LIC Policy For Children: ಮಕ್ಕಳಿಗಾಗಿಯೇ ರೂಪಿಸಿರುವ ಈ ಎಲ್ಐಸಿ ಪಾಲಿಸಿಯಿಂದ ಪಡೆಯಬಹುದು 8.5 ಲಕ್ಷ ರೂಪಾಯಿ
ಎಲ್ಐಸಿಯ ಜೀವನ್ ತರುಣ್ ಪಾಲಿಸಿ ಬಗ್ಗೆ ಈ ಲೇಖನದಲ್ಲಿ ಬಹಳ ವಿವರವಾದ ಮಾಹಿತಿ ಇದೆ. ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಪಾಲಿಸಿ ರೂಪಿಸಲಾಗಿದೆ.
ಭಾರತೀಯರಿಗೆ ಜೀವ ವಿಮಾ ಪಾಲಿಸಿಗಳು ಅಂದ ಕ್ಷಣವೇ ನೆನಪಾಗುವುದು ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಅಥವಾ ಎಲ್ಐಸಿ (LIC). ಅದರ ಎಷ್ಟೋ ಪ್ಲಾನ್ಗಳಿದ್ದು, ಆ ಪೈಕಿ ಒಂದನ್ನು ಇವತ್ತಿನ ಲೇಖನದಲ್ಲಿ ಪರಿಚಯಿಸಲಾಗುತ್ತಿದೆ. ಈ ಪಾಲಿಸಿಯ ಹೆಸರು ಎಲ್ಐಸಿ ಜೀವನ್ ತರುಣ್ (LIC Jeevan Tarun). ಈ ಪಾಲಿಸಿಯನ್ನು ರೂಪಿಸಿರುವುದು ಶಿಕ್ಷಣ ಮತ್6ತು ಇತರ ಉದ್ದೇಶಗಳಿಗಾಗಿ. ವಾರ್ಷಿಕ ಸರ್ವೈವಲ್ ಅನುಕೂಲ 20ರಿಂದ 24 ವರ್ಷಕ್ಕೆ ಪಾವತಿ ಮತ್ತು ಮೆಚ್ಯೂರಿಟಿ 25 ವರ್ಷಕ್ಕೆ ಆಗುತ್ತದೆ. ಈ ಪಾಲಿಸಿಯು ಪಾರ್ಟಿಸಿಪೇಟಿಂಗ್, ನಾನ್ ಲಿಂಕ್ಡ್ ಲಿಮಿಟೆಡ್ ಪಾವತಿ ಪ್ಲಾನ್ ಇದಾಗಿದ್ದು, ಮಕ್ಕಳಿಗೆ ರಕ್ಷಣೆ ಹಾಗೂ ಉಳಿತಾಯದ ಫೀಚರ್ ಒದಗಿಸುತ್ತದೆ.
ಇದು ಫ್ಲೆಕ್ಸಿಬಲ್ ಪ್ಲಾನ್. ಪ್ರಸ್ತಾವನೆ ಹಂತದಲ್ಲಿ ಪ್ರಪೋಸರ್ ಸರ್ವೈವಲ್ ಅನುಕೂಲವನ್ನು ಆರಿಸಿಕೊಳ್ಳಬಹುದು. ಇದನ್ನು ಪಾಲಿಸಿ ಅವಧಿ ವೇಳೆಯೇ ಮಾಡಬೇಕು. ಪಾಲಿಸಿದಾರರು ನಾಲ್ಕು ಆಯ್ಕೆಯ ಮಧ್ಯೆ ಆರಿಸಿಕೊಳ್ಳಬೇಕಾಗುತ್ತದೆ.
