ಸಿನಿಮೀಯ ರೀತಿಯ ಭೀಕರ ಅಪಘಾತ: ಸ್ಕೂಲ್ ವ್ಯಾನ್ ಡಿಕ್ಕಿಯಾದರೂ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಬಚಾವಾಗಿದ್ಹೇಗೆ ನೋಡಿ
ಬೆಂಗಳೂರಿನ ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯ ಕನ್ನಮಂಗಲ ಗೇಟ್ ಬಳಿ ಜೂನ್ 18 ರ ಬೆಳಗ್ಗೆ 10.30ರ ಸುಮಾರಿಗೆ ಸ್ಕೂಲ್ ವ್ಯಾನೊಂದು ಬೈಕ್ಗೆ ಡಿಕ್ಕಿಯಾಗಿ ಸವಾರ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಅತಿವೇಗವಾಗಿ ಬಂದ ಸ್ಕೂಲ್ ವ್ಯಾನ್ ಬೈಕ್ಗೆ ಡಿಕ್ಕಿಯಾದ ಣೀಕರ ದೃಶ್ಯ ಕಾರೊಂದರ ಡ್ಯಾಷ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ವಿಡಿಯೋ ಇಲ್ಲಿದೆ.
ಬೆಂಗಳೂರು, ಜೂನ್ 19: ಸ್ಕೂಲ್ ವ್ಯಾನೊಂದು ಅತಿವೇಗದಲ್ಲಿ ಬಂದು ಬೈಕ್ಗೆ ಡಿಕ್ಕಿಹೊಡೆದ ಭೀಕರ ದೃಶ್ಯ ಕಾರೊಂದರ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ. ಅದೃಷ್ಟವಶಾತ್, ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯ ಕನ್ನಮಂಗಲ ಗೇಟ್ ಬಳಿ ಬುಧವಾರ ಬೆಳಗ್ಗೆ 10.30 ರ ವೇಳೆಗೆ ಘಟನೆ ಸಂಭವಿಸಿದೆ. ಕನ್ನಮಂಗಲ ಗೇಟ್ ಮೂಲಕ ವೈಟ್ ಫೀಲ್ಡ್ ಕಡೆ ಅತಿ ವೇಗದಲ್ಲಿ ಬರುತ್ತಿದ್ದ ಸ್ಕೂಲ್ ವ್ಯಾನ್ ಸಿಗ್ನಲ್ ಬಳಿ ನಿಯಂತ್ರಣ ಸಿಗದೆ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದ ಬೈಕ್ ಸವಾರನಿಗೆ ಚಿಕಿತ್ಸೆ ನೀಡಲಾಗಿದೆ. ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos