No Cost EMI: ನೋ ಕಾಸ್ಟ್ ಇಎಂಐ ಆಯ್ಕೆ ಮಾಡುವ ಮುನ್ನ ಈ ವಿಚಾರಗಳನ್ನು ತಿಳಿದಿರಿ

ನೋ ಕಾಸ್ಟ್ ಇಎಂಐನಲ್ಲಿ ನಿಜವಾಗಿಯೂ ಬಡ್ಡಿ ಪಾವತಿಸಬೇಕಿಲ್ಲವೇ? ನಮಗೆ ಗೊತ್ತೇ ಆಗದಂತೆ ಶುಲ್ಕ ಅಥವಾ ಹಣ ಪಡೆಯಲಾಗುತ್ತದೆಯೇ? ಇಲ್ಲಿದೆ ವಿವರ.

No Cost EMI: ನೋ ಕಾಸ್ಟ್ ಇಎಂಐ ಆಯ್ಕೆ ಮಾಡುವ ಮುನ್ನ ಈ ವಿಚಾರಗಳನ್ನು ತಿಳಿದಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Dec 19, 2022 | 3:44 PM

ದುಬಾರಿ ವಸ್ತುಗಳನ್ನು ಖರೀದಿಸುವಾಗ ಗ್ರಾಹಕರು ಕಂತುಗಳಲ್ಲಿ ಹಣ ಪಾವತಿಸುವ ಅಥವಾ ಇಎಂಐ (EMI) ವಿಧಾನದ ಮೊರೆ ಹೋಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಅದರಲ್ಲೂ ಆನ್​ಲೈನ್ ಮೂಲಕ ಹೆಚ್ಚಿನ ವಸ್ತುಗಳನ್ನು ಖರೀದಿಸುವಾಗ ನೋ ಕಾಸ್ಟ್ ಇಎಂಐ (No Cost EMI) ಆಯ್ಕೆಗಳನ್ನು ನಾವು ನೋಡಿರುತ್ತೇವೆ. ಫ್ರಿಡ್ಜ್, ವಾಷಿಂಗ್​ ಮಿಷನ್, ಸ್ಮಾರ್ಟ್​​ಫೋನ್, ಸ್ಮಾರ್ಟ್​ವಾಚ್ ಹೀಗೆ ಅನೇಕ ವಸ್ತುಗಳ ಖರೀದಿ ವೇಳೆ ಅಮೆಜಾನ್ (Amazon), ಫ್ಲಿಪ್​ಕಾರ್ಟ್​​ನಂಥ (Flipkart) ಆನ್​ಲೈನ್ ಚಿಲ್ಲರೆ ಮಾರಾಟ ತಾಣಗಳಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಗಳನ್ನು ನೋಡಿರುತ್ತೇವೆ. ಬಡ್ಡಿ ಸಹಿತ ಇರುವ ಇಎಂಐ ಆಯ್ಕೆಗಳನ್ನೂ ಗಮನಿಸಿರುತ್ತೇವೆ. ಇನ್ನು ಕೆಲವೊಮ್ಮೆ ಅಂಗಡಿಗೆ ಅಥವಾ ಚಿಲ್ಲರೆ ಮಾರಾಟ ಮಳಿಗೆಗಳಿಗೇ ತೆರಳಿ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ ನಂತರ ಅದನ್ನು ಇಎಂಐ ಆಗಿ ಪರಿವರ್ತಿಸುವುದೂ ಇದೆ. ಆದರೆ ಇವುಗಳಲ್ಲಿ ಯಾವುದು ಉತ್ತಮ? ನೋ ಕಾಸ್ಟ್ ಇಎಂಐನಲ್ಲಿ ನಿಜವಾಗಿಯೂ ಬಡ್ಡಿ ಪಾವತಿಸಬೇಕಿಲ್ಲವೇ? ನಮಗೆ ಗೊತ್ತೇ ಆಗದಂತೆ ಶುಲ್ಕ ಅಥವಾ ಹಣ ಪಡೆಯಲಾಗುತ್ತದೆಯೇ?

ನೋ ಕಾಸ್ಟ್ ಇಎಂಐಯಲ್ಲೂ ಇರುತ್ತೆ ಶುಲ್ಕ!

ಹೆಚ್ಚಿನ ಸಂದರ್ಭಗಳಲ್ಲಿ ನೋ ಕಾಸ್ಟ್ ಇಎಂಐಗಳಲ್ಲಿ ಗ್ರಾಹಕರ ಅರಿವಿಗೆ ಬಾರದಂತೆ ಕೆಲವು ಶುಲ್ಕಗಳನ್ನು ವಿಧಿಸಲಾಗುತ್ತದೆ. ಒಂದೋ ಖರೀದಿಸುವ ವಸ್ತುವಿನ ಬೆಲೆಯಲ್ಲೇ ಅದನ್ನು ಅಡಕವಾಗಿಸಿರುತ್ತಾರೆ. ಇಲ್ಲವೇ ಪ್ರೊಸೆಸಿಂಗ್ ಫೀ ಅಥವಾ ನಿರ್ವಹಣಾ ಶುಲ್ಕದ ನೆಪದಲ್ಲಿ ಪರೋಕ್ಷವಾಗಿ ಬಡ್ಡಿ ವಸೂಲು ಮಾಡಲಾಗುತ್ತದೆ.

ಉದಾಹರಣೆಗೆ; ಆನ್​ಲೈನ್ ಮಾರಾಟ ತಾಣವೊಂದರಿಂದ 15,000 ರೂ. ಮೌಲ್ಯದ ಸ್ಮಾರ್ಟ್​​ಫೋನ್ ಖರೀದಿಸುತ್ತೇವೆ ಎಂದುಕೊಳ್ಳೋಣ. ಪ್ರತಿ ತಿಂಗಳು 2,500 ರೂ.ನಂತೆ 6 ತಿಂಗಳುಗಳ ಇಎಂಐ ಆಯ್ಕೆ ಮಾಡಿಕೊಳ್ಳುವ ಆಯ್ಕೆ ಅಥವಾ ಒಂದೇ ಬಾರಿಗೆ 14,500 ರೂ. ಪಾವತಿಸುವ ಆಯ್ಕೆ ನಮಗೆ ಕಾಣಿಸುತ್ತದೆ. ಅಂದರೆ, ಇಲ್ಲಿ ಸ್ಮಾರ್ಟ್​​ಫೋನ್​ನ ನಿಜವಾದ ಮೊತ್ತ 14,500 ರೂ. ಆಗಿರುತ್ತದೆ. ಇಎಐಂಗೆ ಪರಿವರ್ತಿಸಿದಾಗ ಬಡ್ಡಿ ಸೇರಿ 15,000 ರೂ. ಆಗುತ್ತದೆ. ಅಂದರೆ ಇಲ್ಲಿ ಬಡ್ಡಿಯ ಮೊತ್ತವನ್ನೂ ವಸ್ತುವಿನ ಮೌಲ್ಯದ ಜತೆಗೇ ಸೇರಿಸಿರುತ್ತಾರೆ. ಬ್ಯಾಂಕ್​ಗಳು ಮಾತ್ರ ನೋ ಕಾಸ್ಟ್ ಇಎಂಐ ತೋರಿಸುತ್ತವೆ ಅಷ್ಟೆ.

