NPS: ಎನ್​ಪಿಎಸ್​ ಖಾತೆಯಿಂದ ಹಣ ವಾಪಸ್ ಪಡೆಯುವುದು ಹೇಗೆ? ಷರತ್ತು, ನಿಯಮಗಳ ಪೂರ್ಣ ವಿವರ ಇಲ್ಲಿದೆ

ಎನ್​​​ಪಿಎಸ್​ನಿಂದ ಹಣ ವಾಪಸ್ ಪಡೆಯಬೇಕಾದ ಸಂದರ್ಭದ ಬಂದರೆ ಅದಕ್ಕೆ ಕೆಲವು ನಿಯಮಗಳು ಹಾಗೂ ಷರತ್ತುಗಳಿವೆ. ಅವುಗಳ ಪೂರ್ಣ ವಿವರ ಇಲ್ಲಿದೆ.

NPS: ಎನ್​ಪಿಎಸ್​ ಖಾತೆಯಿಂದ ಹಣ ವಾಪಸ್ ಪಡೆಯುವುದು ಹೇಗೆ? ಷರತ್ತು, ನಿಯಮಗಳ ಪೂರ್ಣ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Dec 08, 2022 | 1:20 PM

ತೆರಿಗೆ ಉಳಿತಾಯ (Tax Saving) ಮಾಡುವ ನಿಟ್ಟಿನಲ್ಲಿ ದೀರ್ಘಾವಧಿಯ ಹೂಡಿಕೆಗೆ (Long Term Investment) ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಉತ್ತಮ ಆಯ್ಕೆಯಾಗಿದೆ. ಎನ್​ಪಿಎಸ್​ ಪಿಂಚಣಿಗೆ ಸಂಬಂಧಿಸಿದ ಹೂಡಿಕೆ ಯೋಜನೆ. ಈ ಯೋಜನೆಗೆ ಷೇರುಪೇಟೆ ಜತೆಗೂ ಸಂಬಂಧ ಇದೆ. ಈ ಹೂಡಿಕೆಯಿಂದ ದೊರೆಯುವ ಆದಾಯ ಷೇರುಪೇಟೆ ವಹಿವಾಟನ್ನೂ ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸಬೇಕು. ಖಾಸಗಿ ವಲಯದ ಉದ್ಯೋಗಿಗಳಿಗೆ ಪಿಂಚಣಿ ಪಡೆಯಲು ಇದೊಂದು ಉತ್ತಮ ಆಯ್ಕೆ ಆಗಿದೆ.

ಆದರೆ ಎನ್​​ಪಿಎಸ್​ನಿಂದ ಹಣ ವಾಪಸ್ ಪಡೆಯಬೇಕಾದ ಸಂದರ್ಭದ ಬಂದರೆ ಅದಕ್ಕೆ ಕೆಲವು ನಿಯಮಗಳು ಹಾಗೂ ಷರತ್ತುಗಳಿವೆ ಎಂಬುದನ್ನು ಗಮನಿಸಬೇಕು. ಎನ್​ಪಿಎಸ್​ನಲ್ಲಿ ಹೂಡಿಕೆ ಆರಂಭಿಸಿ 5 ವರ್ಷ ಆಗುವ ಮುನ್ನ ಹಣ ಹಿಂಪಡೆಯಲಾಗದು. ಒಂದು ವೇಳೆ ಹಿಂಪಡೆಯಲೇಬೇಕು ಎಂದಿದ್ದಲ್ಲಿ ಭಾಗಶಃ ಮೊತ್ತವನ್ನು ಮಾತ್ರ ವಿತ್​ಡ್ರಾ ಮಾಡಬಹುದು. ನಿರ್ದಿಷ್ಟ ಮೊತ್ತಕ್ಕಿಂತ ಕಡಿಮೆ ಇದ್ದರೆ ಮಾತ್ರ ಪೂರ್ತಿ ವಿತ್​ಡ್ರಾ ಮಾಡಬಹುದಾಗಿದೆ.

ಅವಧಿಪೂರ್ವ ಹಿಂಪಡೆತಕ್ಕೆ ಇರುವ ನಿಯಮಗಳೇನು?

