Karur Vysya Bank: ಕನಿಷ್ಠ ಬಡ್ಡಿ ದರ ಹೆಚ್ಚಿಸಿದ ಕರೂರ್ ವೈಶ್ಯ ಬ್ಯಾಂಕ್; ಇಎಂಐ ಇನ್ನು ದುಬಾರಿ

ಒಂದು ವರ್ಷ ಅವಧಿಯ ಎಂಸಿಎಲ್​ಆರ್ ಶೇಕಡಾ 8.80ರಿಂದ ಶೇಕಡಾ 9.05ಕ್ಕೆ ಹೆಚ್ಚಳಗೊಂಡಿದೆ. ಆರು ತಿಂಗಳ ಎಂಸಿಎಲ್​ಆರ್ ಶೇಕಡಾ 8.70 ರಿಂದ ಶೇಕಡಾ 8.95ಕ್ಕೆ ಏರಿಕೆಯಾಗಿದೆ.

Karur Vysya Bank: ಕನಿಷ್ಠ ಬಡ್ಡಿ ದರ ಹೆಚ್ಚಿಸಿದ ಕರೂರ್ ವೈಶ್ಯ ಬ್ಯಾಂಕ್; ಇಎಂಐ ಇನ್ನು ದುಬಾರಿ
ಕರೂರ್ ವೈಶ್ಯ ಬ್ಯಾಂಕ್ Image Credit source: PTI
Follow us
TV9 Web
| Updated By: Ganapathi Sharma

Updated on: Dec 07, 2022 | 12:27 PM

ಬೆಂಗಳೂರು: ಕರೂರ್ ವೈಶ್ಯ ಬ್ಯಾಂಕ್ (Karur Vysya Bank) ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು (MCLR) 25 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ (ಡಿಸೆಂಬರ್ 7) ಜಾರಿಗೆ ಬರಲಿದೆ. ಎಂಸಿಎಲ್​ಆರ್ ಹೆಚ್ಚಳದೊಂದಿಗೆ ಸಾಲ ಪಡೆದವರ ಇಎಂಐ ಮೊತ್ತ ಹೆಚ್ಚಳವಾಗಲಿದೆ. ಆರ್​ಬಿಐ ರೆಪೊ ದರ ಹೆಚ್ಚಳ (Repo Rate Hike) ಮಾಡಿದ ಬೆನ್ನಲ್ಲೇ ಕರೂರ್ ವೈಶ್ಯ ಬ್ಯಾಂಕ್ ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಹೆಚ್ಚಿಸಿದೆ.

ಒಂದು ವರ್ಷ ಅವಧಿಯ ಎಂಸಿಎಲ್​ಆರ್ ಶೇಕಡಾ 8.80ರಿಂದ ಶೇಕಡಾ 9.05ಕ್ಕೆ ಹೆಚ್ಚಳಗೊಂಡಿದೆ. ಆರು ತಿಂಗಳ ಎಂಸಿಎಲ್​ಆರ್ ಶೇಕಡಾ 8.70 ರಿಂದ ಶೇಕಡಾ 8.95ಕ್ಕೆ ಏರಿಕೆಯಾಗಿದೆ. ಮೂರು ತಿಂಗಳ ಎಂಸಿಎಲ್​ಆರ್ ಶೇಕಡಾ 8.35ರಿಂದ ಶೇಕಡಾ 8.60ಕ್ಕೆ ಹೆಚ್ಚಳವಾಗಿದೆ. ಒಂದು ತಿಂಗಳ ಎಂಸಿಎಲ್​ಆರ್ ಶೇಕಡಾ 8.20ರಿಂದ 8.45ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: RBI Repo Rate Hike: ಆರ್​ಬಿಐ ರೆಪೊ ದರ 35 ಮೂಲಾಂಶ ಹೆಚ್ಚಳ; ದುಬಾರಿಯಾಗಲಿದೆ ವಾಹನ, ಗೃಹ ಸಾಲದ ಇಎಂಐ

ಎಂಸಿಎಲ್​ಆರ್ ಎಂದರೆ ಸಾಲದ ಮೇಲೆ ಬ್ಯಾಂಕ್ ವಿಧಿಸುವ ಕನಿಷ್ಠ ಬಡ್ಡಿ ದರವಾಗಿದೆ. ಇದಕ್ಕಿಂತ ಕಡಿಮೆ ಬಡ್ಡಿಗೆ ಬ್ಯಾಂಕ್ ಸಾಲ ನೀಡುವುದಿಲ್ಲ.

ಸಾಲ ನೀಡಿಕೆ ಹೆಚ್ಚಳ

23ನೇ ಹಣಕಾಸು ವರ್ಷದಲ್ಲಿ ಕರೂರ್ ವೈಶ್ಯ ಬ್ಯಾಂಕ್​ನ ಸಾಲ ನೀಡಿಕೆ ಪ್ರಮಾಣದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 15ರಷ್ಟು ಹೆಚ್ಚಳವಾಗಿದೆ. ಈ ವರ್ಷ ಬ್ಯಾಂಕ್ 7,996 ಕೋಟಿ ರೂ. ಸಾಲ ನೀಡಿದೆ.

ಸೋಮವಾರವಷ್ಟೇ ಮುಂಬೈ ಷೇರುಪೇಟೆಯಲ್ಲಿ ಕರೂರ್ ವೈಶ್ಯ ಬ್ಯಾಂಕ್ ಷೇರುಗಳು ಶೇಕಡಾ 0.40 ವೃದ್ಧಿ ದಾಖಲಿಸಿದ್ದವು. ಬ್ಯಾಂಕ್ ಷೇರಿನ ಬೆಲೆ 99.50 ರೂ. ಆಗಿತ್ತು. ಒಂದು ಹಂತದಲ್ಲಿ ಕರೂರ್ ವೈಶ್ಯ ಬ್ಯಾಂಕ್ ಷೇರು 100 ರೂ. ಗಡಿ ದಾಟಿತ್ತು.

ರೆಪೊ ದರ ಹೆಚ್ಚಳದ ಬೆನ್ನಲ್ಲೇ ಕ್ರಮ

ರೆಪೊ ದರವನ್ನು 35 ಮೂಲಾಂಶ ಹೆಚ್ಚಿಸಲಾಗಿದ್ದು, ಪರಿಷ್ಕೃತ ರೆಪೊ ದರ ಶೇಕಡಾ 6.25 ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಆರ್​ಬಿಐ ಬುಧವಾರ ಬೆಳಿಗ್ಗೆ ತಿಳಿಸಿದೆ. ಆರ್​ಬಿಐ ಸತತ ಐದನೇ ಬಾರಿ ರೆಪೊ ದರ ಹೆಚ್ಚಳ ಮಾಡಿದೆ. ಇದರ ಬೆನ್ನಲ್ಲೇ ಕರೂರ್ ವೈಶ್ಯ ಬ್ಯಾಂಕ್ ಎಂಸಿಎಲ್​ಆರ್ ಹೆಚ್ಚಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