Holidays in 2023: 15 ಸುದೀರ್ಘ ವಾರಾಂತ್ಯಗಳು; ಇಲ್ಲಿದೆ 2023ರ ರಜೆ ವಿವರ
Holidays in 2023; 2023ರಲ್ಲಿ 15 ಸುದೀರ್ಘ ವಾರಾಂತ್ಯಗಳಿವೆ. ಯಾವ ದಿನ ಎಲ್ಲ ರಜೆ ಇದೆ ಎಂಬುದನ್ನು ಈಗಲೇ ತಿಳಿದುಕೊಂಡರೆ ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಳ್ಳಬಹುದು. 2023ರ ವಾರಾಂತ್ಯದ ರಜೆಗಳ ವಿವರ ಇಲ್ಲಿದೆ.
ಹೊಸ ವರ್ಷ (New Year) ಇನ್ನೇನು ಸಮೀಪಿಸುತ್ತಿದೆ. ಕೆಲವೊಮ್ಮೆ ವೃತ್ತಿಪರರಿಗೆ ಶನಿವಾರ ಹಾಗೂ ಭಾನುವಾರದ ವಾರಾಂತ್ಯದ (Weekends) ರಜೆಗಳಷ್ಟೇ (Holiday) ಸಾಕಾಗುವುದಿಲ್ಲ. ಇದರ ಜತೆಗೆ ಮತ್ತೊಂದು ರಜೆ ಸಿಕ್ಕಿದರೆ ಪ್ರಯಾಣಕ್ಕೆ, ಪ್ರವಾಸಕ್ಕೆ (Tour) ಅನುಕೂಲವಾಗುತ್ತದೆ. 2023ರಲ್ಲಿ 15 ಸುದೀರ್ಘ ವಾರಾಂತ್ಯಗಳಿವೆ. ಯಾವ ದಿನ ಎಲ್ಲ ರಜೆ ಇದೆ ಎಂಬುದನ್ನು ಈಗಲೇ ತಿಳಿದುಕೊಂಡರೆ ಅದಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ಪ್ರಯಾಣ, ಪ್ರವಾಸವನ್ನು ಇಷ್ಟಪಡುವವರಾದರೆ ವಾರಾಂತ್ಯದ ರಜೆಗಳು ಹೆಚ್ಚು ಸಿಕ್ಕಷ್ಟೂ ಖುಷಿಪಡುವುದು ಸಹಜ. 2023ರ ವಾರಾಂತ್ಯದ ರಜೆಗಳ ವಿವರ ಇಲ್ಲಿದೆ.
ಜನವರಿ ವಾರಾಂತ್ಯದ ರಜೆ ವಿವರ
ಡಿಸೆಂಬರ್ 21 ಶನಿವಾರ, ಜನವರಿ 1 ಭಾನುವಾರ. ಹೀಗಾಗ ಡಿಸೆಂಬರ್ 30ರಂದು ರಜೆ ಮಾಡಿದರೆ ಮೂರು ದಿನಗಳ ಪ್ರವಾಸ ಆಯೋಜಿಸಬಹುದು.
ಜನವರಿ 14ರಂದು ಮಕರ ಸಂಕ್ರಾಂತಿ ಪ್ರಯುಕ್ತ ರಜೆ ಇದೆ. ಇದು ಶನಿವಾರವಾಗಿರುತ್ತದೆ. ಮರುದಿನ ಹೇಗೂ ಭಾನುವಾರದ ರಜೆ ಇದೆ. ಜನವರಿ 13ರಂದು ರಜೆ ಮಾಡಿದರೆ ಮೂರು ದಿನಗಳ ರಜೆ ದೊರೆಯಬಹುದು.
ಇದನ್ನೂ ಓದಿ: Abu Dhabi: ಅಬುಧಾಬಿ ವಿಮಾನ ನಿಲ್ದಾಣ ಪ್ರವೇಶಿಸಲು ಪಾಸ್ಪೋರ್ಟ್, ಟಿಕೆಟ್ ಬೇಕಿಲ್ಲ; ಮುಖವೇ ಬೋರ್ಡಿಂಗ್ ಪಾಸ್!
ಜನವರಿ 26 ಗುರುವಾರ ಗಣರಾಜ್ಯೋತ್ಸವ ದಿನ. ಜನವರಿ 28 ಶನಿವಾರ ಹಾಗೂ 29 ಭಾನುವಾರ. 27ರಂದು ಒಂದು ದಿನ ರಜೆ ಮಾಡಿದರೆ ಒಟ್ಟು 4 ದಿನ ರಜೆ ಸಿಗಲಿದೆ.
