Gold Bonds: ಸಾವರಿನ್ ಗೋಲ್ಡ್ ಬಾಂಡ್, ಚಿನ್ನದ ಇಟಿಎಫ್; ಹೂಡಿಕೆಗೆ ಯಾವುದು ಉತ್ತಮ?

ಆರ್​ಬಿಐ ಬಿಡುಗಡೆ ಮಾಡುವ ಸಾವರಿನ್ ಗೋಲ್ಡ್ ಬಾಂಡ್​​ಗಳು ಮತ್ತು ಮ್ಯೂಚುವಲ್ ಫಂಡ್​ ಹೌಸ್​ಗಳು ಬಿಡುಗಡೆ ಮಾಡುವ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ಸ್ ಗಳಲ್ಲಿಯೂ ಹೂಡಿಕೆ ಮಾಡಲು ಅವಕಾಶವಿದೆ. ಈ ಪೈಕಿ ಯಾವುದರಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ ಎಂಬ ಮಾಹಿತಿ ಇಲ್ಲಿದೆ.

Gold Bonds: ಸಾವರಿನ್ ಗೋಲ್ಡ್ ಬಾಂಡ್, ಚಿನ್ನದ ಇಟಿಎಫ್; ಹೂಡಿಕೆಗೆ ಯಾವುದು ಉತ್ತಮ?
ಚಿನ್ನದ ದರ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Digi Tech Desk

Updated on:Dec 20, 2022 | 7:34 PM

ಚಿನ್ನ ಖರೀದಿ ಭಾರತದಲ್ಲಿ ಬಹಳ ಹಿಂದಿನಿಂದಲೂ ಜನರ ನೆಚ್ಚಿನ ಹೂಡಿಕೆಯ (Investment) ತಾಣವಾಗಿದೆ. ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಚಿನ್ನ (Gold) ಮೇಲಿನ ಹೂಡಿಕೆ ವಿಧಾನಗಳು ಬದಲಾಗಿವೆ. ಚಿನ್ನ ಖರೀದಿಯ ಟ್ರೆಂಡ್ ಮುಂದುವರಿದಿರುವುದರ ಜತೆಗೆ ಡಿಜಿಟಲ್ ಚಿನ್ನದ (Digital Gold) ಮೇಲಿನ ಹೂಡಿಕೆಯ ಆಕರ್ಷಣೆ ಹೆಚ್ಚಾಗುತ್ತಿದೆ. ಸಮಯ ಮತ್ತು ಪ್ರಯೋಜನಗಳನ್ನು ಗಮನಿಸಿದರೆ ಡಿಜಿಟಲ್ ಚಿನ್ನದ ಮೇಲಿನ ಹೂಡಿಕೆಯೇ ಸೂಕ್ತವಾಗಿದೆ. ಆರ್​ಬಿಐ ಬಿಡುಗಡೆ ಮಾಡುವ ಸಾವರಿನ್ ಗೋಲ್ಡ್ ಬಾಂಡ್​​ಗಳು (SGBs) ಮತ್ತು ಮ್ಯೂಚುವಲ್ ಫಂಡ್​ ಹೌಸ್​ಗಳು ಬಿಡುಗಡೆ ಮಾಡುವ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ಸ್ (ETFs) ಗಳಲ್ಲಿಯೂ ಹೂಡಿಕೆ ಮಾಡಲು ಅವಕಾಶವಿದೆ. ಈ ಪೈಕಿ ಯಾವುದರಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ ಎಂಬ ಮಾಹಿತಿ ಇಲ್ಲಿದೆ.

ದೀರ್ಘಾವಧಿಯ ತೆರಿಗೆ ಪ್ರಯೋಜನಗಳನ್ನು ಎದುರುನೋಡುವ ವ್ಯಕ್ತಿಗಳು ಸಾವರಿನ್ ಗೋಲ್ಡ್ ಬಾಂಡ್​ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಬಾಂಡ್​ಗಳು ಭಾರತ ಸರ್ಕಾರ ಬೆಂಬಲಿತ ಬಾಂಡ್​ಗಳಾಗಿವೆ. ಭೌತಿಕ ಚಿನ್ನಕ್ಕೆ ಪರ್ಯಾಯವಾಗಿ ದೊರೆಯುವ ಸಾವರಿನ್ ಗೋಲ್ಡ್ ಬಾಂಡ್ ಇಶ್ಯೂ ದರಕ್ಕಿಂತ ವಾರ್ಷಿಕ ಶೇಕಡಾ 2.5ರಷ್ಟು ರಿಟರ್ನ್ಸ್ ತಂದುಕೊಡುತ್ತದೆ. ಖರೀದಿಯ ದಿನ ಯಾವ ಮೊತ್ತ ಇತ್ತೋ ಅದಕ್ಕೆ ಅನುಗುಣವಾಗಿ ರಿಟರ್ನ್ಸ್ ದೊರೆಯುತ್ತದೆ. ಈ ಬಾಂಡ್​ಗಳನ್ನು 8 ವರ್ಷಗಳ ಅವಧಿಗೆ ಬಿಡುಗಡೆ ಮಾಡಲಾಗುತ್ತದೆ. 5ನೇ ವರ್ಷದ ನಂತರ ಮರಳಿಸಲು ಅವಕಾಶವಿದೆ. ಇದಕ್ಕಾಗಿ ಆರ್​ಬಿಐ ಬೈಬ್ಯಾಕ್ ವಿಂಡೋ ತೆರೆಯುತ್ತದೆ. ನಿಶ್ಚಿತ ಬಡ್ಡಿ ದರ ಬಯಸುವವರಿಗೆ ಈ ಬಾಂಡ್​ಗಳಲ್ಲಿನ ಹೂಡಿಕೆ ಉತ್ತಮವಾಗಿದೆ ಎಂದಿದ್ದಾರೆ ವೈಯಕ್ತಿಕ ಹಣಕಾಸು ತಜ್ಞರು.

ಸಾವರಿನ್ ಗೋಲ್ಡ್ ಬಾಂಡ್ ಎಂದರೇನು?

ಸಾವರಿನ್ ಗೋಲ್ಡ್ ಬಾಂಡ್ ಎಂಬುದು ವಸ್ತು ರೂಪದ ಅಥವಾ ಸಾಮಾನ್ಯ ಚಿನ್ನಕ್ಕೆ ಬದಲಾಗಿ ಸರ್ಕಾರದ ಪರವಾಗಿ ಕೇಂದ್ರೀಯ ಬ್ಯಾಂಕ್​ಗಳು ಬಿಡುಗಡೆ ಚಿನ್ನವಾಗಿದೆ. ಅಂದರೆ, ಇಲ್ಲಿ ಬಾಂಡ್​ ರೂಪದಲ್ಲಿ ಚಿನ್ನವನ್ನು ನೀಡಲಾಗುತ್ತದೆ. ಭಾರತದಲ್ಲಿ ಆರ್​ಬಿಐ ಇದನ್ನು ಬಿಡುಗಡೆ ಮಾಡುತ್ತದೆ. ಚಿನ್ನದ ಬದಲಿಗೆ ಚಿನ್ನದ ಬೆಲೆಗೆ ಬಾಂಡ್​​ಗಳನ್ನು ಖರೀದಿಸುವ ಹೂಡಿಕೆದಾರರು ಮೆಚ್ಯೂರಿಟಿ ಅವಧಿಯ ಬಳಿಕ ಬಾಂಡ್​ಗಳನ್ನು ವಾಪಸ್ ನೀಡಿ ಅದಕ್ಕೆ ರಿಟರ್ನ್ಸ್ ಪಡೆಯುತ್ತಾರೆ. ಈ ಬಾಂಡ್​ಗಳನ್ನು 8 ವರ್ಷಗಳ ಅವಧಿಗೆ ಆರ್​ಬಿಐ ಬಿಡುಗಡೆ ಮಾಡುತ್ತದೆ. 5ನೇ ವರ್ಷದ ನಂತರ ಮರಳಿಸಲೂ ಈಗ ಅವಕಾಶವಿದೆ. ಚಿನ್ನದ ವಹಿವಾಟಿನ ಬೆಲೆಯ ಸರಾಸರಿಯನ್ನು ತೆಗೆದುಕೊಂಡು ಸಾವರಿನ್ ಗೋಲ್ಡ್ ಬಾಂಡ್ ಬೆಲೆ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: Gold Bonds: ಸಾವರಿನ್ ಗೋಲ್ಡ್ ಬಾಂಡ್ ಬಿಡುಗಡೆ ಮಾಡಿದ ಆರ್​ಬಿಐ; ಆನ್​ಲೈನ್​ನಲ್ಲಿ ಹೀಗೆ ಖರೀದಿಸಿ

ಸಾವರಿನ್ ಗೋಲ್ಡ್ ಬಾಂಡ್ ಹೆಚ್ಚು ಸುರಕ್ಷಿತ

ಸರ್ಕಾರವೇ ಬಿಡುಗಡೆ ಮಾಡುವುದರಿಂದ ಸಾವರಿನ್ ಗೋಲ್ಡ್ ಬಾಂಡ್ ಹೆಚ್ಚು ಸುರಕ್ಷಿತವಾಗಿದೆ. ಇಂಥ ಬಾಂಡ್​ಗಳಿಗೆ ದೊರೆಯುವ ಬಡ್ಡಿಯನ್ನು ಇತರ ಮೂಲಗಳಿಂದ ದೊರೆಯುವ ಆದಾಯ ಎಂದು ಪರಿಗಣಿಸಲಾಗುತ್ತಿದ್ದು, ಇದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಮೆಚ್ಯೂರಿಟಿ ಅವಧಿಯ ನಂತರ ವಾಪಸ್ ಪಡೆಯುವುದಾದರೆ ತೆರಿಗೆ ಪಾವತಿಸಬೇಕಾಗಿಲ್ಲ. ಸಾವರಿನ್ ಗೋಲ್ಡ್ ಬಾಂಡ್​​ಗಳು ಕಡಿಮೆ ಲಿಕ್ವಿಡಿಟಿ ಹೊಂದಿವೆ.

ಗೋಲ್ಡ್ ಇಟಿಎಫ್​ಗಳು

ಚಿನ್ನದ ಇಟಿಎಫ್​ಗಳು ಹೆಚ್ಚು ಲಿಕ್ವಿಡಿಟಿ ಹೊಂದಿವೆ. ಎಲೆಕ್ಟ್ರಾನಿಕ್ ರೂಪದಲ್ಲಿ ಹೊರತುಪಡಿಸಿದರೆ ಮ್ಯೂಚುವಲ್ ಫಂಡ್​ ಹೌಸ್​ಗಳ ಮೂಳಕ ಖರೀದಿ ಮಾಡುವ ಗೋಲ್ಡ್ ಇಟಿಎಫ್​ಗಳು ಭೌತಿಕ ಚಿನ್ನ ಖರೀದಿಯನ್ನೇ ಹೋಲುತ್ತವೆ. ಇವು ಭೌತಿಕ ಚಿನ್ನ ಇಲ್ಲದೆಯೇ ಬುಲಿಯನ್ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಹೂಡಿಕೆದಾರನಿಗೆ ಅವಕಾಶ ಮಾಡಿಕೊಡುತ್ತವೆ. ಹೀಗಾಗಿ, ಚಿನ್ನದ ಇಟಿಎಫ್‌ಗಳು ಷೇರು ಮಾರುಕಟ್ಟೆ ಹೂಡಿಕೆಗೆ ಅವಕಾಶ ಮಾಡಿಕೊಡುತ್ತವೆ ಮತ್ತು ಪಾರದರ್ಶಕವಾಗಿವೆ. ತೆರಿಗೆ ವಿಚಾರಕ್ಕೆ ಬಂದರೆ, ಖರೀದಿ ಮಾಡಿದ 2.5 ವರ್ಷದ ಒಳಕೆ ಮಾರಾಟ ಮಾಡಿದರೆ ಅಲ್ಪಾವಧಿ ಬಂಡವಾಳದಿಂದ ಗಳಿಸಿದ ಆದಾಯ ತೆರಿಗೆ ಅಥವಾ ಎಸ್​ಟಿಸಿಜಿ ಪಾವತಿಸಬೇಕಾಗುತ್ತದೆ. ಈ ಅವಧಿಯ ನಂತರ ಮಾರಾಟ ಮಾಡಿದರೆ ದೀರ್ಘಾವಧಿಯ ಬಂಡವಾಳದಿಂದ ಗಳಿಸಿದ ಆದಾಯ ತೆರಿಗೆ ಅಥವಾ ಎಲ್​ಟಿಸಿಜಿ ಪಾವತಿಸಬೇಕಾಗುತ್ತದೆ.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Tue, 20 December 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್