ಹಾಕಿದ್ದಾರೆ.
ಮುಖದ ಮೇಲಿನ ಕಲೆಗಳಿಗೆ ಮನನೊಂದು ಯುವತಿ ಆತ್ಮಹತ್ಯೆ
ನೆಲಮಂಗಲ: ಮುಖದ ಮೇಲಿನ ಕಲೆಗಳಿಗೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ನಡೆದಿದೆ. ಮಹಾಲಕ್ಷ್ಮೀ(22) ಎಂಬ ಯುವತಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಪ್ಲೊಮಾ ಮುಗಿಸಿ BEL ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಯುವತಿ ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆ ಬಳಸಿ ನೇಣಿಗೆ ಶರಣಾಗಿದ್ದಾರೆ. ಸಪ್ತಗಿರಿ ಆಸ್ಪತ್ರೆಯಲ್ಲಿ ಮೃತ ಯುವತಿಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.