Gold Bonds: ಸಾವರಿನ್ ಗೋಲ್ಡ್ ಬಾಂಡ್ ಬಿಡುಗಡೆ ಮಾಡಿದ ಆರ್ಬಿಐ; ಆನ್ಲೈನ್ನಲ್ಲಿ ಹೀಗೆ ಖರೀದಿಸಿ
Sovereign Gold Bond: ಸಾವರಿನ್ ಗೋಲ್ಡ್ ಬಾಂಡ್ ಅನ್ನು ಆನ್ಲೈನ್ ಮೂಲಕ ಖರೀದಿಸುವುದು ಹೇಗೆ? ಅದಕ್ಕಾಗಿ ಏನೇನು ಪ್ರಕ್ರಿಯೆಗಳನ್ನು ಅನುಸರಿಸಬೇಕು? ಇಲ್ಲಿದೆ ಪೂರ್ತಿ ವಿವರ.
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಾವರಿನ್ ಗೋಲ್ಡ್ ಬಾಂಡ್ನ (Sovereign Gold Bond) ಹೊಸ ಕಂತನ್ನು ಬಿಡುಗಡೆ ಮಾಡಿದೆ. 2022-23ನೇ ಸಾಲಿನ ಈ ಕಂತಿನ ಸಾವರಿನ್ ಗೋಲ್ಡ್ ಬಾಂಡ್ ಅನ್ನು ಖರೀದಿಸಲು ಡಿಸೆಂಬರ್ 19ರಿಂದ ಮೊದಲ್ಗೊಂಡು 5 ದಿನಗಳ ಅವಕಾಶವಿದೆ. ಒಂದು ಗ್ರಾಂ ಚಿನ್ನಕ್ಕೆ 5,409 ರೂ.ನಂತೆ ದರ ನಿಗದಿಪಡಿಸಲಾಗಿದೆ. 2022-23ನೇ ಸಾಲಿನ ಮೂರನೇ ಕಂತು ಇದಾಗಿದ್ದು, ಆನ್ಲೈನ್ ಮೂಲಕ ಖರೀದಿಗೆ ಆರ್ಬಿಐ ಅವಕಾಶ ಮಾಡಿಕೊಟ್ಟಿದೆ. ಪ್ರತಿ ಗ್ರಾಂ ಚಿನ್ನಕ್ಕ 50 ರೂ.ನಂತೆ ರಿಯಾಯಿತಿ ದರದ (Discount) ಆಫರ್ ಸಹ ನೀಡಲಾಗಿದೆ. ಅಂದರೆ, ಪ್ರತಿ ಗ್ರಾಂ 5,359 ರೂ.ನಂತೆ ದೊರೆಯಲಿದೆ. ಸಾವರಿನ್ ಗೋಲ್ಡ್ ಬಾಂಡ್ ಮೂಲ ಅಥವಾ ಇಶ್ಯೂ ದರಕ್ಕಿಂತ ವಾರ್ಷಿಕ ಶೇಕಡಾ 2.5ರಷ್ಟು ರಿಟರ್ನ್ಸ್ ತಂದುಕೊಡುತ್ತದೆ. ಈ ಬಾಂಡ್ಗಳಿಗೆ ದೊರೆಯುವ ಬಡ್ಡಿಯನ್ನು ಇತರ ಮೂಲಗಳಿಂದ ದೊರೆಯುವ ಆದಾಯ ಎಂದು ಪರಿಗಣಿಸಲಾಗುತ್ತಿದ್ದು, ಇದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಮೆಚ್ಯೂರಿಟಿ ಅವಧಿಯ ನಂತರ ವಾಪಸ್ ಪಡೆಯುವುದಾದರೆ ತೆರಿಗೆ ಪಾವತಿಸಬೇಕಾಗಿಲ್ಲ.
ಸಾವರಿನ್ ಗೋಲ್ಡ್ ಬಾಂಡ್ ಎಂದರೇನು?
