AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online Fraud Awareness: ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ

ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಸುರಕ್ಷಿತವಾಗಿ ಆನ್​ಲೈನ್ ವಹಿವಾಟನ್ನು ನಡೆಸಬಹುದು. ಆನ್​ಲೈನ್ ಶಾಪಿಂಗ್ ಅಥವಾ ವಹಿವಾಟು ನಡೆಸುವ ವೇಳೆ ವಹಿಸಿವೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.

Online Fraud Awareness: ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 14, 2022 | 9:30 AM

Share

ಜನರು ಆನ್‌ಲೈನ್ ಶಾಪಿಂಗ್‌ (Online Shopping) ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಂತೆಯೇ ವಂಚಕರೂ ಆನ್​ಲೈನ್ ತಾಣಗಳ ಮೂಲಕ ಹೊಸ ವಿಧಾನಗಳೊಂದಿಗೆ ಮೋಸಗೊಳಿಸಲು (Online Frauds) ಹೊಂಚುಹಾಕುತ್ತಿರುತ್ತಾರೆ. ವೈಯಕ್ತಿಕ ಮಾಹಿತಿ ಕಳವು ಹಾಗೂ ಇನ್ನಿತರ ಹಲವು ವಿಧಾನಗಳನ್ನು ಬಳಸಿಕೊಂಡು ಗ್ರಾಹಕರ ಖಾತೆಗಳಿಗೆ ಕನ್ನ ಹಾಕುತ್ತಾರೆ. ಹಾಗೆಂದು ಇವುಗಳಿಗೆ ಹೆದರಿ ಆನ್​ಲೈನ್ ವಹಿವಾಟು ಅಥವಾ ಶಾಪಿಂಗ್​ ಅನ್ನೇ ನಿಲ್ಲಿಸುವುದು ಸರಿಯಾದ ಕ್ರಮವಾಗದು. ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಸುರಕ್ಷಿತವಾಗಿ ಆನ್​ಲೈನ್ ವಹಿವಾಟನ್ನು ನಡೆಸಬಹುದು.

ಬಯೋಮೆಟ್ರಿಕ್ ಲಾಗಿನ್​ಗೆ ಆದ್ಯತೆ ನೀಡಿ

ಪಾಸ್​ವರ್ಡ್​​ಗಳನ್ನು ಬಳಸಿ ವಹಿವಾಟು ನಡೆಸುವ ಬದಲು ಬಯೋಮೆಟ್ರಿಕ್ ಆಧಾರಿತ ವ್ಯವಹಾರ ನಡೆಸುವುದು ಒಳ್ಳೆಯದು ಎಂದಿದ್ದಾರೆ ಸೈಬರ್ ಭದ್ರತೆ ತಜ್ಞರು. ಪಾಸ್​ವರ್ಡ್​​ಗಳನ್ನು ಹ್ಯಾಕ್ ಮಾಡುವುದು ಸುಲಭ. ಪದೇ ಪದೇ ಪಾಸ್​ವರ್ಡ್ ಬದಲಾಯಿಸಿಕೊಂಡು ಕಷ್ಟಪಡುವ ಬದಲು ಬಯೋಮೆಟ್ರಿಕ್ ಮತ್ತು ಇ-ಸಿಗ್ನೇಚರ್​ನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಗ್ರಾಹಕರಿಗೆ ರಿಯಲ್​ಟೈಂ ರಕ್ಷಣೆಯನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪಾಸ್‌ವರ್ಡ್​​ ದೃಢೀಕರಣಕ್ಕೆ ಕಡಿಮೆ ಆದ್ಯತೆ ನೀಡಲು ಬ್ಯಾಂಕುಗಳು ಆದ್ಯತೆ ನೀಡಬೇಕಾದ ಸಮಯವಿದು ಎಂದು ಅವರು ಹೇಳಿದ್ದಾರೆ.

ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಆಯ್ದುಕೊಳ್ಳಿ

ಆನ್​ಲೈನ್ ವಹಿವಾಟಿಗೆ ಬಹು ಅಂಶ ದೃಢೀಕರಣ ಅಥವಾ ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಆಯ್ಕೆಯನ್ನು ಬ್ಯಾಂಕ್​ಗಳು ಗ್ರಾಹಕರಿಗೆ ಹೆಚ್ಚೆಚ್ಚು ನೀಡಬೇಕಿದೆ. ಗ್ರಾಹಕರೂ ಇಂಥ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಯಾಕೆಂದರೆ, ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಇರುವ ಸಂದರ್ಭದಲ್ಲಿ ವಂಚಕರು ಒಂದು ಪಾಸ್​ವರ್ಡ್​ ಅನ್ನು ಹ್ಯಾಕ್ ಮಾಡಿದರೂ ಅಷ್ಟಕ್ಕೇ ನಿಮ್ಮ ಹಣ ದೋಚಲು ಸಾಧ್ಯವಾಗದು. ಮತ್ತೊಂದು ಹಂತದ ದೃಢೀಕರಣದ ಆಯ್ಕೆ ನಿಮ್ಮ ಬಳಿ ಇರುತ್ತದೆ. ಪ್ರಸಕ್ತ ಕಾಲಘಟ್ಟದಲ್ಲಿ ಅನೇಕ ಬ್ಯಾಂಕ್​ಗಳು ಮಲ್ಟಿ ಫ್ಯಾಕ್ಟರ್ ಅಥಂಟಿಕೇಷನ್ ಆಯ್ಕೆಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಇದನ್ನು ಬಳಸಿಕೊಳ್ಳಿ.

ಇದನ್ನೂ ಓದಿ: Online fraud: ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ

ರಿಮೋಟ್ ಆಕ್ಸೆಸ್ ನೀಡಬೇಡಿ

ಯಾರಿಗಾದರೂ ರಿಮೋಟ್ ಆಕ್ಸೆಸ್ ನೀಡಿದರೆ ಅವರು ನಿಮ್ಮ ಮೊಬೈಲ್ ಅಥವಾ ಲ್ಯಾಪ್​ಟಾಪ್​ ಸ್ಕ್ರೀನ್​ನ ಎಲ್ಲ ಚಲನವಲನಗಳನ್ನು ಗಮನಿಸುವುದು ಸಾಧ್ಯವಾಗುತ್ತದೆ. ನಿಮ್ಮ ಅರಿವಿಗೇ ಬಾರದಂತೆ ನಿಮ್ಮ ವೈಯಕ್ತಿಕ ವಿವರ, ಬ್ಯಾಂಕ್ ಖಾತೆ ವಿವರ, ಯೂಸರ್​ನೇಮ್, ಪಾಸ್ವರ್ಡ್ ಎಲ್ಲವೂ ವಂಚಕರ ಪಾಲಾಗಬಹುದು. ವಂಚಕರು ನಿಮ್ಮ ಫೋನ್​ ಅನ್ನೇ ಬ್ಲಾಕ್ ಮಾಡಿ ಹಣ ಎಗರಿಸಬಹುದು. ಇದನ್ನು ತಪ್ಪಿಸಲು ಅಪರಿಚಿತ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಬೇಡಿ. ಬೇರೆಯವರಿಗೆ ರಿಮೋಟ್ ಆ್ಯಕ್ಸೆಸ್ ನೀಡಬೇಡಿ.

ಒಟಿಪಿ ಹಂಚಿಕೊಳ್ಳಬೇಡಿ

ಆನ್​ಲೈನ್ ವಹಿವಾಟಿನ ಸಂದರ್ಭದಲ್ಲಿ ಬರುವ ಒಟಿಪಿಯನ್ನು ಯಾರ ಜತೆಗೂ, ಆನ್​ಲೈನ್​ನಲ್ಲಂತೂ ಹಂಚಿಕೊಳ್ಳಲೇಬೇಡಿ. ವಂಚಕರು ಹಲವು ಸುಳ್ಳು ನೆಪಗಳನ್ನು ಹೇಳಿ, ಗ್ರಾಹಕರು ನಂಬುವಂತೆ ಮಾಡಿ ಒಟಿಪಿ ತಿಳಿಯಲು ಯತ್ನಿಸುತ್ತಾರೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳು, ಪಿನ್, ಒಟಿಪಿಯನ್ನು ಯಾವುದೇ ಕಾರಣಕ್ಕೂ ಯಾರ ಜತೆಗೂ ಹಂಚಿಕೊಳ್ಳಬೇಡಿ.

ಸಾರ್ವಜನಿಕ ಅಥವಾ ಉಚಿತ ವೈಫೈ ಬಳಸುವಾಗ ಎಚ್ಚರ

ಸಾರ್ವಜನಿಕ ಮತ್ತು ಉಚಿತವಾಗಿ ಸಿಗುವ ವೈಫೈ ಸಂಪರ್ಕ ಪಡೆಯುವುದು ಒಳ್ಳೆಯದಲ್ಲ. ಇಂಥ ವೈಫೈಗಳು ಗೌಪ್ಯ ಮಾಹಿತಿ ಕದಿಯುವ ಸಾಧ್ಯತೆ ಇದೆ. ಆನ್​ಲೈನ್ ವಹಿವಾಟಿಗೆ ನಿಮ್ಮದೇ ಡಿವೈಸ್​ ಹಾಗೂ ನೆಟ್​ವರ್ಕ್ ಬಳಸಿ.

ಆನ್‌ಲೈನ್ ವಹಿವಾಟುಗಳು ದೈನಂದಿನ ಜೀವನದ ಅನಿವಾರ್ಯ ಭಾಗವಾಗಿರುವುದರಿಂದ, ಸೈಬರ್ ವಂಚನೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸೂಕ್ತ ಮುನ್ನೆಚ್ಚರಿಕೆ ವಹಿಸುವ ಮೂಲಕ ನಮ್ಮ ಹಣವನ್ನು, ದತ್ತಾಂಶಗಳನ್ನು ರಕ್ಷಿಸಿಕೊಳ್ಳಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್