AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಂತ್ರಿಕ ದೋಷ: ಲೇಹ್​​ಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ದೆಹಲಿ(Delhi)ಯಿಂದ ಲೇಹ್​ಗೆ ಹೊರಟಿದ್ದ ಇಂಡಿಗೋ(IndiGo) ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ದೆಹಲಿಯಲ್ಲೇ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಂಡಿಗೋ ವಿಮಾನ 6E 2006 ಗುರುವಾರ ದೆಹಲಿಯಿಂದ ಲೇಹ್‌ಗೆ ಹೊರಟಿತ್ತು.ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನದಲ್ಲಿ 180 ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ.

ತಾಂತ್ರಿಕ ದೋಷ: ಲೇಹ್​​ಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
ಇಂಡಿಗೋ Image Credit source: Hindustan Times
ನಯನಾ ರಾಜೀವ್
|

Updated on: Jun 19, 2025 | 10:27 AM

Share

ನವದೆಹಲಿ, ಜೂನ್ 19: ದೆಹಲಿ(Delhi)ಯಿಂದ ಲೇಹ್​ಗೆ ಹೊರಟಿದ್ದ ಇಂಡಿಗೋ(IndiGo) ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ದೆಹಲಿಯಲ್ಲೇ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಂಡಿಗೋ ವಿಮಾನ 6E 2006 ಗುರುವಾರ ದೆಹಲಿಯಿಂದ ಲೇಹ್‌ಗೆ ಹೊರಟಿತ್ತು.ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನದಲ್ಲಿ 180 ಪ್ರಯಾಣಿಕರಿದ್ದರು, ಎಲ್ಲರೂ ಸುರಕ್ಷಿತವಾಗಿದ್ದಾರೆ.

ವಿಮಾನ ತುರ್ತು ಭೂಸ್ಪರ್ಶದ ನಂತರ, ಇಂಡಿಗೋದಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ವಿಮಾನದಲ್ಲಿ ಯಾವ ತಾಂತ್ರಿಕ ದೋಷ ಕಂಡುಬಂದಿದೆ ಎಂಬುದರ ಕುರಿತು ಇಂಡಿಗೋ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಕೊಚ್ಚಿ-ದೆಹಲಿ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಜೂನ್ 17 ರ ಮಂಗಳವಾರ, ಕೊಚ್ಚಿಯಿಂದ ದೆಹಲಿಗೆ ಹೋಗುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಬಾಂಬ್ ಬೆದರಿಕೆ ಬಂದ ನಂತರ, ವಿಮಾನವನ್ನು ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಬೆಳಗ್ಗೆ 9.31ಕ್ಕೆ ಕೊಚ್ಚಿಯಿಂದ ವಿಮಾನ ಹೊರಟ ಕೂಡಲೇ ವಿಮಾನಯಾನ ಸಂಸ್ಥೆಯ ಅಧಿಕೃತ ಐಡಿಗೆ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಈ ಸಮಯದಲ್ಲಿ ವಿಮಾನವು ಮಸ್ಕತ್‌ನಿಂದ ಕೊಚ್ಚಿ ತಲುಪಿತ್ತು. ನಂತರ ಅದು ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ವಿಮಾನದಲ್ಲಿ 157 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಇದ್ದರು.

ಹಾರಾಟದ ಸಮಯದಲ್ಲಿ ಪ್ರಕ್ಷುಬ್ಧತೆಯ ಅನುಭವ ಜೂನ್ 16 ರಂದು, ಗೋವಾದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನವು ಹವಾಮಾನ ಬದಲಾವಣೆಯಿಂದಾಗಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತು ಎನ್ನುವ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ವಿಮಾನವು ಸುರಕ್ಷಿತವಾಗಿ ಇಳಿಯಿತು ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿತು. ಬಲವಾದ ಗಾಳಿಯಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದರು.

ಮತ್ತಷ್ಟು ಓದಿ: ಬಾಂಬ್ ಬೆದರಿಕೆ: ಕೊಚ್ಚಿಯಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ರಾಯ್‌ಪುರ ವಿಮಾನ ನಿಲ್ದಾಣದಲ್ಲಿ ಬುಧವಾರ ತಾಂತ್ರಿಕ ದೋಷ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ದೆಹಲಿ-ರಾಯ್‌ಪುರ ಇಂಡಿಗೊ ವಿಮಾನದ ಬಾಗಿಲು ಜಾಮ್ ಆಗಿ ಸುಮಾರು 40 ನಿಮಿಷಗಳ ಕಾಲ ಪ್ರಯಾಣಿಕರು ವಿಮಾನದೊಳಗೆ ಸಿಲುಕಿಕೊಂಡಿದ್ದರು.

