IBPS SO 2022 Recruitment: ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿರುವ ಹುದ್ದೆಗಳಿಗೆ, ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿರುವ ಹುದ್ದೆಗಳಿಗೆ, ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಅರ್ಜಿ ಆಹ್ವಾನಿಸಿದೆ. ಖಾಲಿರುವ ಹುದ್ದೆಗಳಿಗೆ ಸ್ಪೆಷಲಿಸ್ಟ್ ಕೇಡರ್‌ನ ವಿವಿಧ ಹುದ್ದೆಗಳನ್ನು(IBPS SO 2022 Notification) ಭರ್ತಿ ಮಾಡಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇಲ್ಲಿದೆ ಮಾಹಿತಿ.
ಒಟ್ಟು ಹುದ್ದೆ: 710
ದಿನಾಂಕ :
ಅರ್ಜಿ ಸಲ್ಲಿಕೆ ಆರಂಭ: 01.11.2022
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 21.11.2022
ಶುಲ್ಕ ಪಾವತಿಸಲು 01.11.2022 ಆರಂಭವಾಗಲಿದೆ, ಕೊನೆಯ ದಿನಾಂಕ 21.11.2022 ಆಗಿರುತ್ತದೆ. 9
ಪರೀಕ್ಷೆ ದಿನಾಂಕ: 24.12.2022/ 31.12.2022
ಪ್ರಮುಖ ಪರೀಕ್ಷೆ ದಿನಾಂಕ: 29.01.2023
ಸಂದರ್ಶನ ಫೆಬ್ರವರಿ 2023ರಂದು ಯಾವ ದಿನಾಂಕ ಎಂದು ತಿಳಿಸಲಾಗುವುದು. ಹುದ್ದೆಗಳನ್ನು ಕೂಡ ಸಂದರ್ಶನದ ನಂತರ ಹಂಚಲಾಗುವುದು.
ಹುದ್ದೆಗಳು :
ಐಟಿ ಆಫೀಸರ್ (ಸ್ಕೇಲ್-1), ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್ (ಸ್ಕೇಲ್-1), ರಾಜಭಾಷಾ ಅಧಿಕಾರಿ (ಸ್ಕೇಲ್-1), ಕಾನೂನು ಅಧಿಕಾರಿ (ಸ್ಕೇಲ್-1), ಎಚ್‌ಆರ್/ಪರ್ಸೊನೆಲ್ ಆಫೀಸರ್ (ಸ್ಕೇಲ್-1), ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1) ಹುದ್ದೆಗಳನ್ನು ಐಬಿಪಿಎಸ್ ಸಿಆರ್‌ಪಿ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು.
ಹುದ್ದೆಗಳ ಸಂಖ್ಯೆ
ಐಟಿ ಆಫೀಸರ್- ಯೂನಿಯನ್ ಬ್ಯಾಂಕ್‌ನಲ್ಲಿ – 44
ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್, ಪಿಎನ್‌ಬಿ, ಯುಕೊ, ಯೂನಿಯನ್ ಬ್ಯಾಂಕ್ – 516
ರಾಜಭಾಷಾ ಅಧಿಕಾರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 25
ಲಾ ಆಫೀಸರ್- ಬ್ಯಾಂಕ್ ಆಫ್ ಬರೋಡಾದಲ್ಲಿ – 10
ಎಚ್‌ಆರ್- ಯೂನಿಯನ್ ಬ್ಯಾಂಕ್‌ನಲ್ಲಿ -15
ಮಾರ್ಕೆಟಿಂಗ್ ಆಫೀಸರ್- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ – 100
ಈ ಬ್ಯಾಂಕ್‌ಗಳಲ್ಲಿ ನೇಮಕ
ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಬ್ಯಾಂಕ್, ಪಂಜಾಬ್ ಆಂಡ್ ಸಿಂದ್ ಬ್ಯಾಂಕ್‌ಗಳು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ :
ಐಟಿ ಆಫೀಸರ್‌ಗೆ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್ಸ್/ ಇನ್‌ಫಾರ್ಮೆಷನ್ ಟೆಕ್ನಾಲಜಿ/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಕ್ಸ್ ಆಂಡ್ ಟೆಲಿ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಇನ್‌ಸ್ಟ್ರುಮೆಂಟೇಷನ್‌ನಲ್ಲಿ ನಾಲ್ಕು ವರ್ಷದ ಎಂಜಿನಿಯರಿಂಗ್/ಟೆಕ್ನಾಲಜಿ ಪದವಿ ಪಡೆದಿರಬೇಕು. ಅಥವಾ ಇದೇ ವಿಷಯಗಳಲ್ಲಿ ಪದವಿ ಪಡೆದಿರಬೇಕು. ಇದರ ಜೊತೆಗೆ ಅಗ್ರಿಕಲ್ಚರಲ್ ಫೀಲ್ಡ್ ಆಫೀಸರ್ ಹುದ್ದೆಗೆ ಅಗ್ರಿಕಲ್ಚರ್/ ಹಾರ್ಟಿಕಲ್ಚರ್/ ಅನಿಮಲ್ ಹಸ್ಬೆಂಡರಿ/ ವೆಟರ್ನರಿ ಸೈನ್ಸ್/ ಡೇರಿ ಸೈನ್ಸ್ ಇತ್ಯಾದಿ ವಿಷಯಗಳಲ್ಲಿ ನಾಲ್ಕು ವರ್ಷದ ಪದವಿ ಪಡೆದಿರಬೇಕು.
ವಯೋಮಿತಿ :
ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 20 ವರ್ಷ ಮತ್ತು 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗುತ್ತದೆ.
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು:
ಬೆಂಗಳೂರು, ಬೆಳಗಾವಿ, ಬೀದರ್, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಗಳಲ್ಲಿ ಆನ್‌ಲೈನ್ ಪರೀಕ್ಷಾ ಕೇಂದ್ರಗಳು ಇರಲಿವೆ.
Published On - 4:24 pm, Tue, 1 November 22