IND vs ENG: ಮನವಿಗೆ ಜಗ್ಗದ ಅಂಪೈರ್ಸ್; ಜಗಳಕ್ಕೆ ಬಿದ್ದ ಟೀಂ ಇಂಡಿಯಾ ಆಟಗಾರರು
India vs England: ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಚೆಂಡಿನ ಸ್ಥಿತಿಯ ಕುರಿತು ಆಟಗಾರರು ಮತ್ತು ಅಂಪೈರ್‌ಗಳ ನಡುವೆ ವಾಗ್ವಾದ ನಡೆದಿದೆ. ರಿಷಭ್ ಪಂತ್, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಹದಗೆಟ್ಟ ಚೆಂಡನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಆದರೆ ಅಂಪೈರ್‌ಗಳು ಚೆಂಡು ನಿಯಮಗಳಿಗೆ ಅನುಸಾರವಾಗಿದೆ ಎಂದು ತಿಳಿಸಿದರು. ಅಂತಿಮವಾಗಿ 75ನೇ ಓವರ್‌ನಲ್ಲಿ ಹೊಸ ಚೆಂಡು ನೀಡಲಾಯಿತು.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಲೀಡ್ಸ್‌ನಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು, ಅಲ್ಲಿ ಉಭಯ ತಂಡಗಳ ನಡುವೆ ರೋಮಾಂಚಕಾರಿ ಪೈಪೋಟಿ ಕಂಡುಬರುತ್ತಿದೆ. ಈ ಪಂದ್ಯದ ಮೂರನೇ ದಿನದ ಮೊದಲ ಸೆಷನ್ನಲ್ಲಿ ಚೆಂಡಿನ ವಿಷಯವಾಗಿ ಟೀಂ ಇಂಡಿಯಾದ ಆಟಗಾರರು ಅಂಪೈರ್‌ಗಳ ಜೊತೆ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ವಾಸ್ತವವಾಗಿ ಚೆಂಡಿನ ಆಕಾರ ಬದಲಾಗಿದೆ ಹೀಗಾಗಿ ಚೆಂಡನ್ನು ಬದಲಿಸಬೇಕೆಂದು ಟೀಂ ಇಂಡಿಯಾ ಆಟಗಾರರು, ವಿಶೇಷವಾಗಿ ರಿಷಭ್ ಪಂತ್ (Rishabh Pant), ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ಅಂಪೈರ್‌ಗಳ ಬಳಿ ಮನವಿ ಮಾಡಿದರು. ಆದರೆ ಆಟಗಾರರ ಈ ಮನವಿಯನ್ನು ಅಂಪೈರ್‌ಗಳು ನಯವಾಗಿ ತಿರಸ್ಕರಿಸಿದರು. ಇದರಿಂದ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲೇ ಅಂಪೈರ್‌ಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಲೀಡ್ಸ್‌ನಲ್ಲಿ ಚೆಂಡಿನ ವಿಚಾರವಾಗಿ ವಾಗ್ಯುದ್ಧ
ಮೂರನೇ ದಿನದ ಮೊದಲ ಸೆಷನ್ನಲ್ಲಿ ಭಾರತ ತಂಡವು ಚೆಂಡಿನ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿತು. ಟೀಂ ಇಂಡಿಯಾದ ಪ್ರಕಾರ, ಚೆಂಡಿನ ಆಕಾರ ಹದಗೆಟ್ಟಿದ್ದು, ಇದನ್ನು ಬದಲಿಸಬೇಕು ಎಂಬ ಬೇಡಿಕೆಯಿತು. ಇಂಗ್ಲೆಂಡ್ ಇನ್ನಿಂಗ್ಸ್ನ 61 ನೇ ಓವರ್‌ನಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಚೆಂಡನ್ನು ಅಂಪೈರ್ ಬಳಿಗೆ ತೆಗೆದುಕೊಂಡು ಹೋಗಿ ಅದನ್ನು ಪರೀಕ್ಷಿಸುವಂತೆ ಒತ್ತಾಯಿಸಿದರು. ಅಂಪೈರ್ ಗೇಜ್ (ಅಳತೆ ಸಾಧನ) ಬಳಸಿ ಚೆಂಡನ್ನು ಪರಿಶೀಲಿಸಿದರು. ಚೆಂಡು ಸುಲಭವಾಗಿ ಗೇಜ್ ಮೂಲಕ ಹಾದುಹೋಯಿತು, ಅಂದರೆ ನಿಯಮಗಳ ಪ್ರಕಾರ ಚೆಂಡು ಸರಿಯಾಗಿದೆ ಎಂದು ಅರ್ಥ. ಆದರೆ ಈ ನಿರ್ಧಾರದಿಂದ ತೃಪ್ತರಾಗದ ಪಂತ್, ಕೋಪದಿಂದ ಚೆಂಡನ್ನು ನೆಲದ ಮೇಲೆ ಹೊಡೆದರು. ಇದು ಮೈದಾನದಲ್ಲಿ ಸ್ವಲ್ಪ ಉದ್ವಿಗ್ನತೆಯನ್ನು ಉಂಟುಮಾಡಿತು.
