EPFO Clarification: ವೇತನ ರಹಿತ ರಜೆಯಲ್ಲಿದ್ದಾಗ ಮೃತಪಟ್ಟರೂ ಡೆತ್ ಬೆನಿಫಿಟ್​ ಪಡೆಯಬಹುದು; ಇಪಿಎಫ್​ಒ

ಉದ್ಯೋಗಿಯು ವೇತನ ರಹಿತ ರಜೆಯಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟರೂ ಅವರು ನಾಮನಿರ್ದೇಶನ ಮಾಡಿದ ವ್ಯಕ್ತಿ ಡೆತ್ ಬೆನಿಫಿಟ್​ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಸ್ಪಷ್ಟಪಡಿಸಿದೆ.

EPFO Clarification: ವೇತನ ರಹಿತ ರಜೆಯಲ್ಲಿದ್ದಾಗ ಮೃತಪಟ್ಟರೂ ಡೆತ್ ಬೆನಿಫಿಟ್​ ಪಡೆಯಬಹುದು; ಇಪಿಎಫ್​ಒ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Oct 21, 2022 | 3:58 PM

ನವದೆಹಲಿ: ಉದ್ಯೋಗಿಯು ವೇತನ ರಹಿತ ರಜೆಯಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟರೂ ಭವಿಷ್ಯ ನಿಧಿ ಖಾತೆದಾರರಾಗಿದ್ದರೆ (PF) ಅವರು ನಾಮನಿರ್ದೇಶನ ಮಾಡಿದ ವ್ಯಕ್ತಿ ಡೆತ್ ಬೆನಿಫಿಟ್​ಗಳನ್ನು (ಉದ್ಯೋಗಿಗಳ ಠೇವಣಿ ಸಂಬಂಧಿತ ವಿಮೆ ಅಥವಾ EDLI) ಪಡೆಯಲು ಅರ್ಹರಾಗಿರುತ್ತಾರೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಸ್ಪಷ್ಟಪಡಿಸಿದೆ. ಉದ್ಯೋಗಿಗಳು ವೇತನ ರಹಿತ ರಜೆಯಲ್ಲಿದ್ದಾರೆ ಹಾಗೂ ಅವರಿಂದ ಭವಿಷ್ಯ ನಿಧಿ ಖಾತೆಗೆ ಹಣ ಸಂದಾಯವಾಗುತ್ತಿಲ್ಲ ಎಂದಾದರೂ ಡೆತ್ ಬೆನಿಫಿಟ್​ಗಳನ್ನು ನಿರಾಕರಿಸುವಂತಿಲ್ಲ ಎಂದು ಇಪಿಎಫ್​ಒ ಹೇಳಿದೆ.

ಈ ವಿಚಾರವಾಗಿ ಇಪಿಎಫ್​ಒ ಅಧಿಸೂಚನೆ ಹೊರಡಿಸಿದೆ. ಉದ್ಯೋಗಿಯು ವೇತನ ರಹಿತ ಅಥವಾ ಇತರ ಯಾವುದೇ ಕಾರಣದ ರಜೆಯಲ್ಲಿದ್ದರೆ, ಆ ಸಂದರ್ಭದಲ್ಲಿ ಉದ್ಯೋಗದಾತರಿಂದ ಭವಿಷ್ಯ ನಿಧಿ ಖಾತೆಗೆ ಹಣ ಸಂದಾಯವಾಗದೇ ಇದ್ದರೆ ಮತ್ತು ಈ ಅವಧಿಯಲ್ಲಿ ಅವರು ಮೃತಪಟ್ಟರೆ ಖಾತರಿ ನೀಡಲಾದ ಭರವಸೆಗಳನ್ನು ನಿರಾಕರಿಸುವಂತಿಲ್ಲ. ಮರಣ ಹೊಂದಿದ ಸಂದರ್ಭದಲ್ಲಿ ಅವರು ಉದ್ಯೋಗಿಯಾಗಿಯೇ ಇದ್ದರೆ ಮತ್ತು ಇತರ ನಿಗದಿತ ಷರತ್ತುಗಳನ್ನೆಲ್ಲ ಪೂರೈಸಿದ್ದರೆ ಅವರು ನಾಮನಿರ್ದೇಶನ ಮಾಡಿದವರಿಗೆ ಸವಲತ್ತುಗಳನ್ನು ನೀಡಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: EPF: ಇಪಿಎಫ್​ಒನಿಂದ ಉದ್ಯೋಗದಾತರ ಇಪಿಎಫ್​ ಟ್ರಸ್ಟ್‌ಗೆ ಇಪಿಎಫ್​ ಖಾತೆ ವರ್ಗಾವಣೆ ಹೇಗೆ? ಇಲ್ಲಿದೆ ಎಲ್ಲ ಮಾಹಿತಿ

