IND vs ENG: ಸೊನ್ನೆಗೆ ಜೀವದಾನ ನೀಡಿ 99 ರನ್ಗಳ ದಂಡ ಕಟ್ಟಿದ ಟೀಂ ಇಂಡಿಯಾ
India's Fielding Blunders: ಲೀಡ್ಸ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಮಾಡಿದ ತಪ್ಪುಗಳಿಂದ ಹ್ಯಾರಿ ಬ್ರೂಕ್ 99 ರನ್ ಗಳಿಸಿದರು. 3 ಜೀವದಾನಗಳನ್ನು ಪಡೆದ ಬ್ರೂಕ್ ಕೊನೆಯದಾಗಿ ಪ್ರಸಿದ್ಧ್ ಕೃಷ್ಣ ಅವರ ಎಸೆತದಲ್ಲಿ ಔಟ್ ಆದರು. ಭಾರತದ ಕ್ಷೇತ್ರರಕ್ಷಣೆಯ ವೈಫಲ್ಯದಿಂದ ಇಂಗ್ಲೆಂಡ್‌ಗೆ ಭಾರಿ ಪ್ರಯೋಜನವಾಯಿತು.

ಲೀಡ್ಸ್ ಟೆಸ್ಟ್‌ನ ಮೂರನೇ ದಿನದಂದು ಭಾರತೀಯ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಮಾಡಿದ ತಪ್ಪುಗಳ ಸಂಪೂರ್ಣ ಲಾಭವನ್ನು ಇಂಗ್ಲೆಂಡ್‌ನ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ (Harry Brook) ಬಳಸಿಕೊಂಡರಾದರೂ ಶತಕದಂಚಿನಲ್ಲಿ ಎಡವಿದರು. ಆದಾಗ್ಯೂ ಟೀಂ ಇಂಡಿಯಾ (Team India) ತಾನು ಮಾಡಿದ ತಪ್ಪಿಗೆ ಬರೋಬ್ಬರಿ 99 ರನ್ಗಳ ದಂಡ ಕಟ್ಟಿದೆ. ಸೊನ್ನೆಗೆ ಕ್ಯಾಚ್ ನೀಡಿದ್ದ ಬ್ರೂಕ್ಸ್ಗೆ ಒಂದೇ ಇನ್ನಿಂಗ್ಸ್ನಲ್ಲಿ ಒಂದಲ್ಲ, ಎರಡಲ್ಲ, 3 ಜೀವದಾನಗಳು ಸಿಕ್ಕವು. ಇದರ ಸಂಪೂರ್ಣ ಲಾಭ ಇಂಗ್ಲೆಂಡ್ ತಂಡಕ್ಕಾದರೆ, ಟೀಂ ಇಂಡಿಯಾಕ್ಕೆ ಭಾರಿ ಹೊಡೆತ ಬಿದ್ದಿತು. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಸ್ಟೋಕ್ಸ್ಗೆ ಹಲವು ಬಾರಿ ಅದೃಷ್ಟ ಕೈ ಹಿಡಿದರೂ ಅವರು ತಮ್ಮ ಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
99 ರನ್‌ಗಳಿಗೆ ಹ್ಯಾರಿ ಬ್ರೂಕ್ ಔಟ್
ವಾಸ್ತವವಾಗಿ ಹ್ಯಾರಿ ಬ್ರೂಕ್ಸ್ ಖಾತೆ ತೆರೆಯುವುದಕ್ಕೂ ಮುನ್ನವೇ ಬುಮ್ರಾ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ಗೆ ಕ್ಯಾಚ್ ನೀಡಿದ್ದರು. ಆದರೆ ಬುಮ್ರಾ ಎಸೆದ ಆ ಚೆಂಡು ನೋ ಬಾಲ್ ಆಗಿದ್ದ ಬ್ರೂಕ್ ಅವರಿಗೆ ಮೊದಲ ಜೀವದಾನ ದೊರೆಯಿತು. ಹ್ಯಾರಿ ಬ್ರೂಕ್ ಇದರ ಸಂಪೂರ್ಣ ಲಾಭವನ್ನು ಬಳಸಿಕೊಂಡರು. ಇದರ ನಂತರವೂ ಬ್ರೂಕ್ 46 ರನ್‌ಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಜಡೇಜಾ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಕ್ಯಾಚ್ ನೀಡಿದ್ದರು. ಆದರೆ ಇಲ್ಲೂ ಅದೃಷ್ಟ ಬ್ರೂಕ್ ಕೈ ಹಿಡಿಯಿತು. ಸುಲಭವಾದ ಕ್ಯಾಚ್ ಅನ್ನು ಪಂತ್ ಕೈಬಿಟ್ಟರು.
ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್
ಇದಾದ ನಂತರೂ ಭಾರತ ಫೀಲ್ಡರ್‌ಗಳು ಎಚ್ಚೆತ್ತುಕೊಳ್ಳುವಲ್ಲಿ ವಿಫಲರಾದರು. ಬ್ರೂಕ್ 82 ರನ್ ಗಳಿಸಿ ಆಡುತ್ತಿದ್ದಾಗ ಮತ್ತೊಮ್ಮೆ ಬುಮ್ರಾ ಬೌಲಿಂಗ್ನಲ್ಲಿ ಗಲ್ಲಿಯಲ್ಲಿ ನಿಂತಿದ್ದ ಯಶಸ್ವಿ ಜೈಸ್ವಾಲ್ ಅವರಿಗೆ ಕ್ಯಾಚ್ ನೀಡಿದ್ದರು. ಆದರೆ ಜೈಸ್ವಾಲ್ ಮತ್ತೊಮ್ಮೆ ಕ್ಯಾಚ್ ತೆಗೆದುಕೊಳ್ಳುವಲ್ಲಿ ವಿಫಲರಾದರು. ಈ ಮೂರನೇ ಲೈಫ್ಲೈನ್ನ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಬ್ರೂಕ್, ತಮ್ಮ ಇನ್ನಿಂಗ್ಸ್ ಅನ್ನು ನಿಭಾಯಿಸಿದ್ದಲ್ಲದೆ 99 ರನ್ ಬಾರಿಸಿದರು. ಆದರೆ ನಾಲ್ಕನೇ ಬಾರಿಗೆ ಅದೃಷ್ಟ ಬ್ರೂಕ್ ಪರ ವಾಲಲಿಲ್ಲ. ಅಂತಿಮವಾಗಿ ಬ್ರೂಕ್ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಶಾರ್ದೂಲ್ ಠಾಕೂರ್ಗೆ ಕ್ಯಾಚಿತ್ತು ಕೇವಲ 1 ರನ್ನಿಂದ ಶತಕ ವಂಚಿರಾದರು. ಅಂತಿಮವಾಗಿ ಬ್ರೂಕ್ ಒಟ್ಟು 112 ಎಸೆತಗಳನ್ನು ಎದುರಿಸಿ ತಮ್ಮ ಇನ್ನಿಂಗ್ಸ್ನಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳ ನ್ನು ಬಾರಿಸಿದರು.
IND vs ENG: ಶತಕದ ಬಳಿಕ ಲೀಡ್ಸ್‌ನಲ್ಲಿ ಮತ್ತೊಂದು ದಾಖಲೆ ಬರೆದ ರಿಷಭ್ ಪಂತ್
ಪ್ರಸಿದ್ಧ್ ಕೃಷ್ಣಗೆ ಮೂರು ವಿಕೆಟ್
ಲೀಡ್ಸ್ ಟೆಸ್ಟ್‌ನ ಮೂರನೇ ದಿನ ಪ್ರಸಿದ್ಧ್ ಕೃಷ್ಣ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಎರಡನೇ ದಿನದಾಟದಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗದ ಪ್ರಸಿದ್ಧ್ ಮೂರನೇ ದಿನ ಒಬ್ಬರ ನಂತರ ಒಬ್ಬರಂತೆ ಮೂರು ಬ್ಯಾಟ್ಸ್‌ಮನ್‌ಗಳನ್ನು ಬಲಿ ತೆಗೆದುಕೊಂಡರು. ಮೊದಲಿಗೆ ಪ್ರಸಿದ್ಧ್, ಶತಕ ಬಾರಿಸಿದ್ದ ಓಲಿ ಪೋಪ್ ಅವರನ್ನು ಔಟ್ ಮಾಡಿದರೆ, ನಂತರ ಜೇಮೀ ಸ್ಮಿತ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
