New Year Financial Plan: 2023ಕ್ಕೆ ತೆರಿಗೆ ಉಳಿತಾಯ, ನಿವೃತ್ತಿ ಯೋಜನೆ ಕಾರ್ಯತಂತ್ರಗಳು ಹೀಗಿರಲಿ

ಮಿತಿ ಮೀರಿದ ಹಣದುಬ್ಬರ, ಬಡ್ಡಿ ದರಗಳಲ್ಲಿ ವಿಪರೀತ ಹೆಚ್ಚಳ ಇತ್ಯಾದಿಗಳಿಂದಾಗಿ ವ್ಯಕ್ತಿಗಳು ಅವಧಿಪೂರ್ವ ನಿವೃತ್ತಿ ಹಾಗೂ ಅದಕ್ಕೆ ತಕ್ಕಂತೆ ಉಳಿತಾಯವನ್ನು ಈಗಲೇ ಮಾಡಿಕೊಳ್ಳಲು ಯೋಜನೆ ರೂಪಿಸಿವುದು ಉತ್ತಮ ಎಂದಿದ್ದಾರೆ ಹಣಕಾಸು ತಜ್ಞರು.

New Year Financial Plan: 2023ಕ್ಕೆ ತೆರಿಗೆ ಉಳಿತಾಯ, ನಿವೃತ್ತಿ ಯೋಜನೆ ಕಾರ್ಯತಂತ್ರಗಳು ಹೀಗಿರಲಿ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on:Dec 13, 2022 | 12:45 PM

ಹೊಸ ವರ್ಷ ಸಮೀಪಿಸುತ್ತಿದ್ದು, ಚಿಲ್ಲರೆ ಹೂಡಿಕೆದಾರರು (Retail Investors) ತೆರಿಗೆ ಉಳಿತಾಯ (Tax) ಮತ್ತು ನಿವೃತ್ತಿ ಯೋಜನೆಗಳ (Retirement Plans) ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಸಮಯವಾಗಿದೆ. ಮಿತಿ ಮೀರಿದ ಹಣದುಬ್ಬರ (Inflation), ಬಡ್ಡಿ ದರಗಳಲ್ಲಿ ವಿಪರೀತ ಹೆಚ್ಚಳ (Interest Rate Hikes) ಇತ್ಯಾದಿಗಳಿಂದಾಗಿ ಜನರು ಅವಧಿಪೂರ್ವ ನಿವೃತ್ತಿ ಹಾಗೂ ಅದಕ್ಕೆ ತಕ್ಕಂತೆ ಉಳಿತಾಯವನ್ನು (Savings) ಈಗಲೇ ಮಾಡಿಕೊಳ್ಳಲು ಯೋಜನೆ ರೂಪಿಸಿವುದು ಉತ್ತಮ ಎಂದಿದ್ದಾರೆ ಹಣಕಾಸು ತಜ್ಞರು.

‘ಪ್ರಸ್ತುತ ಕಾಲಘಟ್ಟದಲ್ಲಿ ಅನೇಕರು ಹೆಚ್ಚು ವಯಸ್ಸಾಗುವ ಮುನ್ನವೇ ನಿವೃತ್ತಿಯಾಗಲು ಯೋಚಿಸುತ್ತಿದ್ದಾರೆ. ಹಲವಾರು ಮಂದಿ ದೈಹಿಕವಾಗಿ ಸಮರ್ಥರಾಗಿರುವ ವರೆಗೂ ಉದ್ಯೋಗದಲ್ಲಿರಲು ಬಯಸುತ್ತಾರಾದರೂ ಅನೇಕರು ಹೆಚ್ಚುತ್ತಿರುವ ಒತ್ತಡ, ಕಾರ್ಯದೊತ್ತಡ ಹಾಗೂ ಇಳಿಕೆಯಾಗುತ್ತಿರುವ ಸರಾಸರಿ ಜೀವಿತಾವಧಿಯಿಂದಾಗಿ ಬೇಗನೆ ನಿವೃತ್ತರಾಗಲು ಬಯಸುತ್ತಾರೆ. ಅನೇಕರು 40ರಿಂದ 50 ವರ್ಷ ವಯಸ್ಸಿನ ಅವಧಿಯಲ್ಲಿ ನಿವೃತ್ತರಾಗಲು ಬಯಸುತ್ತಾರೆ. ಆದರೆ ಈ ಪೈಕಿ ಹೆಚ್ಚಿನವರು ಅದಕ್ಕೆ ತಕ್ಕಂತೆ ಉಳಿತಾಯದ ಯೋಜನೆಗಳನ್ನು ಹಾಕಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ’ ಎಂದು ‘ಲೈವ್​ಮಿಂಟ್ ಡಾಟ್​ಕಾಂ’ಗೆ ನೀಡಿದ ಸಂದರ್ಶನದಲ್ಲಿ ಆರ್​​ಎಸ್​ಎಂ ಇಂಡಿಯಾ ಸಂಸ್ಥಾಪಕ ಡಾ. ಸುರೇಶ್ ಸುರಾನ ತಿಳಿಸಿದ್ದಾರೆ. ಜತೆಗೆ, ತೆರಿಗೆ ಉಳಿತಾಯ ಮತ್ತು ನಿವೃತ್ತಿ ಜೀವನಕ್ಕಾಗಿ ಉಳಿತಾಯ ಮಾಡಿಕೊಳ್ಳಲು ಒಂದಿಷ್ಟು ಸಲಹೆಗಳನ್ನೂ ನೀಡಿದ್ದಾರೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)

60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು, 55 ವರ್ಷ ಮೇಲ್ಪಟ್ಟ, 60ಕ್ಕಿಂತ ಕಡಿಮೆ ವಯಸ್ಸಿನ ಸ್ವಯಂ ನಿವೃತ್ತಿ ಹೊಂದಿದವರೂ ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಎಸ್​​ಸಿಎಸ್​ಎಸ್ ಖಾತೆ ತೆರೆಯಲು ಅರ್ಹರಾಗಿರುತ್ತಾರೆ. ಇಂಥವರು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಎಸ್​​ಸಿಎಸ್​ಎಸ್ ಖಾತೆ ತೆರೆಯಬಹುದು. ಅಂಚೆ ಕಚೇರಿ ಅಥವಾ ಎಸ್​​ಸಿಎಸ್​ಎಸ್ ಸೌಲಭ್ಯ ಇರುವ ಬ್ಯಾಂಕ್​ಗಳಲ್ಲಿ ಖಾತೆ ಆರಂಭಿಸಬಹುದು. ಇದಕ್ಕೆ ಶೇಕಡಾ 7.40ರ ಬಡ್ಡಿ ದೊರೆಯಲಿದೆ. ತ್ರೈಮಾಸಿಕ ಲೆಕ್ಕದಲ್ಲಿ ಇದಕ್ಕೆ ಬಡ್ಡಿ ದೊರೆಯುತ್ತದೆ. 5 ವರ್ಷಗಳ ನಂತರ ಖಾತೆ ಕ್ಲೋಸ್ ಮಾಡಲು ಅವಕಾಶ ಇರುತ್ತದೆ. ಮೂರು ವರ್ಷಗಳ ವರೆಗೆ ವಿಸ್ತರಿಸಲೂ ಅವಕಾಶವಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ 1.5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿಯನ್ನೂ ಪಡೆಯಬಹುದಾಗಿದೆ.

ಇದನ್ನೂ ಓದಿ: Tax-Saving Investments: ಪಿಪಿಎಫ್​ನಿಂದ ಎನ್​ಪಿಎಸ್ ವರೆಗೆ; ತೆರಿಗೆ ಉಳಿತಾಯಕ್ಕೆ ಈ ಐದು ಹೂಡಿಕೆ ಯೋಜನೆಗಳನ್ನು ಗಮನಿಸಿ

5 ವರ್ಷಗಳ ಠೇವಣಿಗೆ ಹಿರಿಯ ನಾಗರಿಕರಿಗೆ ಸಿಗುತ್ತೆ ಗರಿಷ್ಠ ಬಡ್ಡಿ

ಹಿರಿಯ ನಾಗರಿಕರ ಸ್ಥಿರ ಠೇವಣಿಗೆ (ಎಫ್​ಡಿ) ಬ್ಯಾಂಕ್​ಗಳು ಗರಿಷ್ಠ ಬಡ್ಡಿ ನೀಡುತ್ತವೆ. ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲೂ ಇದರಲ್ಲಿ ಅವಕಾಶವಿದೆ. ಹೀಗಾಗಿ 5 ವರ್ಷಗಳ ಅವಧಿಯ ಎಫ್​ಡಿ ಠೇವಣಿ ಇಡುವ ಬಗ್ಗೆಯೂ ಹಿರಿಯ ನಾಗರಿಕರು ಪರಿಶೀಲಿಸಬಹುದು ಎಂದು ಡಾ. ಸುರೇಶ್ ಸುರಾನ ಸಲಹೆ ನೀಡಿದ್ದಾರೆ. ಪ್ರಸ್ತುತ ವಿವಿಧ ಬ್ಯಾಂಕ್​ಗಳು ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 7ರಿಂದ 8ರ ವರೆಗೆ ನಡ್ಡಿ ನೀಡುತ್ತಿವೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ (NPS)

ತೆರಿಗೆ ಉಳಿತಾಯ ಮಾಡುವ ನಿಟ್ಟಿನಲ್ಲಿ ದೀರ್ಘಾವಧಿಯ ಹೂಡಿಕೆಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯ ಗರಿಷ್ಠ ವಯಸ್ಸನ್ನು 65ಕ್ಕೆ ಹೆಚ್ಚಳ ಮಾಡಿರುವುದರಿಂದ 60ರಿಂದ 65 ವರ್ಷ ವಯಸ್ಸಿನವರೂ ಇದಕ್ಕೆ ಸೇರಬಹುದಾಗಿದೆ. 70 ವರ್ಷ ವಯಸ್ಸಿನ ವರೆಗೆ ಮುಂದುವರಿಸಬಹುದಾಗಿದೆ.

ಇದನ್ನೂ ಓದಿ: NPS: ಎನ್​ಪಿಎಸ್​ ಖಾತೆಯಿಂದ ಹಣ ವಾಪಸ್ ಪಡೆಯುವುದು ಹೇಗೆ? ಷರತ್ತು, ನಿಯಮಗಳ ಪೂರ್ಣ ವಿವರ ಇಲ್ಲಿದೆ

ವೈದ್ಯಕೀಯ ವಿಮೆ

ವೈದ್ಯಕೀಯ ವಿಮೆ ಹೊಂದುವ ಮೂಲಕ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಹಿರಿಯ ನಾಗರಿಕರು 50,000 ರೂ.ವರೆಗಿನ ಪ್ರೀಮಿಯಂಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಇತರ ವಯೋಮಾನದವರಿಗಾದರೆ 25,000 ರೂ. ವರೆಗಿನ ಪ್ರೀಮಿಯಂಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Tue, 13 December 22