Health Tips: ಡೆಂಗ್ಯೂನಂತಹ ರೋಗಕ್ಕೆ ಪರಿಣಾಮಕಾರಿಯಾಗಿರುವ ಪಪ್ಪಾಯ ಎಲೆಗಳ ಆರೋಗ್ಯಕರ ಪ್ರಯೋಜನಗಳು ಇಲ್ಲಿವೆ

ಪಪ್ಪಾಯ ಮರದ ಎಲೆಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಚಹಾಗಳಲ್ಲಿ ಔಷಧೀಯವಾಗಿ ಬಳಸಲಾಗುತ್ತದೆ. ಪೋಷಕಾಂಶಗಳಿಂದ ತುಂಬಿರುವ ಈ ಹಣ್ಣು ವಿಟಮಿನ್ ಎ, ಬಿ1, ಸಿ ಮತ್ತು ಇ, ಕ್ಯಾಲೋರಿಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್​ನಿಂದ ಸಮೃದ್ಧವಾಗಿದೆ.

Health Tips: ಡೆಂಗ್ಯೂನಂತಹ ರೋಗಕ್ಕೆ ಪರಿಣಾಮಕಾರಿಯಾಗಿರುವ ಪಪ್ಪಾಯ ಎಲೆಗಳ ಆರೋಗ್ಯಕರ ಪ್ರಯೋಜನಗಳು ಇಲ್ಲಿವೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Aug 08, 2022 | 10:31 AM

ಕ್ಯಾರಿಕಾ ಪಪ್ಪಾಯಿ ಎಂದೂ ಕರೆಯಲ್ಪಡುವ ಪಪ್ಪಾಯ ಎಲೆಗಳು ಒಂದೇ ಕಾಂಡವನ್ನು ಹೊಂದಿರುವ ಸಣ್ಣ ಮರದ ಮೇಲೆ ಕಂಡುಬರುತ್ತವೆ. ಪಪ್ಪಾಯ ಪ್ರಪಂಚದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯುತ್ತದೆ ಮತ್ತು ವಿಶ್ವದ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದಾಗಿದೆ. ಹಣ್ಣನ್ನು ಮಾತ್ರ ಸೇವನೆ ಮಾಡುವುದರ ಜೊತೆಗೆ ಎಲೆಗಳನ್ನೂ ತಿನ್ನಬಹುದು. ಪಪ್ಪಾಯ ಎಲೆಗಳು (Papaya Leaves) ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಚಹಾಗಳಲ್ಲಿ ಔಷಧೀಯವಾಗಿ ಬಳಸಲಾಗುತ್ತದೆ. ಪೋಷಕಾಂಶಗಳಿಂದ ತುಂಬಿರುವ ಈ ಹಣ್ಣು ವಿಟಮಿನ್ ಎ, ಬಿ1, ಸಿ ಮತ್ತು ಇ, ಕ್ಯಾಲೋರಿಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಪೊಟ್ಯಾಸಿಯಮ್, ಸೋಡಿಯಂ, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ನೀರು ಸೇರಿದಂತೆ ಹೆಚ್ಚು ಪದಾರ್ಥಗಳನ್ನು ಒಳಗೊಂಡಿದೆ. ಹೀಗಾಗಿ ಹಣ್ಣುಗಳನ್ನು ಮಾತ್ರವಲ್ಲದೆ ಬೀಜಗಳು ಮತ್ತು ಎಲೆಗಳನ್ನು ಕೂಡ ಔಷಧಿಗಳಿಗಾಗಿ ಬಳಲಸಾಗುತ್ತಿತ್ತು.

ಪಪ್ಪಾಯ ಎಲೆಗಳು ಡೆಂಗ್ಯೂ, ಜೀರ್ಣಕ್ರಿಯೆ ಸಮಸ್ಯೆ ಸೇರಿದಂತೆ ಅನೇಕ ರೋಗಗಳಿಗೆ ಪರಿಣಾಮಕಾರಿಯಾಗಿದೆ. ಹಾಗಿದ್ದರೆ ಪಪ್ಪಾಯಿ ಎಲೆಗಳ ಆರೋಗ್ಯ ಪ್ರಯೋಜನಗಳೇನು? ಈ ಕೆಳಗಿನಂತಿವೆ ನೋಡಿ:

  1. ಡೆಂಗ್ಯೂ ಹರಡುವ ಸೊಳ್ಳೆಗಳಿಂದ ರೋಗವು ಮನುಷ್ಯನ ದೇಹದ ರಕ್ತಕ್ಕೆ ಸೇರುವಂತೆ ಮಾಡುತ್ತದೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಹೆಚ್ಚಿನ ಜ್ವರ, ಚರ್ಮದ ದದ್ದು ಮತ್ತು ಪ್ಲೇಟ್ಲೆಟ್ಗಳು ಕಂಡುಬರುತ್ತವೆ. ಇಂತಹ ಡೆಂಗ್ಯೂವಿನ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಪಪ್ಪಾಯ ಎಲೆಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.
  2. ಪಪ್ಪಾಯ ಎಲೆಗಳು ಮಲಬದ್ಧತೆಯನ್ನು ನಿವಾರಿಸುತ್ತದೆ. ಕರುಳಿನ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಪಪ್ಪಾಯ ಎಲೆಯ ಚಹಾವನ್ನು ಸಹ ಶಿಫಾರಸು ಮಾಡಲಾಗಿದೆ. ಡೆಂಗ್ಯೂ ರೋಗಿಗಳಿಗೆ ಎಲೆಗಳ ಸಾರದಿಂದಾಗಿ ಹೆಚ್ಚಿನ ಪ್ಲೇಟ್ಲೆಟ್ ಎಣಿಕೆಗಳು ಕಂಡುಬರುತ್ತವೆ. ಪಪ್ಪಾಯ ಎಲೆಗಳ ಸಾರವು ಡೆಂಗ್ಯೂ ಉಂಟುಮಾಡುವ ಯಕೃತ್ತಿನ ಹಾನಿಯನ್ನು ಮರುಸ್ಥಾಪಿಸುವ ಮೂಲಕ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತದೆ.
  3. ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗುವ ಪಪ್ಪಾಯ ಎಲೆಗಳು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಆ ಮೂಲಕ ತಲೆ ಬೋಳನ್ನು ತಡೆಯುತ್ತದೆ. ಉತ್ಕರ್ಷಣ ನಿರೋಧಕ ಭರಿತ ಆಹಾರವನ್ನು ಸೇವಿಸುವುದರಿಂದ ಸಾಮಾನ್ಯವಾಗಿ ಕೂದಲು ಉದುರುವಿಕೆಗೆ ಕಾರಣವಾಗುವ ದೇಹದಲ್ಲಿನ ಆಕ್ಸಿಡೆಂಟ್ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
  4. ಮೆಕ್ಸಿಕನ್ ಸಾಂಪ್ರದಾಯಿಕ ಔಷಧಿಗಳಲ್ಲಿ ಪಪ್ಪಾಯ ಎಲೆಗಳನ್ನು ಸಾಮಾನ್ಯವಾಗಿ ಟೈಪ್ 1 ಮತ್ತು ಟೈಪ್ 2 ಮಧುಮೇಹಕ್ಕೆ ನೈಸರ್ಗಿಕ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಪಪ್ಪಾಯ ಎಲೆಯ ಸಾರವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ತೋರಿಸಲಾಗಿದೆ. ಇನ್ಸುಲಿನ್ ತಯಾರಿಸುವ ಮೇದೋಜ್ಜೀರಕ ಗ್ರಂಥಿಯ ಕೋಶಗಳ ಹಾನಿಯನ್ನು ಕೂಡ ತಡೆಯಲು ಸಹಾಯ ಮಾಡುತ್ತದೆ.
  5. ಪಪ್ಪಾಯ ಎಲೆಗಳು ಎಲ್ಲಾ ವಿಷಗಳು ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ನೈಸರ್ಗಿಕ ಶುಚಿಗೊಳಿಸುವ ಏಜೆಂಟರ್ ಕೆಲಸ ಮಾಡುತ್ತದೆ. ಇದು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ ಮತ್ತು ದೀರ್ಘಕಾಲದ ಪಿತ್ತಜನಕಾಂಗದ ಕಾಯಿಲೆಗಳು, ಯಕೃತ್ತಿನ ಕ್ಯಾನ್ಸರ್ ಇತ್ಯಾದಿಗಳನ್ನು ಗುಣಪಡಿಸಲು ಸಹಾಯಕವಾಗಿದೆ.

ಇದು ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ, ಡೆಂಗ್ಯೂನಂತಹ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಹೆಚ್ಚಿನ ಚಿಕಿತ್ಸೆಯನ್ನು ಪಡೆಯುವುದು ಮುಖ್ಯವಾಗಿರುತ್ತದೆ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಡಿ

Published On - 10:30 am, Mon, 8 August 22