Video: ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ಪ್ರವಾಸಿಗ ಸಾವು
ಹಿಮಾಚಲ ಪ್ರದೇಶದಲ್ಲಿರುವ ಇಂದ್ರುನಾಗ್ನಲ್ಲಿ ಪ್ಯಾರಾಗ್ಲೈಂಡಿಂಗ್ ಮಾಡುವ ವೇಳೆ ಅಪಘಾತ ಸಂಭವಿಸಿದ್ದು, ಅಹಮದಾಬಾದ್ನ ಪ್ರವಾಸಿಗರೊಬ್ಬರು ಸಾವನ್ನಪ್ಪಿದ್ದಾರೆ.ಇಂದ್ರುನಾಗ್ ಪ್ಯಾರಾಗ್ಲೈಡಿಂಗ್ ಸ್ಥಳವು ಧರ್ಮಶಾಲಾದಲ್ಲಿದೆ. ಟೇಕ್ ಆಫ್ ಸಮಯದಲ್ಲಿ ಗ್ಲೈಡರ್ ಗಾಳಿಯಲ್ಲಿ ಮೇಲೇಳಲು ವಿಫಲವಾಗಿದ್ದು, ಸ್ವಲ್ಪ ದೂರ ಹೋದ ಬಳಿಕ ಅಪಘಾತಕ್ಕೀಡಾಗಿದೆ. ಸತೀಶ್ ರಾಜೇಶ್ ಭಾಯ್ ಮತ್ತು ಪೈಲಟ್ ಸೂರಜ್ ಇಬ್ಬರೂ ಗಾಯಗೊಂಡಿದ್ದರು.
ಧರ್ಮಶಾಲಾ, ಜುಲೈ 15: ಹಿಮಾಚಲ ಪ್ರದೇಶದಲ್ಲಿರುವ ಇಂದ್ರುನಾಗ್ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ಅಪಘಾತ ಸಂಭವಿಸಿದ್ದು, ಅಹಮದಾಬಾದ್ನ ಪ್ರವಾಸಿಗರೊಬ್ಬರು ಸಾವನ್ನಪ್ಪಿದ್ದಾರೆ.ಇಂದ್ರುನಾಗ್ ಪ್ಯಾರಾಗ್ಲೈಡಿಂಗ್ ಸ್ಥಳವು ಧರ್ಮಶಾಲಾದಲ್ಲಿದೆ. ಟೇಕ್ ಆಫ್ ಸಮಯದಲ್ಲಿ ಗ್ಲೈಡರ್ ಗಾಳಿಯಲ್ಲಿ ಮೇಲೇಳಲು ವಿಫಲವಾಗಿದ್ದು, ಸ್ವಲ್ಪ ದೂರ ಹೋದ ಬಳಿಕ ಅಪಘಾತಕ್ಕೀಡಾಗಿದೆ. ಸತೀಶ್ ರಾಜೇಶ್ ಭಾಯ್ ಮತ್ತು ಪೈಲಟ್ ಸೂರಜ್ ಇಬ್ಬರೂ ಗಾಯಗೊಂಡಿದ್ದರು.
ಸತೀಶ್ ಅವರ ತಲೆ, ಬಾಯಿ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿತ್ತು.ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸತೀಶ್ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಅವರ ಶವವನ್ನು ಅವರಿಗೆ ಹಸ್ತಾಂತರಿಸಲಾಗುವುದು ಎಂದು ಹೆಚ್ಚುವರಿ ಎಸ್ಪಿ ಲಖನ್ಪಾಲ್ ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