ಫೆಬ್ರವರಿಯಲ್ಲಿ ಒಂದೇ ದೀರ್ಘ ವಾರಾಂತ್ಯ
ಫೆಬ್ರವರಿಯಲ್ಲಿ ಒಂದೇ ದೀರ್ಘ ವಾರಾಂತ್ಯ ಇದೆ. ಈ ತಿಂಗಳ 18ರಂದು ಮಹಾಶಿವರಾತ್ರಿ. 19 ಭಾನುವಾರ. 17ರಂದು ರಜೆ ಮಾಡಿದರೆ ಮೂರು ದಿನಗಳ ಪ್ರವಾಸ ಆಯೋಜಿಸಬಹುದು.
ಮಾರ್ಚ್ನಲ್ಲಿ ರಜೆ ಲೆಕ್ಕಾಚಾರ ಹೀಗಿದೆ
ಮಾರ್ಚ್ನಲ್ಲಿ ಕೂಡ ಒಂದು ದೀರ್ಘ ವಾರಾಂತ್ಯದ ರಜೆ ಪ್ಲಾನ್ ಮಾಡಬಹುದು. ಈ ತಿಂಗಳ 8ರಂದು ಬುಧವಾರ ಹೋಳಿ ಹಬ್ಬದ ನಿಮಿತ್ತ ರಜೆ. ಮಾರ್ಚ್ 11 ಶನಿವಾರ, 12 ಭಾನುವಾರ. ಹೀಗಾಗಿ 9 ಮತ್ತು 10ರಂದು ರಜೆ ಮಾಡಿದರೆ ಐದು ದಿನಗಳ ರಜೆ ನಿಮ್ಮದಾಗಲಿದೆ.
ಏಪ್ರಿಲ್ನಲ್ಲಿದೆ ಸುದೀರ್ಘ ವಾರಾಂತ್ಯ
ಏಪ್ರಿಲ್ 4ರಂದು ಮಂಗಳವಾರ ಮಹಾವೀರ ಜಯಂತಿ. 7ರಂದು ಗುರುವಾರ ಗುಡ್ ಫ್ರೈಡೇ. 8ರಂದು ಶನಿವಾರ ಹಾಗೂ 9 ಭಾನುವಾರ ಆಗಿದೆ. 5 ಮತ್ತು 6ರಂದು ರಜೆ ಮಾಡಿದರೆ ಆರು ದಿನಗಳ ರಜೆ ನಿಮ್ಮದಾಗಲಿದೆ.
ಮೇ ತಿಂಗಳ 5ರಂದು ಬೌದ್ಧ ಪೂರ್ಣಿಮೆ. ಇದು ಶುಕ್ರವಾರವಾಗಿದೆ. ಮೇ 6 ಶನಿವಾರ ಹಾಗೂ 7 ಭಾನುವಾರ.
ಜೂನ್ನಲ್ಲಿವೆ ಎರಡು ದೀರ್ಘ ವಾರಾಂತ್ಯ
ಜೂನ್ 17 ಶನಿವಾರ ಹಾಗೂ 18 ಭಾನುವಾರ. ಜೂನ್ 20ರಂದು ಮಂಗಳವಾರ ಕೆಲವು ಪ್ರದೇಶಗಳಲ್ಲಿ ಮಾತ್ರ ರಜೆ ಇದೆ. ಜೂನ್ 19ರಂದು ರಜೆ ಮಾಡಿದರೆ ನಾಲ್ಕು ದಿನಗಳ ರಜೆ ದೊರೆಯಲಿದೆ.
ಜೂನ್ 29 ಮಂಗಳವಾರ ಬಕ್ರೀದ್. ಜುಲೈ 1 ಶನಿವಾರ ಹಾಗೂ 2 ಭಾನುವಾರ. ಜೂನ್ 30ರಂದು ಒಂದು ರಜೆ ಮಾಡಿದರೆ ನಾಲ್ಕು ದಿನಗಳ ವಾರಾಂತ್ಯ ರಜೆ ನಿಮ್ಮದಾಗಲಿದೆ.
