PF New Rules: ಪಿಎಫ್ ಇ-ನಾಮಿನೇಷನ್ ಮಾರ್ಚ್ 31ರೊಳಗೆ ಪೂರ್ಣಗೊಳಿಸಲು ಇಪಿಎಫ್ಒ ಸೂಚನೆ
ಇಪಿಎಫ್ಒದಿಂದ ಪಿಎಫ್ ಖಾತೆದಾರರಿಗೆ ಸೂಚನೆ ನೀಡಲಾಗಿದ್ದು, ಮಾರ್ಚ್ 31ರೊಳಗೆ ಇ-ನಾಮಿನೇಷನ್ ಫೈಲಿಂಗ್ ಮಾಡುವಂತೆ ತಿಳಿಸಲಾಗಿದೆ.
ಎಲ್ಲ ಚಂದಾದಾರರು ತಮ್ಮ ಪಿಎಫ್ (PF) ಖಾತೆಗೆ ಇ-ನಾಮಿನೇಷನ್ ಅನ್ನು ಮಾರ್ಚ್ 31ರೊಳಗೆ ಸಂಪೂರ್ಣಗೊಳಿಸುವಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ ಅಥವಾ ಇಪಿಎಫ್ಒದಿಂದ ಕೇಳಲಾಗಿದೆ. ಒಂದು ವೇಳೆ ಇದನ್ನು ಪೂರ್ಣಗೊಳಿಸದಿದ್ದಲ್ಲಿ ಇಪಿಎಫ್ಒದಿಂದ ಕೆಲವು ಅನುಕೂಲಗಳು ದೊರೆಯುವುದಿಲ್ಲ ಎನ್ನಲಾಗಿದೆ. ತಮ್ಮ ಸಂಗಾತಿ, ಮಕ್ಕಳು ಮತ್ತು ಪೋಷಕರ ಬಗ್ಗೆ ಕಾಳಜಿ ಇಟ್ಟುಕೊಂಡು, ಅವರನ್ನು ಆನ್ಲೈನ್ ಪಿಎಫ್, ಪೆನ್ಷನ್ ಮತ್ತು ಇನ್ಷೂರೆನ್ಸ್ ಮೂಲಕ ರಕ್ಷಿಸಬಹುದು ಎಂದು ಇಪಿಎಫ್ಒ ಹೇಳಿಕೆಯಲ್ಲಿ ತಿಳಿಸಲಾಗಿದೆ. ಚಂದಾದಾರರಿಗೆ ಏನಾದರೂ ದುರ್ಘಟನೆ ಸಂಭವಿಸಿದಲ್ಲಿ ಅವಲಂಬಿತರಿಗೆ ಅನುಕೂಲ ದೊರೆಯಬೇಕು ಎಂಬ ಕಾರಣಕ್ಕೆ ನಾಮಿನೇಷನ್ ತರಲಾಗಿದೆ. ನಾಮಿನಿ ಆಗಿರುವವರಿಗೆ ಇನ್ಷೂರೆನ್ಸ್ ಮತ್ತು ಪೆನ್ಷನ್ ಯೋಜನೆಯ ಅನುಕೂಲ ಆಗಲಿದೆ.
ಆದರೆ, ಇಪಿಎಫ್ಒ ಈಗಾಗಲೇ ತಿಳಿಸಿದಂತೆ, ಇ-ನಾಮಿನೇಷನ್ ಫೈಲಿಂಗ್ ಮಾಡಲು ಸಾಧ್ಯವಾಗದಿದ್ದಲ್ಲಿ ಖಾತೆಯ ಬಾಕಿ ಸ್ಥಗಿತಗೊಳಿಸುತ್ತದೆ. ಖಾತೆದಾರರಿಗೆ ಏನಾದರೂ ದುರ್ಘಟನೆ ಸಂಭವಿಸಿದಲ್ಲಿ ಖಾತೆದಾರರ ಕುಟುಂಬದವರಿಗೆ ಸಮಸ್ಯೆ ಮತ್ತೂ ಹೆಚ್ಚಾಗುತ್ತದೆ.
ಇಪಿಎಫ್ ನಾಮಿನೇಷನ್ ಆನ್ಲೈನ್ನಲ್ಲಿ ಫೈಲ್ ಮಾಡುವುದು ಹೇಗೆ? ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಇಪಿಎಫ್ಒ) ಅಧಿಕೃತ ವೆಬ್ಸೈಟ್ ಮೂಲಕ ಇಪಿಎಫ್ ನಾಮಿನೇಷನ್ ಫೈಲ್ ಮಾಡುವುದು ಹೇಗೆ ಎಂಬುದರ ಹಂತ ಹಂತವಾದ ವಿವರ ಇಲ್ಲಿದೆ.
ಹಂತ 1: ಯಾವುದಾದರೂ ಇಂಟರ್ನೆಟ್ ಬ್ರೌಸರ್ ತೆರೆದು ಮತ್ತು ಅಧಿಕೃತ ಇಪಿಎಫ್ಒ ವೆಬ್ಸೈಟ್ ಅಥವಾ epfindia.gov.in ಪ್ರವೇಶಿಸಬೇಕು.
ಹಂತ 2: ಲಭ್ಯವಿರುವ ಆಯ್ಕೆಗಳಲ್ಲಿ “Service” ಎಂಬುದನ್ನು ಒತ್ತಬೇಕು.