ಆಯ್ಕೆ 1: ಯಾವುದೇ ಸರ್ವೈವಲ್ ಅನುಕೂಲ ಇಲ್ಲ; ಶೇ 100ರಷ್ಟು ಸಮ್ ಅಶ್ಯೂರ್ಡ್
ಆಯ್ಕೆ 2: ಶೇ 5ರಷ್ಟು ಸಮ್ ಅಶ್ಯೂರ್ಡ್ ಪ್ರತಿ ವರ್ಷ ಹೀಗೆ 5 ವರ್ಷಗಳಿಗೆ; ಸಮ್ ಅಶ್ಯೂರ್ಡ್ ಮೇಲೆ ಶೇ 75ರಷ್ಟು
ಆಯ್ಕೆ 3: ಶೇ 10ರಷ್ಟು ಸಮ್ ಅಶ್ಯೂರ್ಡ್ ಪ್ರತಿ ವರ್ಷ ಹೀಗೆ 5 ವರ್ಷಗಳಿಗೆ; ಸಮ್ ಅಶ್ಯೂರ್ಡ್ ಮೇಲೆ ಶೇ 50ರಷ್ಟು
ಆಯ್ಕೆ 4: ಶೇ 15ರಷ್ಟು ಸಮ್ ಅಶ್ಯೂರ್ಡ್ ಪ್ರತಿ ವರ್ಷ ಹೀಗೆ 5 ವರ್ಷಗಳಿಗೆ; ಸಮ್ ಅಶ್ಯೂರ್ಡ್ ಮೇಲೆ ಶೇ 25ರಷ್ಟು
ಎಲ್ಐಸಿ ಜೀವನ್ ತರುಣ್ ಪಾಲಿಸಿ ಅರ್ಹತೆ ಮಾನದಂಡ, ಕನಿಷ್ಠ ಸಮ್ ಅಶ್ಯೂರ್ಡ್
ಇದನ್ನೂ ಓದಿ: LIC Housing Finance: ಹೋಮ್ ಲೋನ್ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದ ಎಲ್ಐಸಿ ಹೌಸಿಂಗ್ ಫೈನಾನ್ಸ್
ಎಲ್ಐಸಿ ಜೀವನ್ ತರುಣ್ ಪಾಲಿಸಿ ಪಡೆಯುವುದಕ್ಕೆ ಕನಿಷ್ಠ ವಯಸ್ಸು 90 ದಿನ. ಗರಿಷ್ಠ ವಯಸ್ಸು 12 ವರ್ಷ. ಅದು ಎರಡೂ ಸಂದರ್ಭದಲ್ಲಿ ಕಳೆದ ಜನ್ಮ ದಿನಕ್ಕೆ ಅನ್ವಯಿಸಲಿದೆ. 20 ವರ್ಷ ತುಂಬುವ ತನಕ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಪಾಲಿಸಿ ಅವಧಿ ಆ ಮಗುವಿಗೆ 25 ವರ್ಷ ತುಂಬಿದಾಗ ಕೊನೆಗೊಳ್ಳುತ್ತದೆ. ಎಲ್ಐಸಿ ಜೀವನ್ ತರುಣ್ ಪಾಲಿಸಿಯಲ್ಲಿ ಕನಿಷ್ಠ ಸಮ್ ಅಶ್ಯೂರ್ಡ್ 75 ಸಾವಿರ ರೂಪಾಯಿ. ಮೇಲ್ಸ್ತರದ ಮಿತಿ ಅಂತೇನೂ ಇಲ್ಲ.
ದಿನಕ್ಕೆ 150 ರೂ. ಹೂಡಿಕೆ ಲೆಕ್ಕದಲ್ಲಿ ಮೆಚ್ಯೂರಿಟಿ ಹೊತ್ತಿಗೆ 8.5 ಲಕ್ಷ ರೂಪಾಯಿ
ಒಂದು ಉದಾಹರಣೆಯನ್ನು ಗಮನಿಸಿ. ಮಗುವಿಗೆ 12 ವರ್ಷ ಇದ್ದಾಗ ಪ್ರೀಮಿಯಂ ಪಾವತಿ ಶುರು ಮಾಡಿದಿರಿ. ಅಂದರೆ ಎಲ್ಐಸಿ ಜೀವನ್ ತರುಣ್ ಪಾಲಿಸಿಗೆ ಹಣ ತೊಡಗಿಸಿದಿರಿ. ಆಗ ಪಾಲಿಸಿ ಅವಧಿ 13 ವರ್ಷ, ಕನಿಷ್ಠ ಅಶ್ಯೂರ್ಡ್ 5 ಲಕ್ಷ ಆಗುತ್ತದೆ. ಜೀವನ್ ತರುಣ್ ಪಾಲಿಸಿ ಅಡಿಯಲ್ಲಿ ದಿನಕ್ಕೆ 150 ರೂಪಾಯಿ ಅಂತ ಲೆಕ್ಕ ಹಾಕಿದರೂ ವರ್ಷಕ್ಕೆ 55 ಸಾವಿರ ಆಯಿತು. 8 ವರ್ಷಗಳಲ್ಲಿ ನಿವ್ವಳ ಹೂಡಿಕೆ 4,40,665 ರೂಪಾಯಿ ಆಗುತ್ತದೆ. ಇದಕ್ಕೆ ಬೋನಸ್ ಮೊತ್ತ 2,47,000 ಬರುತ್ತದೆ. ಏಕೆಂದರೆ ಸಮ್ ಅಶ್ಯೂರ್ಡ್ 5 ಲಕ್ಷ. ಇದರ ಹೊರತಾಗಿ, ಲಾಯಲ್ಟಿ ಅನುಕೂಲ 97,500 ರೂಪಾಯಿ ಬರುತ್ತದೆ. ಆದ್ದರಿಂದ ಎಲ್ಐಸಿ ಜೀವನ್ ತರುಣ್ ಪಾಲಿಸಿಯಿಂ್ 8,44,500 ರೂಪಾಯಿ ಬರುತ್ತದೆ.
Published On - 2:28 pm, Wed, 29 June 22