ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಕೊನೆಗೊಳ್ಳಲಿ ಅಂತ ಯಾಕೆ ಟ್ರಂಪ್ ಬಯಸುತ್ತಿಲ್ಲ? ಅದಕ್ಕೆ ಕಾರಣವಿದೆ
ಯುದ್ದ ಮುಂದುವರಿಯಲಿ ಎಂದು ಟ್ರಂಪ್ ಅಂದುಕೊಳ್ಳುತ್ತಿರುವುದಕ್ಕೆ ಕಾರಣವಿದೆ. ಅದನ್ನು ವಾರ್ ಆಫ್ ಅಟ್ರೀಶನ್ ಅಂತ ಕರೆಯುತ್ತಾರೆ. ಆಫ್ ಕೋರ್ಸ್ ಯುಎಸ್ ಮತ್ತು ಇಸ್ರೆಲ್ ನಡುವೆ ಭಾರೀ ಸ್ನೇಹವಿದೆ. ಅದರೆ, ಈಗ ಇರಾನ್ ಜೊತೆ ಅದು ನಡೆಸುತ್ತಿರುವ ಯುದ್ಧದಲ್ಲಿ ಅದರ ಸಂಗ್ರಹದಲ್ಲಿರುವ ಶಸ್ತ್ರಾಸ್ತ್ರಗಳೆಲ್ಲ ಬರಿದಾಗಲಿ ಅಂತ ಅಮೆರಿಕ ಬಯಸುತ್ತದೆ. ಬತ್ತಳಿಕೆ ಬರಿದಾದರೆ ಅದು ಪುನಃ ಅಮೆರಿಕದ ಮೊರೆ ಹೋಗುತ್ತದೆ. ಇದು ಪ್ಲ್ಯಾನ್!
ಬೆಂಗಳೂರು, ಜೂನ್ 19: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ (Iran-Israel war) ಮುಂದವರಿಯುತ್ತಿರುವಂತೆಯೇ ವಿಶ್ವದ ದೊಡ್ಡಣ್ಣ ಎಂಬ ಅಪಖ್ಯಾತಿ ಹೊಂದಿರುವ ಅಮೆರಿಕ ಇರಾನ್ಗೆ ಎಚ್ಚರಿಕೆ ನೀಡುವುದನ್ನು ನಿಲ್ಲಿಸುತ್ತಿಲ್ಲ. ಅಮೆರಿಕಾಗಿರುವ ಚಿಂತೆ ಎಂದರೆ ಇರಾನ್ ದೇಶದ ಪರಮಾಣು ಕಾರ್ಯಕ್ರಮ. ತನ್ನಲ್ಲಿ ಯರೇನಿಯಂ ಸಂವರ್ಧನೆ ಕೇಂದ್ರಗಳಿಲ್ಲ ಮತ್ತು ನ್ಯೂಕ್ಲಿಯರ್ ಕಾರ್ಯಕ್ರಮದ ಯೋಚನೆ ತನಗಿಲ್ಲ ಎಂದ ಇರಾನ್ ಪದೇಪದೆ ಹೇಳುತ್ತಿದ್ದರೂ ಅಮೆರಿಕದ ಹಠಮಾರಿ ಅಧ್ಯಕ್ಷ ಮತ್ತು ಖುದ್ದು ಅಮೆರಿಕನ್ನರಿಗೆ ತಲೆನೋವಾಗಿರುವ ಡೊನಾಲ್ಡ್ ಟ್ರಂಪ್ ಅದನ್ನು ನಂಬುತ್ತಿಲ್ಲ. ಅವರ ಉದ್ದೇಶ ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ನಡೆಯುತ್ತಿರಬೇಕು. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿದ್ದ ಯುದ್ದವನ್ನು ವ್ಯಾಪಾರದ ಬೆದರಿಕೆಯೊಡ್ಡಿ ನಿಲ್ಲಿಸಿದೆ ಎಂದು ಸುಖಾಸುಮ್ಮನೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಟ್ರಂಪ್ ಗೆ ಇಸ್ರೇಲ್-ಇರಾನ್ ಯುದ್ದ ಮುಂದುವರಿಯುವುದು ಯಾಕೆ ಬೇಕೋ?
ಇದನ್ನೂ ಓದಿ: ಧಮ್ಕಿಯಿಂದ ಪ್ರಯೋಜನವಾಗಿಲ್ಲ, ಇರಾನ್ ವಿರುದ್ಧ ನೇರ ಸಮರಕ್ಕೆ ಸಿದ್ಧವಾದ ಅಮೆರಿಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