ಎನ್​ಪಿಎಸ್​ನಲ್ಲಿ 2.5 ಲಕ್ಷ ರೂ.ಗಿಂತ ಕಡಿಮೆ ಹಣ ಇದ್ದರೆ, ಯಾವುದೇ ಕಡಿತವಿಲ್ಲದೇ ಪೂರ್ತಿ ಹಣ ವಾಪಸ್ ದೊರೆಯಲಿದೆ. ಒಂದು ವೇಳೆ, ಎನ್​ಪಿಎಸ್​ ಖಾತೆಯಲ್ಲಿ 2.5 ಲಕ್ಷ ರೂ.ಗಿಂತಲೂ ಹೆಚ್ಚು ಹಣ ಇದ್ದು, ಅವಧಿಗೆ ಮುಂಚೆ ವಾಪಸ್ ಪಡೆಯುತ್ತೇವೆ ಎಂದಾದರೆ ಆಗ 80-20ರ ನಿಯಮ ಜಾರಿ ಆಗತ್ತೆ. ಅಂದ್ರೆ ಒಟ್ಟು ಠೇವಣಿಯ ಕೇವಲ ಶೇ 20ರಷ್ಟನ್ನು ಮಾತ್ರ ಇಡುಗಂಟಾಗಿ ಪಡೆಯಬಹುದಾಗಿದೆ. ಉಳಿದ ಶೇಕಡಾ 80ರಷ್ಟು ಮೊತ್ತಕ್ಕೆ ಆನ್ಯುಯಿಟಿ ಪ್ಲಾನ್, ಅಂದರೆ ವರ್ಷಾಶನ ಯೋಜನೆಯನ್ನು ಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: Repo Rate Hike: ರೆಪೊ ದರ ಹೆಚ್ಚಳದ ಬಳಿಕ ಎಷ್ಟು ದುಬಾರಿಯಾಗಲಿದೆ ಗೃಹ ಸಾಲದ ಇಎಂಐ? ಇಲ್ಲಿದೆ ಲೆಕ್ಕಾಚಾರ

ಆಂಶಿಕ (ಒಂದು ಭಾಗದ) ಹಿಂಪಡೆತ ಯಾವಾಗ ಸಹಾಯಕ?

ನಿವೃತ್ತಿಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಎನ್​ಪಿಎಸ್ ಯೋಜನೆ ಜಾರಿಗೊಳಿಸಲಾಗಿದೆ. ಇದರಲ್ಲಿ ಹೂಡಿಕೆದಾರರು ನಿವೃತ್ತಿಯ ವಯಸ್ಸನ್ನು ತಲುಪಿದಾಗ ಪಿಂಚಣಿ ದೊರೆಯಲು ಆರಂಭವಾಗುತ್ತದೆ. ಎನ್​ಪಿಎಸ್​ನಲ್ಲಿ ನಿವೃತ್ತಿಯ ವಯಸ್ಸು 60 ವರ್ಷಗಳು. ಆದರೆ, ಕೆಲವೊಮ್ಮೆ ನಿವೃತ್ತಿಗೂ ಮುಂಚೆಯೇ ಹಣದ ಅವಶ್ಯಕತೆ ಬರಬಹುದು. ಆದ್ದರಿಂದ, ಎನ್​ಪಿಎಸ್​ನಲ್ಲಿ ಹೂಡಿಕೆದಾರರಿಗೆ ಠೇವಣಿ ಮೊತ್ತದ ಒಂದು ಭಾಗವನ್ನು ಹಿಂಪಡೆಯುವ ಆಯ್ಕೆಯನ್ನು ನೀಡಲಾಗಿದೆ. ಇದಕ್ಕೆ, ಎನ್​ಪಿಎಸ್​ ಖಾತೆಗೆ ಕನಿಷ್ಠ 3 ವರ್ಷವಾದರೂ ಆಗಿರಬೇಕು. ಖಾತೆಗೆ 3 ವರ್ಷ ಆದ ನಂತರ, ಒಟ್ಟು ಠೇವಣಿಯ ಶೇಕಡಾ 25ರಷ್ಟು ಮೊತ್ತವನ್ನು ಹಿಂಪಡೆಯಬಹುದು. ಎನ್​ಪಿಎಸ್​ನ ಸಂಪೂರ್ಣ ಅವಧಿಯಲ್ಲಿ, ಠೇವಣಿ ಇಟ್ಟ ಹಣದ ಭಾಗಶಃ ಮೊತ್ತವನ್ನು ಗರಿಷ್ಠ 3 ಬಾರಿ ಹಿಂಪಡೆಯಬಹುದು.

