LIC Jeevan Anand: ಎಲ್ಐಸಿ ಜೀವನ್ ಆನಂದ್ ಪಾಲಿಸಿ; ತಿಂಗಳಿಗೆ 1,358 ಹೂಡಿಕೆ ಮಾಡಿದರೆ ಸಿಗಲಿದೆ 25 ಲಕ್ಷ ರೂ
Jeevan Anand Policy; ದೀರ್ಘ ಅವಧಿಗೆ ಹೂಡಿಕೆ ಮಾಡುವವರನ್ನು ಗಮನದಲ್ಲಿ ಇಟ್ಟುಕೊಂಡು ‘ಜೀವನ್ ಆನಂದ್’ ಪಾಲಿಸಿಯನ್ನು ಬಿಡುಗಡೆ ಮಾಡಿದೆ ಎಲ್ಐಸಿ. ನಿವೃತ್ತಿ ಉದ್ದೇಶಕ್ಕಾಗಿ ಉಳಿತಾಯ ಮಾಡುವವರಿಗೆ ಇದು ಸೂಕ್ತ ಯೋಜನೆಯಾಗಿದೆ.
ಭಾರತೀಯ ಜೀವ ವಿಮಾ ನಿಗಮದ (LIC) ವಿವಿಧ ಯೋಜನೆಗಳು ಜೀವ ವಿಮೆ ಜತೆಗೆ ಉತ್ತಮ ರಿಟರ್ನ್ಸ್ ನೀಡುವ ಮೂಲಕ ಹೂಡಿಕೆದಾರರನ್ನು ಸೆಳೆಯುತ್ತಿದೆ. ಎಲ್ಐಸಿಯು ಕಾಲಕ್ಕನುಗುಣವಾಗಿ ಹೊಸ ಪಾಲಿಸಿಗಳನ್ನು ಬಿಡುಗಡೆ ಮಾಡುವುದರ ಜತೆಗೆ ಅಸ್ತಿತ್ವದಲ್ಲಿರುವ ಪಾಲಿಸಿಗಳ ಪರಿಷ್ಕೃತ ರೂಪವನ್ನೂ ಪರಿಚಯಿಸುತ್ತಿರುತ್ತದೆ. ಉತ್ತಮ ರಿಟರ್ನ್ಸ್ ತಂದುಕೊಡುವ ಮೂಲಕ ಗ್ರಾಹಕರನ್ನು ಸೆಳೆಯುವ ಎಲ್ಐಸಿ ಪಾಲಿಸಿಗಳಲ್ಲಿ ‘ಜೀವನ್ ಆನಂದ್ (Jeevan Anand Policy)’ ಸಹ ಒಂದಾಗಿದೆ.
ದೀರ್ಘ ಅವಧಿಗೆ ಹೂಡಿಕೆ ಮಾಡುವವರನ್ನು ಗಮನದಲ್ಲಿ ಇಟ್ಟುಕೊಂಡು ‘ಜೀವನ್ ಆನಂದ್’ ಪಾಲಿಸಿಯನ್ನು ಬಿಡುಗಡೆ ಮಾಡಿದೆ ಎಲ್ಐಸಿ. ಇದೊಂದು ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ. ನಿವೃತ್ತಿ ಉದ್ದೇಶಕ್ಕಾಗಿ ಉಳಿತಾಯ ಮಾಡುವವರಿಗೆ ಇದು ಸೂಕ್ತ ಯೋಜನೆಯಾಗಿದೆ.
ಹೂಡಿಕೆಗೆ ಗರಿಷ್ಠ ಮಿತಿಯಿಲ್ಲ
ಜೀವನ್ ಆನಂದ್ ಯೋಜನೆಯಡಿ ಕನಿಷ್ಠ 1 ಲಕ್ಷ ರೂ. ರಿಟರ್ನ್ಸ್ ಉದ್ದೇಶದೊಂದಿಗೆ ಹೂಡಿಕೆ ಮಾಡಬಹುದು. ಹೂಡಿಕೆಗೆ ಗರಿಷ್ಠ ಮಿತಿ ನಿಗದಿಪಡಿಸಿಲ್ಲ.
ಜೀವನ್ ಆನಂದ್ ಪಾಲಿಸಿ ಲೆಕ್ಕಾಚಾರ ಹೇಗೆ?
ಜೀವನ್ ಆನಂದ್ ಪಾಲಿಸಿಯಡಿ 25 ಲಕ್ಷ ರೂ. ರಿಟರ್ನ್ಸ್ ಪಡೆಯಬೇಕಿದ್ದರೆ ಎಷ್ಟು ಹೂಡಿಕೆ ಮಾಡಬೇಕೆಂಬ ಲೆಕ್ಕಾಚಾರ ಇಲ್ಲಿದೆ. ದಿನವೊಂದಕ್ಕೆ 45 ರೂ.ನಂತೆ ಹೂಡಿಕೆ ಮಾಡಿದರೆ ತಿಂಗಳಿಗೆ 1,358 ರೂ. ಆಗುತ್ತದೆ. 35 ವರ್ಷಗಳ ವರೆಗೆ ಪಾಲಿಸಿಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಮೆಚ್ಯೂರಿಟಿ ಅವಧಿಯ ನಂತರ ಹೂಡಿಕೆದಾರನಿಗೆ 25 ಲಕ್ಷ ರೂ. ದೊರೆಯುತ್ತದೆ.
ಈ ಪಾಲಿಸಿಯಲ್ಲಿದೆ ಉತ್ತಮ ಬೋನಸ್
ಎಲ್ಐಸಿ ಜೀವನ್ ಆನಂದ್ ಪಾಲಿಸಿಯಲ್ಲಿ ಹೂಡಿಕೆಯ ಮೇಲೆ ಬೋನಸ್ ಕೂಡ ದೊರೆಯುತ್ತದೆ. ಅಲ್ಲದೆ, ಪಾಲಿಸಿದಾರ ಮರಣ ಹೊಂದಿದಲ್ಲಿ ನಾಮನಿರ್ದೇಶಿತರಿಗೆ ಶೇಕಡಾ 125ರ ಡೆತ್ ಬೆನಿಫಿಟ್ ಸಹ ನೀಡಲಾಗುತ್ತದೆ.
ಇದನ್ನೂ ಓದಿ: LIC WhatsApp Service: ವಾಟ್ಸ್ಆ್ಯಪ್ ಮೂಲಕವೂ ಎಲ್ಐಸಿ ಸೇವೆ; ಪಾಲಿಸಿ ಸ್ಥಿತಿ, ಪ್ರೀಮಿಯಂ ವಿವರ ತಿಳಿಯಲು ಹೀಗೆ ಮಾಡಿ
ಗ್ರಾಹಕರನ್ನು ಸೆಳೆಯಲು ಮತ್ತು ಹೂಡಿಕೆದಾರರಿಗೆ ಉತ್ತಮ ರಿಟರ್ನ್ಸ್ ತಂದುಕೊಡಲು ಎಲ್ಐಸಿ ಇತ್ತೀಚಿನ ದಿನಗಳಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಷೇರು ಮಾರುಕಟ್ಟೆ ಪ್ರವೇಶಿಸಿದ ಬೆನ್ನಲ್ಲೇ ಎಲ್ಐಸಿ ಪುನಶ್ಚೇತನಕ್ಕೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೇ ಮೊದಲ ಬಾರಿಗೆ ಎಲ್ಐಸಿಗೆ ಖಾಸಗಿ ಕ್ಷೇತ್ರದ ವೃತ್ತಿಪರರನ್ನು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Wed, 21 December 22