FD Rates: ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ; ಯಾವ ಬ್ಯಾಂಕಲ್ಲಿ ಹಿರಿಯ ನಾಗರಿಕರ ಎಫ್ಡಿಗೆ ಹೆಚ್ಚು ಬಡ್ಡಿ?
ಆರ್ಬಿಐ ರೆಪೊ ದರ ಹೆಚ್ಚಿಸಿದ ಪರಿಣಾಮವಾಗಿ ವಿವಿಧ ಬ್ಯಾಂಕ್ಗಳಲ್ಲಿ ಸಾಲದ ಮೇಲಿನ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವೂ ತುಸು ಹೆಚ್ಚಾಗಿದೆ. ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ಗಳು ಹಿರಿಯ ನಾಗರಿಕರ ಎಫ್ಡಿಗೆ ನೀಡುತ್ತಿರುವ ಬಡ್ಡಿ ವಿವರ ಇಲ್ಲಿದೆ.
ಹಿರಿಯ ನಾಗರಿಕರ ಹೂಡಿಕೆಗೆ ಸ್ಥಿರ ಠೇವಣಿ (FD) ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಎಸ್ಬಿಐ (SBI), ಎಚ್ಡಿಎಫ್ಸಿ (HDFC), ಐಸಿಐಸಿಐ ಬ್ಯಾಂಕ್ (ICICI Bank) ಹಾಗೂ ಇತರ ಕೆಲವು ಬ್ಯಾಂಕ್ಗಳು ಕಳೆದ ಕೆಲವು ತಿಂಗಳುಗಳಲ್ಲಿ ಹಿರಿಯ ನಾಗರಿಕರ ಮತ್ತು ಜನಸಾಮಾನ್ಯರ ಎಫ್ಡಿ ಬಡ್ಡಿ ದರವನ್ನು (FD Rates) ಹೆಚ್ಚಿಸಿವೆ. ಆರ್ಬಿಐ ಮೇ ತಿಂಗಳ ಬಳಿಕ ಈವರೆಗೆ ಒಟ್ಟಾರೆಯಾಗಿ ರೆಪೊ ದರವನ್ನು 225 ಮೂಲಾಂಶ ಹೆಚ್ಚಳ ಮಾಡಿದೆ. ಪರಿಣಾಮವಾಗಿ ವಿವಿಧ ಬ್ಯಾಂಕ್ಗಳಲ್ಲಿ ಸಾಲದ ಮೇಲಿನ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವೂ ತುಸು ಹೆಚ್ಚಾಗಿದೆ. ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ಗಳು ಹಿರಿಯ ನಾಗರಿಕರ ಎಫ್ಡಿಗೆ ನೀಡುತ್ತಿರುವ ಬಡ್ಡಿ ವಿವರ ಇಲ್ಲಿದೆ.
ಎಸ್ಬಿಐ ಹಿರಿಯ ನಾಗರಿಕರ ಎಫ್ಡಿ ಬಡ್ಡಿ ದರ
ಎಸ್ಬಿಐ ಬ್ಯಾಂಕ್ ಹಿರಿಯ ನಾಗರಿಕರ ಎಫ್ಡಿಗೆ ಶೇಕಡಾ 7.25ರ ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರ ಎಲ್ಲ ಅವಧಿಯ ಎಫ್ಡಿಗೆ ಎಸ್ಬಿಐ ಬ್ಯಾಂಕ್ 50 ಮೂಲಾಂಶದಷ್ಟು ಹೆಚ್ಚು ಹೆಚ್ಚುವರಿ ಬಡ್ಡಿ ನೀಡುತ್ತಿದೆ. ಇತ್ತೀಚೆಗೆ ಬಡ್ಡಿ ದರವನ್ನು ಪರಿಷ್ಕರಿಸಿದ ಬಳಿಕ, 7 ದಿನಗಳಿಂದ ಆರಂಭವಾಗಿ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್ಡಿಗೆ ಎಸ್ಬಿಐ ಶೇಕಡಾ 3.5ರಿಂದ 7.25ರ ವರೆಗೆ ಬಡ್ಡಿ ನೀಡುತ್ತಿದೆ. ಡಿಸೆಂಬರ್ 13ರಿಂದ ಈ ಬಡ್ಡಿ ದರಗಳು ಜಾರಿಯಲ್ಲಿವೆ.
