Gift Tax: ಸಂಗಾತಿಗೆ ಉಡುಗೊರೆ ನೀಡಿದ ಹಣಕ್ಕೂ ತೆರಿಗೆ ಪಾವತಿಸಬೇಕೇ? ಇಲ್ಲಿದೆ ತಜ್ಞರ ಉತ್ತರ

ವ್ಯಕ್ತಿಯೊಬ್ಬರು ಸ್ಥಿರ ಠೇವಣಿ (ಎಫ್​ಡಿ) ಇಡುವುದಕ್ಕಾಗಿ ತಮ್ಮ ಪತ್ನಿಯ ಖಾತೆಗೆ 3 ಲಕ್ಷ ರೂ. ಹಣ ವರ್ಗಾವಣೆ ಮಾಡುತ್ತಾರೆ ಎಂದಿಟ್ಟುಕೊಳ್ಳೋಣ. ಆಗ ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆಯೇ? ಹೌದಾದರೆ ಯಾರು ಪಾವತಿಸಬೇಕು?

Gift Tax: ಸಂಗಾತಿಗೆ ಉಡುಗೊರೆ ನೀಡಿದ ಹಣಕ್ಕೂ ತೆರಿಗೆ ಪಾವತಿಸಬೇಕೇ? ಇಲ್ಲಿದೆ ತಜ್ಞರ ಉತ್ತರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Dec 12, 2022 | 12:51 PM

ಹೆಚ್ಚು ಮೊತ್ತದ ಉಡುಗೊರೆಗಳನ್ನು (Gift) ಸ್ವೀಕರಿಸಿದಾಗ ಅದಕ್ಕೂ ತೆರಿಗೆ (Tax) ಪಾವತಿಸಬೇಕಾಗುತ್ತದೆ ಎಂಬುದು ತಿಳಿದಿರುವ ವಿಚಾರ. ಆದರೆ ಪತಿ, ಪತ್ನಿ ಅಥವಾ ಸಂಗಾತಿಗೆ ಉಡುಗೊರೆಯಾಗಿ ನೀಡುವ ಹಣಕ್ಕೂ ತೆರಿಗೆ ಪಾವತಿಸಬೇಕಾಗುತ್ತದೆಯೇ? ಹೌದು ಎನ್ನುತ್ತದೆ ಆದಾಯ ತೆರಿಗೆ ಕಾಯ್ದೆಯ ನಿಯಮಗಳು. ವ್ಯಕ್ತಿಯೊಬ್ಬರು ಪತ್ನಿಗೆ ಲಕ್ಷಾಂತರ ರೂ. ಹಣವನ್ನು ಉಡುಗೊರೆ ನೀಡಿದರೆ ಅದಕ್ಕೆ ಯಾರು ತೆರಿಗೆ ಪಾವತಿಸಬೇಕು? ಎಷ್ಟು ಪಾವತಿಸಬೇಕಾಗುತ್ತದೆ? ಉದಾಹರಣೆಗೆ ವ್ಯಕ್ತಿಯೊಬ್ಬರು ಸ್ಥಿರ ಠೇವಣಿ (ಎಫ್​ಡಿ) ಇಡುವುದಕ್ಕಾಗಿ ತಮ್ಮ ಪತ್ನಿಯ ಖಾತೆಗೆ 3 ಲಕ್ಷ ರೂ. ಹಣ ವರ್ಗಾವಣೆ ಮಾಡುತ್ತಾರೆ ಎಂದಿಟ್ಟುಕೊಳ್ಳೋಣ. ಆಗ ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆಯೇ? ಹೌದಾದರೆ ಯಾರು ಪಾವತಿಸಬೇಕು? ಆದಾಯ ತೆರಿಗೆ ಕಾಯ್ದೆಯನ್ನು ಉಲ್ಲೇಖಿಸಿ ‘ಲೈವ್ ಮಿಂಟ್​’ನಲ್ಲಿ ತಜ್ಞರು ನೀಡಿರುವ ಉತ್ತರ ಇಲ್ಲಿ ನೀಡಲಾಗಿದೆ.

1961ರ ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಎಫ್​ಡಿ ಠೇವಣಿಗೆ ಪಡೆಯುವ ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಇದನ್ನು ಇತರ ಮೂಲಗಳಿಂದ ಬರುವ ಆದಾಯವೆಂದು ಪರಿಗಣಿಸಲಾಗುತ್ತದೆ. ಎಫ್​ಡಿ ವಿಚಾರದಲ್ಲಿ ಹಿರಿಯ ನಾಗರಿಕರಿಗೆ ಗರಿಷ್ಠ 50,000 ವರೆಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.

