AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಒಂಟೆ ಮೇಲೆ ಮಲಗಿ ಎಕ್ಸ್​ಪ್ರೆಸ್​ವೇನಲ್ಲಿ ಸವಾರಿ ಹೊರಟ ಕುಡುಕ

Video: ಒಂಟೆ ಮೇಲೆ ಮಲಗಿ ಎಕ್ಸ್​ಪ್ರೆಸ್​ವೇನಲ್ಲಿ ಸವಾರಿ ಹೊರಟ ಕುಡುಕ

ನಯನಾ ರಾಜೀವ್
|

Updated on:Jun 19, 2025 | 11:16 AM

Share

ಮದ್ಯಪಾನದ ಚಟ ತಾವು ಏನು ಮಾಡುತ್ತಿದ್ದೇವೆಂದು ತಮಗೇ ತಿಳಿಯದ ಪರಿಸ್ಥಿತಿಗೆ ತಂದೊಡ್ಡುತ್ತದೆ. ಅತಿಯಾಗಿ ಕುಡಿದ ವ್ಯಕ್ತಿಯೊಬ್ಬ ಒಂಟೆ ಮೇಲೆ ಮಲಗಿ ಹೈದರಾಬಾದ್ ಎಕ್ಸ್​ಪ್ರೆಸ್​ ವೇನಲ್ಲಿ ಸವಾರಿ ಹೊರಟಿದ್ದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಒಂಟೆಯಲ್ಲಿ ಕುಳಿತ ವ್ಯಕ್ತಿಯೊಬ್ಬ ಎಕ್ಸ್​ಪ್ರೆಸ್​ ವೇನಲ್ಲಿ ವಾಹನ ಸವಾರರಿಗೆ ಸಮಸ್ಯೆ ಸೃಷ್ಟಿಸಿದರು. ಇಕ್ರಂ ಉಲ್ಲಾ ಶಾ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ.

ಹೈದರಾಬಾದ್, ಜೂನ್ 19: ಮದ್ಯಪಾನದ ಚಟ ತಾವು ಏನು ಮಾಡುತ್ತಿದ್ದೇವೆಂದು ತಮಗೇ ತಿಳಿಯದ ಪರಿಸ್ಥಿತಿಗೆ ತಂದೊಡ್ಡುತ್ತದೆ. ಅತಿಯಾಗಿ ಕುಡಿದ ವ್ಯಕ್ತಿಯೊಬ್ಬ ಒಂಟೆ ಮೇಲೆ ಮಲಗಿ ಹೈದರಾಬಾದ್ ಎಕ್ಸ್​ಪ್ರೆಸ್​ ವೇನಲ್ಲಿ ಸವಾರಿ ಹೊರಟಿದ್ದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.

ಒಂಟೆಯಲ್ಲಿ ಕುಳಿತ ವ್ಯಕ್ತಿಯೊಬ್ಬ ಎಕ್ಸ್​ಪ್ರೆಸ್​ ವೇನಲ್ಲಿ ವಾಹನ ಸವಾರರಿಗೆ ಸಮಸ್ಯೆ ಸೃಷ್ಟಿಸಿದರು. ಇಕ್ರಂ ಉಲ್ಲಾ ಶಾ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ವಾಹನ ಸವಾರರೊಬ್ಬರು ಒಂಟೆಯನ್ನು ತಡೆದು ನಿಲ್ಲಿಸಿ ಅಲ್ಲೇ ಹಗ್ಗದಿಂದ ಕಂಬಕ್ಕೆ ಕಟ್ಟಿ, ಒಂಟೆ ಮೇಲಿದ್ದ ವ್ಯಕ್ತಿಯ ಮೇಲೆ ನೀರು ಚಿಮುಕಿಸಿರುವುದು ವಿಡಿಯೋದಲ್ಲಿ ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published on: Jun 19, 2025 11:10 AM