Health Tips: ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡ ಮೀನಿನ ಮುಳ್ಳನ್ನು ತೆಗೆಯಲು ಹೀಗೆ ಮಾಡಿ

ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡರೆ ಅಪಾಯಕ್ಕೆ ಸಿಲುಕಬಹುದು ಎಂಬ ಆತಂಕ ಅನೇಕರಲ್ಲಿದೆ. ಒಂದೊಮ್ಮೆ ಸಿಕ್ಕಿಹಾಕಿಕೊಂಡರೆ ಬಾಳೆಹಣ್ಣು, ಬ್ರೆಡ್​ನಂತಹ ಆಹಾರವನ್ನು ಸೇವಿಸಬಹುದು.

Health Tips: ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡ ಮೀನಿನ ಮುಳ್ಳನ್ನು ತೆಗೆಯಲು ಹೀಗೆ ಮಾಡಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Aug 24, 2022 | 7:00 AM

ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಮೀನನ್ನು ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅವುಗಳನ್ನು ಆಹಾರದ ಭಾಗವಾಗಿ ಮಾಡಿದರೆ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುತ್ತದೆ, ಹೃದಯದ ಆರೋಗ್ಯವು ಬಲವಾಗಿರುತ್ತದೆ. ಅದಾಗ್ಯೂ ಕೆಲವರು ಮೀನುಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಕಾರಣ ಅದರಲ್ಲಿನ ಮುಳ್ಳುಗಳು. ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡರೆ ಅಪಾಯಕ್ಕೆ ಸಿಲುಕಬಹುದು ಎಂಬ ಆತಂಕ ಇದೆ. ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಳ್ಳದೆ ನೇರವಾಗಿ ಜೀರ್ಣಾಂಗಕ್ಕೆ ಹೋದರೆ ಚಿಂತಿಸಬೇಕಾಗಿಲ್ಲ. ಆದರೆ  ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡರೆ ಏನು ಕಥೆ? ಚಿಂತಿಸಬೇಕಿಲ್ಲ ಅದನ್ನು ಸುಲಭವಾಗಿ ಹೊರಹಾಕಬಹುದು.

ಮೀನನ್ನು ಸವಿಯುತ್ತಿರುವಾಗ ಗಂಟಲಿನಲ್ಲಿ ಅದರ ಮುಳ್ಳು ಸಿಕ್ಕಿಹಾಕಿಕೊಂಡರೆ ಈ ಕೆಳಗಿನ ಸಲಹೆಗಳನ್ನು ಅನುಸರಿಸಿ:

  • ಬಾಳೆಹಣ್ಣಿನ ತುಂಡುಗಳನ್ನು ಜಗಿಯದೆ ನುಂಗಬೇಕು. ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.
  • ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡರೆ ಬ್ರೆಡ್ ತಿನ್ನಿ. ಬ್ರೆಡ್‌ನ ಎರಡೂ ಬದಿಯಲ್ಲಿ ಕಡಲೆಕಾಯಿ ಬೆಣ್ಣೆಯನ್ನು ಹರಡಿ ತಿನ್ನಿರಿ.
  • ಗಂಟಲಿನಲ್ಲಿ ಮುಳ್ಳು ಸಿಕ್ಕಿಹಾಕಿಕೊಂಡಾಗ ಚೆನ್ನಾಗಿ ನೀರು ಕುಡಿಯಿರಿ.
  • ಮೀನಿನ ಮುಳ್ಳು ಅಂಟಿಕೊಂಡ ತಕ್ಷಣ ಸೋಡಾ ಕುಡಿಯುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಸೋಡಾದಲ್ಲಿರುವ ಅನಿಲವು ಗಂಟಲಿನ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಪರಿಣಾಮವಾಗಿ ಮುಳ್ಳು ಹೊರಬರುತ್ತದೆ.
  • ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಕೊಂಡಾಗ 4 ಅಥವಾ 5 ಬಾರಿ ಕೆಮ್ಮಬೇಕು. ಇದರಿಂದ ಮುಳ್ಳು ಹೊರಬರುತ್ತದೆ.
  • ಎಷ್ಟೇ ಪ್ರಯತ್ನಿಸಿದರೂ ಮುಳ್ಳು ಗಂಟಲಿನಿಂದ ಹೊರಬರದಿದ್ದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಗಮನಿಸಿ: ಈ ಲೇಖನದಲ್ಲಿ ತಿಳಿಸಿರುವ ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಮೊದಲು ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.

ಮತ್ತಷ್ಟು ಅರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