AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​ಡಿಎಫ್​ಸಿ, ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಕನಿಷ್ಠ ಬಡ್ಡಿ ದರ ಹೆಚ್ಚಳ; ಇಲ್ಲಿದೆ ಪೂರ್ತಿ ವಿವರ

ಇಂಡಿಯನ್ ಓವರ್​ಸೀಸ್ ಬ್ಯಾಂಕ್​ ಎಂಸಿಎಲ್​ಆರ್ 15ರಿಂದ 35 ಮೂಲಾಂಶದಷ್ಟು ಹೆಚ್ಚಾದರೆ, ಎಚ್​ಡಿಎಫ್​ಸಿ ಬ್ಯಾಂಕ್ ಎಂಸಿಎಲ್​ಆರ್ 10 ಮೂಲಾಂಶದಷ್ಟು ಹೆಚ್ಚಳವಾಗಿದೆ. ಪರಿಣಾಮವಾಗಿ ಗೃಹ, ವಾಹನ ಸೇರಿದಂತೆ ವಿವಿಧ ಸಾಲಗಳ ಇಎಂಐ ಹೆಚ್ಚಾಗಲಿದೆ.

ಎಚ್​ಡಿಎಫ್​ಸಿ, ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಕನಿಷ್ಠ ಬಡ್ಡಿ ದರ ಹೆಚ್ಚಳ; ಇಲ್ಲಿದೆ ಪೂರ್ತಿ ವಿವರ
ಸಾಂದರ್ಭಿಕ ಚಿತ್ರImage Credit source: PTI
TV9 Web
| Edited By: |

Updated on: Dec 08, 2022 | 11:20 AM

Share

ನವದೆಹಲಿ: ಆರ್​ಬಿಐ ರೆಪೊ ದರ ಹೆಚ್ಚಳ (Repo Rate Hike) ಮಾಡಿದ ಬೆನ್ನಲ್ಲೇ ಎಚ್​ಡಿಎಫ್​ಸಿ ಬ್ಯಾಂಕ್ (HDFC Bank) ಹಾಗೂ ಇಂಡಿಯನ್ ಓವರ್​ಸೀಸ್ ಬ್ಯಾಂಕ್​ಗಳು (IOB) ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು (MCLR) ಹೆಚ್ಚಿಸಿವೆ. ಇಂಡಿಯನ್ ಓವರ್​ಸೀಸ್ ಬ್ಯಾಂಕ್​ ಎಂಸಿಎಲ್​ಆರ್ 15ರಿಂದ 35 ಮೂಲಾಂಶದಷ್ಟು ಹೆಚ್ಚಾದರೆ, ಎಚ್​ಡಿಎಫ್​ಸಿ ಬ್ಯಾಂಕ್ ಎಂಸಿಎಲ್​ಆರ್ 10 ಮೂಲಾಂಶದಷ್ಟು ಹೆಚ್ಚಳವಾಗಿದೆ. ಪರಿಣಾಮವಾಗಿ ಗೃಹ, ವಾಹನ ಸೇರಿದಂತೆ ವಿವಿಧ ಸಾಲಗಳ ಇಎಂಐ ಹೆಚ್ಚಾಗಲಿದೆ. ಆರ್​ಬಿಐ ಬುಧವಾರ ರೆಪೊ ದರವನ್ನು 35 ಮೂಲಾಂಶದಷ್ಟು ಹೆಚ್ಚಳ ಮಾಡಿತ್ತು.

ಐಒಬಿ ಬಡ್ಡಿ ದರ ಹೆಚ್ಚಳ ವಿವರ

ಒಂದು ವರ್ಷ ಅವಧಿಯ ಕನಿಷ್ಠ ಬಡ್ಡಿ ದರವನ್ನು ಐಒಬಿ ಶೇಕಡಾ 8.05ರಿಂದ 8.25ಕ್ಕೆ ಹೆಚ್ಚಿಸಿದೆ. 2 ವರ್ಷ ಅವಧಿಯ ಎಂಸಿಎಲ್​ಆರ್​ ಅನ್ನು ಶೇಕಡಾ 8.10ರಿಂದ 8.35ಕ್ಕೆ ಹೆಚ್ಚಿಸಿದೆ. ಮೂರು ವರ್ಷ ಅವಧಿಯ ಎಂಸಿಎಲ್​ಆರ್​ ಅನ್ನು ಶೇಕಡಾ 8.10ರಿಂದ 8.40ಕ್ಕೆ ಹೆಚ್ಚಳ ಮಾಡಿದೆ. ಡಿಸೆಂಬರ್ 10ರಿಂದ ಪರಿಷ್ಕೃತ ಬಡ್ಡಿ ದರ ಅನ್ವಯವಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ: Repo Rate Hike: ರೆಪೊ ದರ ಹೆಚ್ಚಳದ ಬಳಿಕ ಎಷ್ಟು ದುಬಾರಿಯಾಗಲಿದೆ ಗೃಹ ಸಾಲದ ಇಎಂಐ? ಇಲ್ಲಿದೆ ಲೆಕ್ಕಾಚಾರ

ಅಲ್ಪಾವಧಿಯ ಎಂಸಿಎಲ್​ಆರ್​ ಅನ್ನು 20 ಮೂಲಾಂಶದಷ್ಟು ಹೆಚ್ಚಳ ಮಾಡಲಾಗಿದೆ. ಆರು ತಿಂಗಳ ಅವಧಿಯ ಎಂಸಿಎಲ್​ಆರ್ ಅನ್ನು ಶೇಕಡಾ 7.95ರಿಂದ 8.15ಕ್ಕೆ, ಮೂರು ತಿಂಗಳ ಎಂಸಿಎಲ್​ಆರ್ ಅನ್ನು 15 ಮೂಲಾಂಶ ಹೆಚ್ಚಿಸಲಾಗಿದ್ದು, ಶೇಕಡಾ 7.85ರಿಂದ 8ಕ್ಕೆ ನಿಗದಿ ಮಾಡಲಾಗಿದೆ. ಒಂದು ತಿಂಗಳ ಅವಧಿಯ ಎಂಸಿಎಲ್​ಆರ್ ಅನ್ನು ಶೇಕಡಾ 7.70ರಿಂದ 7.50ಕ್ಕೆ ಹೆಚ್ಚಿಸಲಾಗಿದೆ.