ಭಾಗಶಃ ಮೊತ್ತವನ್ನು ಯಾವಾಗ ಹಿಂಪಡೆಯಬಹುದು?

ಎನ್​ಪಿಎಸ್ ಠೇವಣಿಯ ಭಾಗಶಃ ಮೊತ್ತವನ್ನು ಹಿಂಪಡೆಯಬಹುದಾದ ವಿಶೇಷ ಪರಿಸ್ಥಿತಿಗಳು ಹೀಗಿವೆ;

  • ಮಕ್ಕಳ ಉನ್ನತ ಶಿಕ್ಷಣಕ್ಕೆ
  • 2. ಮಕ್ಕಳ ವಿವಾಹಕ್ಕೆ
  • 3. ಸ್ವಂತ ಮನೆ ನಿರ್ಮಾಣಕ್ಕೆ ಅಥವಾ ಫ್ಲ್ಯಾಟ್ ಕೊಳ್ಳಲು
  • 4. ಗಂಭೀರ ಕಾಯಿಲೆಗಳ ಚಿಕಿತ್ಸೆಗೆ
  • 5. ಅಪಘಾತಗಳ ಸಂದರ್ಭಗಳಲ್ಲಿ
  • 6. ಅಧ್ಯಯನ ಅಥವಾ ಉದ್ಯೋಗ/ವ್ಯವಹಾರಗಳಿಗೆ

ಅವಧಿಪೂರ್ವ ಹಿಂಪಡೆತ ಆದರೂ ಆಂಶಿಕ ಹಿಂಪಡೆತವಾದರೂ ಹೂಡಿಕೆದಾರನು ಒಂದು ರದ್ದುಪಡಿಸಿದ (ಕ್ಯಾನ್ಸೆಲ್ಡ್) ಚೆಕ್ ನೀಡಬೇಕಾಗುತ್ತದೆ. ಇದರೊಂದಿಗೆ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ (ಪಿಆರ್​ಎಎನ್ಐಡಿ), ಕ್ಲೇಮ್ ಫಾರ್ಮ್, ಹಾಗೂ ಕೆವೈಸಿ ದೃಢೀಕರಣದ ದಾಖಲೆಗಳನ್ನೂ ಸಹ ಒದಗಿಸಬೇಕಾಗುತ್ತದೆ.

ಇದನ್ನೂ ಓದಿ: 15 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು 9,250 ರೂ. ಗಳಿಸಿ; ಹಿರಿಯ ನಾಗರಿಕರಿಗೆ ಆಫರ್

ಅವಧಿಪೂರ್ವ ಹಿಂಪಡೆಯುವಿಕೆ ಒಳ್ಳೆಯದೇ?

ಇದೊಂದು ನಿವೃತ್ತಿಯ ಯೋಜನೆ ಆದ್ದರಿಂದ ಸಾಧ್ಯವಾದಷ್ಟೂ ಅವಧಿಗೆ ಮುಂಚೆ ಇದರಿಂದ ಹೊರಬರುವ ಪ್ರಯತ್ನ ಮಾಡಬೇಡಿ. ಆಪತ್ಕಾಲದಲ್ಲಿ ಮಾತ್ರ ಇದನ್ನು ಬಳಸಿಕೊಳ್ಳಿ. ಸಾಧ್ಯವಾದರೆ, ಪ್ರತೀ ವರ್ಷವೂ ಒಂದು ಕನಿಷ್ಠ ಮೊತ್ತವನ್ನು ಜಮೆ ಮಾಡಿ ನಿಮ್ಮ ಖಾತೆಯನ್ನು ಚಾಲನೆಯಲ್ಲಿಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

(ಮಾಹಿತಿ – ಮನಿ9)

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?