ಮಧ್ಯಾಹ್ನ 2.25 ಕ್ಕೆ ನಿಗದಿತ ಸಮಯಕ್ಕೆ ಇಳಿದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ವಿಮಾನದ ನಿರ್ಗಮನ ದ್ವಾರ ಜಾಮ್ ಆಗಿ, ಇಳಿಯುವ ಪ್ರಕ್ರಿಯೆ ವಿಳಂಬವಾಯಿತು. ಲ್ಯಾಂಡಿಂಗ್ ಸರಾಗವಾಗಿ ನಡೆದರೂ, ಪ್ರಯಾಣಿಕರು ಅರ್ಧ ಗಂಟೆಗೂ ಹೆಚ್ಚು ಕಾಲ ಕ್ಯಾಬಿನ್‌ನಲ್ಲಿ ಕುಳಿತಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದೆಹಲಿಯಲ್ಲಿ ರಸ್ತೆ ಮಧ್ಯೆ ಮಹಿಳೆಯಿಂದ ಸರ ದೋಚಿ, ಕೊಂದು ಪರಾರಿ
ದೆಹಲಿಯಲ್ಲಿ ರಸ್ತೆ ಮಧ್ಯೆ ಮಹಿಳೆಯಿಂದ ಸರ ದೋಚಿ, ಕೊಂದು ಪರಾರಿ
ದುಪಟ್ಟಾವನ್ನೇ ಹರಿದು ಉತ್ತರಾಖಂಡದ ಸಿಎಂಗೆ ರಾಖಿ ಕಟ್ಟಿದ ಗುಜರಾತ್ ಮಹಿಳೆ
ದುಪಟ್ಟಾವನ್ನೇ ಹರಿದು ಉತ್ತರಾಖಂಡದ ಸಿಎಂಗೆ ರಾಖಿ ಕಟ್ಟಿದ ಗುಜರಾತ್ ಮಹಿಳೆ
ವರಮಹಾಲಕ್ಷ್ಮಿ ಹಬ್ಬ: ಚಾಮುಂಡೇಶ್ವರಿ ದೇವಿಗೆ ನೋಟುಗಳಿಂದ ಅಲಂಕಾರ
ವರಮಹಾಲಕ್ಷ್ಮಿ ಹಬ್ಬ: ಚಾಮುಂಡೇಶ್ವರಿ ದೇವಿಗೆ ನೋಟುಗಳಿಂದ ಅಲಂಕಾರ
ಕಳೆದ 40-ವರ್ಷದಿಂದ ಬಿಜ್ಜನಗೆರಾದಲ್ಲಿ ಭಿಕ್ಷಾಟನೆ ನಡೆಸುತ್ತಿರುವ ರಂಗಮ್ಮ
ಕಳೆದ 40-ವರ್ಷದಿಂದ ಬಿಜ್ಜನಗೆರಾದಲ್ಲಿ ಭಿಕ್ಷಾಟನೆ ನಡೆಸುತ್ತಿರುವ ರಂಗಮ್ಮ
ರಭಸವಾಗಿ ಹರಿಯುತ್ತಿರುವ ಹಳ್ಳ: ಯಲ್ಲಮ್ಮನ ಗುಡ್ಡಕ್ಕೆ ಹೋಗುವ ರಸ್ತೆ ಬಂದ್​
ರಭಸವಾಗಿ ಹರಿಯುತ್ತಿರುವ ಹಳ್ಳ: ಯಲ್ಲಮ್ಮನ ಗುಡ್ಡಕ್ಕೆ ಹೋಗುವ ರಸ್ತೆ ಬಂದ್​
ಮುಖ್ಯ ಚುನಾವಣಾಧಿಕಾರಿ ಮನವಿಗಳಿಗೆ ಸ್ಪಂದಿಸಿದ್ದಾರೆ: ಶಿವಕುಮಾರ್
ಮುಖ್ಯ ಚುನಾವಣಾಧಿಕಾರಿ ಮನವಿಗಳಿಗೆ ಸ್ಪಂದಿಸಿದ್ದಾರೆ: ಶಿವಕುಮಾರ್
ಪ್ರಜ್ವಲ್ ಪ್ರಕರಣ; ಕಾನೂನು ಹೋರಾಟ ಮುಂದುವರಿಸಲು ಕುಟುಂಬದ ನಿರ್ಣಯ: ಶಾಸಕ
ಪ್ರಜ್ವಲ್ ಪ್ರಕರಣ; ಕಾನೂನು ಹೋರಾಟ ಮುಂದುವರಿಸಲು ಕುಟುಂಬದ ನಿರ್ಣಯ: ಶಾಸಕ
ವಿಷ್ಣುವರ್ಧನ್ ಸಮಾಧಿ ನೆಲಸಮ; ಅಭಿಮಾನ್ ಸ್ಟುಡಿಯೋದಲ್ಲಿ ಪೊಲೀಸ್ ಭದ್ರತೆ
ವಿಷ್ಣುವರ್ಧನ್ ಸಮಾಧಿ ನೆಲಸಮ; ಅಭಿಮಾನ್ ಸ್ಟುಡಿಯೋದಲ್ಲಿ ಪೊಲೀಸ್ ಭದ್ರತೆ
ಮತಗಳ್ಳತನ ಆರೋಪ: ಟಿವಿ9 ರಿಯಾಲಿಟಿ ಚೆಕ್​ ನಲ್ಲಿ ಸತ್ಯ ಬಯಲು
ಮತಗಳ್ಳತನ ಆರೋಪ: ಟಿವಿ9 ರಿಯಾಲಿಟಿ ಚೆಕ್​ ನಲ್ಲಿ ಸತ್ಯ ಬಯಲು
ಠುಸ್ ಪಟಾಕಿ ಅನ್ನುವವರು ಅದನ್ನು ಕೈಯಲ್ಲಿ ಹಿಡಿದು ತೋರಿಸಲಿ: ಪ್ರಿಯಾಂಕ್
ಠುಸ್ ಪಟಾಕಿ ಅನ್ನುವವರು ಅದನ್ನು ಕೈಯಲ್ಲಿ ಹಿಡಿದು ತೋರಿಸಲಿ: ಪ್ರಿಯಾಂಕ್