ಇದನ್ನೂ ಓದಿ: CIBIL Score: ಸಿಬಿಲ್ ಸ್ಕೋರ್ ಬಗ್ಗೆ ನಿಮ್ಮಲ್ಲಿ ಈ ತಪ್ಪು ಕಲ್ಪನೆ ಇದೆಯೇ? ಚಿಂತಿಸಬೇಕಾದ ಅಗತ್ಯವಿಲ್ಲ

ಕೆಲವು ಸಂದರ್ಭಗಳಲ್ಲಿ ವಸ್ತುವಿನ ಒಟ್ಟು ಮೌಲ್ಯವೂ ಇಎಂಐ ಸೇರಿದಾಗ ಬರುವ ಒಟ್ಟು ಮೊತ್ತವೂ ಒಂದೇ ರೀತಿ ಇರುತ್ತದೆ. ಆದರೆ, ಪ್ರೊಸೆಸಿಂಗ್ ಶುಲ್ಕ ಅಥವಾ ನಿರ್ವಹಣಾ ಶುಲ್ಕ ಎಂದು ಹಣ ಪಡೆಯುತ್ತಾರೆ. ಈ ಮೂಲಕ ಪರೋಕ್ಷವಾಗಿ ಬಡ್ಡಿ ವಿಧಿಸಲಾಗುತ್ತದೆ.

ಹಬ್ಬಗಳ ಸಂದರ್ಭಗಳ ಆಫರ್​​ ಉಪಯೋಗಿಸಬಹುದು

ಹಬ್ಬಗಳ ಸಂದರ್ಭದಲ್ಲಿ ಹೆಚ್ಚೆಚ್ಚು ವಸ್ತುಗಳು ಮಾರಾಟವಾಗಬೇಕೆಂದು ಕೆಲವು ಕಂಪನಿಗಳು ನೋ ಕಾಸ್ಟ್​ ಇಎಂಐ ಆಯ್ಕೆ ನೀಡುತ್ತವೆ. ಇಂಥ ಆಫರ್​ಗಳಲ್ಲಿ ಬಡ್ಡಿಯ ಮೊತ್ತವನ್ನು ಕಂಪನಿಗಳೇ ಪಾವತಿಸುತ್ತವೆ ಅಥವಾ ನಿರ್ದಿಷ್ಟ ಬ್ಯಾಂಕ್​ಗಳ ಜತೆ ಒಪ್ಪಂದ ಮಾಡಿಕೊಂಡು ಬಡ್ಡಿಯ ಮೊತ್ತ ಗ್ರಾಹಕರಿಗೆ ವರ್ಗಾವಣೆಯಾಗದಂತೆ ನೋಡಿಕೊಳ್ಳುತ್ತವೆ. ಇಂಥ ಸಂದರ್ಭವನ್ನು ಬಳಸಿಕೊಂಡು ನೋ ಕಾಸ್ಟ್ ಇಎಂಐ ಆಯ್ಕೆ ಮಾಡಿಕೊಳ್ಳಬಹುದು.

ಕ್ರೆಡಿಟ್ ಕಾರ್ಡ್ ಬಿಲ್ ಇಎಂಐಗೆ ಪರಿವರ್ತಿಸಬೇಕೇ?

ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ ನಂತರ ಅದನ್ನು ಇಎಂಐಗೆ ಪರಿವರ್ತಿಸುವುದು ಉತ್ತಮವೇ ಎಂಬ ಪ್ರಶ್ನೆ ಕೆಲವೊಮ್ಮೆ ಉದ್ಭವಿಸುತ್ತದೆ. ಆದರೆ ಇದು ಉತ್ತಮವಲ್ಲ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐಗೆ ಪರಿವರ್ತಿಸುವ ಸಂದರ್ಭಗಳಲ್ಲಿ ಬ್ಯಾಂಕ್​ಗಳು ವಿಪರೀತ ಬಡ್ಡಿ ವಿಧಿಸುತ್ತವೆ. ಇದರಿಂದ ವಸ್ತುವಿನ ನೈಜ ಮೌಲ್ಯಕ್ಕಿಂತಲೂ ಅತಿ ಹೆಚ್ಚು ಮೊತ್ತವನ್ನು ಪಾವತಿಸಿದಂತಾಗುತ್ತದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐಗೆ ಪರಿವರ್ತಿಸುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈಯಕ್ತಿಕ ಹಣಕಾಸು ತಜ್ಞರು.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Mon, 19 December 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್