ಕಾರು ಖರೀದಿಗೆ ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಕಡಿಮೆ ಬಡ್ಡಿ, ಇಎಂಐ ಸೇರಿ ಈ ಅಂಶಗಳು ಗಮನದಲ್ಲಿರಲಿ

Car Loan; ಈ ವರ್ಷದ ಕೊನೆಯಲ್ಲಿ ಕಾರು ಖರೀದಿಸಲು, ಅದಕ್ಕಾಗಿ ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಅಂಶಗಳು ಗಮನದಲ್ಲಿರಲಿ.

ಕಾರು ಖರೀದಿಗೆ ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಕಡಿಮೆ ಬಡ್ಡಿ, ಇಎಂಐ ಸೇರಿ ಈ ಅಂಶಗಳು ಗಮನದಲ್ಲಿರಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 07, 2022 | 3:38 PM

ಕಂಪನಿಗಳು ನೀಡುವ ವಿವಿಧ ಆಫರ್​ಗಳಿಗೆ ಆಕರ್ಷಿತರಾಗಿ ವರ್ಷಾಂತ್ಯದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾರು ಖರೀದಿಗೆ ಮುಂದಾಗುತ್ತಿರುತ್ತಾರೆ. ಹೊಸ ಕಾರುಗಳು ಶೋರೂಮ್​ಗಳಿಗೆ ಬರುವುದರಿಂದ ಹಳೆಯ ಕಾರುಗಳ ಮಾರಾಟಕ್ಕಾಗಿ ಕಂಪನಿಗಳು ಹೊಸ ಹೊಸ ಆಫರ್​​ಗಳನ್ನು, ರಿಯಾಯಿತಿ ದರದ ಕೊಡುಗೆಗಳನ್ನು ಘೋಷಿಸುತ್ತವೆ. ಈ ವರ್ಷದ ಕೊನೆಯಲ್ಲಿ ಕಾರು (Car Buying) ಖರೀದಿಸಲು, ಅದಕ್ಕಾಗಿ ಸಾಲ (Car Loan) ಪಡೆಯಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಅಂಶಗಳು ಗಮನದಲ್ಲಿರಲಿ.

ಕ್ರೆಡಿಟ್ ಸ್ಕೋರ್

ಸಾಲ ಪಡೆಯುವಲ್ಲಿ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಿದ್ದರೆ ನಿಮಗೆ ಉತ್ತಮ ಬಡ್ಡಿ ದರ, ಇಎಂಐ ಆಫರ್​ಗಳನ್ನು ಬ್ಯಾಂಕ್​ಗಳು ನೀಡಬಹುದು. ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳುವ ಮೂಲಕ ಕಡಿಮೆ ಬಡ್ಡಿ, ಪ್ರಿ ಅಪ್ರೋವ್ಡ್​ (ಪೂರ್ವಾನಮತಿ ಸಾಲ) ಸಾಲಗಳ ಆಫರ್​ ಪಡೆಯಬಹುದು.

ಇದನ್ನೂ ಓದಿ
Image
Petrol Price on November 7: ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಕುಸಿತವಾಗಿಲ್ಲ ಪೆಟ್ರೋಲ್, ಡೀಸೆಲ್ ದರ
Image
ನೋಟು ಅಮಾನ್ಯೀಕರಣದ 6 ವರ್ಷಗಳ ನಂತರವೂ ಜನರಲ್ಲಿರುವ ನಗದು ₹ 30.88 ಲಕ್ಷ ಕೋಟಿ
Image
Personal Finance: ಮನಿ9 ಭಾರತದ ಮೊದಲ ಮತ್ತು ಅತಿದೊಡ್ಡ ಸ್ವತಂತ್ರ ಪರ್ಸನಲ್ ಫೈನಾನ್ಸ್​ ಸಮೀಕ್ಷೆಯ ಅವಲೋಕನ
Image
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ; ನ. 7ರಿಂದ 1 ವಾರದೊಳಗೆ 5 ದಿನ ಬ್ಯಾಂಕ್​ಗಳಿಗೆ ರಜೆ

ಮರು ಪಾವತಿ ಅವಧಿ

ಸಾಲವನ್ನು ನೀವು ಮರು ಪಾವತಿ ಮಾಡುವ ಅವಧಿ ಬಹಳ ಮುಖ್ಯದ್ದಾಗುತ್ತದೆ. ನೀವು ದೀರ್ಘಾವಧಿಯ ಮರುಪಾವತಿ ಆಯ್ಕೆ ಮಾಡಿಕೊಂಡಲ್ಲಿ ತಿಂಗಳ ಇಎಂಐ ಮೊತ್ತ ಕಡಿಮೆ ಬರಬಹುದು. ಆದರೆ, ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ ಎಂಬುದು ನೆನಪಿರಲಿ. ಒಂದು ವೇಳೆ ಕಡಿಮೆ ಅವಧಿಯ ಮರುಪಾವತಿ ಆಯ್ಕೆ ಮಾಡಿಕೊಂಡಲ್ಲಿ ಇಎಂಐ ಮೊತ್ತ ಹೆಚ್ಚು ಬರಬಹುದು. ಆದರೆ, ಬಡ್ಡಿ ದರ ಕಡಿಮೆ ಇರಬಹುದು. ಕಡಿಮೆ ಅವಧಿಗೆ ಕಾರು ಸಾಲ ಪಡೆದಾಗ ಸಾಮಾನ್ಯವಾಗಿ ಬ್ಯಾಂಕ್​ಗಳು ಕಡಿಮೆ ಬಡ್ಡಿ ದರದ ಆಫರ್ ನೀಡುತ್ತವೆ.

ಸಾಲದ ಮೊತ್ತ

ಮರುಪಾವತಿ ವೇಳೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳುವಲ್ಲಿ ಸಾಲದ ಮೊತ್ತ ಬಹಳ ಮುಖ್ಯವಾದದ್ದಾಗುತ್ತದೆ. ಹೆಚ್ಚು ಮೊತ್ತದ ಸಾಲ ಪಡೆದರೆ ಇಎಂಐ ಮೊತ್ತವೂ ಹೆಚ್ಚಾಗುತ್ತದೆ. ಹೆಚ್ಚು ಮೊತ್ತದ ಇಎಂಐ ಪಾವತಿ ತಡೆಯಲು ಸಾಲ ಮರುಪಾವತಿ ಅವಧಿ ಹೆಚ್ಚಿಸಬೇಕಾಗುತ್ತದೆ. ಇದಕ್ಕಾಗಿ ಸಾಲದ ಮೊತ್ತ ಅಂತಿಮಗೊಳಿಸುವ ಮುನ್ನ ಸಾಕಷ್ಟು ಯೋಚಿಸಿ.

ಈಗಾಗಲೇ ಸಾಲ ಪಡೆದಿದ್ದೀರಾ?

ಈಗಾಗಲೇ ನೀವು ಬೇರೆ ಉದ್ದೇಶಕ್ಕೆ ಸಾಲ ಪಡೆದಿದ್ದರೆ, ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಿದ್ದರೆ ಸಾಲ ಪಡೆಯುವ ಪ್ರಕ್ರಿಯೆ ಬಹು ಸುಲಭವಾಗಬಹುದು. ಸಾಲದಾತನಲ್ಲಿ ನಿಮ್ಮ ದಾಖಲೆಗಳು ಈಗಾಗಲೇ ಇರುವುದರಿಂದ ಸುಲಭವಾಗಿ ಸಾಲ ಪಡೆಯಬಹುದು. ಕೆಲವೊಂದು ದಾಖಲೆಗಳ ಶುಲ್ಕದಲ್ಲಿಯೂ ವಿನಾಯಿತಿ ದೊರೆಯಬಹುದು.

ಆದಾಯ

ಆದಾಯ ಉತ್ತಮವಾಗಿದ್ದರೆ, ಸಾಲ ಮರುಪಾವತಿ ಮಾಡಲು ಯಾವುದೇ ಹಣಕಾಸಿನ ಸಮಸ್ಯೆಗಳು ಎದುರಾಗದು. ಸಾಲದಾತರು ನಿಮ್ಮ ಅರ್ಹತೆಯನ್ನು ನಿರ್ಣಯಿಸಲು ಮತ್ತು ತ್ವರಿತವಾಗಿ ಸಾಲವನ್ನು ನೀಡಲು ಮುಂದಾಗಬಲ್ಲರು. ನಿಮ್ಮ ಆದಾಯ, ಮರು ಪಾವತಿ ಸಾಮರ್ಥ್ಯದ ಆಧಾರದಲ್ಲಿ ಸಾಲದ ಮೊತ್ತ ನಿರ್ಣಯಿಸುವುದು ಉತ್ತಮ.

ಬಡ್ಡಿ ದರ ಎಷ್ಟಿರಬಹುದು?

ಕಾರು ಖರೀದಿಗೆ ಸಾಲ ನೀಡುವಾಗ ಬ್ಯಾಂಕ್​ಗಳು ಬಡ್ಡಿ ದರ ನಿರ್ಣಯಿಸುವಲ್ಲಿ ಕ್ರೆಡಿಟ್ ಸ್ಕೋರ್ ಸೇರಿದಂತೆ ಅನೇಕ ಅಂಶಗಳು ಪಾತ್ರ ವಹಿಸುತ್ತವೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಕಡಿಮೆ ಬಡ್ಡಿ ದರದ ಆಫರ್ ದೊರೆಯಬಹುದು. ಸದ್ಯ ಕಾರು ಖರೀದಿ ಸಾಲಕ್ಕೆ ಶೇಕಡಾ 7.90ರಿಂದ ತೊಡಗಿ ಶೇಕಡಾ 10.40ರ ವರೆಗೂ ವಿವಿಧ ಬ್ಯಾಂಕ್​ಗಳು ಹಲವು ಪ್ರಮಾಣದಲ್ಲಿ ಬಡ್ಡಿ ನಿಗದಿಪಡಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್