- 1 ವರ್ಷ ಮೇಲ್ಪಟ್ಟ, 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ ಬಡ್ಡಿ ದರ – 7.25%
- 2 ವರ್ಷ ಮೇಲ್ಪಟ್ಟು 3 ವರ್ಷಗಳಿಂದ ಕಡಿಮೆ ಅವಧಿಯ ಎಫ್ಡಿ ಬಡ್ಡಿ ದರ – 7.25%
- 5 ವರ್ಷಗಳಿಂದ 10 ವರ್ಷಗಳ ವರೆಗಿನ ಎಫ್ಡಿ ಬಡ್ಡಿ ದರ – 7.25%
ಎಚ್ಡಿಎಫ್ಸಿ ಬ್ಯಾಂಕ್ ಹಿರಿಯ ನಾಗರಿಕರ ಎಫ್ಡಿ ಬಡ್ಡಿ ದರ
ಎಚ್ಡಿಎಫ್ಸಿ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್ಡಿಗೆ ಶೇಕಡಾ 3.5ರಿಂದ 7.75ರ ವರೆಗೆ ಬಡ್ಡಿ ನೀಡುತ್ತಿದೆ. ಪರಿಷ್ಕೃತ ಬಡ್ಡಿ ದರ ಡಿಸೆಂಬರ್ 14ರಿಂದ ಜಾರಿಯಲ್ಲಿದೆ.
- 1 ವರ್ಷದಿಂದ 15 ತಿಂಗಳವರೆಗಿನ ಎಫ್ಡಿ ಬಡ್ಡಿ – 7.00%
- 15 ತಿಂಗಳುಗಳಿಂದ 18 ತಿಂಗಳ ವರೆಗಿನ ಎಫ್ಡಿ ಬಡ್ಡಿ – 7.50%
- 18 ತಿಂಗಳುಗಳಿಂದ 21 ತಿಂಗಳ ವರೆಗಿನ ಎಫ್ಡಿ ಬಡ್ಡಿ – 7.00%
- 21 ತಿಂಗಳುಗಳಿಂದ 2 ವರ್ಷ ಅವಧಿಯ ಎಫ್ಡಿ ಬಡ್ಡಿ – 7.50%
- 2 ವರ್ಷ 1 ದಿನದಿಂದ 3 ವರ್ಷ ಅವಧಿಯ ಎಫ್ಡಿ ಬಡ್ಡಿ – 7.50%
- 3 ವರ್ಷ 1 ದಿನದಿಂದ ಆರಂಭವಾಗಿ 5 ವರ್ಷಗಳ ವರೆಗಿನ ಎಫ್ಡಿ ಬಡ್ಡಿ – 7.50%
- 5 ವರ್ಷ 1 ದಿನದಿಂದ ಆರಂಭವಾಗಿ 10 ವರ್ಷಗಳ ವರೆಗಿನ ಎಫ್ಡಿ ಬಡ್ಡಿ – 7.75%
ಇದನ್ನೂ ಓದಿ: CIBIL Score: ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕೇ? ಹಾಗಿದ್ದರೆ ಈ ತಪ್ಪುಗಳನ್ನು ಮಾಡಬೇಡಿ
ಐಸಿಐಸಿಐ ಬ್ಯಾಂಕ್ ಹಿರಿಯ ನಾಗರಿಕರ ಎಫ್ಡಿ ಬಡ್ಡಿ ದರ
ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್ಡಿಗೆ ಶೇಕಡಾ 3.5ರಿಂದ 7.50 ವರೆಗೆ ಬಡ್ಡಿ ನೀಡುತ್ತಿದೆ. ಡಿಸೆಂಬರ್ 16ರಿಂದ ಈ ಬಡ್ಡಿ ದರ ಚಾಲ್ತಿಯಲ್ಲಿದೆ.
- 1 ವರ್ಷದಿಂದ 389 ದಿನಗಳ ಅವಧಿಯ ಎಫ್ಡಿ ಬಡ್ಡಿ ದರ – 7.10%
- 390 ದಿನಗಳಿಂದ 15 ತಿಂಗಳ ಅವಧಿಯ ಎಫ್ಡಿ ಬಡ್ಡಿ ದರ – 7.10%
- 15 ತಿಂಗಳುಗಳಿಂದ 18 ತಿಂಗಳ ವರೆಗಿನ ಅವಧಿಯ ಎಫ್ಡಿ ಬಡ್ಡಿ ದರ – 7.50%
- 18 ತಿಂಗಳುಗಳಿಂದ 2 ವರ್ಷಗಳ ವರೆಗಿನ ಅವಧಿಯ ಎಫ್ಡಿ ಬಡ್ಡಿ ದರ – 7.50%
- 2 ವರ್ಷ 1 ದಿನದಿಂದ 3 ವರ್ಷಗಳ ಅವಧಿಯ ಬಡ್ಡಿ ದರ – 7.50%
- 3 ವರ್ಷ 1 ದಿನದಿಂದ 5 ವರ್ಷಗಳ ವರೆಗಿನ ಅವಧಿಯ ಎಫ್ಡಿ ದರ – 7.50%
- 5 ವರ್ಷ 1 ದಿನದಿಂದ 10 ವರ್ಷಗಳ ವರೆಗಿನ ಅವಧಿಯ ಎಫ್ಡಿ ದರ – 7.50%
- 5 ವರ್ಷಗಳ ಅವಧಿಯ (80ಸಿ ಎಫ್ಡಿ) ಗರಿಷ್ಠ 1.50 ಲಕ್ಷ ರೂ.ವರೆಗಿನ ಎಫ್ಡಿ ಬಡ್ಡಿ ದರ – 7.50%
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