PSI Recruitment Scam: ಕಲಬುರಗಿ ಕೋರ್ಟ್​ಗೆ 6 ಪ್ರತ್ಯೇಕ ಚಾರ್ಜ್‌ಶೀಟ್​ಗಳನ್ನು ಸಲ್ಲಿಸಿದ ಸಿಐಡಿ

545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ  ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ, ಮತ್ತೆ ಆರು ಪ್ರತ್ಯೇಕ ಚಾರ್ಜ್‌ಶೀಟ್​ಗಳನ್ನು ಕಲಬುರಗಿ 3ನೇ ಜೆಎಂಎಫ್‌ಸಿ ಕೋರ್ಟ್‌ಗೆ ಸಲ್ಲಿಸಿದೆ.

PSI Recruitment Scam: ಕಲಬುರಗಿ ಕೋರ್ಟ್​ಗೆ 6 ಪ್ರತ್ಯೇಕ ಚಾರ್ಜ್‌ಶೀಟ್​ಗಳನ್ನು ಸಲ್ಲಿಸಿದ ಸಿಐಡಿ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 31, 2022 | 7:53 PM

ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ  ಅಕ್ರಮ ಪ್ರಕರಣಕ್ಕೆ (PSI Recruitment Scam) ಸಂಬಂಧಿಸಿದಂತೆ ಸಿಐಡಿ (CID), ಮತ್ತೆ ಆರು ಪ್ರತ್ಯೇಕ ಚಾರ್ಜ್‌ಶೀಟ್​ಗಳನ್ನು ಕಲಬುರಗಿ (Kalaburagi) 3ನೇ ಜೆಎಂಎಫ್‌ಸಿ ಕೋರ್ಟ್‌ಗೆ ಸಲ್ಲಿಸಿದೆ. ಕಲಬುರಗಿ ನಗರದ ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಹಾಗೂ ಅಶೋಕ್ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಚಾರ್ಜ್‌ಶೀಟ್​ನ್ನು ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇನ್ನು ಪ್ರಕರಣದಲ್ಲಿ ತೆಲೆ ಮೆರೆಸಿಕೊಂಡ ಉಳಿದ ಆರೋಪಿಗಳಿಗಾಗಿ ಸಿಐಡಿ ಶೋಧ ಕಾರ್ಯ ಮುಂದುವರೆಸಿದೆ.

ಅಶೋಕ್ ನಗರ ಪೊಲೀಸ್ ಠಾಣೆ ಕ್ರೈಂ ನಂಬರ್ 96/22 ಸಂಬಂಧ 788 ಪುಟ, ಕ್ರೈ ನಂಬರ್ 97/22 ಸಂಬಂಧ 1318 ಪುಟ, ಕ್ರೈಂ ನಂಬರ್ 98/22 ರ ಕೇಸ್ ಸಂಬಂಧ 1048 ಪುಟ, ಕ್ರೈಂ ನಂಬರ್ 99/22 ಸಂಬಂಧ 788 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಕ್ರೈಂ ನಂಬರ್ 57/22 ಸಂಬಂಧ 888 ಪುಟಗಳ ಚಾರ್ಜ್ ಶೀಟ್​ನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.

ಬಂಧಿತರ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲು

ಹಗರಣದಲ್ಲಿ ಬಂಧಿತರಾದವರ ಮೇಲೆ ಸಿಐಡಿ ಪೊಲೀಸರಿಂದ ಮತ್ತೊಂದು ಅಸ್ತ್ರ ಪ್ರಯೋಗ ಮಾಡಲಾಗಿದೆ. ಪಿಎಸ್​ಐ ನೇಮಕಾತಿ ಕೇಸ್​ನಲ್ಲಿ ಪಿ.ಸಿ. ಆಕ್ಟ್ ಅಳವಡಿಸಲಾಗಿದೆ. ಪಿಎಸ್​ಐ ನೇಮಕಾತಿ ಹಗರಣದ ಕೇಸ್​ನಲ್ಲಿ ಪಿ.ಸಿ. ಆಕ್ಟ್(ಪ್ರಿವೆನ್ಷನ್ ಆಫ್ ಕರಪ್ಷನ್ ಆಕ್ಟ್. ಭ್ರಷ್ಟಾಚಾರ ತಡೆ ಕಾಯ್ದೆ) ಅಳವಡಿಸಲಾಗಿದೆ. ಪಿಎಸ್​ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ದೃಡಪಟ್ಟಿದೆ. ಪಿಎಸ್ಐ ನೇಮಕಾತಿಗಾಗಿಯೇ ಪಡೆದಿದ್ದ ಸುಮಾರು 1.5 ಕೋಟಿಗೂ ಹೆಚ್ಚಿನ ಹಣ ಪತ್ತೆಯಾಗಿದೆ. ಹಣದ ಮೂಲ ಪರಿಶೀಲನೆ ಮಾಡಿದಾಗ ಅದು ಲಂಚ ಪಡೆದಿದ್ದು ಎಂದು ದೃಡಪಟ್ಟಿದೆ. ಹೀಗಾಗಿ ಲಂಚ ನೀಡಿದವರು ಹಾಗೂ ಲಂಚ ಪಡೆದವರ ವಿರುದ್ಧ ಹೊಸ ಸೆಕ್ಷನ್ ಅಡಿಯಲ್ಲಿ ಸಹ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಬಂಧಿತರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.

ಪಿ.ಸಿ. ಆಕ್ಟ್ ಹಾಕಿರುವ ಹಿನ್ನಲೆ ಕೋರ್ಟ್ ಬದಲಾವಣೆಯಾಗಲಿದೆ. ಇದುವರೆಗೆ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಕೇಸ್ ಇತ್ತು. ಆದರೆ ಇನ್ನು ಮುಂದೆ ಸಿಸಿಎಚ್ 23 ನೇ ನ್ಯಾಯಾಲಯದಲ್ಲಿ ಕೇಸ್ ನಡೆಯಲಿದೆ. ಹಣ ವರ್ಗಾವಣೆ ಹಾಗು ಬೇನಾಮಿ ಆಸ್ತಿ ಪತ್ತೆಯಾದ ಹಿನ್ನೆಲೆ ಇಡಿ ಸಹ ಪಿಎಸ್​ಐ ನೇಮಕಾತಿ ಹಗರಣದ ಕೇಸ್​ನಲ್ಲಿ ಎಂಟ್ರಿಯಾಗಲಿದೆ. ಅಲ್ಲದೆ ಈಗಾಗಲೇ ಕೆಲ ಆರೋಪಿಗಳನ್ನು ಇಡಿ ವಿಚಾರಣೆ ನಡೆಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:45 pm, Mon, 31 October 22