ಹಂತ 3: ಹೊಸದಾದ ಎಲ್ಲ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ, ಮತ್ತು ಅದರಲ್ಲಿ “For Employees” ಎಂಬುದನ್ನು ಆಯ್ಕೆ ಮಾಡಬೇಕು.
ಹಂತ 4: Member UAN/Online Services (OCS/OTP) ಮೇಲೆ ಕ್ಲಿಕ್ ಮಾಡಬೇಕು.
ಹಂತ 5: ಈ ಹಿಂದೆ ಸೆಟ್ ಮಾಡಿದ ಪಾಸ್ವರ್ಡ್ ಹಾಗೂ ಯುಎಎನ್ ಬಳಸಿ ಲಾಗ್ ಇನ್ ಮಾಡಬೇಕು.
ಹಂತ 6: “Manage Tab” ಅಡಿಯಲ್ಲಿ “E Nomination” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಹಂತ 7: “Provide Details” ಎಂಬುದು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ, “Save” ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
ಹಂತ 8: ಕುಟುಂಬದ ಘೋಷಣೆ ಮಾಡುವುದಕ್ಕಾಗಿ “Yes” ಎಂಬ ಆಯ್ಕೆಯನ್ನು ಒತ್ತಬೇಕು.
ಹಂತ 9: “Add Family Details” ಎಂಬುದರ ಮೇಲೆ ಕ್ಲಿಕ್ ಮಾಡಿ, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಒಬ್ಬರಿಗಿಂತ ಹೆಚ್ಚು ನಾಮಿನಿಯನ್ನು ಸೇರಿಸಬಹುದು ಎಂಬುದು ಗಮನದಲ್ಲಿ ಇರಲಿ.
ಹಂತ 10: ಒಟ್ಟಾರೆ ಪಾಲಿನ ಮೊತ್ತವನ್ನು ಘೋಷಣೆ ಮಾಡಲಲು Nomination Details ಎಂಬುದರ ಮೇಲೆ ಈಗ ಕ್ಲಿಕ್ ಮಾಡಬೇಕು.
ಹಂತ 11: ಒಟಿಪಿಯನ್ನು ಜನರೇಟ್ ಮಾಡುವುದಕ್ಕೆ “E-sign” ಆಯ್ಕೆ ಮಾಡಿಕೊಳ್ಳಬೇಕು. ಆಧಾರ್ ಸಂಖ್ಯೆಗೆ ಜೋಡಣೆ ಆದ ಮೊಬೈಲ್ ಫೋನ್ಗೆ ಒಟಿಪಿಯು ಬರುತ್ತದೆ.
ನೆನಪಿರಲಿ, ಇವೆಲ್ಲ ಆದ ಮೇಲೆ ಇ-ನಾಮಿನೇಷನ್ ಇಪಿಎಫ್ಒ ಜತೆಗೆ ನೋಂದಣಿ ಆಗುತ್ತದೆ. ಆ ನಂತರ ಪ್ರಸ್ತುತ ಉದ್ಯೋಗದಾತರಿಗೋ ಅಥವಾ ಈ ಹಿಂದಿನವರಿಗೋ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇಲ್ಲ. ಯಾವುದಾದರೂ ಇಪಿಎಫ್ಒ ಸದಸ್ಯರು ಇನ್ನೂ ಏನಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ ಆಗ ಅಧಿಕೃತ ವೆಬ್ಸೈಟ್ epfindia.gov.in ಲಾಗ್ ಇನ್ ಆಗಬಹುದು.
ಭಾರತದದಲ್ಲಿ ಬಹುತೇಕ ಎಲ್ಲ ವೇತನದಾರರಿಗೆ ಇಪಿಎಫ್ಒದಲ್ಲಿ ಖಾತೆ ಇದೆ. ನಿವೃತ್ತಿ ನಂತರ ಪ್ರತಿ ತಿಂಗಳ ಆದಾಯ ಇದರ ಮೂಲಕ ಬರುತ್ತದೆ. ಉದ್ಯೋಗಿಯ ವೇತನದಿಂದ ಸ್ವಲ್ಪ ಮಟ್ಟಿಗೆ ಮೊತ್ತವನ್ನು ಪ್ರತಿ ತಿಂಗಳು ಕಡಿತ ಮಾಡಲಾಗುತ್ತದೆ. ನಿವೃತ್ತಿ ನಂತರದಲ್ಲಿ ಆ ಖಾತೆದಾರರಿಗೆ ಕ್ರೆಡಿಟ್ ಮಾಡಲಾಗುತ್ತದೆ. ಅದೇ ಮೊತ್ತವನ್ನು ಉದ್ಯೋಗಿಯ ಕಂಪೆನಿಯಿಂದಲೂ ಪ್ರತಿ ತಿಂಗಳು ನೀಡಲಾಗುತ್ತದೆ.
ಇದನ್ನೂ ಓದಿ: Tax On EPF: ಇಪಿಎಫ್ ಉಳಿತಾಯಕ್ಕೆ ಹೊಸ ತೆರಿಗೆ ಲೆಕ್ಕಾಚಾರದ ಬಗ್ಗೆ 7 ಅಂಶಗಳಲ್ಲಿ ವಿವರಣೆ