ನಿಮ್ಮ ಪಿಎಫ್​ ಖಾತೆಗೂ ಬಂತೇ ಇಪಿಎಫ್​ ಬಡ್ಡಿ ಹಣ, ಪರಿಶೀಲಿಸುವುದು ಹೇಗೆ? ಇಲ್ಲಿದೆ ನೋಡಿ

ಬಹಳ ತಡವಾಗಿ 2021-2022ನೇ ಹಣಕಾಸು ವರ್ಷದ ಬಡ್ಡಿಯನ್ನು ಉದ್ಯೋಗಿಗಳ ಪಿಎಫ್​ ಖಾತೆಗೆ ಕ್ರೆಡಿಟ್ ಮಾಡಲು ಇಪಿಎಫ್​ ಆರಂಭಿಸಿದೆ. ಪಿಎಫ್ ಖಾತೆಗೆ ಬಡ್ಡಿ ಹಣ ಜಮೆಯಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಹೇಗೆಂಬ ಮಾಹಿತಿ ಇಲ್ಲಿದೆ.

ನಿಮ್ಮ ಪಿಎಫ್​ ಖಾತೆಗೂ ಬಂತೇ ಇಪಿಎಫ್​ ಬಡ್ಡಿ ಹಣ, ಪರಿಶೀಲಿಸುವುದು ಹೇಗೆ? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 08, 2022 | 1:16 PM

ಬಹಳ ತಡವಾಗಿ 2021-2022ನೇ ಹಣಕಾಸು ವರ್ಷದ ಬಡ್ಡಿಯನ್ನು ಉದ್ಯೋಗಿಗಳ ಪಿಎಫ್ ಖಾತೆಗೆ (PF Accounts) ಕ್ರೆಡಿಟ್ ಮಾಡಲು ಇಪಿಎಫ್​ ಆರಂಭಿಸಿದೆ. ವಿಳಂಬದಿಂದಾಗಿ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ನಷ್ಟವಾಗದು ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಅಥವಾ ಇಪಿಎಫ್​ಒ (EPFO) ಭರವಸೆ ನೀಡಿದೆ. ಫಲಾನುಭವಿಗಳ ಪಿಎಫ್ ಖಾತೆಗೆ ಬಡ್ಡಿ ಮೊತ್ತವನ್ನು ಕ್ರೆಡಿಟ್ ಮಾಡುವ ಪ್ರಕ್ರಿಯೆಗೆ ಕಳೆದ ತಿಂಗಳು ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಬಡ್ಡಿಯ ಮೊತ್ತ ಅವರ ಖಾತೆಗೆ ಜಮೆಯಾಗಲಿದೆ ಎಂದು ಇಪಿಎಫ್​ಒ ಹೇಳಿದೆ. ಹಾಗಿದ್ದರೆ ಪಿಎಫ್ ಖಾತೆಗೆ ಬಡ್ಡಿ ಹಣ ಜಮೆಯಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ? ಹಂತ-ಹಂತದ ಮಾಹಿತಿ ಇಲ್ಲಿ ನೀಡಲಾಗಿದೆ.

ಪಾಸ್​ಬುಕ್​ ಮೂಲಕ ಇಪಿಎಫ್​ಒ ಬ್ಯಾಲೆನ್ಸ್ ಪರಿಶೀಲಿಸುವುದು ಒಂದು ಪ್ರಮುಖ ವಿಧಾನ. 12 ಡಿಜಿಟ್​ನ ಸಾರ್ವತ್ರಿಕ ಖಾತೆ ಸಂಖ್ಯೆ ಅಥವಾ ಯುಎಎನ್ (UAN) ಮೂಲಕ ಇಪಿಎಫ್​ಒ ಬ್ಯಾಲೆನ್ಸ್ ಪರಿಶೀಲಿಸಬಹುದಾಗಿದೆ. ಪರಿಶೀಲನೆಯ ಹಂತಗಳನ್ನು ಇಲ್ಲಿ ನೀಡಲಾಗಿದೆ.

ಹಂತ 1. epfindia.gov.in. ವೆಬ್​ಸೈಟ್​ಗೆ ಭೇಟಿ ನೀಡಿ

ಇದನ್ನೂ ಓದಿ
Image
Stock Market: ಷೇರುಪೇಟೆ ವಹಿವಾಟಿಗೆ ಇಂದು ಬಿಡುವು; ಕಾರಣವೇನು?
Image
Petrol Price on November 8: ಬಳ್ಳಾರಿಯಲ್ಲಿ ಪೆಟ್ರೋಲ್ ಬೆಲೆ 1 ರೂ. ಕುಸಿತ; ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ ಡೀಸೆಲ್ ದರ ಹೀಗಿದೆ
Image
Gold Price Today: ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆ; ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿನ ದರ ವಿವರ ಇಲ್ಲಿದೆ
Image
2 ಲಕ್ಷ ರೂ. ಕವರೇಜ್​; ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

