Credit Card Closure: ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದು ಹೇಗೆ? ಇಲ್ಲಿದೆ ಪೂರ್ತಿ ವಿವರ
Credit Cards; ನೀವು ಅನೇಕ ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿದ್ದು, ಆ ಪೈಕಿ ಬೇಡದೇ ಇರುವುದನ್ನು ಕ್ಲೋಸ್ ಮಾಡಬೇಕೆಂದಿದ್ದರೆ ಹೇಗೆ ಮಾಡಬಹುದು ಎಂಬ ಪೂರ್ತಿ ವಿವರ ಇಲ್ಲಿದೆ.
ಕ್ರೆಡಿಟ್ ಕಾರ್ಡ್ (Credit Card) ಅನ್ನು ಕ್ಲೋಸ್ ಮಾಡಲು ಬಯಸಿದ್ದೀರಾ? ಈಗ ಹೊಸ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಿದಷ್ಟೇ ಸುಲಭವಾಗಿ ಕಾರ್ಡ್ ಅನ್ನು ಕ್ಲೋಸ್ ಸಹ ಮಾಡಬಹುದು. ನೀವು ಅನೇಕ ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿದ್ದು, ಆ ಪೈಕಿ ಬೇಡದೇ ಇರುವುದನ್ನು ಕ್ಲೋಸ್ ಮಾಡಬೇಕೆಂದಿದ್ದರೆ ಹೇಗೆ ಮಾಡಬಹುದು ಎಂಬ ಪೂರ್ತಿ ವಿವರ ಇಲ್ಲಿದೆ.
ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡುವ ಮೂಲಕ
ಯಾವ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಹೊಂದಿದ್ದೀರೋ ಅದರ ಗ್ರಾಹಕ ಸೇವಾ ವಿಭಾಗಕ್ಕೆ (ಕಸ್ಟಮರ್ ಸರ್ವೀಸ್ ಡಿಪಾರ್ಟ್ಮೆಂಟ್) ಕರೆ ಮಾಡಿ ಕ್ರೆಡಿಟ್ ಕಾರ್ಡ್ ರದ್ದತಿ ಅಥವಾ ಕ್ಲೋಸ್ ಮಾಡಲು ಮನವಿ ಮಾಡಬಹುದು.
ಲಿಖಿತ ಮನವಿ ಸಲ್ಲಿಸುವ ಮೂಲಕ
ಕ್ರೆಡಿಟ್ ಕಾರ್ಡ್ ರದ್ದು ಅಥವಾ ಕ್ಲೋಸ್ ಮಾಡುವಂತೆ ನಿಮಗೆ ಕಾರ್ಡ್ ಒದಗಿಸಿಕೊಟ್ಟ ಬ್ಯಾಂಕ್ ಮ್ಯಾನೇಜರ್ಗೆ ಲಿಖಿತ ಮನವಿ ಅಥವಾ ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆ, ಹೆಸರು, ವಿಳಾದ ಹಾಗೂ ಸಂಪರ್ಕ ಸಂಖ್ಯೆ ನಮೂದಿಸಬೇಕು.
ಇ-ಮೇಲ್ ಮೂಲಕ ಕ್ರೆಡಿಟ್ ಕಾರ್ಡ್ ರದ್ದತಿ
ಕ್ರೆಡಿಟ್ ಕಾರ್ಡ್ ನೀಡಿದ ಸಂಸ್ಥೆಗೆ ಇ-ಮೇಲ್ ಸಂದೇಶ ಕಳುಹಿಸುವ ಮೂಲಕ ಕಾರ್ಡ್ ರದ್ದತಿಗೆ ಮನವಿ ಮಾಡಬಹುದು. ನಿಮ್ಮ ವೈಯಕ್ತಿಕ ವಿವರ, ಯಾವ ಕ್ರೆಡಿಟ್ ಕಾರ್ಡ್ ರದ್ದು ಮಾಡಬೇಕು ಎಂಬುದನ್ನು ಮೇಲ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರಬೇಕು.