ಆರ್​ಎಲ್​ಎಲ್​ಆರ್ ಹೆಚ್ಚಳ: ರೆಪೊ ದರ ಸಂಯೋಜಿತ ಸಾಲದ ದರವನ್ನೂ ಐಒಬಿ ಹೆಚ್ಚಳ ಮಾಡಿದೆ. ಡಿಸೆಂಬರ್ 10ರಿಂದ ಅನ್ವಯವಾಗುವಂತೆ ಆರ್​ಎಲ್​ಎಲ್​ಆರ್ ಅನ್ನು ಶೇಕಡಾ 9.107ಕ್ಕೆ ಹೆಚ್ಚಿಸಲಾಗಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ಬಡ್ಡಿ ದರ ಹೆಚ್ಚಳ ವಿವರ

ಎಚ್​ಡಿಎಫ್​ಸಿ ಬ್ಯಾಂಕ್ ಎಂಸಿಎಲ್​ಆರ್ 10 ಮೂಲಾಂಶ ಹೆಚ್ಚಳವಾಗಿದೆ. ಒಂದು ದಿನದ ಅವಧಿಯ ಎಂಸಿಎಲ್​ಆರ್ ಶೇಕಡಾ 8.20ರಿಂದ 8.30ಕ್ಕೆ ಹೆಚ್ಚಳವಾಗಿದೆ. ಒಂದು ತಿಂಗಳ ಅವಧಿಯದ್ದನ್ನು ಶೇಕಡಾ 8.25ರಿಂದ 8.30ಕ್ಕೆ ಹೆಚ್ಚಿಸಲಾಗಿದೆ. ಮೂರು ತಿಂಗಳಿನಿಂದ ಆರು ತಿಂಗಳ ಅವಧಿಯ ಎಂಸಿಎಲ್​ಆರ್ ಶೇಕಡಾ 8.35ರಿಂದ 8.45ಕ್ಕೆ ಹೆಚ್ಚಳವಾಗಿದೆ.

ಇದನ್ನೂ ಓದಿ: Karur Vysya Bank: ಕನಿಷ್ಠ ಬಡ್ಡಿ ದರ ಹೆಚ್ಚಿಸಿದ ಕರೂರ್ ವೈಶ್ಯ ಬ್ಯಾಂಕ್; ಇಎಂಐ ಇನ್ನು ದುಬಾರಿ

ಒಂದು ವರ್ಷದ ಎಂಸಿಎಲ್​ಆರ್ ಶೇಕಡಾ 8.60ಕ್ಕೆ ಹೆಚ್ಚಳವಾಗಿದೆ. ಎರಡು ವರ್ಷ ಅವಧಿಯ ಎಂಸಿಎಲ್​ಆರ್ ಶೇಕಡಾ 8.70ಕ್ಕೆ, ಮೂರು ವರ್ಷದ್ದನ್ನು ಶೇಕಡಾ 8.80ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಎಂಸಿಎಲ್​ಆರ್ ಎಂದರೆ ಸಾಲದ ಮೇಲೆ ಬ್ಯಾಂಕ್ ವಿಧಿಸುವ ಕನಿಷ್ಠ ಬಡ್ಡಿ ದರವಾಗಿದೆ. ಇದಕ್ಕಿಂತ ಕಡಿಮೆ ಬಡ್ಡಿಗೆ ಬ್ಯಾಂಕ್ ಸಾಲ ನೀಡುವುದಿಲ್ಲ.

ಬುಧವಾರವೇ ಬಡ್ಡಿ ದರ ಹೆಚ್ಚಿಸಿದ್ದ ಕರೂರ್ ವೈಶ್ಯ ಬ್ಯಾಂಕ್

ಕರೂರ್ ವೈಶ್ಯ ಬ್ಯಾಂಕ್ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು ಬುಧವಾರವೇ 25 ಮೂಲಾಂಶದಷ್ಟು ಹೆಚ್ಚಳ ಮಾಡಿತ್ತು. ಬ್ಯಾಂಕ್​ನ ಒಂದು ವರ್ಷ ಅವಧಿಯ ಎಂಸಿಎಲ್​ಆರ್ ಶೇಕಡಾ 8.80ರಿಂದ ಶೇಕಡಾ 9.05ಕ್ಕೆ ಹೆಚ್ಚಳಗೊಂಡಿದೆ. ಆರು ತಿಂಗಳ ಎಂಸಿಎಲ್​ಆರ್ ಶೇಕಡಾ 8.70 ರಿಂದ ಶೇಕಡಾ 8.95ಕ್ಕೆ ಏರಿಕೆಯಾಗಿದೆ. ಮೂರು ತಿಂಗಳ ಎಂಸಿಎಲ್​ಆರ್ ಶೇಕಡಾ 8.35ರಿಂದ ಶೇಕಡಾ 8.60ಕ್ಕೆ ಹೆಚ್ಚಳವಾಗಿದೆ. ಒಂದು ತಿಂಗಳ ಎಂಸಿಎಲ್​ಆರ್ ಶೇಕಡಾ 8.20ರಿಂದ 8.45ಕ್ಕೆ ಏರಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು