Personal Finance: ಮನಿ9 ಭಾರತದ ಮೊದಲ ಮತ್ತು ಅತಿದೊಡ್ಡ ಸ್ವತಂತ್ರ ಪರ್ಸನಲ್ ಫೈನಾನ್ಸ್​ ಸಮೀಕ್ಷೆಯ ಅವಲೋಕನ

RTI ಇಂಟರ್‌ನ್ಯಾಶನಲ್ ಫಾರ್ Money9 ಪರ್ಸನಲ್ ಫೈನಾನ್ಸ್​ಗೆ ಸಂಬಂಧಿಸಿದಂತೆ ಸರ್ವೇ ಮಾಡಿದ್ದು ಅದರ ಫಲಿತಾಂಶ ಈ ರೀತಿಯಾಗಿದೆ.

Personal Finance: ಮನಿ9 ಭಾರತದ ಮೊದಲ ಮತ್ತು ಅತಿದೊಡ್ಡ ಸ್ವತಂತ್ರ ಪರ್ಸನಲ್ ಫೈನಾನ್ಸ್​ ಸಮೀಕ್ಷೆಯ ಅವಲೋಕನ
Personal Finance
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 06, 2022 | 8:49 PM

ಬೆಂಗಳೂರು/ ನವದೆಹಲಿ: ಭಾರತದ ನಾಗರಿಕರ ಸರಾಸರಿ ಗಳಿಕೆ ಎಷ್ಟು ಅನ್ನೋದು ನಿಮಗೆ ಗೊತ್ತಾ? ಭಾರತೀಯರ ಉಳಿತಾಯ ಎಷ್ಟಿದೆ? ಅವರ ಜೀವನ ಮಟ್ಟ ಹೇಗಿದೆ ಮತ್ತು ಅವರ ಜೀವನದ ಮೇಲೆ ಕೊರೋನಾ ಯಾವ ಪರಿಣಾಮ ಬೀರಿದೆ? ಇದೇ ಮೊದಲ ಬಾರಿ ಈ ರೀತಿಯ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳನ್ನು ಪಡೆಯಲಾಗಿದೆ. ಮನಿ9 (Money9) ಪರ್ಸನಲ್ ಫೈನಾನ್ಸ್​ಗೆ ಸಂಬಂಧಿಸಿದಂತೆ ಸರ್ವೇ (Personal Finance) ನಡೆಸಿದ್ದು, ಫಲಿತಾಂಶವನ್ನು ನಿಮ್ಮ ಮುಂದೆ ಇಡಲಾಗುತ್ತಿದೆ. RTI ಇಂಟರ್‌ನ್ಯಾಶನಲ್ ಫಾರ್ Money9 ಈ ಸಮೀಕ್ಷೆ ನಡೆಸಿದೆ. ಈ ಸರ್ವೇಗಾಗಿ ದೇಶದ 31,500 ಕುಟುಂಬಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ದೇಶದ 100 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿಅತಿದೊಡ್ಡ ಪರ್ಸನಲ್ ಫೈನಾನ್ಸ್ ಸರ್ವೇ ನಡೆಸಿದ್ದು. ಇದು 1,150 ಕ್ಕೂ ಹೆಚ್ಚು ಗ್ರಾಮೀಣ ಮತ್ತು ನಗರ ವಾರ್ಡ್​ಗಳನ್ನು ಒಳಗೊಂಡಿತ್ತು. ಇನ್ನು 10 ಭಾಷೆಗಳಲ್ಲಿ ಈ ಸರ್ವೇ ನಡೆಸಿರುವುದು ಇನ್ನೊಂದು ವಿಶೇಷ.

ಸಮೀಕ್ಷೆಯ ಫಲಿತಾಂಶ ಹೀಗಿದೆ: 

1. ಉಳಿತಾಯ:

ದೇಶದಲ್ಲಿಯೇ ಕರ್ನಾಟಕ ರಾಜ್ಯದ ಕುಟುಂಬಗಳು ಅತಿ ಹೆಚ್ಚು ಉಳಿತಾಯ ಮಾಡುತ್ತಿವೆ.

ಕರ್ನಾಟಕದ ನಂತರ ಅತಿ ಹೆಚ್ಚಿನ ಉಳಿತಾಯ ಮಾಡುವ ರಾಜ್ಯ ಪಶ್ಚಿಮ ಬಂಗಾಳ.

ಭಾರತದ ಶೇ. 70 ರಷ್ಟು ಕುಟುಂಬಗಳು ಉಳಿತಾಯ ಮಾಡುತ್ತಿವೆ.

ಕೊರೋನಾ ಪರಿಣಾಮ ಭಾರತೀಯರ ಉಳಿತಾಯ ಕಡಿಮೆ ಆಗಿದೆ.

ಶೇ. 30 ರಷ್ಟು ಕುಟುಂಬಗಳಿಗೆ ಕೊರೋನಾ ಸಂದರ್ಭ ಯಾವುದೇ ಉಳಿತಾಯ ಮಾಡಲು ಸಾಧ್ಯವಾಗಿಲ್ಲ.

ಬ್ಯಾಂಕ್ ಖಾತೆಯಲ್ಲಿಯೇ ಶೇ. 64 ರಷ್ಟು ಉಳಿತಾಯ ಮಾಡಲಾಗುತ್ತಿದೆ.

2. ಚಿನ್ನದ ಹೂಡಿಕೆ:

ಗುಜರಾತ್ ರಾಜ್ಯದ ಸೂರತ್ ನಗರದ ಜನರ ಬಳಿ ದೇಶದಲ್ಲಿಯೇ ಅತಿ ಹೆಚ್ಚು ಚಿನ್ನವಿದೆ.

ಪ್ರತಿ 100 ಕುಟುಂಬಗಳಲ್ಲಿ 51 ಕುಟುಂಬಗಳು ಚಿನ್ನ ಹೊಂದಿವೆ.

ಭಾರತದ ಶೇ. 15 ಕುಟುಂಬಗಳು ಚಿನ್ನದಲ್ಲಿ ಉಳಿತಾಯ ಮಾಡುತ್ತಿವೆ.

ತಮಿಳುನಾಡು ದೇಶದಲ್ಲಿಯೇ ಅತಿ ಹೆಚ್ಚಿನ ಸಾಲ ಪಡೆದಿರುವ ರಾಜ್ಯ

ಕರ್ನಾಟಕವು ಅತ್ಯಧಿಕ ಪ್ರಮಾಣದ ಚಿನ್ನದ ಉಳಿತಾಯ ಹೊಂದಿದೆ.

ಕರ್ನಾಟಕದ ಪ್ರತಿ 100 ಕುಟುಂಬಗಳಲ್ಲಿ 38 ಕುಟುಂಬಗಳು ಚಿನ್ನ ಉಳಿತಾಯವಾಗಿ ಇಡುತ್ತವೆ.

ಬಿಹಾರ ಕೊನೆ ಸ್ಥಾನದಲ್ಲಿದ್ದು ರಾಜ್ಯದ 100 ಕುಟುಂಬಗಳಲ್ಲಿ 1 ಕುಟುಂಬ ಮಾತ್ರ ಚಿನ್ನದ ಉಳಿತಾಯ ಮಾಡುತ್ತಿವೆ.

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ 100 ಕುಟುಂಬಗಳಲ್ಲಿ 46 ಕುಟುಂಬಗಳು ಚಿನ್ನದ ಉಳಿತಾಯ ಹೊಂದಿವೆ.

ಚಿನ್ನದ ಉಳಿತಾಯದ ಟಾಪ್ 10 ಜಿಲ್ಲೆಗಳಲ್ಲಿ ಉತ್ತರ ಭಾರತದ ಯಾವುದೇ ಜಿಲ್ಲೆಗಳಿಲ್ಲ.

ಚಿನ್ನದ ಉಳಿತಾಯದಲ್ಲಿ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳದ್ದೇ ಪಾರಮ್ಯ.

ಅಗ್ರ 10 ಜಿಲ್ಲೆಗಳಲ್ಲಿ ಕರ್ನಾಟಕದ 4 ಮತ್ತು ಮಹಾರಾಷ್ಟ್ರ 3 ಜಿಲ್ಲೆಗಳು ಸೇರಿವೆ.

3. ವಿಮಾ ಹೂಡಿಕೆ:

ಕರ್ನಾಟಕದ ಬಳ್ಳಾರಿ ದೇಶದದಲ್ಲಿಯೇ ಅತಿ ಹೆಚ್ಚು ಇನ್ಶುರೆನ್ಸ್ ಖರೀದಿಸಿರುವ ನಗರ.

ಭಾರತದ ಶೇ. 19 ರಷ್ಟು ಕುಟುಂಬಗಳು ಜೀವನ್ ಭೀಮಾದಲ್ಲಿ ಉಳಿಕೆ ಮಾಡುತ್ತವೆ.

ಅಂದರೆ, 100 ರಲ್ಲಿ 81 ಕುಟುಂಬಗಳು ಇನ್ನೂ ಜೀವ ವಿಮಾ ರಕ್ಷಣೆಯನ್ನು ಹೊಂದಿಲ್ಲ!

ಕರ್ನಾಟಕದ ಪ್ರತಿ 100 ಕುಟುಂಬಗಳಲ್ಲಿ 38 ಕುಟುಂಬಗಳು ಜೀವ ವಿಮೆ ಮಾಡಿಸಿಕೊಂಡಿವೆ.

ಕರ್ನಾಟಕವು ಅತಿ ಹೆಚ್ಚು ಜೀವ ವಿಮಾ ಪಾಲಿಸಿಗಳನ್ನು ಹೊಂದಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ 100 ಕುಟುಂಬಗಳಲ್ಲಿ 27 ಕುಟುಂಬಗಳು ಜೀವ ವಿಮೆಯನ್ನು ತೆಗೆದುಕೊಂಡಿವೆ.

ಬಿಹಾರದ 100 ಕುಟುಂಬಗಳಲ್ಲಿ 7 ಮಾತ್ರ ಜೀವ ವಿಮಾ ಪಾಲಿಸಿಗಳನ್ನು ಹೊಂದಿವೆ.

ಶೇ. 58 ಕುಟುಂಬಗಳು ತಮ್ಮ ನಿವೃತ್ತಿಗಾಗಿ ಜೀವ ವಿಮೆ ಬೇಕು ಎಂಬ ಅಭಿಪ್ರಾಯ ಹೊಂದಿವೆ.

ಜನರು ಇನ್ನೂ ಎಲ್‌ಐಸಿಯ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದಾರೆ.

ಪ್ರತಿ 100 ಕುಟುಂಬಗಳಲ್ಲಿ 84 ಕುಟುಂಬಗಳು ಎಲ್‌ಐಸಿಯ ಜೀವ ವಿಮಾ ಪಾಲಿಸಿಗಾಗಿ ಎದುರುನೋಡುತ್ತಿವೆ.

4. ಆದಾಯ:

ಭಾರತೀಯ ಕುಟುಂಬಗಳ ಸರಾಸರಿ ಆದಾಯ ತಿಂಗಳಿಗೆ 23000 ರೂ.

ಭಾರತದ ಬಹುಪಾಲು ಜನಸಂಖ್ಯೆ ದುಡಿಯುವ ಅಥವಾ ಮಧ್ಯಮ ವರ್ಗಕ್ಕೆ ಸೇರಿದೆ.

ಶೇ. 46ರಷ್ಟು ಕುಟುಂಬಗಳು ತಿಂಗಳಿಗೆ 15 ಸಾವಿರಕ್ಕಿಂತ ಕಡಿಮೆ ಗಳಿಸುತ್ತಾರೆ.

ಶೇ. 40ರಷ್ಟು ಕುಟುಂಬಗಳು ತಿಂಗಳಿಗೆ 15-35ರೂ. ಗಳಿಸುತ್ತಾರೆ.

ಶೇ. 8ರಷ್ಟು ಕುಟುಂಬಗಳು ತಿಂಗಳಿಗೆ 35-50 ಸಾವಿರ ಗಳಿಸುತ್ತಾರೆ.

ಶೇ. 6ರಷ್ಟು ಕುಟುಂಬಗಳು ಮಾತ್ರ ತಿಂಗಳಿಗೆ 50 ಸಾವಿರಕ್ಕಿಂತ ಹೆಚ್ಚು ಆದಾಯ ಗಳಿಸುತ್ತವೆ.

ದೆಹಲಿಯಲ್ಲಿ ಸರಾಸರಿ ದೈನಂದಿನ ವೇತನ ಕೌಶಲ್ಯ ರಹಿತರಿಗೆ 646, ಅರೆ ಕೌಶಲ್ಯದವರಿಗೆ 712 ಮತ್ತು ನುರಿತ ಕಾರ್ಮಿಕರಿಗೆ 783 ರೂ, ಇದೆ.

5. ಹೂಡಿಕೆ:

100 ಭಾರತೀಯ ಕುಟುಂಬಗಳಲ್ಲಿ 22 ಕುಟುಂಬಗಳು ಹೂಡಿಕೆ ಮಾಡುವ ಅಭ್ಯಾಸ ಹೊಂದಿವೆ.

ಶೇ. 22 ಕುಟುಂಬಗಳು ಮಾತ್ರ ಶೇರುಗಳು, ಮ್ಯೂಚುವಲ್ ಫಂಡ್‌ಗಳು, ಯುಲಿಪ್‌ಗಳಲ್ಲಿ ಹೂಡಿಕೆ ಮಾಡುತ್ತಿವೆ.

50 ಸಾವಿರಕ್ಕಿಂತ ಹೆಚ್ಚಿನ ಮಾಸಿಕ ಆದಾಯ ಹೊಂದಿರುವ ವರ್ಗ ಶೇ. 45 ರಷ್ಟು ಹೂಡಿಕೆ ಮಾಡುತ್ತಿದೆ.

ಹೂಡಿಕೆಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ.

ಮಹಾರಾಷ್ಟ್ರದ ಶೇ. 38 ರಷ್ಟು ಜನ ಹೂಡಿಕೆ ಮಾಡುತ್ತಿದ್ದಾರೆ.

ಬಿಹಾರ, ಜಾರ್ಖಂಡ್ ಮತ್ತು ಓರಿಸ್ಸಾ ಕೊನೆಯ ಸ್ಥಾನದಲ್ಲಿವೆ.

6. ಖರ್ಚು-ವೆಚ್ಚ:

ಹೆಚ್ಚಿನ ಕುಟುಂಬಗಳು ಸೌಕರ್ಯಕ್ಕಾಗಿಯೇ ಹೆಚ್ಚಿನ ವೆಚ್ಚ ಮಾಡುತ್ತಿವೆ.

ಶೇ. 53ರಷ್ಟು ಜನ ಮೂಲಭೂತ ಜೀವನಮಟ್ಟ ಹೊಂದಿದ್ದಾರೆ.

ಶೇ. 44 ರಷ್ಟು ಜನ ಆರಾಮದಾಯಕ ಜೀವನಶೈಲಿಯನ್ನು ಹೊಂದಿದ್ದಾರೆ.

ಕೇವಲ ಶೇ. 3ರಷ್ಟು ಭಾರತೀಯ ಕುಟುಂಬಗಳು ಐಷಾರಾಮಿ ಜೀವನ ಮಟ್ಟವನ್ನು ಹೊಂದಿವೆ.

ಮತ್ತಷ್ಟು ವಾಣಿಜ್ಯ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:44 pm, Sun, 6 November 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