ಆಗಸ್ಟ್ನಲ್ಲೂ ಇದೆ ಸುದೀರ್ಘ ವಾರಾಂತ್ಯ
ಆಗಸ್ಟ್ 12 ಶನಿವಾರ. 13 ಭಾನುವಾರ. ಆಗಸ್ಟ್ 15 ಮಂಗಳವಾರ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಜೆ. 16ರಂದು ಪಾರ್ಸಿ ಮತ್ತು ಹೊಸವರ್ಷದ ಪ್ರಯುಕ್ತ ನಿರ್ಬಂಧಿತ ರಜೆ ಇದೆ. ಹೀಗಾಗಿ 14ರಂದು ರಜೆ ಹಾಕಿದರೆ 5 ದಿನಗಳ ರಜೆ ದೊರೆಯಲಿದೆ.
ಆಗಸ್ಟ್ 26ರಂದು ಶನಿವಾರ, 27 ಭಾನುವಾರ ಹಾಗೂ 29ರಂದು ಮಂಗಳವಾರ ನಿರ್ಬಂಧಿತ ರಜೆ ಇದೆ. 30ಕ್ಕೆ ಬುಧವಾರ ರಕ್ಷಾ ಬಂಧನ ಪ್ರಯುಕ್ತ ರಜೆ. ಹೀಗಾಗಿ 28ರಂದು ಒಂದು ದಿನ ರಜೆ ಮಾಡಿದರೆ ಐದು ದಿನಗಳ ರಜೆ ಸಿಗಲಿದೆ.
ಸೆಪ್ಟೆಂಬರ್ನಲ್ಲಿ ಎರಡು ದೀರ್ಘ ವಾರಾಂತ್ಯ
ಸೆಪ್ಟೆಂಬರ್ 7ರಂದು ಗುರುವಾರ ಜನ್ಮಾಷ್ಟಮಿ ಪ್ರಯುಕ್ತ ನಿರ್ಬಂಧಿತ ರಜೆ ಇದೆ. 9ರಂದು ಶನಿವಾರ ಹಾಗೂ 10 ಭಾನುವಾರ ರಜೆ. 8ಕ್ಕೆ ರಜೆ ಮಾಡಿದರೆ ಒಟ್ಟು ನಾಲ್ಕು ದಿನಗಳು ಸಿಗಲಿವೆ.
ಸೆಪ್ಟೆಂಬರ್ 16 ಶನಿವಾರ ಮತ್ತು 17 ಭಾನುವಾರ. 19ರಂದು ಸೋಮವಾರ ಗಣೇಶ ಚತುರ್ಥಿ. 18ರಂದು ರಜೆ ಮಾಡಿದರೆ ಮತ್ತೆ ನಾಲ್ಕು ದಿನ ಸಿಗಲಿದೆ.
ಅಕ್ಟೋಬರ್ನಲ್ಲೂ ಭರ್ಜರಿ ರಜೆ
ಸೆಪ್ಟೆಂಬರ್ 30 ಶನಿವಾರ ಹಾಗೂ ಅಕ್ಟೋಬರ್ 1 ಭಾನುವಾರ. 2ರಂದು ಸೋಮವಾರ ಗಾಂಧಿ ಜಯಂತಿ ಪ್ರಯುಕ್ತ ರಜೆ.
ಅಕ್ಟೋಬರ್ 21 ಶನಿವಾರ ಹಾಗೂ 22 ಭಾನುವಾರ. 24ರಂದು ಮಂಗಳವಾರ ದಸರಾ ಪ್ರಯುಕ್ತ ರಜೆ. 23ರಂದು ರಜೆ ಮಾಡಿದರೆ ನಾಲ್ಕು ದಿನಗಳ ರಜೆ ಸಿಗಲಿದೆ.
ನವೆಂಬರ್ನಲ್ಲಿ ಎಷ್ಟಿದೆ ರಜೆ?
ನವೆಂಬರ್ 11 ಶನಿವಾರ ಮತ್ತು 12 ಭಾನುವಾರ ದೀಪಾವಳಿ. 13ರಂದು ಸೋಮವಾರ ಗೋವರ್ಧನ ಪೂಜೆ ಪ್ರಯುಕ್ತ ರಜೆ. ನವೆಂಬರ್ 25ರಂದು ಶನಿವಾರ ಹಾಗೂ 26 ಭಾನುವಾರ. 27ರಂದು ಸೋಮವಾರ ಗುರುನಾನಕ್ ಜಯಂತಿ ಪ್ರಯುಕ್ತ ರಜೆ ಇದೆ.
ಡಿಸೆಂಬರ್ ರಜೆ ವಿವರ
ಡಿಸೆಂಬರ್ 23 ಶನಿವಾರ ಮತ್ತು 24 ಭಾನುವಾರ. 25ರಂದು ಸೋಮವಾರ ಕ್ರಿಸ್ಮಸ್ ಪ್ರಯುಕ್ತ ರಜೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