India repeatedly asked umpire Chris Gaffaney to change the ball, but he refused and gave it back to Rishabh Pant. Frustrated, Pant threw the ball away, and the Leeds crowd erupted with noise. 😯#ENGvIND #INDvENG pic.twitter.com/7syljdwOt7
— CricFollow (@CricFollow56) June 22, 2025
ಈ ವಿವಾದ ಇಲ್ಲಿಗೆ ಮುಗಿಯಲಿಲ್ಲ. ಎರಡು ಓವರ್‌ಗಳ ನಂತರ, 63 ನೇ ಓವರ್‌ನಲ್ಲಿ, ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ಚೆಂಡಿನ ಸ್ಥಿತಿಯನ್ನು ಪ್ರಶ್ನಿಸಿ ಅದನ್ನು ಬದಲಾಯಿಸುವಂತೆ ಅಂಪೈರ್‌ಗೆ ಮನವಿ ಮಾಡಿದರು. ಅಂಪೈರ್ ಮತ್ತೊಮ್ಮೆ ಗೇಜ್‌ನೊಂದಿಗೆ ಚೆಂಡನ್ನು ಪರಿಶೀಲಿಸಿದರು. ಈ ಬಾರಿಯೂ ನಿಯಮಗಳ ಪ್ರಕಾರ ಚೆಂಡು ಸರಿಯಾಗಿದೆ ಎಂದು ಕಂಡುಬಂದಿತು. ಇದರಿಂದಾಗಿ ಅಂಪೈರ್ ಚೆಂಡನ್ನು ಬದಲಾಯಿಸಲು ನಿರಾಕರಿಸಿದರು. ಅಂಪೈರ್ ಅವರ ಈ ನಿರ್ಧಾರ ಟೀಂ ಇಂಡಿಯಾ ಆಟಗಾರರು ನಿರಾಶೆಗೊಳ್ಳುವಂತೆ ಮಾಡಿತು. ಈ ಸಮಯದಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಅಂಪೈರ್ ಜೊತೆ ಮಾತನಾಡುತ್ತಿರುವುದು ಕಂಡುಬಂದಿತು, ಆದರೆ ಅಂಪೈರ್ ಮಾತ್ರ ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ.
IND vs ENG: ‘ನನ್ನ ನ್ಯೂನತೆಗಳನ್ನು’; ಗವಾಸ್ಕರ್ ಹೊಗಳಿಕೆಯ ಮಾತಿನ ಬಗ್ಗೆ ರಿಷಬ್ ಪಂತ್ ಹೇಳಿದ್ದೇನು?
75ನೇ ಓವರ್‌ನಲ್ಲಿ ಎರಡನೇ ಚೆಂಡು
ಆದಾಗ್ಯೂ, ಕೆಲವು ಓವರ್‌ಗಳ ನಂತರ, ಟೀಂ ಇಂಡಿಯಾ ಆಟಗಾರರ ಬೇಡಿಕೆಯಂತೆ ಹೊಸ ಚೆಂಡನ್ನು ನೀಡಲಾಯಿತು. ಚೆಂಡಿನ ಸ್ಥಿತಿ ತುಂಬಾ ಕೆಟ್ಟದಾಗಿದ್ದರಿಂದ, 74 ನೇ ಓವರ್‌ನ ನಂತರ ಅಂಪೈರ್ ಚೆಂಡನ್ನು ಬದಲಾಯಿಸಲು ನಿರ್ಧರಿಸಿದರು. ವಾಸ್ತವವಾಗಿ ಟೆಸ್ಟ್‌ನಲ್ಲಿ, ಪ್ರತಿ ತಂಡಕ್ಕೆ 80 ಓವರ್‌ಗಳನ್ನು ಬೌಲ್ ಮಾಡಿದ ನಂತರ ಹೊಸ ಚೆಂಡನ್ನು ನೀಡಲಾಗುತ್ತದೆ. ಆದಾಗ್ಯೂ ಅಂಪೈರ್‌ಗಳು ಚೆಂಡಿನ ಸ್ಥಿತಿ ತುಂಬಾ ಕೆಟ್ಟದಾಗಿದ್ದರಿಂದ 6 ಓವರ್‌ಗಳ ಮೊದಲೇ ಟೀಂ ಇಂಡಿಯಾಕ್ಕೆ ಹೊಸ ಚೆಂಡನ್ನು ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Sun, 22 June 25
