Bank Holidays in November: ನವೆಂಬರ್ನಲ್ಲಿ ಬರೋಬ್ಬರಿ 10 ದಿನ ಬ್ಯಾಂಕ್ ರಜೆ, ಇಲ್ಲಿದೆ ವಿವರ
ನವೆಂಬರ್ ತಿಂಗಳಲ್ಲಿ ಬ್ಯಾಂಕ್ಗಳಿಗೆ ಬರೋಬ್ಬರಿ 10 ದಿನ ರಜೆ ಇರಲಿದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ತುಸು ಅಡಚಣೆಯಾಗಬಹುದು.
ನವದೆಹಲಿ: ನವೆಂಬರ್ (November) ತಿಂಗಳಲ್ಲಿ ಬ್ಯಾಂಕ್ಗಳಿಗೆ ಬರೋಬ್ಬರಿ 10 ದಿನ ರಜೆ (Bank Holidays) ಇರಲಿದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ತುಸು ಅಡಚಣೆಯಾಗಬಹುದು. ಹೀಗಾಗಿ ಗ್ರಾಹಕರು ರಜೆಯ ಬಗ್ಗೆ ಮುಂಚಿತವಾಗಿ ತಿಳಿದುಕೊಂಡು ವ್ಯವಹಾರದ ಯೋಜನೆ ರೂಪಿಸಿಕೊಳ್ಳುವುದು ಒಳ್ಳೆಯದು. ಸಾರ್ವಜನಿಕ ರಜೆಗಳು, ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರಗಳ ರಜೆಯೂ ಸೇರಿದಂತೆ ಬ್ಯಾಂಕ್ಗಳ ನವೆಂಬರ್ ತಿಂಗಳ ರಜೆ ವಿವರ ಇಲ್ಲಿ ನೀಡಲಾಗಿದೆ.
ನವೆಂಬರ್ 1, ನವೆಂಬರ್ 8, ನವೆಂಬರ್ 11 ಹಾಗೂ ನವೆಂಬರ್ 23ರಂದು ಬ್ಯಾಂಕ್ಗಳು ರಜೆ ಇರಲಿವೆ.
ನವೆಂಬರ್ 1: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಬ್ಯಾಂಕ್ಗಳು ಈ ದಿನ ರಜೆ. ಕರ್ನಾಟಕ ರಾಜ್ಯ ಉದಯಿಸಿದ ವರ್ಷಾಚರಣೆ ಪ್ರಯುಕ್ತ ಪ್ರತಿ ವರ್ಷ ಈ ದಿನ ಬ್ಯಾಂಕ್ಗಳಿಗೆ ರಜೆ ನೀಡಲಾಗುತ್ತಿದೆ. ಬೆಂಹಗಳೂರು ಮತ್ತು ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಎಲ್ಲ ಬ್ಯಾಂಕ್ಗಳು ಈ ದಿನ ರಜೆ ಇರಲಿವೆ.
ನವೆಂಬರ್ 8: ಗುರು ನಾನಕ್ ಜಯಂತಿ / ಕಾರ್ತಿಕ ಪೌರ್ಣಿಮೆ ಪ್ರಯುಕ್ತ ಐಜ್ವಾಲ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ, ಕಾನ್ಪುರ, ಕೋಲ್ಕತ್ತ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ, ರಾಂಚಿ, ಶಿಮ್ಲಾ ಹಾಗೂ ಶ್ರೀನಗರಗಳಲ್ಲಿ ನವೆಂಬರ್ 8ರಂದು ಬ್ಯಾಂಕ್ಗಳು ರಜೆ ಇರಲಿವೆ. ಉಳಿದಂತೆ ದೇಶದ ಇತರ ಭಾಗಗಳಲ್ಲಿ ಕಾರ್ಯಾಚರಿಸಲಿವೆ. ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆಗಳು ದೊರೆಯಲಿವೆ.
ಇದನ್ನೂ ಓದಿ: Bank strike: ಸೇವಾ ಭದ್ರತೆಗೆ ಆಗ್ರಹಿಸಿ ನವೆಂಬರ್ 19ಕ್ಕೆ ಬ್ಯಾಂಕ್ ನೌಕರರ ಮುಷ್ಕರ
ನವೆಂಬರ್ 11: ಕನಕದಾಸ ಜಯಂತಿ/ ವಾಂಗಲಾ ಹಬ್ಬದ ನಿಮಿತ್ತ ಕರ್ನಾಟಕ ಮತ್ತು ಶಿಲ್ಲಾಂಗ್ನಲ್ಲಿ ಬ್ಯಾಂಕ್ಗಳು ನವೆಂಬರ್ 11ರಂದು ರಜೆ ಇರಲಿವೆ.
ನವೆಂಬರ್ 13: ಸೆಂಗ್ ಕಿಟ್ ಸೂಂಘ್ ಹಬ್ಬದ ಪ್ರಯುಕ್ತ ಶಿಲ್ಲಾಂಗ್ನಲ್ಲಿ ನವೆಂಬರ್ 13ರಂದು ಬ್ಯಾಂಕ್ಗಳಿಗೆ ರಜೆ ಇರಲಿದೆ. ಉಳಿದಂತೆ ದೇಶದ ಎಲ್ಲೆಡೆಯೂ ಕಾರ್ಯಾಚರಿಸಲಿವೆ.
ಆರ್ಬಿಐ ಪ್ರಕಾರ, ಈ ಎಲ್ಲ ರಜೆಗಳನ್ನು ‘ನೆಗೊಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆ್ಯಕ್ಟ್’ ಪ್ರಕಾರ ನೀಡಲಾಗುತ್ತದೆ.
ಈ ರಜೆಗಳು ಮಾತ್ರವಲ್ಲದೆ ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರಗಳಂದು ಬ್ಯಾಂಕ್ಗಳು ಕಾರ್ಯಾಚರಿಸುವುದಿಲ್ಲ. ಅಂದರೆ, ನವೆಂಬರ್ 6, ನವೆಂಬರ್ 12, ನವೆಂಬರ್ 13, ನವೆಂಬರ್ 20, ನವೆಂಬರ್ 26 ಹಾಗೂ ನವೆಂಬರ್ 27ರಂದು ಬ್ಯಾಂಕ್ಗಳು ರಜೆ ಇರಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