ಇದನ್ನೂ ಓದಿ
Image
Petrol Price Today: ಇಳಿಕೆಯಾಯಿತಾ ಪೆಟ್ರೋಲ್ ಬೆಲೆ?; ನಿಮ್ಮ ನಗರಗಳಲ್ಲಿ ಇಂದಿನ ಡೀಸೆಲ್ ದರ ಹೀಗಿದೆ
Image
Gold Price Today: ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ, ಪ್ರಮುಖ ನಗರಗಳ ಬೆಲೆ ಇಲ್ಲಿದೆ
Image
Health Insurance: ಆರೋಗ್ಯ ವಿಮೆ ಮಾಡಿಸುತ್ತಿದ್ದೀರಾ? ಅಸ್ತಿತ್ವದಲ್ಲಿರುವ ಕಾಯಿಲೆಗಳ ವಿವರ ನೀಡಲು ಮರೆಯಬೇಡಿ
Image
Amazon Great Indian Festival: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್​, ಕೋಟ್ಯಧಿಪತಿಗಳಾದ 650 ಮಾರಾಟಗಾರರು

ಉದ್ಯೋಗಿಯು ಮೃತಪಟ್ಟ ಕೆಲವು ಪ್ರಕರಣಗಳಲ್ಲಿ, ಅವರಿಂದ ಪಿಎಫ್​ ಖಾತೆಗೆ ಹಣ ಸಂದಾಯವಾಗುತ್ತಿಲ್ಲ ಎಂದು ಆರೋಪಿಸಿ ಕಂಪನಿಗಳು ಮರಣಾನಂತರ ನೀಡಬೇಕಾದ ಸವಲತ್ತುಗಳನ್ನು ನೀಡಲು ನಿರಾಕರಿಸಿದ್ದವು. ಈ ಕುರಿತು ಹಲವು ದೂರುಗಳು ದಾಖಲಾಗಿದ್ದವು. ಹೀಗಾಗಿ ಇಪಿಎಫ್​ಒ ಸ್ಪಷ್ಟೀಕರಣ ನೀಡಿದೆ.

ಪಿಎಫ್ ಖಾತೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಕಿರುಕುಳ ನೀಡಬಾರದು. 7 ದಿನಗಳ ಒಳಗೆ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಉದ್ಯೋಗಿಯು ಕರ್ತವ್ಯದಲ್ಲಿದ್ದೂ ಉದ್ಯೋಗದಾತರು ಬೇರೆಯೇ ಕಾರಣ ನೀಡಿದರೆ ಇದು ನಮಗೆ ಸ್ವೀಕಾರಾರ್ವಲ್ಲ. ಈ ವಿಚಾರವಾಗಿ ಕಚೇರಿಯಲ್ಲಿ ಪರಿಶೀಲನೆ ನಡೆಸಿ ದೃಢೀಕರಿಸಬೇಕು ಎಂದು ಇಪಿಎಫ್​ಒ ಅಧಿಸೂಚನೆ ಉಲ್ಲೇಖಿಸಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಕಡ್ಡಾಯಗೊಳಿಸಿತ್ತು. ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯಲು ​​ಇ-ನಾಮನಿರ್ದೇಶನವನ್ನು ಸಲ್ಲಿಸಬೇಕು ಮತ್ತು ಉದ್ಯೋಗಿಗಳ ಠೇವಣಿ ಸಂಯೋಜಿತ ವಿಮಾ ಯೋಜನೆ ಅನ್ನು ಸಲ್ಲಿಸಬೇಕು ಎಂದು ಸೂಚಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್