ಸಾವರಿನ್ ಗೋಲ್ಡ್ ಬಾಂಡ್ ಎಂಬುದು ವಸ್ತು ರೂಪದ ಅಥವಾ ಸಾಮಾನ್ಯ ಚಿನ್ನಕ್ಕೆ ಬದಲಾಗಿ ಸರ್ಕಾರದ ಪರವಾಗಿ ಕೇಂದ್ರೀಯ ಬ್ಯಾಂಕ್ಗಳು ಬಿಡುಗಡೆ ಚಿನ್ನವಾಗಿದೆ. ಅಂದರೆ, ಇಲ್ಲಿ ಬಾಂಡ್ ರೂಪದಲ್ಲಿ ಚಿನ್ನವನ್ನು ನೀಡಲಾಗುತ್ತದೆ. ಭಾರತದಲ್ಲಿ ಆರ್ಬಿಐ ಇದನ್ನು ಬಿಡುಗಡೆ ಮಾಡುತ್ತದೆ. ಚಿನ್ನದ ಬದಲಿಗೆ ಚಿನ್ನದ ಬೆಲೆಗೆ ಬಾಂಡ್ಗಳನ್ನು ಖರೀದಿಸುವ ಹೂಡಿಕೆದಾರರು ಮೆಚ್ಯೂರಿಟಿ ಅವಧಿಯ ಬಳಿಕ ಬಾಂಡ್ಗಳನ್ನು ವಾಪಸ್ ನೀಡಿ ಅದಕ್ಕೆ ರಿಟರ್ನ್ಸ್ ಪಡೆಯುತ್ತಾರೆ. ಈ ಬಾಂಡ್ಗಳನ್ನು 8 ವರ್ಷಗಳ ಅವಧಿಗೆ ಆರ್ಬಿಐ ಬಿಡುಗಡೆ ಮಾಡುತ್ತದೆ. 5ನೇ ವರ್ಷದ ನಂತರ ಮರಳಿಸಲೂ ಈಗ ಅವಕಾಶವಿದೆ. ಚಿನ್ನದ ವಹಿವಾಟಿನ ಬೆಲೆಯ ಸರಾಸರಿಯನ್ನು ತೆಗೆದುಕೊಂಡು ಸಾವರಿನ್ ಗೋಲ್ಡ್ ಬಾಂಡ್ ಬೆಲೆ ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: Gold Bonds: ಸಾವರಿನ್ ಗೋಲ್ಡ್ ಬಾಂಡ್, ಚಿನ್ನದ ಇಟಿಎಫ್; ಹೂಡಿಕೆಗೆ ಯಾವುದು ಉತ್ತಮ?
ಸಾವರಿನ್ ಗೋಲ್ಡ್ ಬಾಂಡ್ ಅನ್ನು ಆನ್ಲೈನ್ ಮೂಲಕ ಖರೀದಿಸುವುದು ಹೇಗೆ? ಅದಕ್ಕಾಗಿ ಏನೇನು ಪ್ರಕ್ರಿಯೆಗಳನ್ನು ಅನುಸರಿಸಬೇಕು? ಪೂರ್ತಿ ವಿವರವನ್ನು ಇಲ್ಲಿ ನೀಡಲಾಗಿದೆ.
