ವೈಯಕ್ತಿಕವಾಗಿ ನಿತಿನ್ ಗಡ್ಕರಿ ಕಾರ್ಯವೈಖರಿ ಮೆಚ್ಚುತ್ತೇನೆ, ಅವರು ತಾರತಮ್ಯವೆಸಗದ ರಾಜಕಾರಣಿ: ರಾಜಣ್ಣ
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡಬೇಕು, ಸಿಗಂದೂರು ಚೌಡೇಶ್ವರಿ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿರದಿದ್ದರೆ ಅದು ಖಂಡನಾರ್ಹ, ಇಂಡಿಯಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಸೇತುವೆ ಉದ್ಘಾಟನಾ ಕಾರ್ಯಕ್ರಮವನ್ನು ಕೊಂಚ ಮುಂದೂಡುವಂತೆ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು ಎಂದು ರಾಜಣ್ಣ ಹೇಳಿದರು.
ಹಾಸನ, ಜುಲೈ 14: ಹಾಸನದಲ್ಲಿ ಕೆಡಿಪಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ (KN Rajanna) ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಹಾಡಿ ಹೊಗಳಿದರು. ಮೊದಲಾದರೋ ಅವರು ಪುಣೆಯವರು, ಆರ್ಎಸ್ಎಸ್ ಹಿನ್ನೆಲೆಯವರು ಅಂತ ಅಂದುಕೊಳ್ಳುತ್ತಿದ್ದುದುಂಟು, ಆದರೆ ವಾಹಿನಿಯೊಂದಕ್ಕೆ ಅವರು ನೀಡಿದ ಸಂದರ್ಶನ ನೋಡಿದಾಗ ಮತ್ತು ಕಾರ್ಯವೈಖರಿಯನ್ನು ಗಮನಿಸಿದಾಗ ಅವರ ಬಗ್ಗೆ ತಳೆದಿದ್ದ ನಿಲುವು ಬದಲಾಯಿತು. ಅಭಿವೃದ್ಧಿ ವಿಷಯದಲ್ಲಿ ಅವರು ಯಾವತ್ತೂ ತಾರಾತಮ್ಯ ಮಾಡಿದವರಲ್ಲ, ಅಭಿವೃದ್ಧಿ ಪರ ನಿಲ್ಲುವ ರಾಜಕಾರಣಿ ಅನ್ನೋದು ಮನವರಿಕೆಯಾಯಿತು, ಇವತ್ತು ದೇಶದಲ್ಲಿ ಎಷ್ಟೋ ಕಡೆ ಅವರು ರಸ್ತೆಗಳನ್ನು ಮಾಡಿಸುತ್ತಿದ್ದಾರೆ, ಅವರ ಬಗ್ಗೆ ಅಪಾರವಾದ ಗೌರವವಿದೆ ಎಂದು ರಾಜಣ್ಣ ಹೇಳಿದರು.
ಇದನ್ನೂ ಓದಿ: ಭಾರತದಲ್ಲಿ ಇನ್ನೂ 25 ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣ; ನಿತಿನ್ ಗಡ್ಕರಿ
ವಿಡಿಯೋ ಸುದ್ದಿಗಳಿಗಾಗು ಕ್ಲಿಕ್ ಮಾಡಿ

