Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ; ನ. 7ರಿಂದ 1 ವಾರದೊಳಗೆ 5 ದಿನ ಬ್ಯಾಂಕ್​ಗಳಿಗೆ ರಜೆ

ಮುಂಬರುವ ವಾರದಲ್ಲಿ ಅಂದರೆ ನವೆಂಬರ್ 7ರಿಂದ ನವೆಂಬರ್ 14ರವರೆಗೆ 5 ದಿನ ಬ್ಯಾಂಕುಗಳು ಮುಚ್ಚಿರುತ್ತವೆ.

Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ; ನ. 7ರಿಂದ 1 ವಾರದೊಳಗೆ 5 ದಿನ ಬ್ಯಾಂಕ್​ಗಳಿಗೆ ರಜೆ
ಸಾಂದರ್ಭಿಕ ಚಿತ್ರImage Credit source: PTI
Follow us
TV9 Web
| Updated By: ಆಯೇಷಾ ಬಾನು

Updated on:Nov 06, 2022 | 7:48 AM

ವೀಕೆಂಡ್ ಶುರುವಾಗಿದೆ. ಒಂದುವೇಳೆ ನಿಮಗೆ ಬ್ಯಾಂಕ್​ನಲ್ಲಿ ಕೆಲಸವಿದ್ದರೆ ಆದಷ್ಟು ಬೇಗ ವಾರದ ದಿನಗಳಲ್ಲಿ ಅದನ್ನು ಮುಗಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ, ಇನ್ನೊಂದು ವಾರದೊಳಗೆ ಹಲವು ದಿನಗಳ ಕಾಲ ಬ್ಯಾಂಕ್​ಗಳಿಗೆ ರಜೆ ಇರುತ್ತದೆ. ನ. 7ರಿಂದ 14ರವರೆಗೆ ಬ್ಯಾಂಕ್​ಗಳಿಗೆ (Bank Holidays) ಎಷ್ಟು ದಿನ ರಜೆಗಳಿವೆ ಎಂಬ ಮಾಹಿತಿ ಇಲ್ಲಿದೆ. ಹೀಗಾಗಿ, ಖುದ್ದಾಗಿ ಬ್ಯಾಂಕ್​ಗೆ ಹೋಗಿ ಯಾವುದಾದರೂ ತುರ್ತು ಕೆಲಸವಾಗಬೇಕು ಎನ್ನುವವರು ಬೇಗ ನಿಮ್ಮ ಕೆಲಸಗಳನ್ನು ಮುಗಿಸಿಕೊಳ್ಳಿ. ಹಾಗೇ, ರಜಾ ದಿನಗಳ ಬಗ್ಗೆಯೂ ತಿಳಿದುಕೊಳ್ಳಿ.

ನವೆಂಬರ್ ತಿಂಗಳಲ್ಲಿ ಶನಿವಾರ ಮತ್ತು ಭಾನುವಾರದ ವಾರಾಂತ್ಯದ ರಜೆಗಳನ್ನು ಸೇರಿಸಿ ಒಟ್ಟು 10 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮಾರ್ಗಸೂಚಿಗಳ ಪ್ರಕಾರ, ಆಯಾ ರಾಜ್ಯವನ್ನು ಅವಲಂಬಿಸಿ ಕೆಲವು ಪ್ರಾದೇಶಿಕ ರಜಾದಿನಗಳನ್ನು ಒಳಗೊಂಡಂತೆ ಎಲ್ಲಾ ಸಾರ್ವಜನಿಕ ರಜಾದಿನಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಮುಂಬರುವ ವಾರದಲ್ಲಿ ಅಂದರೆ ನವೆಂಬರ್ 7ರಿಂದ ನವೆಂಬರ್ 14ರವರೆಗೆ 5 ದಿನ ಬ್ಯಾಂಕುಗಳು ಮುಚ್ಚಿರುತ್ತವೆ.

ಇದನ್ನೂ ಓದಿ: IBPS SO 2022 Recruitment: ದೇಶದ ವಿವಿಧ ಬ್ಯಾಂಕ್​ಗಳಲ್ಲಿ ಖಾಲಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವೆಂಬರ್ 8: ಗುರುನಾನಕ್ ಜಯಂತಿ/ ಕಾರ್ತಿಕ ಪೂರ್ಣಿಮಾ/ ರಹಸ್ ಪೂರ್ಣಿಮೆಯ ಸಂದರ್ಭದಲ್ಲಿ ಐಜ್ವಾಲ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್ ಮತ್ತು ಹೈದರಾಬಾದ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಹಾಗೇ, ಜೈಪುರ, ಜಮ್ಮು, ಕಾನ್ಪುರ, ಕೊಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ರಾಯ್‌ಪುರ, ರಾಂಚಿ, ಶಿಮ್ಲಾ ಮತ್ತು ಶ್ರೀನಗರ ಸೇರಿದಂತೆ ಇತರ ಕಡೆಗಳಲ್ಲಿ ಬ್ಯಾಂಕ್‌ಗಳು ತೆರೆದಿರುತ್ತವೆ.

ನವೆಂಬರ್ 11 : ಕನಕದಾಸರ ಜಯಂತಿ/ ವಂಗಲ ಮಹೋತ್ಸವದ ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ. ಉಳಿದ ಸ್ಥಳಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.

ನವೆಂಬರ್ 13 : ಸೆಂಗ್ ಕುಟ್ಸ್ನೆಮ್ ಕಾರಣದಿಂದಾಗಿ ಶಿಲ್ಲಾಂಗ್‌ನಲ್ಲಿ ನ. 13ರಂದು ಬ್ಯಾಂಕ್‌ ರಜೆ ಇರುತ್ತದೆ. ಇದನ್ನು ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ. ಈ ಅವಧಿಯಲ್ಲಿ ಶಿಲ್ಲಾಂಗ್‌ನಲ್ಲಿ ಮಾತ್ರ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ: Bank Holidays in November: ನವೆಂಬರ್​ನಲ್ಲಿ ಬರೋಬ್ಬರಿ 10 ದಿನ ಬ್ಯಾಂಕ್ ರಜೆ, ಇಲ್ಲಿದೆ ವಿವರ

ಇವುಗಳ ಹೊರತಾಗಿ, ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಮುಚ್ಚಿರುತ್ತವೆ. ನವೆಂಬರ್ 12, ನವೆಂಬರ್ 13, ನವೆಂಬರ್ 20, ನವೆಂಬರ್ 26 ಮತ್ತು ನವೆಂಬರ್ 27 ಈ ದಿನಗಳಲ್ಲಿ ಬ್ಯಾಂಕ್​ಗಳಿಗೆ ರಜೆ ಇರುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ಜನರ ಅನುಕೂಲಕ್ಕಾಗಿ ಪ್ರತಿ ತಿಂಗಳು ಬ್ಯಾಂಕ್ ರಜೆ ಪಟ್ಟಿಯ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಸೆಂಟ್ರಲ್ ಬ್ಯಾಂಕ್ RBIನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಈ ಪಟ್ಟಿಯನ್ನು ಪರಿಶೀಲಿಸಬಹುದು. ಬ್ಯಾಂಕ್​ನಲ್ಲಿ ಪ್ರಮುಖ ಕೆಲಸಗಳಿದ್ದರೆ ರಜೆ ದಿನಗಳನ್ನು ನೋಡಿಕೊಂಡು ನಿಮ್ಮ ಕೆಲಸ ಮುಗಿಸಿಕೊಳ್ಳಿ. ಈ ರಜೆಗಳು ಬ್ಯಾಂಕ್​ಗೆ ಹೋಗಿ ಮಾಡುವ​ ವಹಿವಾಟಿಗೆ ಮಾತ್ರ ಅನ್ವಯವಾಗುತ್ತದೆ. ನೆಟ್ ಬ್ಯಾಂಕಿಂಗ್, ಎಟಿಎಂ, ಡಿಜಿಟಲ್ ಪೇಮೆಂಟ್ ಮೂಲಕ ನಿಮ್ಮ ಬ್ಯಾಂಕ್ ವಹಿವಾಟು ಮಾಡಿಕೊಳ್ಳಲು ಯಾವುದೇ ಸಮಸ್ಯೆ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 am, Sun, 6 November 22

ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಅಪ್ಪಾಜಿಯವರ ಅಭಿಮಾನಿಗಳಲ್ಲೇ ನಾವು ಅಪ್ಪ-ಅಮ್ಮನನ್ನು ಕಾಣುತ್ತೇವೆ: ಲಕ್ಷ್ಮಿ
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