ಇದನ್ನೂ ಓದಿ: Union Budget 2023-24: ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಸಾಧ್ಯತೆ; ವರದಿ

ಪತ್ನಿಯ ಖಾತೆಗೆ ಹಣ ವರ್ಗಾವಣೆಗಿಲ್ಲ ತೆರಿಗೆ

ಎಫ್​​ಡಿ ಖಾತೆ ತೆರೆಯುವುದಕ್ಕಾಗಿ ಪತ್ನಿಯ ಖಾತೆಗೆ ವ್ಯಕ್ತಿಯೊಬ್ಬರು 3 ಲಕ್ಷ ರೂ. ವರ್ಗಾವಣೆ ಮಾಡುತ್ತಾರೆ ಎಂದಿಟ್ಟುಕೊಂಡರೆ; ಹೀಗೆ ವರ್ಗಾಯಿಸಿದ ಹಣವನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ 56ರ ಅಡಿಯಲ್ಲಿ ಸಂಬಂಧಿಕರಿಂದ ಪಡೆದ ಉಡುಗೊರೆ ಎಂದು ಪರಿಗಣಿಸಲಾಗುತ್ತದೆ. ಈ ಹಣ ವರ್ಗಾವಣೆಗೆ ತೆರಿಗೆ ಪಾವತಿಸಬೇಕಿಲ್ಲ.

ಹೀಗಿದೆ ತೆರಿಗೆ ಲೆಕ್ಕಾಚಾರ

ಸೆಕ್ಷನ್ 64ರ ಪ್ರಕಾರ, ಸಂಗಾತಿಯು ಉಡುಗೊರೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪಡೆಯುವ ಆದಾಯವನ್ನು ಉಡುಗೊರೆ ನೀಡಿದವರ ಆದಾಯದ ಜತೆ ಸಂಯೋಜಿಸಲಾಗುತ್ತದೆ. ಎಫ್​ಡಿ ಉದ್ದೇಶಕ್ಕಾಗಿ ಪತ್ನಿಯ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಅಂಥ ಎಫ್​ಡಿಯಿಂದ ಬರುವ ಬಡ್ಡಿಯನ್ನು ಪತಿಯ ಆದಾಯದ ಜತೆಗೇ ಲೆಕ್ಕ ಹಾಕಿ ತೆರಿಗೆ ವಿಧಿಸಲಾಗುತ್ತದೆ. ಪತ್ನಿಯು ಸ್ವ ಆದಾಯದಿಂದ ಇಟ್ಟಿರುವ ಎಫ್​ಡಿ ಅಥವಾ ಇತರ ಹೂಡಿಕೆ ಮಾಡಿದ್ದರೆ ಅದಕ್ಕೆ ಅವರೇ ತೆರಿಗೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Tax-Saving Investments: ಪಿಪಿಎಫ್​ನಿಂದ ಎನ್​ಪಿಎಸ್ ವರೆಗೆ; ತೆರಿಗೆ ಉಳಿತಾಯಕ್ಕೆ ಈ ಐದು ಹೂಡಿಕೆ ಯೋಜನೆಗಳನ್ನು ಗಮನಿಸಿ

5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿಗಿದೆ ಅವಕಾಶ

ಪತ್ನಿಯು 2.5 ಲಕ್ಷ ರೂ.ನಿಂದ 5 ಲಕ್ಷ ರೂ. ಒಳಗೆ ಆದಾಯ ಹೊಂದಿದ್ದರೆ ಅದಕ್ಕೆ ತೆರಿಗೆ ವಿನಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಹೀಗಾಗಿ ಅವರ ವೈಯಕ್ತಿಕ ಆದಾಯಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿ ಸಮಸ್ಯೆ ಉದ್ಭವಿಸದು ಎಂದಿದ್ದಾರೆ ತಜ್ಞರು. ಆದಾಗ್ಯೂ, ಆದಾಯ ತೆರಿಗೆಯ ಅಧ್ಯಾಯ VI-A ಅಡಿಯಲ್ಲಿ ಹೂಡಿಕೆ ಮತ್ತು ಕೊಡುಗೆಗಳಿಗೆ ಸಂಬಂಧಿಸಿ ಇನ್ನಷ್ಟು ತೆರಿಗೆ ವಿನಾಯಿತಿ ಪಡೆಯುವ ಬಗ್ಗೆ ಯೋಚಿಸಬಹುದು ಎಂದೂ ಅವರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Mon, 12 December 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್