ಹಂತ 2. ಡ್ಯಾಶ್​ಬೋರ್ಡ್​ನ ಮೇಲ್ಭಾಗದಲ್ಲಿ ‘ಸರ್ವೀಸಸ್ (ಸೇವೆಗಳು)’ ಎಂಬ ಆಯ್ಕೆ ಇದೆ. ಅದರಲ್ಲಿ ‘For Employees’ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3. ಈಗ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಅದರಲ್ಲಿ ‘ಸರ್ವೀಸಸ್’ ಆಯ್ಕೆ ಅಡಿಯಲ್ಲಿ ಮೊದಲಿಗೆ ‘Member Passbook’ ಅನ್ನು ಕ್ಲಿಕ್ ಮಾಡಿ. ಅಷ್ಟರಲ್ಲಿ ಮತ್ತೊಂದು ಪುಟಕ್ಕೆ ರಿಡೈರೆಕ್ಟ್ ಆಗುತ್ತದೆ.

ಹಂತ 4. ಯುಎಎನ್ ಸಂಖ್ಯೆ ಮತ್ತು ಪಾಸ್​ವರ್ಡ್ ನಮೂದಿಸಿ. ಕ್ಯಾಪ್ಚಾ ಕೋಡ್ ಸಹ ನಮೂದಿಸಿ ಲಾಗಿನ್ ಆಗಿ.

ಹಂತ 5. ಲಾಗಿನ್ ಆದ ಬಳಿಕ ಪೋರ್ಟಲ್ ನಿಮ್ಮ ಇಪಿಎಫ್ ಖಾತೆಗೆ ರಿಡೈರೆಕ್ಟ್ ಆಗುತ್ತದೆ. ಇಲ್ಲಿ ನೀವು ಉದ್ಯೋಗದಾತರು ಮತ್ತು ನಿಮ್ಮ ಕೊಡುಗೆ, ಗಳಿಸಿದ ಬಡ್ಡಿಯ ವಿವರ ನೋಡಬಹುದು.

ಇದನ್ನೂ ಓದಿ: EPFO Clarification: ವೇತನ ರಹಿತ ರಜೆಯಲ್ಲಿದ್ದಾಗ ಮೃತಪಟ್ಟರೂ ಡೆತ್ ಬೆನಿಫಿಟ್​ ಪಡೆಯಬಹುದು; ಇಪಿಎಫ್​ಒ

ನೀವು ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರೆ ನಿಮ್ಮ ಪಾಸ್​ಬುಕ್​ನಲ್ಲಿ ವಿವಿಧ ಐಡಿಗಳ ಮೂಲಕ ಬ್ಯಾಲೆನ್ಸ್ ಪರಿಶೀಲಿಸಬಕಾಗುತ್ತದೆ. ನಿಮ್ಮ ಸಾಲರಿ ಸ್ಲಿಪ್​​ನಲ್ಲಿ ಇಪಿಎಫ್​ಒ ಐಡಿ ಉಲ್ಲೇಖಿಸಿರುತ್ತಾರೆ.

ಎಸ್​ಎಂಎಸ್​ / ಮಿಸ್ಡ್ ಕಾಲ್ ಮೂಲಕವೂ ಬ್ಯಾಲೆನ್ಸ್ ಪರಿಶೀಲಿಸಿ

ಎಸ್​ಎಂಎಸ್​ ಅಥವಾ ಮಿಸ್ಡ್ ಕಾಲ್ ಮೂಲಕವೂ ಪಿಎಫ್ ಖಾತೆ ಬ್ಯಾಲೆನ್ಸ್ ಪರಿಶೀಲಿಸಬಹುದಾಗಿದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ‘EPFOHO UAN ENG’ ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಎಸ್​ಎಂಎಸ್ ಮಾಡಿ. ನಿಮ್ಮ ಮೊಬೈಲ್​ಗೆ ಬ್ಯಾಲೆನ್ಸ್ ವಿವರಗಳ ಸಂದೇಶ ಬರುತ್ತದೆ. 011-22901406 ಅಥವಾ 9966044425 ಕ್ಕೆ ಮಿಸ್ಡ್ ಕಾಲ್ ಕೊಡುವ ಮೂಲಕವೂ ಬ್ಯಾಲೆನ್ಸ್ ವಿವರ ಪಡೆಯಬಹುದಾಗಿದೆ.

ಈ ಎರಡೂ ವಿಧಾನಗಳ ಮೂಲಕ ಒಟ್ಟಾರೆ ಬ್ಯಾಲೆನ್ಸ್ ಮೊತ್ತದ ವಿವರಗಳನ್ನು ಮಾತ್ರ ಪಡೆಯಬಹುದಾಗಿದೆ. ನಿರ್ದಿಷ್ಟ ಹಣಕಾಸು ವರ್ಷದ ಪ್ರತ್ಯೇಕ ವಿವರ ದೊರೆಯದು ಎಂಬುದು ನೆನಪಿರಲಿ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