ಆನ್ಲೈನ್ನಲ್ಲಿ ನೋಂದಣಿ ಮಾಡುವುದು ಹೀಗೆ…
- ಎಸ್ಬಿಐ ನೆಟ್ ಬ್ಯಾಂಕಿಂಗ್ ಲಾಗಿನ್ ಆಗಿ
- ಮೈನ್ ಮೆನುವಿನಲ್ಲಿ ‘ಇ-ಸರ್ವೀಸ್’ ಆಯ್ಕೆಯನ್ನು ಕ್ಲಿಕ್ ಮಾಡಿ
- ‘ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್’ ಮೇಲೆ ಕ್ಲಿಕ್ ಮಾಡಿ
- ಮೊದಲ ಬಾರಿಯ ಹೂಡಿಕೆದಾರರಾದರೆ ನೀವು ನೋಂದಣಿ ಮಾಡಬೇಕು. ಇದಕ್ಕಾಗಿ ‘ರಿಜಿಸ್ಟರ್’ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ‘ಟರ್ಮ್ಸ್ ಆ್ಯಂಡ್ ಕಂಡೀಷನ್ಸ್’ ಹಾಗೂ ‘ಪ್ರೊಸೀಡ್’ ಕ್ಲಿಕ್ ಮಾಡಿ
- ಎಲ್ಲ ವಿವರಗಳನ್ನು ನಮೂದಿಸಿ. ನಾಮನಿರ್ದೇಶನ ಮತ್ತು ಇತರ ವಿವರಗಳನ್ನು ಭರ್ತಿ ಮಾಡಿ
- ಎನ್ಎಸ್ಡಿಎಲ್ ಅಥವಾ ಸಿಡಿಎಸ್ಎಲ್ ಈ ಪೈಕಿ ನಿಮ್ಮ ಡಿಮ್ಯಾಟ್ ಖಾತೆ ಎಲ್ಲಿದೆಯೋ ಅಲ್ಲಿಂದ ಡೆಪಾಸಿಟರಿ ಪಾರ್ಟಿಸಿಪೆಂಟ್ ಅನ್ನು ಆಯ್ಕೆ ಮಾಡಿ
- ಡಿಪಿ ಐಡಿ, ಕ್ಲಿಯೆಂಟ್ ಐಡಿ ನಮೂದಿಸಿ ‘ಸಬ್ಮಿಟ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ವಿವರಗಳನ್ನು ದೃಢೀಕರಿಸಿ ‘ಸಬ್ಮಿಟ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಎಸ್ಬಿಐ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಖರೀದಿ ಹೇಗೆ?
- ಎಸ್ಬಿಐ ನೆಟ್ ಬ್ಯಾಂಕಿಂಗ್ ಲಾಗಿನ್ ಆಗಿ
- ಮೈನ್ ಮೆನುವಿನಲ್ಲಿ ‘ಇ-ಸರ್ವೀಸ್’ ಆಯ್ಕೆಯನ್ನು ಕ್ಲಿಕ್ ಮಾಡಿ
- ‘ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್’ ಮೇಲೆ ಕ್ಲಿಕ್ ಮಾಡಿ
- ಹೆಡರ್ ಟ್ಯಾಬ್ನಲ್ಲಿ ‘ಪರ್ಚೇಸ್’ ಅನ್ನು ಆಯ್ಕೆ ಮಾಡಿ
- ‘ಟರ್ಮ್ಸ್ ಆ್ಯಂಡ್ ಕಂಡೀಷನ್ಸ್’ ಆಯ್ಜೆ ಮಾಡಿ ಹಾಗೂ ನಂತರ ‘ಪ್ರೊಸೀಡ್’ ಕ್ಲಿಕ್ ಮಾಡಿ
- ಖರೀದಿಸಬೇಕಾದ ಪ್ರಮಾಣ ಮತ್ತು ನಾಮನಿರ್ದೇಶನದ ವಿವರ ಭರ್ತಿ ಮಾಡಿ
- ‘ಸಬ್ಮಿಟ್’ ಕ್ಲಿಕ್ ಮಾಡಿ
- ಒಟಿಪಿ ನಮೂದಿಸಿ ‘ಕನ್ಫರ್ಮ್’ ಕ್ಲಿಕ್ ಮಾಡಿ
- ಹೊಸ ವೆಬ್ ಪೇಜ್ ತೆರೆದುಕೊಳ್ಳುತ್ತದೆ ಮತ್ತು ನಿಮ್ಮ ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆ ಕುರಿತ ಎಲ್ಲ ವಿವರಗಳು ಅದರಲ್ಲಿ ಕಾಣಿಸುತ್ತವೆ.
ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:16 pm, Tue, 20 December 22