ಆನ್ಲೈನ್ ಮನವಿ ಸಲ್ಲಿಕೆ
ಕೆಲವು ಬ್ಯಾಂಕ್ಗಳು ಆನ್ಲೈನ್ ಮೂಲಕ ಕ್ರೆಡಿಟ್ ಕಾರ್ಡ್ ರದ್ದತಿಗೆ ಮನವಿ ಸಲ್ಲಿಸುವ ಅವಕಾಶ ನೀಡಿವೆ. ಈ ರೀತಿ ಮನವಿ ಸಲ್ಲಿಸಲು ಮೊದಲು ಬ್ಯಾಂಕ್ ವೆಬ್ಸೈಟ್ ಕ್ಲಿಕ್ ಮಾಡಿ. ಅರ್ಜಿ ನಮೂನೆಯನ್ನು ಓಪನ್ ಮಾಡಿ ಅದರಲ್ಲಿ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿ. ಆದರೆ, ಈ ರೀತಿಯ ಅರ್ಜಿ ಸಲ್ಲಿಸುವಾಗ ಬ್ಯಾಂಕ್ನ ಅಧಿಕೃತ ವೆಬ್ಸೈಟ್ನಲ್ಲೇ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಇಲ್ಲವಾದಲ್ಲಿ ವಿವರಗಳ ದುರ್ಬಳಕೆಯಾಘುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ: ಕಾರು ಖರೀದಿಗೆ ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಕಡಿಮೆ ಬಡ್ಡಿ, ಇಎಂಐ ಸೇರಿ ಈ ಅಂಶಗಳು ಗಮನದಲ್ಲಿರಲಿ
ಕಾರ್ಡ್ ರದ್ದತಿ ಮನವಿಗೂ ಮುನ್ನ ನೆನಪಿಟ್ಟುಕೊಳ್ಳಲೇಬೇಕಾದ ಅಂಶಗಳು
- ಕಾರ್ಡ್ ಕ್ಲೋಸ್ ಮಾಡಲು ಅರ್ಜಿ ಸಲ್ಲಿಸುವ ಮುನ್ನ ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಪಾವತಿ ಮಾಡಿರಬೇಕು.
- ಕ್ರೆಡಿಟ್ ಕಾರ್ಡ್ ನೀಡಿದ ಸಂಸ್ಥೆಯು ನಿಗದಿಪಡಿಸಿರುವ ಕ್ಲೋಸ್ / ರದ್ದತಿ ಮಾನದಂಡಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
- ಕಾರ್ಡ್ ರದ್ದತಿ ಮನವಿ ಸಲ್ಲಿಸುವ ಮುನ್ನ ರಿವಾರ್ಡ್ ಪಾಯಿಂಟ್ಗಳ ಪ್ರಯೋಜನ ಪಡೆದುಕೊಳ್ಳಿ. ಒಮ್ಮೆ ಕಾರ್ಡ್ ರದ್ದಾದರೆ, ಆ ಬಳಿಕ ನಿಮಗೆ ಯಾವುದೇ ರಿವಾರ್ಡ್ ಪಾಯಿಂಟ್ ಆಗಲಿ, ಆಫರ್ಗಳನ್ನಾಗಲಿ ಉಪಯೋಗಿಸಲು ಆಗುವುದಿಲ್ಲ.
- ಸ್ವಯಂಚಾಲಿತ ಬಿಲ್ ಪಾವತಿ ಚಾಲೂ ಮಾಡಿದ್ದರೆ ಅವುಗಳನ್ನೆಲ್ಲ ಮೊದಲು ರದ್ದುಗೊಳಿಸಿ. ಇಲ್ಲದಿದ್ದರೆ ಬ್ಯಾಂಕ್ ನಿಮ್ಮ ರದ್ದತಿ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಇದೆ.
- ಕ್ರೆಡಿಟ್ ಕಾರ್ಡ್ ರದ್ದತಿ ಅರ್ಜಿ ಸಲ್ಲಿಸಿದ ಬಳಿಕ, ಅದು ಯಾವಾಗ ರದ್ದಾಗುತ್ತದೆ ಎಂಬ ನಿರ್ದಿಷ್ಟ ದಿನಾಂಕವನ್ನು ತಿಳಿದುಕೊಳ್ಳಿ. ಇಲ್ಲವಾದಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿ ಬರುವ ಸಾಧ್ಯತೆಯೂ ಇದೆ.
ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Mon, 7 November 22