SBI FD Interest Rates: ಎಫ್ಡಿ ಬಡ್ಡಿ ದರ ಹೆಚ್ಚಿಸಿದ ಎಸ್ಬಿಐ; ವಿವರ ಇಲ್ಲಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ವಿವಿಧ ಅವಧಿಯ ಎಫ್ಡಿ ದರ ಹೆಚ್ಚಳ ಮಾಡಿದ್ದು, ಇಂದಿನಿಂದಲೇ (December 13) ಅನ್ವಯವಾಗಲಿದೆ.
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿವಿಧ ಅವಧಿಯ ಸ್ಥಿರ ಠೇವಣಿ (FD) ಬಡ್ಡಿ ದರವನ್ನು ಹೆಚ್ಚಳ ಮಾಡಿದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್ಡಿ ದರ ಹೆಚ್ಚಳ ಮಾಡಲಾಗಿದ್ದು, ಇಂದಿನಿಂದಲೇ (December 13) ಅನ್ವಯವಾಗಲಿದೆ. ಪರಿಷ್ಕೃತ ಬಡ್ಡಿ ದರ ಹೊಸ ಎಫ್ಡಿಗಳಿಗೆ ಮತ್ತು ರಿನೀವಲ್ ಆಗುವ ಠೇವಣಿಗಳಿಗೆ ಅನ್ವಯವಾಗಲಿದೆ. ಈ ಹಿಂದೆ ಅಕ್ಟೋಬರ್ 22ರಂದು ಎಸ್ಬಿಐ ಬಡ್ಡಿ ದರ ಪರಿಷ್ಕರಿಸಿತ್ತು. ಈ ವಿಚಾರವಾಗಿ ಎಸ್ಬಿಐ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ. ಭಾರೀ ಮೊತ್ತದ ಠೇವಣಿಗಳ ಬಡ್ಡಿ ದರವನ್ನು ಎಸ್ಬಿಐ 50ರಿಂದ 100 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಆರ್ಬಿಐ ಇತ್ತೀಚೆಗಷ್ಟೇ ರೆಪೊ ದರದಲ್ಲಿ 35 ಮೂಲಾಂಶ ಹೆಚ್ಚಳ ಮಾಡಿ ರೆಪೊ ದರವನ್ನು ಶೇಕಡಾ 6.25ರ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ಇದರ ಬೆನ್ನಲ್ಲೇ ಬ್ಯಾಂಕ್ಗಳು ಠೇವಣಿಗಳ ಮೇಲಿನ ಬಡ್ಡಿ ದರ ಮತ್ತು ಸಾಲದ ಬಡ್ಡಿ ದರಗಳನ್ನು ಪರಿಷ್ಕರಿಸುತ್ತಿವೆ.
ಎಸ್ಬಿಐ ಪರಿಷ್ಕೃತ ಎಫ್ಡಿ ಬಡ್ಡಿ ದರ ವಿವರ
- 7ರಿಂದ 45 ದಿನಗಳ ಅವಧಿಯ ಎಫ್ಡಿ – 3%
- 46ರಿಂದ 179 ದಿನಗಳ ಅವಧಿಯ ಎಫ್ಡಿ – 4.5%
- 180ರಿಂದ 210 ದಿನಗಳ ಅವಧಿಯ ಎಫ್ಡಿ – 5.25%
- 211 ದಿನಗಳಿಂದ 1 ವರ್ಷದ ನಡುವಣ ಅವಧಿಯ ಎಫ್ಡಿ – 5.75%
- 1 ವರ್ಷದಿಂದ 2 ವರ್ಷ ನಡುವಣ ಅವಧಿಯ ಎಫ್ಡಿ – 6.75%
- 2 ವರ್ಷಕ್ಕಿಂತ ಮೇಲ್ಪಟ್ಟ, 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ – 6.75%
- 3 ವರ್ಷ ಮೇಲ್ಪಟ್ಟ ಹಾಗೂ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ – 6.25%
- 5 ವರ್ಷ ಮತ್ತು 10 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ – 6.25%
ಹಿರಿಯ ನಾಗರಿಕರ ಎಫ್ಡಿಗೂ ಹೆಚ್ಚು ಬಡ್ಡಿ
ಹಿರಿಯ ನಾಗರಿಕರ ಎಫ್ಡಿ ಮೇಲಿನ ಬಡ್ಡಿ ದರವನ್ನು ಎಸ್ಬಿಐ 50 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಒಟ್ಟಾರೆಯಾಗಿ 7 ದಿನಗಳಿಂದ ತೊಡಗಿ 10 ವರ್ಷಗಳ ವರೆಗಿನ ಎಫ್ಡಿಗಳ ಬಡ್ಡಿ ಶೇಕಡಾ 3.5ರಿಂದ ತೊಡಗಿ ಶೇಕಡಾ 7.25ರ ವರೆಗೆ ಇದೆ.
ಇದನ್ನೂ ಓದಿ: Gift Tax: ಸಂಗಾತಿಗೆ ಉಡುಗೊರೆ ನೀಡಿದ ಹಣಕ್ಕೂ ತೆರಿಗೆ ಪಾವತಿಸಬೇಕೇ? ಇಲ್ಲಿದೆ ತಜ್ಞರ ಉತ್ತರ
ಹಿರಿಯ ನಾಗರಿಕರ ಪರಿಷ್ಕೃತ ಎಫ್ಡಿ ಬಡ್ಡಿ ದರ
- 7ರಿಂದ 45 ದಿನಗಳ ಅವಧಿಯ ಎಫ್ಡಿ – 3.50%
- 46ರಿಂದ 179 ದಿನಗಳ ಅವಧಿಯ ಎಫ್ಡಿ – 5%
- 180ರಿಂದ 210 ದಿನಗಳ ಅವಧಿಯ ಎಫ್ಡಿ – 5.75%
- 211 ದಿನಗಳಿಂದ 1 ವರ್ಷದ ನಡುವಣ ಅವಧಿಯ ಎಫ್ಡಿ – 6.25%
- 1 ವರ್ಷದಿಂದ 2 ವರ್ಷ ನಡುವಣ ಅವಧಿಯ ಎಫ್ಡಿ – 7.25%
- 2 ವರ್ಷಕ್ಕಿಂತ ಮೇಲ್ಪಟ್ಟ, 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ – 7.25%
- 3 ವರ್ಷ ಮೇಲ್ಪಟ್ಟ ಹಾಗೂ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ – 6.75%
- 5 ವರ್ಷ ಮತ್ತು 10 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ – 7.25%
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