Video: ಹಾಡಹಗಲೇ ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಿಸಿದ ಶಸ್ತ್ರಸಜ್ಜಿತ ಗುಂಪು
ಸ್ತ್ರಸಜ್ಜಿತ ಗುಂಪೊಂದು ಹಾಡಹಗಲೇ ಮನೆಗೆ ನುಗ್ಗಿ ಮಾಲೀಕನಿಗೆ ಗುಂಡು ಹಾರಿಸಿ ಹೆಂಡತಿ, ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಸ್ತೂಲ್, ರಾಡ್ಗಳನ್ನು ಹಿಡಿದು ಬಂದಿದ್ದ ಗುಂಪು, ಹರಿರಾಮ್ ಪಾಲ್ ಅವರ ಮನೆಗೆ ನುಗ್ಗಿದ್ದರು. ದಾಳಿಕೋರರು ಒಂದು ಎಸ್‌ಯುವಿ ಮತ್ತು ಹಲವು ಬೈಕ್ಗಳಲ್ಲಿ ಬಂದಿದ್ದರು.ಹರಿರಾಮ್ ಗೆ ಗುಂಡು ತಗುಲಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ನಂತರ ದಾಳಿಕೋರರು ಹರಿರಾಮ್ ಅವರ ಪತ್ನಿ ಮತ್ತು ಏಳು ಮತ್ತು ಐದು ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿದ್ದಾರೆ.
ಛತ್ತರ್ಪುರ್, ಜೂನ್ 22: ಶಸ್ತ್ರಸಜ್ಜಿತ ಗುಂಪೊಂದು ಹಾಡಹಗಲೇ ಮನೆಗೆ ನುಗ್ಗಿ ಮಾಲೀಕನಿಗೆ ಗುಂಡು ಹಾರಿಸಿ ಹೆಂಡತಿ, ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಸ್ತೂಲ್, ರಾಡ್ಗಳನ್ನು ಹಿಡಿದು ಬಂದಿದ್ದ ಗುಂಪು, ಹರಿರಾಮ್ ಪಾಲ್ ಅವರ ಮನೆಗೆ ನುಗ್ಗಿದ್ದರು. ದಾಳಿಕೋರರು ಒಂದು ಎಸ್‌ಯುವಿ ಮತ್ತು ಹಲವು ಬೈಕ್ಗಳಲ್ಲಿ ಬಂದಿದ್ದರು.ಹರಿರಾಮ್ ಗೆ ಗುಂಡು ತಗುಲಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ನಂತರ ದಾಳಿಕೋರರು ಹರಿರಾಮ್ ಅವರ ಪತ್ನಿ ಮತ್ತು ಏಳು ಮತ್ತು ಐದು ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